ಓವರ್ ಟೇಕ್ ಮಾಡುವ ಭರದಲ್ಲಿ ಉರುಳಿ ಬಿದ್ದ ಮಹೀಂದ್ರಾ ಜೈಲೋ

ಕರೋನಾ ವೈರಸ್ ಎರಡನೇ ಅಲೆ ಆರ್ಭಟ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹಲವು ರಾಜ್ಯಗಳಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸುತ್ತಿರುವುದರಿಂದ ವಾಹನಗಳ ಸಂಚಾರವು ಸಹ ಹೆಚ್ಚಾಗಿದೆ.

ಓವರ್ ಟೇಕ್ ಮಾಡುವ ಭರದಲ್ಲಿ ಉರುಳಿ ಬಿದ್ದ ಮಹೀಂದ್ರಾ ಜೈಲೋ

ಜನರು ಬೇಕಾಬಿಟ್ಟಿಯಾಗಿ ಅತಿ ವೇಗದಲ್ಲಿ ವಾಹನಗಳನ್ನು ಚಾಲನೆ ಮಾಡುತ್ತಿದ್ದಾರೆ. ಅತಿ ವೇಗದಲ್ಲಿ ಚಲಿಸಿದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದ ಘಟನೆ ವರದಿಯಾಗಿದೆ. ಈ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಓವರ್ ಟೇಕ್ ಮಾಡುವ ಭರದಲ್ಲಿ ಉರುಳಿ ಬಿದ್ದ ಮಹೀಂದ್ರಾ ಜೈಲೋ

ಮಾರ್ಥಂಡಮ್ ಫ್ಲೈಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ತಮಿಳುನಾಡಿನಲ್ಲಿ ಕರ್ಫ್ಯೂವನ್ನು ಪೂರ್ತಿಯಾಗಿ ತೆಗೆದು ಹಾಕಿಲ್ಲ. ಆದರೂ ರಸ್ತೆಗಳಲ್ಲಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ.

ಓವರ್ ಟೇಕ್ ಮಾಡುವ ಭರದಲ್ಲಿ ಉರುಳಿ ಬಿದ್ದ ಮಹೀಂದ್ರಾ ಜೈಲೋ

ತಮಿಳುನಾಡಿನ ಕೆಲವು ಭಾಗಗಳಲ್ಲಿ ವಾಹನಗಳ ಓಡಾಟ ವಿರಳವಾಗಿದೆ. ರಸ್ತೆ ತಮಗಾಗಿಯೇ ಖಾಲಿಯಿದೆ ಎಂಬಂತೆ ವರ್ತಿಸುವ ಕೆಲವರು ವೇಗವಾಗಿ ವಾಹನಗಳನ್ನು ಚಾಲನೆ ಮಾಡುತ್ತಿದ್ದಾರೆ.

ಓವರ್ ಟೇಕ್ ಮಾಡುವ ಭರದಲ್ಲಿ ಉರುಳಿ ಬಿದ್ದ ಮಹೀಂದ್ರಾ ಜೈಲೋ

ಅತಿ ವೇಗದಲ್ಲಿ ಫ್ಲೈಓವರ್ ದಾಟಲು ಪ್ರಯತ್ನಿಸಿದ ಮಹೀಂದ್ರಾ ಜೈಲೋ ಅಪಘಾತಕ್ಕೀಡಾಗಿದೆ. ಫ್ಲೈಓವರ್‌ ಮೇಲೆ ಚಲಿಸುತ್ತಿದ್ದ ಮತ್ತೊಂದು ವಾಹನವನ್ನು ಹಿಂದಿಕ್ಕುವಾಗ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದಿದೆ.

ಓವರ್ ಟೇಕ್ ಮಾಡುವ ಭರದಲ್ಲಿ ಉರುಳಿ ಬಿದ್ದ ಮಹೀಂದ್ರಾ ಜೈಲೋ

ಮಹೀಂದ್ರಾ ಜೈಲೋ ಅತಿ ವೇಗದಲ್ಲಿ ಚಲಿಸಿದ್ದೇ ಈ ಅಪಘಾತಕ್ಕೆ ಪ್ರಮುಖ ಕಾರಣ. ಈ ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಕಾರಿನೊಳಗಿದ್ದ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಓವರ್ ಟೇಕ್ ಮಾಡುವ ಭರದಲ್ಲಿ ಉರುಳಿ ಬಿದ್ದ ಮಹೀಂದ್ರಾ ಜೈಲೋ

ಆದರೆ ಕಾರಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಾರಿಗೆ ಹಾನಿಯಾದ ವಿವರಗಳ ಬಗ್ಗೆ ಸದ್ಯಕ್ಕೆ ತಿಳಿದು ಬಂದಿಲ್ಲ. ಮಾರ್ಥಂಡಮ್ ಫ್ಲೈಓವರ್ ಮಾರ್ಗವು ಕಿರಿದಾಗಿದೆ ಎಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಓವರ್ ಟೇಕ್ ಮಾಡುವ ಭರದಲ್ಲಿ ಉರುಳಿ ಬಿದ್ದ ಮಹೀಂದ್ರಾ ಜೈಲೋ

ಈ ಮಾರ್ಗದಲ್ಲಿ ವಾಹನಗಳು ಒಂದರ ಹಿಂದೆ ಒಂದು ಮಾತ್ರ ಚಲಿಸಬಹುದು. ಈ ಹಿಂದೆ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಈ ಫ್ಲೈಓವರ್ ಮೇಲೆ ಹಲವು ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ಹೇಳುತ್ತಾರೆ.

ಮಹೀಂದ್ರಾ ಜೈಲೋ ಕಾರು ಫೈಓವರ್ ಮೇಲೆ ಉರುಳಿ ಬೀಳುವ ದೃಶ್ಯ ಹಿಂದೆ ಚಲಿಸುತ್ತಿದ್ದ ಕಾರಿನಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂತಹ ಘಟನೆಗಳನ್ನು ತಡೆಗಟ್ಟಲು ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಮೇಲ್ವಿಚಾರಣೆ ನಡೆಸಲಾಗುತ್ತದೆ.

ಓವರ್ ಟೇಕ್ ಮಾಡುವ ಭರದಲ್ಲಿ ಉರುಳಿ ಬಿದ್ದ ಮಹೀಂದ್ರಾ ಜೈಲೋ

ಆದರೆ ಕೆಲವು ವಾಹನ ಸವಾರರು ಸಂಚಾರಿ ನಿಯಮಗಳ ಬಗ್ಗೆಯಾಗಲಿ, ರಸ್ತೆಗಳ ಬಗ್ಗೆಯಾಗಲಿ ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದ ಅಪಾಯಕ್ಕೆ ಸಿಲುಕುತ್ತಾರೆ.ಮಾರ್ಥಂಡಮ್ ಫ್ಲೈಓವರ್‌ ಮೇಲೆ ನಡೆದ ಈ ಘಟನೆ ಇದಕ್ಕೆ ಸಾಕ್ಷಿಯಾಗಿದೆ.

Most Read Articles

Kannada
English summary
Mahindra Xylo rolls over on Marthandam flyover after overtaking. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X