ಟ್ರಯಂಪ್‌ನ ವಿಶಿಷ್ಟ ಬೈಕ್ ಖರೀದಿಸಿದ ಮಲಯಾಳಂ ನಟ

By Nagaraja

ಮಳಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಪುತ್ರ ಹಾಗೂ ನಟ ದುಲ್ಖರ್ ಸಲ್ಮಾನ್ (dulquar salman) ಅತಿ ನೂತನ ಟ್ರಯಂಪ್ ಬೈಕ್ ವೊಂದನ್ನು ಖರೀದಿಸಿದ್ದಾರೆ. ದುಲ್ಖರ್ ಬಯಕೆಗಳಿಗಾನುಸಾರವಾಗಿ ಇದನ್ನು ವಿಶಿಷ್ಟವಾಗಿ ಮಾರ್ಪಾಡುಗೊಳಿಸಲಾಗಿದೆ.

ಕಸ್ಟಮೈಸ್ಡ್ ಟ್ರಯಂಪ್ ಬೊನವಿಲ್ ಬೈಕ್ ತಮ್ಮದಾಗಿಸಿಕೊಂಡಿರುವ ದುಲ್ಖರ್ ಸಲ್ಮಾನ್, ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬಗ್ಗೆ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಟ್ರಯಂಪ್‌ನ ವಿಶಿಷ್ಟ ಬೈಕ್ ಖರೀದಿಸಿದ ಮಲಯಾಳಂ ನಟ

ಈ ಬಗ್ಗೆ ತಮ್ಮ ಮನದಾಳವನ್ನು ಹಂಚಿಕೊಂಡಿರುವ ದುಲ್ಖರ್, ಟ್ರಯಂಪ್ ಬೊನವಿಲ್ ಬೈಕನ್ನು ಸಂಪೂರ್ಣವಾಗಿಯೂ ತಮ್ಮ ವೈಯಕ್ತಿಕ ಬಯಕೆಗಳಿಗನುಸಾರವಾಗಿ ನಿರ್ಮಿಸಲಾಗಿದೆ ಎಂದಿದ್ದಾರೆ.

ಟ್ರಯಂಪ್‌ನ ವಿಶಿಷ್ಟ ಬೈಕ್ ಖರೀದಿಸಿದ ಮಲಯಾಳಂ ನಟ

ಪ್ರಸ್ತುತ ಬೈಕ್ ವಿನ್ಯಾಸಕ್ಕೆ ಏಳೆಂಟು ತಿಂಗಳುಗಳೇ ಸಂದಿವೆ. ಅಲ್ಲದೆ ಇದರ ಬಣ್ಣವನ್ನು ಆಯ್ಕೆ ಮಾಡಲು ದುಲ್ಖರ್ ಮೂರು ತಿಂಗಳಷ್ಟು ಸಮಯ ತೆಗೆದುಕೊಂಡಿದ್ದರು.

ಟ್ರಯಂಪ್‌ನ ವಿಶಿಷ್ಟ ಬೈಕ್ ಖರೀದಿಸಿದ ಮಲಯಾಳಂ ನಟ

1930ರಿಂದ 1980ರ ಕಾಲಾವಧಿಯಲ್ಲಿ ಜೀವಿಸಿದ್ದ 'ದಿ ಕಿಂಗ್ ಆಫ್ ಕೂಲ್' ಎಂದೇ ಪ್ರಸಿದ್ಧರಾಗಿರುವ ದಿಗ್ಗಜ ನಾಯಕ ಸ್ಟೀವ್ ಮೆಕ್ ಕ್ವೀನ್ ಅವರ ಗೌರವಾರ್ಥ ದುಲ್ಖರ್ ಈ ಬೈಕ್ ವಿನ್ಯಾಸಗೊಳಿಸಿದ್ದಾರೆ.

ಟ್ರಯಂಪ್‌ನ ವಿಶಿಷ್ಟ ಬೈಕ್ ಖರೀದಿಸಿದ ಮಲಯಾಳಂ ನಟ

ಈ ಸಂಬಂಧ ಕೊಚ್ಚಿಯಲ್ಲಿ ಸ್ಥಿತಗೊಂಡಿರುವ ಶ್ಯಾಮಡೈನಾಮಿಕ್ ಟ್ರಯಂಪ್ ಗೆ ಧನ್ಯವಾದ ಸಲ್ಲಿಸಿರುವ ಮಲಯಾಳಂ ನಟ ದುಲ್ಖರ್ ಸಲ್ಮಾನ್, ಚಿತ್ರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಟ್ರಯಂಪ್‌ನ ವಿಶಿಷ್ಟ ಬೈಕ್ ಖರೀದಿಸಿದ ಮಲಯಾಳಂ ನಟ

ಇದರಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾಗಿ ಬದಿಯಲ್ಲಿ ನಂಬರ್ ಪ್ಲೇಟ್ ಲಗತ್ತಿಸಲಾಗಿದೆ. ಉಳಿದಂತೆ ಮಾರ್ಪಾಡುಗೊಳಿಸಿದ ಫ್ರಂಟ್ ಮಡ್ ಗಾರ್ಡ್, ಮಿರರ್, ಎಕ್ಸಾಸ್ಟ್, ರಿಯರ್ ಮಡ್ ಗಾರ್ಡ್, ಕಸ್ಟಮ್ ಸೀಟು, ರಿಮ್ ಗಳನ್ನು ನೋಡಬಹುದಾಗಿದೆ.

ಟ್ರಯಂಪ್‌ನ ವಿಶಿಷ್ಟ ಬೈಕ್ ಖರೀದಿಸಿದ ಮಲಯಾಳಂ ನಟ

ಅಂದ ಹಾಗೆ ಟ್ರಯಂಪ್ ಬೊನವಿಲ್, 863 ಸಿಸಿ ಡಿಒಎಚ್‌ಸಿ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 61 ಎನ್ ಎಂ ತಿರುಗುಬಲದಲ್ಲಿ 60 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಟ್ರಯಂಪ್‌ನ ವಿಶಿಷ್ಟ ಬೈಕ್ ಖರೀದಿಸಿದ ಮಲಯಾಳಂ ನಟ

ಅಂದ ಹಾಗೆ ಟ್ರಯಂಪ್ ಬೊನವಿಲ್ ದೇಶದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 6.9 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ. ಇನ್ನು ದುಲ್ಖರ್ ಇದಕ್ಕಿಂತಲು ಹೆಚ್ಚು ದುಡ್ಡು ಇದರ ನಿರ್ಮಾಣಕ್ಕಾಗಿ ವ್ಯಯ ಮಾಡಿರುತ್ತಾರೆ.

ಟ್ರಯಂಪ್‌ನ ವಿಶಿಷ್ಟ ಬೈಕ್ ಖರೀದಿಸಿದ ಮಲಯಾಳಂ ನಟ

ಒಟ್ಟಿನಲ್ಲಿ ಬಿಎಂಡಬ್ಲ್ಯು ಇ46 ಎಂ3, ಎಂ5, ಮರ್ಸಿಡಿಸಿ್ ಬೆಂಝ್ ಎಸ್ ಎಲ್ ಎಸ್ ಎಎಂಜಿ, ಬಿಎಂಡಬ್ಲ್ಯು ಕೆ1200 ಜಿಎಸ್ ಹಾಗೂ ಬಿಎಂಡಬ್ಲ್ಯು ಐ8 ಮುಂತಾದ ಐಷಾರಾಮಿ ಕಾರು ಬೈಕ್ ಗಳ ಸಂಗ್ರಹವನ್ನು ಹೊಂದಿರುವ ಈ ಮಲಯಾಳಂ ನಟ ಬ್ರಿಟನ್ ನ ಮಗದೊಂದು ಐಕಾನಿಕ್ ಮೋಟಾರ್ ಸೈಕಲ್ ತಮ್ಮದಾಗಿಸಿಕೊಂಡಿದ್ದಾರೆ.

More from DriveSpark

Article Published On: Saturday, February 20, 2016, 12:21 [IST]
English summary
Malayalam Actor Dulqeur Salmaan gets himself a customized Triumph Bonneville
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+