ಕಣ್ಮರೆಯಾಗಿದ್ದ ಮಲೇಶಿಯಾ ವಿಮಾನ ದುರಂತ ಪ್ರಕರಣಕ್ಕೆ ಹೊಸ ತಿರುವು

ಅಪಘಾತಗಳು ರಸ್ತೆಯಲ್ಲಿ ಮಾತ್ರವಲ್ಲದೇ, ನೀರಿನಲ್ಲಿ ಹಾಗೂ ಆಕಾಶದಲ್ಲಿಯೂ ಸಹ ಸಂಭವಿಸುತ್ತವೆ. ಆಗಾಗ ವಿಮಾನಗಳು ಅಪಘಾತಕ್ಕೆ ಈಡಾಗುತ್ತವೆ. ಕೆಲವು ವಿಮಾನಗಳ ಅಪಘಾತಗಳು ಜನರನ್ನು ಆಘಾತಕ್ಕೆ ದೂಡುತ್ತವೆ.

ಕಣ್ಮರೆಯಾಗಿದ್ದ ಮಲೇಶಿಯಾ ವಿಮಾನ ಪ್ರಕರಣಕ್ಕೆ ಹೊಸ ತಿರುವು

ಮಲೇಶಿಯಾಗೆ ಸೇರಿದ ಎಂಹೆಚ್ 370 ವಿಮಾನವು ಆರು ವರ್ಷಗಳ ಹಿಂದೆ ಕಣ್ಮರೆಯಾಗಿತ್ತು. ಆ ವಿಮಾನಕ್ಕೆ ಏನಾಯಿತು ಎಂದು ಇದುವರೆಗೂ ಯಾರಿಗೂ ತಿಳಿದಿಲ್ಲ. ಈ ವಿಮಾನವು ಮಲೇಶಿಯಾದ ರಾಜಧಾನಿಯಿಂದ ಹೊರಟಿತ್ತು.

ಕಣ್ಮರೆಯಾಗಿದ್ದ ಮಲೇಶಿಯಾ ವಿಮಾನ ಪ್ರಕರಣಕ್ಕೆ ಹೊಸ ತಿರುವು

2014ರ ಮಾರ್ಚ್ 8ರಂದು ಈ ವಿಮಾನವು ಏಕಾ‍ಏಕಿಯಾಗಿ ಕಣ್ಮರೆಯಾಯಿತು. ಈ ವಿಮಾನದಲ್ಲಿ 239 ಜನ ಪ್ರಯಾಣಿಕರಿದ್ದರು. ಇದರಲ್ಲಿ ಬಹುತೇಕ ಪ್ರಯಾಣಿಕರು ಚೀನಾ ದೇಶಕ್ಕೆ ಸೇರಿದವರಾಗಿದ್ದರು. ವಿಮಾನದ ಜೊತೆಗೆ ಈ ಪ್ರಯಾಣಿಕರಿಗೆ ಏನಾಯಿತೆಂಬುದು ಸಹ ತಿಳಿದು ಬರಲಿಲ್ಲ.

ಕಣ್ಮರೆಯಾಗಿದ್ದ ಮಲೇಶಿಯಾ ವಿಮಾನ ಪ್ರಕರಣಕ್ಕೆ ಹೊಸ ತಿರುವು

ನಾಪತ್ತೆಯಾಗಿದ್ದ ಎಂಹೆಚ್ 370 ವಿಮಾನವನ್ನು ಹುಡುಕಾಡಲು ಮಲೇಶಿಯಾ ದೇಶವು ಹಲವು ದೇಶಗಳ ನೆರವನ್ನು ಪಡೆಯಿತು. ಆದರೆ ಯಾವುದೇ ಸುಳಿವು ದೊರೆಯಲಿಲ್ಲ. ಹಿಂದೂ ಮಹಾಸಾಗರದ 1,20,000 ಚ.ಕಿ.ಮೀ ವಿಸ್ತೀರ್ಣದಲ್ಲಿ ಶೋಧವನ್ನು ಕೈಗೊಳ್ಳಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ಕಣ್ಮರೆಯಾಗಿದ್ದ ಮಲೇಶಿಯಾ ವಿಮಾನ ಪ್ರಕರಣಕ್ಕೆ ಹೊಸ ತಿರುವು

ಮೂರು ವರ್ಷಗಳ ಶೋಧ ಕಾರ್ಯದ ನಂತರ ಈ ಕಾರ್ಯಾಚರಣೆಯನ್ನು 2017ರ ಜನವರಿಯಲ್ಲಿ ಸ್ಥಗಿತಗೊಳಿಸಲಾಯಿತು. ಆಸ್ಟ್ರೇಲಿಯಾ ದೇಶವೂ ಸಹ ಈ ಶೋಧ ಕಾರ್ಯದಲ್ಲಿ ಪಾಲ್ಗೊಂಡಿತ್ತು. 2018ರಲ್ಲಿ ಅಮೇರಿಕಾ ಮೂಲದ ಕಂಪನಿಯೊಂದು ಶೋಧವನ್ನು ಕಾರ್ಯವನ್ನು ಒಂಟಿಯಾಗಿ ಆರಂಭಿಸಿತು.

ಕಣ್ಮರೆಯಾಗಿದ್ದ ಮಲೇಶಿಯಾ ವಿಮಾನ ಪ್ರಕರಣಕ್ಕೆ ಹೊಸ ತಿರುವು

ಈ ಶೋಧ ಕಾರ್ಯವೂ ಸಹ ಹಲವು ತಿಂಗಳುಗಳವರೆಗೆ ಮುಂದುವರೆಯಿತು. ಆದರೆ ಯಾವುದೇ ಯಶಸ್ಸನ್ನು ಕಾಣಲಿಲ್ಲ. ಇದರ ನಡುವೆ ಈ ವಿಮಾನದ ಕಣ್ಮರೆಯ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್‍‍ರವರು ನೀಡಿರುವ ಹೇಳಿಕೆ ವಿಶ್ವವನ್ನು ಬೆಚ್ಚಿ ಬೀಳಿಸಿದೆ.

ಕಣ್ಮರೆಯಾಗಿದ್ದ ಮಲೇಶಿಯಾ ವಿಮಾನ ಪ್ರಕರಣಕ್ಕೆ ಹೊಸ ತಿರುವು

ಎಂಹೆಚ್ 370 ವಿಮಾನದ ಪೈಲಟ್ ಈ ವಿಮಾನವನ್ನು ನಾಪತ್ತೆ ಮಾಡಲು ಮೊದಲೇ ಯೋಜನೆ ರೂಪಿಸಿದ್ದ ಎಂದು ಹೇಳಿದ್ದಾರೆ. ಮಲೇಶಿಯಾದ ಹಿರಿಯ ಅಧಿಕಾರಿಗಳು ಈ ವಿಮಾನದ ಪೈಲಟ್ ಉದ್ದೇಶಪೂರ್ವಕವಾಗಿ ವಿಮಾನವನ್ನು ಡಿಕ್ಕಿ ಹೊಡೆಸಿರುವುದಾಗಿ ತಿಳಿಸಿದ್ದಾರೆ ಎಂದು ಟೋನಿ ಅಬಾಟ್‍‍ರವರು ಹೇಳಿದ್ದಾರೆ.

ಕಣ್ಮರೆಯಾಗಿದ್ದ ಮಲೇಶಿಯಾ ವಿಮಾನ ಪ್ರಕರಣಕ್ಕೆ ಹೊಸ ತಿರುವು

ಟೋನಿ ಅಬಾಟ್‍‍‍ರವರು ಈ ವಿಮಾನವು ಕಣ್ಮರೆಯಾದ ಒಂದು ವಾರದಲ್ಲಿಯೇ ಈ ವಿಮಾನವು ಅಪಘಾತಕ್ಕೆ ಒಳಗಾಗಿರುವುದು ತಿಳಿದು ಬಂತು ಎಂದು ಹೇಳಿದ್ದಾರೆ. ವಿಮಾನದ ಪೈಲಟ್ ಉದ್ದೇಶ ಪೂರ್ವಕವಾಗಿ ಈ ಅಪಘಾತವನ್ನು ಎಸಗಿರುವುದಾಗಿ ಟೋನಿ ಅಬಾಟ್‍‍ರವರು ನೀಡಿರುವ ಈ ಹೇಳಿಕೆಯು ವಿಶ್ವವನ್ನು ಬೆಚ್ಚಿಬೀಳಿಸಿದೆ.

ಕಣ್ಮರೆಯಾಗಿದ್ದ ಮಲೇಶಿಯಾ ವಿಮಾನ ಪ್ರಕರಣಕ್ಕೆ ಹೊಸ ತಿರುವು

ಅಂದ ಹಾಗೆ ಈ ವಿಮಾನವು ಅಪಘಾತವಾದ ವೇಳೆಯಲ್ಲಿ ಹಿರಿಯ ಪೈಲಟ್ ಜಕಾರಿ ಅಹಮದ್ ಶಾರವರು ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ವಿರುದ್ಧ ಈ ಆರೋಪ ಹೊರಿಸಲಾಗಿದೆ. ಪೈಲಟ್ ಜಕಾರಿ ಅಹಮದ್ ಶಾರವರ ಕುಟುಂಬಸ್ಥರು ಹಾಗೂ ಸ್ನೇಹಿತರು ಈ ಆರೋಪವನ್ನು ತಳ್ಳಿಹಾಕಿದ್ದಾರೆ.

ಕಣ್ಮರೆಯಾಗಿದ್ದ ಮಲೇಶಿಯಾ ವಿಮಾನ ಪ್ರಕರಣಕ್ಕೆ ಹೊಸ ತಿರುವು

ಈ ಆರೋಪಗಳು ನಿರಾಧಾರವಾಗಿವೆ ಎಂದು ಅವರು ಹೇಳಿದ್ದಾರೆ. ಮಲೇಶಿಯಾದ ವಿಮಾನಯಾನ ಸಂಸ್ಥೆಯ ಮಾಜಿ ಮುಖ್ಯಸ್ಥರಾದ ಅಜರುದ್ದೀನ್ ಅಬ್ದುಲ್ ರಹಮಾನ್‍‍ರವರು ಸಹ ಟೋನಿ ಅಬಾಟ್‍‍ರವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಕಣ್ಮರೆಯಾಗಿದ್ದ ಮಲೇಶಿಯಾ ವಿಮಾನ ಪ್ರಕರಣಕ್ಕೆ ಹೊಸ ತಿರುವು

ಯಾವುದೇ ಪುರಾವೆಗಳಿಲ್ಲದೇ ಈ ರೀತಿಯ ಆರೋಪಗಳನ್ನು ಹೊರಿಸುವುದರಿಂದ ಪೈಲಟ್‍‍ನ ಕುಟುಂಬದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ. ಟೋನಿ ಅಬಾಟ್‍‍ರವರು ನೀಡಿರುವ ಈ ಹೇಳಿಕೆಯು ಖಚಿತವಾಗಿಲ್ಲ. ಆದರೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವುದು ನಿಜ.

Most Read Articles

Kannada
English summary
New twist for Malaysian airlines disappearance. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X