ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ಮದುವೆಯಾದ ದಂಪತಿಯ ಅನ್ಯೋನ್ಯ ದಾಂಪತ್ಯವನ್ನು ಸಹಜವಾಗಿ ಎಲ್ಲರು ಬಯಸುತ್ತಾರೆ. ಹಾಗೆಯೇ ಅವರ ಜೀವನ ಮಕ್ಕಳೊಂದಿಗೆ ಸಖವಾಗಿರಬೇಕು ಎಂದು ಹಿರಿಯರು ಕೂಡ ಆಶೀರ್ವದಿಸುತ್ತಾರೆ. ಈ ಕ್ರಮದಲ್ಲಿ ಪತ್ನಿ ಗರ್ಭಿಣಿಯಾದಾಗ ಆಕೆಯನ್ನು ಆರೈಕೆ ಮಾಡುವುದು ಪತಿಯ ಆದ್ಯ ಕರ್ತವ್ಯ. ಜೊತೆಗೆ ತನ್ನ ಗರ್ಭಿಣಿ ಹೆಂಡತಿಗೆ ಉಡುಗೊರೆ ನೀಡಿ ಖುಷಿಯಾಗಿರುಸುತ್ತಾರೆ.

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ಆದರೆ ಇಲ್ಲಿ ಗರ್ಭಿಣಿ ಪತ್ನಿಯೇ ತನ್ನ ಪತಿಗೆ ದುಬಾರಿ ಉಡುಗೊರೆ ನೀಡಿ ಗಂಡನನ್ನು ಆಶ್ಚರ್ಯಗೊಳಿಸಿದ್ದಾಳೆ. ಹೌದು. ಗರ್ಭಿಣಿ ಮಹಿಳೆಯೊಬ್ಬಳು ತನ್ನ ಪತಿಗೆ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಶೀಘ್ರದಲ್ಲೇ ಜನಿಸಲಿರುವ ತನ್ನ ಮಗುವಿನ ಹೆಸರಿನಲ್ಲಿ ಪತಿಗೆ ಉಡುಗೊರೆಯಾಗಿ ನೀಡಿದ್ದಾಳೆ.

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ಮಲೇಷ್ಯಾದ ಮೇಕಪ್‌ ಆರ್ಟಿಸ್ಟ್‌ ಆಗಿರುವ 19 ವರ್ಷದ ಅನೆಜ್ ಅಯುನಿ ಒಸ್ಮಾನ್ ಎಂಬ ಯುವತಿ 20 ವರ್ಷದ ವೆಲ್ಡನ್ ಜುಲ್ಕೆಲ್ಫಿ ಎಂಬಾತನನ್ನು ಕಳೆದ ವರ್ಷ ಮದುವೆಯಾಗದ್ದರು. ಇದೀಗ ಪತ್ನಿ ಗರ್ಭಿಣಿಯಾಗಿದ್ದು, ಕುಟುಂಬದ ಸಂಪ್ರದಾಯದಂತೆ ಆಕೆ ತನ್ನ ತವರು ಕೆಲಂಟಾನ್‌ಗೆ ತೆರಳಬೇಕಾಗಿದೆ. ಅಲ್ಲದೇ ಮಗು ಜನನದ ಬಳಿಕ 100 ದಿನಗಳ ಕಾಲ ಯಾವುದೇ ಆರೋಗ್ಯ ಸಮಸ್ಯೆಗಳು ಬರದಿರಲು ಒಂದೇ ಕೋಣೆಯಲ್ಲಿ ಇರಬೇಕಾಗಿದೆ.

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ಈ ಸಮಯದಲ್ಲಿ ಒಸ್ಮಾನ್‌ಗೆ ಪತಿಯೇ ಆಧಾರ. ತನ್ನ ಪತಿ ಹಾಗೂ ಉದ್ಯಮಿಯಾಗಿರುವ ವೆಲ್ಡನ್ ಜುಲ್ಕೆಪ್ಲಿ ಮೇಲೆ ಅನೆಜ್ ಸಂಪೂರ್ಣ ಅವಲಂಬಿತರಾಗಿರುತ್ತಾರೆ. ಪ್ರತಿಯೊಂದು ನೆರವನ್ನು ಪತಿಯಿಂದಲೇ ಪಡಿಯಬೇಕಾಗಿರುತ್ತದೆ. ನ್ಯಾಪ್ಕಿನ್ ಬದಲಾವಣೆಯಿಂದ ಹಿಡಿದು ಪ್ರತಿಯೊಂದನ್ನು ಮಾಡಬೇಕಾಗಿರುವುದರಿಂದ ನಿದ್ರೆಯಿಲ್ಲದ ರಾತ್ರಿಗಳನ್ನು ಸಹ ಕಳಿಯಬೇಕಾಗಿರುತ್ತದೆ. ಈ ಮೂಲಕ ಪತ್ನಿ ಹಾಗೂ ಮಗುವಿನ ಸಂಪೂರ್ಣ ಜವಾಬ್ದಾರಿ ಪತಿಯ ಮೇಲಿರುತ್ತದೆ.

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ಇಷ್ಟೆಲ್ಲಾ ಮಾಡಲಿರುವ ಪತಿಗೆ ಏನಾದರೂ ಸಂತೋಷಗೊಳಿಸುವ ಉಡುಗೊರೆ ನೀಡಬೇಕೆಂಬ ಪತ್ನಿಯ ಆಲೋಚನೆಗೆ ಸಿಕ್ಕ ಉಪಾಯವೇ ಲ್ಯಾಂಬೋರ್ಗಿನಿ ಹುರಾಕಾನ್‌ ಕಾರು. ಇನ್ನು ವೆಲ್ಡಾನ್‌ಗೆ ಸರ್ಪೈಸ್‌ ಆಗಿ ಅನೆಜ್ ಕಾರು ಉಡುಗೊರೆ ನೀಡುತ್ತಿರುವ ಟಿಕ್‌ಟಾಕ್ ವಿಡಿಯೋ ಸಹ ವೈರಲ್‌ ಆಗಿದೆ.

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ವೀಡಿಯೊದಲ್ಲಿ ಅನೆಜ್ ವೆಲ್ಡನ್ ಕಣ್ಣುಗಳನ್ನು ಮುಚ್ಚಿ ಶೋರೂಂಗೆ ಕರೆದೊಯ್ದು ಕಾರಿನ ಮುಂದೆ ನಿಲ್ಲಸಿ ಕಣ್ಣುಗಳನ್ನು ತೆರೆಸಿದ್ದಾಳೆ. ಅನಿರೀಕ್ಷಿತ ಉಡುಗೊರೆಯಿಂದ ಉಬ್ಬಿ ತಬ್ಬಿಬ್ಬಾದ ವೆಲ್ಡನ್ ಪತ್ನಿಯನ್ನು ತಬ್ಬಿಕೊಂಡು ಬೇಬಿ ಬಂಪ್‌ಗೆ ಮುತ್ತಿಡುತ್ತಿರುವ ವಿಡಿಯೋ ಸದ್ಯ ಸಖತ್‌ ವೈರಲ್ ಆಗುತ್ತಿದೆ.

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ಈ ವಿಡಿಯೋ ನೋಡಿದವರು ಸಿಕ್ಕಾಪಟ್ಟೆ ಕಮೆಂಟ್ ಮಾಡುತ್ತಿದ್ದು, ಪತಿಯ ಬದಲು ಪೂರ್ಣ ಸಮಯಕ್ಕೆ ನರ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ ಇದಕ್ಕಿಂತ ಖರ್ಚು ಕಡಿಮೆಯಾಗುತ್ತಿತ್ತು ಎಂದು ನಗೆ ಚಟಾಕಿ ಹಾರಿಸಿದ್ದಾರೆ. ವೆಲ್ಡನ್ ತುಂಬಾ ಅದೃಷ್ಟವಂತ ಎಂದು ಮತ್ತೊಬ್ಬ ಕಮೆಂಟ್‌ ಮಾಡಿದ್ದಾನೆ.

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ಇನ್ನು ಕಾರಿನ ವಿಷಕ್ಕೆ ಬಂದರೆ ಲ್ಯಾಂಬೋರ್ಗಿನಿ ಹುರಾಕಾನ್ ಕಾರು ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಅನೆಜ್ ಈ ಕಾರನ್ನು ಸುಮಾರು 2 ಮಿಲಿಯನ್ ಡಾಲರ್ ವೆಚ್ಚದಲ್ಲಿ ಮಲೇಷ್ಯಾದ ರಿಂಗ್ಗಿಟ್ ಕರೆನ್ಸಿಯಲ್ಲಿ ಖರೀದಿಸಿದ್ದಾಳೆ. ಇದರ ಮೌಲ್ಯ ಭಾರತೀಯ ರೂಪಾಯಿಗಳಲ್ಲಿ ಸುಮಾರು 3.63 ಕೋಟಿ ರೂ. ಇರಬಹುದು.

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ಅನೆಜ್ ತನ್ನ ಪತಿಗಾಗಿ ಲ್ಯಾಂಬೋರ್ಗಿನಿ ಹುರಾಕಾನ್ ಎವೊ ಮಾದರಿಯನ್ನು ಖರೀದಿಸಿದ್ದಾಳೆ. ಇದು ಸೂಪರ್ ಫಾಸ್ಟ್ ಸೂಪರ್ ಕಾರ್ ಆಗಿದೆ. ಇದು ಹೆಚ್‍ಎಂಐ 8.4-ಇಂಚಿನ ಟಚ್‍‍ಸ್ಕ್ರೀನ್ ಅನ್ನು ಹೊಂದಿದೆ. ಇದರಲ್ಲಿ ಕಾರಿನ ಹಲವು ಫೀಚರ್ಸ್‍‍ಗಳನ್ನು ನಿಯಂತ್ರಿಸಬಹುದಾಗಿದೆ. ಇದರಲ್ಲಿ ಪೋನ್ ಕನೆಕ್ಟಿವಿಟಿ, ಇಂಟರ್ನೆಟ್ ಎಕ್ಸಸ್ ಮತ್ತು ಆ್ಯಪಲ್ ಕಾರ್‍‍ಪ್ಲೇಗಳು ಸೇರಿವೆ.

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ಲ್ಯಾಂಬೊರ್ಗಿನಿ ಹುರಾಕನ್ ಇವೊ ರೇರ್ ವ್ಹೀಲ್ ಡ್ರೈವ್(ಆರ್‍‍ಡಬ್ಲ್ಯುಡಿ) ಸೂಪರ್ ಕಾರು ಲೈಫ್ ಸ್ಟೈಲ್ ಆಯ್ಕೆಯಾಗಿ ವಿನ್ಯಾಸಗೊಳಿಸಲಾಗಿದೆ. ಸೂಪರ್ ಕಾರ್ ಹೊಸ ದೊಡ್ಡ ಫ್ರೇಮ್ ಫ್ರಂಟ್ ಏರ್ ಡ್ಯಾಮ್ ಮತ್ತು ಸ್ಪ್ಲಿಟರ್ಮ್ ವರ್ಟಿಕಲ್ ಫಿನ್ಸ್ ಅನ್ನು ಹೊಂದಿದೆ. ಈ ಕಾರು 5.2-ಲೀಟರ್ ನೈಸರ್ಗಿಕವಾಗಿ ಆಸ್ಪರ್ಡ್ ವಿ 10 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಗರಿಷ್ಠ 638 ಪಿಎಸ್ ಮತ್ತು 565 ಎನ್ಎಂ ಟಾರ್ಕ್ ಅನ್ನು ಹೊರಸೂಸುವ ಸಾಮರ್ಥ್ಯವನ್ನು ಹೊಂದಿದೆ.

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ಈ ಎಂಜಿನ್ DCD ಟ್ರಾನ್ಸ್ ಮಿಷನ್ ನಲ್ಲಿ ಚಲಿಸುತ್ತದೆ. ಲ್ಯಾಂಬೋರ್ಗಿನಿ ಕಾರನ್ನು ಎರಡು ಆಯ್ಕೆಗಳಲ್ಲಿ ನೀಡುತ್ತಿದೆ: ಬ್ಯಾಕ್ ವ್ಹೀಲ್ ಮತ್ತು ಫ್ರಂಟ್ ವ್ಹೀಲ್ ಚಲನೆ. ಈ ಸೂಪರ್ ಕಾರು ನಾವು ಈಗಾಗಲೇ ಹೇಳಿದಂತೆ ಪರಿಣಾಮಕಾರಿಯಾಗಿದೆ. ಇದು ಕೇವಲ 2.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ತಲುಪಬಲ್ಲದು. ಅದೇ ಸಮಯದಲ್ಲಿ, ಕಾರು ಗಂಟೆಗೆ ಗರಿಷ್ಠ 232 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿಯನ್ನು ಉಡುಗೊರೆಯಾಗಿ ಕೊಟ್ಟ ಗರ್ಭಿಣಿ ಪತ್ನಿ

ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಉನ್ನತ ಮಟ್ಟದ ಸುರಕ್ಷತಾ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ. ಪವರ್ ಅನ್ನು ನಿಯಂತ್ರಿಸಲು ಕಾರು ಪರ್ಫಾಮೆನ್ಸ್ ಟಾಕ್ಷನ್ ಕಂಟ್ರೋಲ್ (ಪಿ-ಟಿಸಿಎಸ್) ಅನ್ನು ಹೊಂದಿದೆ. ಇದರೊಂದಿಗೆ ಎಬಿಎಸ್, ಏರ್‍‍ಬ್ಯಾಗ್, ಇಬಿಡಿ, ಇಎಸ್‍ಪಿ ಸೇರಿದಂತೆ ಹಲವಾರು ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

Article Published On: Saturday, March 26, 2022, 10:50 [IST]
English summary
Malaysia pregnant lady gifts lamborghini huracan supercar to his husband here is full details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+