ಕೆಸರಿನಲ್ಲಿ ಸಿಲುಕಿದ್ದ ಎಕ್ಸ್‌ಯುವಿಯನ್ನು ಹೊರಕ್ಕೆಳೆದ ಮಹೀಂದ್ರಾ ಥಾರ್

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಥಾರ್ ಎಸ್‌ಯುವಿಯನ್ನು ಕೆಲ ತಿಂಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಥಾರ್ ಭಾರತದ ಕಡಿಮೆ ಬೆಲೆಯ ಆಫ್-ರೋಡ್ ಎಸ್‌ಯುವಿಯಾಗಿದೆ.

ಕೆಸರಿನಲ್ಲಿ ಸಿಲುಕಿದ್ದ ಎಕ್ಸ್‌ಯುವಿಯನ್ನು ಹೊರಕ್ಕೆಳೆದ ಮಹೀಂದ್ರಾ ಥಾರ್

ಮಹೀಂದ್ರಾ ಥಾರ್‌ ಎಸ್‌ಯುವಿ ಬಿಡುಗಡೆಯಾದಾಗಿನಿಂದ ಈ ಎಸ್‌ಯುವಿಯ ಸಾಮರ್ಥ್ಯ, ಎಂಜಿನ್ ಪವರ್ ಹಾಗೂ ವಿನ್ಯಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಲಾಗುತ್ತಿದೆ. ಈ ಎಸ್‌ಯುವಿಯು ಆಫ್-ರೋಡ್ ಪ್ರಿಯರ ನೆಚ್ಚಿನ ಎಸ್‌ಯುವಿಯಾಗಿದೆ. ಮಹೀಂದ್ರಾ ಥಾರ್'ನ ಬುಕ್ಕಿಂಗ್'ಗಳನ್ನು 2021ರ ಮೇ ತಿಂಗಳವರೆಗೆ ಕಾಯ್ದಿರಿಸಲಾಗಿದೆ ಎಂಬುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಕೆಸರಿನಲ್ಲಿ ಸಿಲುಕಿದ್ದ ಎಕ್ಸ್‌ಯುವಿಯನ್ನು ಹೊರಕ್ಕೆಳೆದ ಮಹೀಂದ್ರಾ ಥಾರ್

ಹೊಸ ಮಹೀಂದ್ರಾ ಥಾರ್‌ ಎಸ್‌ಯುವಿಯ ಸಾಮರ್ಥ್ಯಗಳನ್ನು ತಿಳಿಸುವ ಹಲವಾರು ವೀಡಿಯೊಗಳನ್ನು ಇಂಟರ್ ನೆಟ್'ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈಗ ಕೆಸರಿನಲ್ಲಿ ಸಿಲುಕಿದ್ದ ಎಕ್ಸ್‌ಯುವಿ 500 ಎಸ್‌ಯುವಿಯನ್ನು ಮಹೀಂದ್ರಾ ಥಾರ್ ಹೇಗೆ ಹೊರತಂದಿತು ಎಂಬುದನ್ನು ತೋರಿಸುವ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕೆಸರಿನಲ್ಲಿ ಸಿಲುಕಿದ್ದ ಎಕ್ಸ್‌ಯುವಿಯನ್ನು ಹೊರಕ್ಕೆಳೆದ ಮಹೀಂದ್ರಾ ಥಾರ್

ಈ ವೀಡಿಯೊವನ್ನು ಜೆರಿನ್ 11 ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವೀಡಿಯೊದಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ನದಿಯ ದಡದಲ್ಲಿರುವ ಕೆಸರಿನಲ್ಲಿ ಸಿಲುಕಿಕೊಂಡಿರುವುದನ್ನು ಹಾಗೂ ಅದರ ಚಾಲಕ ಅದನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಕೆಸರಿನಲ್ಲಿ ಸಿಲುಕಿದ್ದ ಎಕ್ಸ್‌ಯುವಿಯನ್ನು ಹೊರಕ್ಕೆಳೆದ ಮಹೀಂದ್ರಾ ಥಾರ್

ವೀಡಿಯೊದಲ್ಲಿ ಕಂಡುಬರುವ ಮಹೀಂದ್ರಾ ಎಕ್ಸ್‌ಯುವಿ 500 ಡಬ್ಲ್ಯು 11 4-ವ್ಹೀಲ್ ಡ್ರೈವ್ ಮಾದರಿಯಾಗಿದ್ದು, ಈಗ ಅದರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಇದು ಮಹೀಂದ್ರಾ ಥಾರ್ ಎಸ್‌ಯುವಿಯು ಮತ್ತೊಂದು ಕಾರನ್ನು ರಕ್ಷಿಸುತ್ತಿರುವ ಮೊದಲ ವೀಡಿಯೊ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕೆಸರಿನಲ್ಲಿ ಸಿಲುಕಿದ್ದ ಎಕ್ಸ್‌ಯುವಿಯನ್ನು ಹೊರಕ್ಕೆಳೆದ ಮಹೀಂದ್ರಾ ಥಾರ್

ಎಕ್ಸ್‌ಯುವಿ 500ನ ವ್ಹೀಲ್'ಗಳು ಕೆಸರಿನ ಹೊಂಡದಲ್ಲಿ ಸಿಲುಕಿಕೊಂಡಿದ್ದು, ಚಾಲಕನು ಕಾರನ್ನು ಹೊರತೆಗೆಯಲು ಪ್ರಯತ್ನಿಸುತ್ತಾನೆ. ಸ್ಟೀಯರಿಂಗ್ ಅನ್ನು ಬಲ-ಎಡಕ್ಕೆ ತಿರುಗಿಸುತ್ತಾನೆ. ಆದರೂ ಯಾವುದೇ ಪ್ರಯೋಜನವಾಗುವುದಿಲ್ಲ.

ಕೆಸರಿನಲ್ಲಿ ಸಿಲುಕಿದ್ದ ಎಕ್ಸ್‌ಯುವಿಯನ್ನು ಹೊರಕ್ಕೆಳೆದ ಮಹೀಂದ್ರಾ ಥಾರ್

ಸ್ವಲ್ಪ ಸಮಯದ ನಂತರ ಎಕ್ಸ್‌ಯುವಿ 500 ಅನ್ನು ಹೊರತೆಗೆಯಲು ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಕರೆತರಲಾಗುತ್ತದೆ. ಥಾರ್ ಎಸ್‌ಯುವಿಯ ಬೂಟ್'ಗೆ ಹಗ್ಗ ಕಟ್ಟಿ ಎಕ್ಸ್‌ಯುವಿ 500ಯ ಮುಂಭಾಗಕ್ಕೆ ಜೋಡಿಸಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕೆಸರಿನಲ್ಲಿ ಸಿಲುಕಿದ್ದ ಎಕ್ಸ್‌ಯುವಿಯನ್ನು ಹೊರಕ್ಕೆಳೆದ ಮಹೀಂದ್ರಾ ಥಾರ್

ನಂತರ ಥಾರ್‌ ಎಸ್‌ಯುವಿಯಿಂದ ಮುಂದಕ್ಕೆ ಎಳೆಯಲು ಪ್ರಯತ್ನಿಸಲಾಗುತ್ತದೆ. ಆರಂಭದಲ್ಲಿ ಎಕ್ಸ್‌ಯುವಿ 500 ಮುಂದಕ್ಕೆ ಚಲಿಸುವುದಿಲ್ಲ. ಆದರೆ ಸತತ ಪ್ರಯತ್ನದ ನಂತರ ಎಕ್ಸ್‌ಯುವಿ 500 ಕೆಸರಿನಿಂದ ಹೊರಕ್ಕೆ ಬರಲು ಆರಂಭಿಸುತ್ತದೆ.

ಕೆಸರಿನಲ್ಲಿ ಸಿಲುಕಿದ್ದ ಎಕ್ಸ್‌ಯುವಿಯನ್ನು ಹೊರಕ್ಕೆಳೆದ ಮಹೀಂದ್ರಾ ಥಾರ್

ನಂತರ ಎಕ್ಸ್‌ಯುವಿ 500 ಅನ್ನು ಸಂಪೂರ್ಣವಾಗಿ ಹೊರತೆಗೆಯಲಾಗುತ್ತದೆ. ಮಹೀಂದ್ರಾ ಎಕ್ಸ್‌ಯುವಿ 500 ಫೋರ್ ವ್ಹೀಲ್ ಡ್ರೈವ್ ಕಾರು ಆಗಿದ್ದರೂ ಅದು ಕೆಸರಿನಲ್ಲಿ ಸಿಲುಕಿಕೊಂಡಿದೆ. ಎಕ್ಸ್‌ಯುವಿ 500 ಆಫ್-ರೋಡ್ ಅಲ್ಲವೆಂಬುದೇ ಇದಕ್ಕೆ ಕಾರಣ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಕ್ಸ್‌ಯುವಿ 500ನ ವಿನ್ಯಾಸದಿಂದಾಗಿ, ಅದನ್ನು ಹದಗೆಟ್ಟ ರಸ್ತೆಗಳಲ್ಲಿ ಚಾಲನೆ ಮಾಡಲು ಸಾಧ್ಯವಿಲ್ಲ. ಇನ್ನು ಮಹೀಂದ್ರಾ ಥಾರ್ ಸಣ್ಣ ವ್ಹೀಲ್ ಬೇಸ್ ಕಾರ್ ಆಗಿದ್ದು, ಕಡಿಮೆ ರೇಶಿಯೋದ ಗೇರ್'ಬಾಕ್ಸ್ ಅನ್ನು ಹೊಂದಿದೆ.

ಕೆಸರಿನಲ್ಲಿ ಸಿಲುಕಿದ್ದ ಎಕ್ಸ್‌ಯುವಿಯನ್ನು ಹೊರಕ್ಕೆಳೆದ ಮಹೀಂದ್ರಾ ಥಾರ್

ಮಹೀಂದ್ರಾ ಥಾರ್ ಎಸ್‌ಯುವಿಯು, ಎಕ್ಸ್‌ಯುವಿ 500ಗಿಂತ ಕಡಿಮೆ ತೂಕ ಹಾಗೂ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಮಹೀಂದ್ರಾ ಥಾರ್ ಎಸ್‌ಯುವಿಯನ್ನು 2 ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರಿನ ಡೀಸೆಲ್ ಎಂಜಿನ್'ನಲ್ಲಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Mahindra Thar SUV pulls out xuv 500 from mud. Read in Kannada.
Story first published: Friday, December 11, 2020, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X