ಬೆಂಗ್ಳೂರಿಂದ ಕೊಚ್ಚಿಗೆ ಮಮ್ಮುಟ್ಟಿ ಪುತ್ರನ ಬೈಕ್ ಸವಾರಿ
ಮಲಯಾಳಂ ಚಿತ್ರರಂಗದ ಖ್ಯಾತ ನಟ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಮ್ಮುಟ್ಟಿ ಪುತ್ರ ದಕ್ಷಿಣ ಭಾರತದ ಉದಯೋನ್ಮುಖ ನಟ ದುಲ್ಖರ್ ಸಲ್ಮಾನ್ (dulquar salman) ಬೆಂಗಳೂರಿನಿಂದ ಕೊಚ್ಚಿಗೆ ದುಬಾರಿ ಬೈಕ್ ವೊಂದರಲ್ಲಿ ಜಾಲಿ ರೈಡ್ ಹೊಡೆಯುವ ಮೂಲಕ ಗಮನ ಸೆಳೆದಿದ್ದಾರೆ.
Also Read: ತಮಿಳು ಸೂಪರ್ ಸ್ಟಾರ್ ಅಜಿತ್ ಬೈಕ್ ಪ್ರೇಮ
ಮಲಯಾಳಂ ಜೊತೆಗೆ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ದುಲ್ಖರ್, ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ತನ್ನ ಆಪ್ತ ಸ್ನೇಹಿತನ ಜೊತೆಗೂಡಿ ಯಾರಿಗೂ ತಿಳಿಯದೇ ಬಿಎಂಡಬ್ಲ್ಯು ಮೊಟೊರಾಡ್ ದುಬಾರಿ ಬೈಕ್ ನಲ್ಲಿ ಬೆಂಗಳೂರಿನಿಂದ ಕೊಚ್ಚಿಗೆ ಪಯಣ ಬೆಳೆಸಿದ್ದರು.

ಬೆಂಗಳೂರಿನಿಂದ ಕೊಚ್ಚಿಗೆ ಸರಿ ಸುಮಾರು 600 ಕೀ.ಮಿ.ಗಳಷ್ಟು ದೂರವಿದೆ. ಅಲ್ಲದೆ ಓರ್ವ ಪರಿಪೂರ್ಣ ಬೈಕ್ ಸವಾರ ಏನೆಲ್ಲ ಸುರಕ್ಷಾ ಕವಚಗಳನ್ನು ಧರಿಸಬೇಕೆಂಬುದಕ್ಕೆ ಮಾದರಿಯ ರೂಪದಲ್ಲಿ ಹೆಲ್ಮೆಟ್, ಜಾಕೆಟ್ ಮುಂತಾದ ಭದ್ರತಾ ಕವಚಗಳನ್ನು ಧರಿಸಿದ್ದರು.

ದುಲ್ಖರ್ ಹಾಗೂ ಆತನ ಸ್ನೇಹಿತ ಚಾಲನೆ ಮಾಡಿದ ಬೈಕ್ ಗಳು ಇಂತಿದೆ. ಬಿಎಂಡಬ್ಲ್ಯು ಜಿಎಸ್ ಅಡ್ವೆಂಚರ್ ಮತ್ತು ಬಿಎಂಡಬ್ಲ್ಯು ಎಸ್1000ಆರ್ ಸ್ಟ್ರೀಟ್ ಬೈಕ್. ಬಿಎಂಡಬ್ಲ್ಯು ಮೊಟೊರಾಡ್ ನಿಂದ ನಿರ್ಮಿತ ಈ ಬೈಕ್ ಗಳು ಲಕ್ಷಗಟ್ಟಲೆ ರುಪಾಯಿಗಳಷ್ಟು ಬೆಲೆ ಬಾಳುತ್ತದೆ.

ಸಿನೆಮಾದ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಬೈಕ್ ಸವಾರಿಯಲ್ಲಿ ಅತೀವ ಉತ್ಸುಕತೆ ಹೊಂದಿರುವ ದುಲ್ಖರ್ ನಿರಂತರ ಅವಧಿಯಲ್ಲಿ ಜಾಲಿ ರೈಡ್ ಹೊಡೆಯುವುದನ್ನು ಹವ್ಯಾಸವಾಗಿರಿಸಿಕೊಂಡಿದ್ದಾರೆ.

ಶಕ್ತಿಶಾಲಿ 1170 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಿಎಂಡಬ್ಲ್ಯು ಆರ್1200ಜಿಎಸ್ ಪರಿಪೂರ್ಣ ಆಫ್ ರೋಡ್ ಬೈಕಾಗಿದೆ. ಇದನ್ನು ಸಂಸ್ಥೆಯ ಬರ್ಲಿನ್ ಘಟಕದಲ್ಲಿ ನಿರ್ಮಿಸಲಾಗಿದೆ.

ಇನ್ನೊಂದೆಡೆ ಸ್ಟ್ರೀಟ್ ಫೈಟರ್ ಮಾದರಿಯಾಗಿರುವ ಬಿಎಂಡಬ್ಲ್ಯು ಎಸ್100ಆರ್ 999 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಪರಿಪೂರ್ಣ ಚಾಲನಾ ಅನುಭವ ಒದಗಿಸಲಿದೆ.

ಒಟ್ಟಿನಲ್ಲಿ ಸೆಲೆಬ್ರಿಟಿಗಳಿಗೆ ವಾಹನ ಕ್ರೇಜ್ ಸ್ವಲ್ಪ ಜಾಸ್ತಿನೇ ಎಂಬುದಕ್ಕೆ ಇಂದೊಂದು ಉದಾಹರಣೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೈಕ್ ಪ್ರೇಮವನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ದರ್ಶನ್ ಭಾಗ್ಯರೇಖೆ ಬದಲಾಯಿಸಿದ ಬುಲ್ ಬುಲ್


Click it and Unblock the Notifications








