ಮಲೇಶಿಯಾ ಪೊಲೀಸ್ ಪಡೆ ಸೇರಿದ ಹೋಂಡಾ ಸಿವಿಕ್ ಕಾರುಗಳು
ಪ್ರಪಂಚದಾದ್ಯಂತವಿರುವ ಪೊಲೀಸ್ ಇಲಾಖೆಯು ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿದೆ. ದುಬೈನಿಂದ ಅಮೆರಿಕಾದವರೆಗೆ ಎಲ್ಲಾ ದೇಶಗಳ ಪೊಲೀಸರು ಅತಿ ವೇಗವಾಗಿ ಚಲಿಸುವ ಕಾರುಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಮಲೇಶಿಯಾ ಪೊಲೀಸರು ತಮ್ಮ ಪಡೆಗೆ ಹೊಸ ಕಾರುಗಳನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.

ರಾಯಲ್ ಮಲೇಶಿಯಾ ಪೊಲೀಸರು, 425 ಹೊಸ ಹೋಂಡಾ ಸಿವಿಕ್ ಕಾರುಗಳನ್ನು ಬುಕ್ ಮಾಡಿದ್ದರು. ಈ ಕಾರುಗಳನ್ನು ಪೊಲೀಸರು ಗಸ್ತು ತಿರುಗಲು, ಕಾನೂನು ಸುವ್ಯವಸ್ಥೆ ಕಾಪಾಡಲು ಬಳಸಲಿದ್ದಾರೆ. ಇತ್ತೀಚೆಗೆ ಮಲೇಶಿಯಾ ಗೃಹ ಇಲಾಖೆಗೆ ಈ ಕಾರುಗಳನ್ನು ವಿತರಿಸಲಾಯಿತು.

ಗೃಹ ಇಲಾಖೆಯು ಕಳೆದ ವಾರ ಈ ಕಾರುಗಳನ್ನು ಪೊಲೀಸರಿಗೆ ಹಸ್ತಾಂತರಿಸಿದೆ. 425 ಕಾರುಗಳನ್ನು ಮಲೇಶಿಯಾ ಪೊಲೀಸರಿಗೆ ವಿತರಿಸಿಲ್ಲ. ಸದ್ಯಕ್ಕೆ ದೇಶದಲ್ಲಿನ ಕಾನೂನು ವ್ಯವಸ್ಥೆಯು ನಿಯಂತ್ರಣದಲ್ಲಿದೆ. ಈ ಕಾರಣಕ್ಕೆ ಇನ್ನಷ್ಟು ಕಾರುಗಳ ವಿತರಣೆಯನ್ನು ಮುಂದೂಡಲಾಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಸಂದರ್ಭದಲ್ಲಿ ಮಾತನಾಡಿದ ಹೋಂಡಾ ಮಲೇಶಿಯಾದ ಸಿಇಒರವರು, ಈ ಹೊಸ ಮೊಬೈಲ್ ಪೆಟ್ರೋಲ್ ವಾಹನಗಳನ್ನು ಪೊಲೀಸ್ ಪಡೆಗೆ ವಿತರಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದರಿಂದ ಪೊಲೀಸರ ಕೆಲಸ ಹಾಗೂ ಜವಾಬ್ದಾರಿ ಸುಲಭವಾಗಲಿದೆ ಎಂದು ಹೇಳಿದರು.

ಮಲೇಶಿಯಾ ಪೊಲೀಸರಿಗೆ ವಿತರಿಸಲಾದ ಹೋಂಡಾ ಸಿವಿಕ್ ಎಸ್ ಕಾರಿನಲ್ಲಿ 1.8 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 141 ಬಿಹೆಚ್‌ಪಿ ಪವರ್ ಹಾಗೂ 174 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಫ್ರಂಟ್ ವ್ಹೀಲ್ ಡ್ರೈವ್ ಆಗಿದ್ದು, ಸಿವಿಟಿ ಗೇರ್ ಬಾಕ್ಸ್ ಹೊಂದಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಈ ಹೋಂಡಾ ಸಿವಿಕ್ ಎಸ್ ಕಾರಿನ ಬೆಲೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.20.10 ಲಕ್ಷಗಳಾಗುತ್ತದೆ. ಎಲ್ಲಾ 425 ಹೋಂಡಾ ಸಿವಿಕ್ ಕಾರುಗಳ ಬೆಲೆ ಸುಮಾರು 85.42 ಮಿಲಿಯನ್ ಡಾಲರ್‌ಗಳಾಗುತ್ತದೆ. ಕೆಲವು ಕಾರುಗಳು ಬಿಳಿ ಬಣ್ಣವನ್ನು ಹೊಂದಿವೆ.

ಇನ್ನೂ ಕೆಲವು ಕಾರುಗಳು ನೀಲಿ, ಹಳದಿ ಹಾಗೂ ಕೆಂಪು ಬಣ್ಣಗಳನ್ನು ಹೊಂದಿವೆ. ರುಫ್ ಮೇಲೆ ನೀಲಿ ಬಣ್ಣದ ಫ್ಲಾಶ್ ಲೈಟ್ ನೀಡಲಾಗಿದೆ. ಇದರ ಜೊತೆಗೆ ಎಲ್ಇಡಿ ಹೆಡ್‌ಲ್ಯಾಂಪ್, ಫ್ರಂಟ್ ಫಾಗ್ ಲ್ಯಾಂಪ್, ಬಾಡಿ ಕಲರ್ ಡೋರ್ ಹ್ಯಾಂಡಲ್ಸ್ ಹಾಗೂ 16 ಇಂಚಿನ ಅಲಾಯ್ ವ್ಹೀಲ್, ಮೊಬೈಲ್ ಡಿಜಿಟಲ್ ವಿಡಿಯೋ ರೆಕಾರ್ಡರ್ ಹಾಗೂ ಡ್ಯಾಶ್‌ಕ್ಯಾಮ್‌ಗಳನ್ನು ನೀಡಲಾಗಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸಿ-ಸೆಗ್‌ಮೆಂಟಿನ ಈ ಸೆಡಾನ್ ಕಾರುಗಳು ಮಲೇಶಿಯಾ ಪೊಲೀಸರು ಕರ್ತವ್ಯ ನಿರ್ವಹಿಸಲು ಸಿದ್ಧವಾಗಿವೆ. ಶೀಘ್ರದಲ್ಲಿಯೇ ಉಳಿದ ಕಾರುಗಳನ್ನು ಸಹ ಮಲೇಶಿಯಾ ಪೊಲೀಸರಿಗೆ ವಿತರಿಸಲಾಗುವುದು. ಕೋವಿಡ್ 19 ಕಾರಣದಿಂದಾಗಿ ಮಲೇಶಿಯಾದಲ್ಲಿಯೂ ಸಹ ನಿರ್ಬಂಧಗಳನ್ನು ವಿಧಿಸಲಾಗಿದೆ.


Click it and Unblock the Notifications