ವೈರಲ್ ಆಗಲು 195 ಕಿ.ಮೀ ಸ್ಪೀಡ್‌ನಲ್ಲಿ ಮಹೀಂದ್ರಾ XUV700 ಡ್ರೈವ್ ಮಾಡಿದ ಯುವಕ: ನೆಟ್ಟಿಗರಿಂದ ತರಾಟೆ

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಹೊಸ ಎಕ್ಸ್‌ಯುವಿ700 ಎಸ್‍ಯುವಿ ಬಿಡುಗಡೆಗೊಳಿಸಿ ಹೊಸ ಸಂಚಲನವನ್ನು ಮೂಡಿಸಿದೆ. ಈ ಹೊಸ ಮಹೀದ್ರಾ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಹೆದ್ದಾರಿಯಲ್ಲಿ ಮಹೀಂದ್ರಾ XUV700 ನಂತಹ ಪವರ್ ಫುಲ್ ಎಸ್‍ಯುವಿಯನ್ನು ಡ್ರೈವ್ ಮಾಡುವುದು ಸಂತೋಷಕರ ಅನುಭವವಾಗಿದೆ.

ಕೆಲವು ಜನರು ಇಂತಹ ಉತ್ತಮ ಪರ್ಫಾಮೆನ್ಸ್ ಹೊಂದಿರುವ ಕಾರುಗಳಲ್ಲಿ ಅದರ ಗರಿಷ್ಠ ಸಾಮರ್ಥ್ಯದವರೆಗೆ ಡ್ರೈವ್ ಮಾಡುತ್ತಾರೆ. ಸಾಮಾನ್ಯ ರಸ್ತೆಗಳಲ್ಲಿ ಅಷ್ಟು ವೇಗವಾಗಿ ಡ್ರೈವ್ ಮಾಡಲು ಸಾಧ್ಯವಾಗದ ಕಾರಣ ಹೆದ್ದಾರಿಗಳಲ್ಲಿ ಟಾಪ್ ಸ್ಪೀಡ್ ನಲ್ಲಿ ಡ್ರೈವ್ ಮಾಡುತ್ತಾರೆ. ಮಹೀಂದ್ರಾ XUV700 ಎಸ್‍ಯುವಿಯನ್ನು ಹೆಚ್ಚಿನ ಸ್ಪೀಡ್‌ನಲ್ಲಿ ಡ್ರೈವ್ ಮಾಡುವುದು ರೋಮಾಂಚಕ ಅನುಭವವಾಗಿದೆ. ಆದರೆ ಇದು ರೇಸ್ ಟ್ರ್ಯಾಕ್ ಅಲ್ಲ ಸಾಮಾನ್ಯ ಜನರು ಸಂಚರಿಸುವ ರಸ್ತೆ ಎಂಬುವುದು ನೆನಪಿನಲ್ಲಿಟ್ಟುಕೊಳ್ಳಬೇಕು.

Mahindra XUV700

ಭಾರತದ ಹೆದ್ದಾರಿಗಳಲ್ಲಿ 195 ಕಿ.ಮೀ ಸ್ಪೀಡ್‌ನಲ್ಲಿ ಡ್ರೈವ್ ಮಾಡುವುದು ಕಾನೂನುಬಾಹಿರ ಮತ್ತು ಅತ್ಯಂತ ಅಸುರಕ್ಷಿತವಾಗಿದೆ. ಹೆದ್ದಾರಿಯಲ್ಲಿ 195 ಕಿ.ಮೀ ಸ್ಪೀಡ್‌ನಲ್ಲಿ ಮಹೀಂದ್ರಾ XUV700 ಡ್ರೈವ್ ಮಾಡುತ್ತಿರುವ ವೀಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಬಾರೀ ವೈರಲ್ ಆಗುತ್ತಿದೆ. ನಿಖಿಲ್ ರಾಣಾ ಅವರ ಯೂಟ್ಯೂಬ್ ವೀಡಿಯೋದಲ್ಲಿ, ಕೇರಳದ ಹೆದ್ದಾರಿಯಲ್ಲಿ ಒಬ್ಬ ವ್ಯಕ್ತಿ ತನ್ನ ಮಹೀಂದ್ರಾ XUV700 ಎಸ್‍ಯುವಿಯನ್ನು 195 ಕಿ.ಮೀ ವೇಗದಲ್ಲಿ ಡ್ರೈವ್ ಮಾಡುತ್ತಿರುವುದನ್ನು ತೋರಿಸುತ್ತದೆ.

ಈ ವೀಡಿಯೊ, ಮಹೀಂದ್ರಾ XUV700 ಎಸ್‍ಯುವಿಯ ಇನ್ಸ್ಟ್ರುಮೆಂಟ್ ಕನ್ಸೋಲ್‌ನ ಸುದೀರ್ಘ ನೋಟವನ್ನು ತೋರಿಸುತ್ತದೆ, ಅದರ ಮೇಲೆ ಸ್ಪೀಡೋಮೀಟರ್ ಸ್ಥಿರವಾಗಿ 192-195 ಕಿ.ಮೀ ನಡುವೆ ವೇಗವನ್ನು ತೋರಿಸುತ್ತದೆ. ಈ ಮಹೀಂದ್ರಾ XUV700 ಎಸ್‍ಯುವಿ ಎಸ್‍ಯುವಿಯ ಸ್ಟೀಯರಿಂಗ್ ವ್ಹೀಲ್ ಹಿಂದೆ ಇರುವ ವ್ಯಕ್ತಿಯು ತನ್ನ ಬಲಗೈಯಿಂದ ಸ್ಟೀಯರಿಂಗ್ ವ್ಹೀಲ್ ಹಿಡಿದುಕೊಂಡು ತನ್ನ ಎಡಗೈಯಲ್ಲಿ ಮೊಬೈಲ್ ಫೋನ್‌ನೊಂದಿಗೆ ರೆಕಾರ್ಡ್ ಮಾಡುತ್ತಿದ್ದಾನೆ.

ನಿರೂಪಕರು ಇಲ್ಲಿ ತೋರಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ಮಹೀಂದ್ರಾ XUV700 ಎಸ್‍ಯುವಿಯನ್ನು ಚಾಲನೆ ಮಾಡುವ ವ್ಯಕ್ತಿಯು ತನ್ನ ಅಪಾಯಕಾರಿ ಡ್ರೈವಿಂಗ್ ಸ್ಟಂಟ್‌ಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಖ್ಯಾತಿಯನ್ನು ಪಡೆಯಲು ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಭಾರತೀಯ ಹೆದ್ದಾರಿಗಳಲ್ಲಿ ವೇಗದ ಮಿತಿ 120 ಎಂದು ಪರಿಗಣಿಸಿದರೆ. ಈ ವೀಡಿಯೊದಲ್ಲಿರುವ XUV700 ಎಸ್‍ಯುವಿ ಡ್ರೈವರ್ ಅತಿವೇಗದಿಂದ ಚಲಿಸಿತಿರುವುದು ಕನೂನು ಬಾಹಿರವಾಗಿದೆ.

ಮಹೀಂದ್ರಾ XUV700 ಡ್ರೈವರ್‌ನ ಅಪಾಯಕಾರಿ ಡ್ರೈವಿಂಗ್ ಮ್ಯಾನರಿಸಂ ಅನ್ನು ಕರೆಯುತ್ತಿರುವ ಅನೇಕ ನೆಟ್ಟಿಗರನ್ನು ಈ ವೀಡಿಯೊ ಸೆಳೆಯುತ್ತಿದೆ. ಮಹೀಂದ್ರಾ XUV700 ಎಸ್‍ಯುವಿಯು ಅತಿ ವೇಗದಲ್ಲಿ ಚಲಿಸುತ್ತಿರುವುದು ಪೊಲೀಸರ ಗಮನಕ್ಕೆ ಇನ್ನೂ ಬಂದಿದಿಯೇ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ತಮ್ಮ ಮತ್ತು ಇತರ ವಾಹನ ಸವಾರರ ಜೀವಕ್ಕೆ ಅಪಾಯವನ್ನುಂಟುಮಾಡುವ ಇಂತಹ ಬೇಜವಾಬ್ದಾರಿ ಕಾರು ಚಾಲಕರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.

ಭಾರತೀಯ ಹೆದ್ದಾರಿಯಲ್ಲಿ ಇಷ್ಟೊಂದು ವೇಗದಲ್ಲಿ ವಾಹನ ಚಾಲನೆ ಮಾಡುವುದು ಅತ್ಯಂತ ಅಪಾಯಕಾರಿ. ಇಲ್ಲಿ ಹೆದ್ದಾರಿಗಳಲ್ಲಿ ಕೆಲವರು ಬೇಜವಾಬ್ದಾರಿಯಿಂದ ಯಾವುದೇ ಪೂರ್ವ ಸೂಚನೆ ನೀಡದೆ ಯೂ ಟರ್ನ್ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾ, ಯಾವುದೇ ಮುನ್ಸೂಚನೆ ನೀಡದೆ ಬೇಜವಾಬ್ದಾರಿಯಿಂದ ವಾಹನ ಚಲಾಯಿಸುತ್ತಾರೆ. ಜೊತೆಗೆ ಪ್ರಾಣಿಗಳು ಸಹ ಎಲ್ಲಿಂದಲೋ ಅಡ್ಡ ಬರುತ್ತದೆ,

ಇತಂಹ ವಿಷಯಗಳನ್ನು ಗಮನಹರಿಸದೇ ವಾಹನ ಚಾಲಕರು ಅತಿ ವೇಗದಲ್ಲಿ ಚಲಿಸಿ ಅಪಘಾತಕ್ಕೆ ಕಾರಣವಾಗುತ್ತದೆ. ಮಹೀಂದ್ರಾ XUV700 ಎಸ್‍ಯುವಿಯ ತಂತ್ರಜ್ಙಾನ ಮತ್ತು ಕಾರ್ಯಕ್ಷಮತೆಯನ್ನು ಈಗಾಗಲೇ ಕಾರು ಚಾಲಕರ ಅನೇಕ ದುರಪಯೋಗ ಮಾಡುವ ವೀಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅನೇಕ ಜನರು ರೀಲ್‌ಗಳನ್ನು ಮಾಡಲು ತಮ್ಮ ಅನುಕೂಲಕ್ಕಾಗಿ ADAS ಸಿಸ್ಟಂ ತಪ್ಪಾಗಿ ಬಳಸುವ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ.

Article Published On: Thursday, April 6, 2023, 11:35 [IST]
English summary
Mahindra xuv700 195kph speed in highway details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+