ಜಂಬ ತೋರಿದ XUV700 ಚಾಲಕನಿಗೆ ಸರಿಯಾಗಿ ಬುದ್ಧಿ ಕಲಿಸಿದ ಟ್ರಕ್ ಡ್ರೈವರ್!
ಟ್ರಾಫಿಕ್ ಜಾಮ್ ಎಂಬುದು ಭಾರತದ ಪ್ರಮುಖ ನಗರಗಳಲ್ಲಿನ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಕೆಲವೊಮ್ಮೆ ಇಂತಹ ದಟ್ಟಣೆಯಿಂದ ಕೂಡಿರುವ ರಸ್ತಗಳಲ್ಲಿ ಯಾರಾದರೊಬ್ಬರು ಆತುರವಾಗಿ ತಮ್ಮ ವಾಹನಗಳನ್ನು ಅಡ್ಡದಾರಿಯಲ್ಲಿ ಬಂದು ನಿಯಮಗಳನ್ನು ಉಲ್ಲಂಘಿಸಿ ಇತರ ಸವಾರರ ಆಕ್ರೋಶಕ್ಕೆ ಗುರಿಯಾಗುತ್ತಾರೆ. ಇಂತಹದ್ದೇ ಘಟನೆ ಇಲ್ಲೂ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಒಬ್ಬ ವ್ಯಕ್ತಿಯು ತಪ್ಪಾದ ಲೇನ್‌ನಿಂದ ವಾಹನಗಳನ್ನು ಓವರ್‌ಟೇಕ್ ಮಾಡುವ ಮೂಲಕ ಅತಿಯಾದ ಬುದ್ಧಿವಂತಿಕೆ ತೋರಲು ಪ್ರಯತ್ನಿಸಿ ಸ್ಥಳೀಯರಿಂದ ಉಗಿಸಿಕೊಂಡಿದ್ದಾನೆ. ಕಿರಿದಾದ ಇಳಿಜಾರಿನ ರಸ್ತೆಯಲ್ಲಿ ಟ್ರಕ್ ಚಾಲಕನಿಗೆ ಅಡ್ಡಲಾಗಿ ಬಂದ ಮಹೀಂದ್ರಾ XUV700 ಚಾಲಕನಿಗೆ ಟ್ರಾಕ್ ಚಾಲಕ ಸರಿಯಾಗಿ ಬುದ್ಧಿ ಕಲಿಸಿದ್ದಾನೆ. ಇಡೀ ದೃಷ್ಯಗಳನ್ನು ಟ್ರಕ್ ಚಾಲಕ ಅಥವಾ ಅದರಲ್ಲಿದ್ದ ಸಹಚರರು ರೆಕಾರ್ಡ್ ಮಾಡಿದ್ದಾರೆ.

ಘಟನೆ ಕೇರಳದಲ್ಲಿ ನಡೆದಿದ್ದು, ನಿಖರವಾದ ಸ್ಥಳವನ್ನು ವೀಡಿಯೊದಲ್ಲಿ ಉಲ್ಲೇಖಿಸಿಲ್ಲ. ಇನ್ನು ಘಟನೆಯ ವಿವರವಾದ ನೋಟವನ್ನು ನೋಡುವುದಾದ್ರೆ, ರಸ್ತೆ ತುಂಬಾ ಕಿರಿದಾಗಿದೆ. ಇದೊಂದು ಬೆಟ್ಟದಂತಹ ಪ್ರದೇಶವಾಗಿದ್ದು, ಮೇಲಕ್ಕೆ ಹೋಗಲು ರಸ್ತೆಯ ಒಂದು ಬದಿಯಲ್ಲಿ ಪದ್ಧತಿಯಾಗಿ ಕಾರುಗಳು ಸಾಲಾಗಿ ಕಾಯುತ್ತಿರುವುದನ್ನು ನಾವು ಸ್ಪಷ್ಟವಾಗಿ ನೋಡಬಹುದು.
ತಾಳ್ಮೆಯಿಂದ ಕಾಯತ್ತಿದ್ದ ಇತರ ಕಾರು ಚಾಲಕರ ನಡುವೆ ಮಹೀಂದ್ರಾ XUV700 ಚಾಲಕ ಮಾತ್ರ ಎಲ್ಲರಂತಲ್ಲದೇ ಎದರು ಬರುವ ವಾಹನಗಳಿಗೆ ಅಡ್ಡಲಾಗಿ ಮೆಲಕ್ಕೆ ಹೊರಟಿದ್ದಾನೆ. ಇದೇ ವೇಳೆ ಎದುರುಗಡೆಯಿಂದ ಟ್ರಕ್ ಕೆಳಗೆ ಇಳಿಯುತ್ತಿದ್ದ ವೇಳೆ XUV700 ಚಾಲಕ ಜಾಗ ಬಿಟ್ಟಿಲ್ಲ. ಟ್ರಕ್ ಚಾಲಕ ಯಾವುದೇ ಕಾರಣಕ್ಕೂ ಹಿಂದಕ್ಕೆ ಹೋಗದೆ XUV700 ಚಾಲಕನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾನೆ.

ಇದರಿಂದ XUV700 ಚಾಲಕನಿಗೆ SUV ಅನ್ನು ಹಿಮ್ಮುಖವಾಗಿ ಓಡಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ರಸ್ತೆ ತುಂಬಾ ಕಿರಿದಾಗಿದ್ದು, ಕಾರನ್ನು ತಿರುಗಿಸಲು ಸಹ ಸಾಧ್ಯವಾಗಲಿಲ್ಲ. ಕಾರನ್ನು ಕೆಲವು ಮೀಟರ್‌ಗಳವರೆಗೆ ಹಿಮ್ಮುಖವಾಗಿ ಓಡಿಸಬೇಕಾಗಿತ್ತು. ಆದರೆ SUV ಚಾಲಕ ಹಾಗೆ ಮಾಡದೇ ಅಂತರಕ್ಕೆ ಓಡಿಸಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದ್ರೆ, ಟ್ರಕ್ ಡ್ರೈವರ್ ಅವನನ್ನು ಹಾಗೆ ಮಾಡಲು ಕೂಡ ಬಿಡದೆ ಹಿಂದಕ್ಕೆ ಓಡಿಸೋವರೆಗೂ ಬಿಡಲಿಲ್ಲ.
ಇಂತವರ ವಿರುದ್ಧ ಪ್ರಕರಣ ದಾಖಲಿಸಬೇಕು: XUV700 ಚಾಲಕ ವಾಸ್ತವವಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದ. ಹೀಗೆ ರಾಂಗ್ ಸೈಡ್ ಡ್ರೈವಿಂಗ್ ಮಾಡಿದ್ರೆ ಇತರ ಚಾಲಕರ ಮಾರ್ಗವನ್ನು ನಿರ್ಬಂಧಿಸುವುದಲ್ಲದೇ ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗಬಹುದು. ಹಾಗಾಗಿ ಇಂತಹ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಪರ್ವತ ರಸ್ತೆಗಳಲ್ಲಿ ಚಾಲನೆ ಮಾಡುವಾಗ ಶಾಂತವಾಗಿರಬೇಕು ಎಂಬುದಕ್ಕೆ ಈ ವೀಡಿಯೊ ಉತ್ತಮ ಉದಾಹರಣೆಯಾಗಿದೆ.

ಪರ್ವತ ರಸ್ತೆಗಳು, ಬಯಲು ಪ್ರದೇಶಗಳಿಗಿಂತ ಭಿನ್ನವಾಗಿರುತ್ತವೆ. ಮುಂದೆ ಏನಿದೆ ಎಂಬುದರ ಸ್ಪಷ್ಟತೆಯನ್ನು ನೋಡಲಾಗುವುದಿಲ್ಲ. ಇಂತಹ ರಸ್ತೆಗಳಲ್ಲಿ ಓವರ್ ಟೇಕ್ ಮಾಡುವುದು ಕೂಡ ಅಪಾಯಕಾರಿ. XUV700 ಡ್ರೈವರ್ ಮೊದಲು ಟ್ರಕ್ ಬರುವುದನ್ನು ನೋಡದಿರುವ ಸಾಧ್ಯತೆಯಿದೆ. ತುರ್ತು ಪರಿಸ್ಥಿತಿಯಿಂದ ಹೀಗೆ ಮಾಡಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. ಏನೇ ಆಗಲಿ ಇಂತಹ ರಸ್ತೆಗಳಲ್ಲಿ ನಿರ್ಲಕ್ಷ್ಯದ ಡ್ರೈವಿಂಗ್ ತುಂಬಾ ಅಪಾಯಕಾರಿ ಎಂಬುದನ್ನು ಮರಿಯಬಾರದು.
ಎಸ್‌ಯುವಿ ಚಾಲಕ ಟ್ರಾಫಿಕ್ ಜಾಮ್‌ನಿಂದ ಪಾರಾಗಿ ಸಮಯ ಉಳಿಸೋಣ ಎಂದುಕೊಂಡಿದ್ದ. ಆದ್ರೆ ಇದು ತಪ್ಪು ಕಲ್ಪನೆ, ನಿಜಕ್ಕೆ ಆತ ಇತರರ ಸಮಯವನ್ನು ವ್ಯರ್ಥ ಮಾಡಿದ್ದಾನೆ. ಇಲ್ಲಿ ಟ್ರಕ್ ಡ್ರೈವರ್ ಮಾಡಿದ್ದು 100% ಸರಿ ಎಂಬುದು ನಮ್ಮ ಅಭಿಪ್ರಾಯ. ಏನೇ ಹೇಳಿ ನಿಯಮಗಳನ್ನು ಪಾಲನೆ ಮಾಡುವುದರಿಂದ ನಿಮ್ಮ ಗಮ್ಯ ಸ್ಥಳಕ್ಕೆ ತುಸು ತಡವಾದ್ರೂ ಸುರಕ್ಷಿತವಾಗಿ ತಲುಪುತ್ತೀರ ಎಂಬುದನ್ನು ನೆನಪಿನಲ್ಲಿಡಬೇಕು. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications