ವಿಮಾನ ಹಾರಾಟದಲ್ಲಿದ್ದಾಗ ಬೀಡಿ ಸೇದಿ ಸಿಕ್ಕಿಬಿದ್ದ ಕೂಲಿ ಕಾರ್ಮಿಕ... ತಪ್ಪು ಯಾರದ್ದು?
ಅಹಮದಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಧೂಮಪಾನ ಮಾಡಿದ ಆರೋಪದ ಮೇಲೆ 56 ವರ್ಷದ ವ್ಯಕ್ತಿ ಪ್ರವೀಣ್‌ಕುಮಾರ್ ಎಂಬ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇವರು ಬೀಡಿ ಸೇದುವ ಮೂಲಕ ಸಹಪ್ರಯಾಣಿಕರ ಜೀವಕ್ಕೆ ಅಪಾಯ ತಂದ ಆರೋಪವನ್ನು ಮೇಲೆ ಬಂಧಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಮುಂಜಾನೆ ಆಕಾಸ್ ಏರ್‌ಲೈನ್ಸ್‌ನಲ್ಲಿ ಪ್ರವೀಣ್ ಎಂಬ ಕೂಲಿ ಕಾರ್ಮಿಕನು ಬೀಡಿ ಸೇದಿದ್ದಾರೆ. ಬಳಿಕ ಎಸ್‌ಎನ್‌ವಿ ವೈಮಾನಿಕ ಸಂಸ್ಥೆಯ ಅಧಿಕಾರಿ ವಿಜಯ್ ತಲ್ಲೂರು ನೀಡಿದ ದೂರಿನ ಮೇರೆಗೆ ಇಅವರನ್ನು ಬಂಧಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಸ್ಥಾನ ರಾಜ್ಯದ ಎಸ್.ಪ್ರವೀಣ್ ಕುಮಾರ್ ಬಂಧಿತ ವ್ಯಕ್ತಿ.

ಪ್ರವೀಣ್‌ಕುಮಾರ್ ಎಂಬ ವ್ಯಕ್ತಿಯು ಆಕಾಶ್ ಏರ್‌ಲೈನ್ಸ್ ಸಂಸ್ಥೆಯ ಕ್ಯೂಪಿ-1326 ವಿಮಾನದ ಮೂಲಕ ಅಹಮದಾಬಾದ್‌ನಿಂದ ಬೆಂಗಳೂರಿಗೆ ಬರುವ ಮಾರ್ಗಮಧ್ಯೆ ವಿಮಾನದ ಶೌಚಾಲಯದಲ್ಲಿ ಬೀಡಿ ಸೇದುವ ಮೂಲಕ ಆತಂಕ ಸೃಷ್ಟಿಸಿದ್ದಾರೆ. ವಿಮಾನದ ಶೌಚಾಲಯದಿಂದ ಹೊಗೆ ಮತ್ತು ವಾಸನೆ ಬರುವಾಗ ಗಾಬರಿಗೊಂದ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಆ ವೇಳೆ ಪ್ರವೀಣ್‌ಕುಮಾರ್ ಬೀಡಿ ಸೇದುವುದು ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.
ಸಿಬ್ಬಂದಿಯು ವಿಮಾನ ಬೆಂಗಳೂರಿಗೆ ಬಂದ ಕೂಡಲೇ ಪ್ರವೀಣ್‌ಕುಮಾರ್‌ನನ್ನು ನಿಲ್ದಾಣದ ಭದ್ರತಾ ಪಡೆಗೆ ಒಪ್ಪಿಸಿದ್ದಾರೆ ಎಂದು ವರದಿಗಳಾಗಿದೆ. ಇನ್ನು ಘಟನೆ ಸಂಬಂಧ ಕೆಐಎಎಲ್‌ನ ಎಸ್‌ಎನ್‌ವಿ ಏವಿಯೇಷನ್ ಪ್ರೈವೆಟ್ ಲಿಮಿಟೆಡ್‌ನ ಡ್ಯೂಟಿ ಮ್ಯಾನೇಜರ್ ನೀಡಿದ ದೂರು ಆಧರಿಸಿ ಪ್ರವೀಣ್‌ಕುಮಾರ್‌ನನ್ನು ಬಂಧಿಸಲಾಗಿದೆ. ಪ್ರವೀಣ್‌ಕುಮಾರ್ ವಿರುದ್ಧ ಏರ್‌ಕ್ರಾಫ್ಟ್ ನಿಯಮ-25, ಸಹ ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆ ನಿಯಮ ಉಲ್ಲಂಘನೆ ಆರೋಪದ ಅಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಎಂ ಪ್ರವೀಣ್ ಕುಮಾರ್ ಅನ್ನು ರಾಜಸ್ಥಾನದ ಪಾಲಿ ಜಿಲ್ಲೆಯ ಮಾರ್ವಾರ್ ಜಂಕ್ಷನ್ ನಿವಾಸಿ ಎಂದು ಗುರುತಿಸಲಾದೆ. ಇನ್ನು ಆರೋಪಿ ಎಂ ಪ್ರವೀಣ್ ಕುಮಾರ್ ಅನ್ನು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಹಿರಿಯ ಪೋಲೀಸ್ ಅಧಿಕಾರಿಯ ಪ್ರಕಾರ, ಭದ್ರತಾ ತಪಾಸಣೆಯ ಸಮಯದಲ್ಲಿ ಸಿಗರೇಟ್ ಅನ್ನು ಪತ್ತೆಹಚ್ಚಲು ವಿಫಲವಾದರೆ ಗಂಭೀರ ಲೋಪವಾಗಿದೆ. ಈ ಘಟನೆಗೆ ಒಂದೇ ಪ್ರಮುಖವಾಗಿ ಕಾರಣ ತಪಾಸಣೆಯಲ್ಲಿ ವಿಫಲವಾಗಿರುವುದು ಎಂದು ಕೂಡ ಹೇಳಲಾಗುತ್ತಿದೆ,
ಇಂತಹ ಘಟನೆಗೆ ಒಂದೇ ವಿವರಣೆಯು ತಪಾಸಣೆಯಲ್ಲಿ ವಿಫಲವಾಗಿದೆ" ಎಂದು ಅವರು ಹೇಳಿದರು: ವಿಮಾನಗಳಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂಬ ಅಂಶವನ್ನು ತಿಳಿದಿದ್ದರು. ಆದರೂ, ಅವರು ಮಂಗಳವಾರದ ಪ್ರಕರಣದಲ್ಲಿ, ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕುಮಾರ್, ಧೂಮಪಾನ ನಿಷೇಧದ ನಿಯಮದ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರವೀಣ್ ಕುಮಾರ್ ಕಾರ್ಮಿಕರಾಗಿದ್ದಾರೆ. ಅವರು ಸಂಬಂಧಿಕರ ಮರಣಾನಂತರದ ಸಮಾರಂಭದಲ್ಲಿ ಭಾಗವಹಿಸಲು ವಿಮಾನ ಪ್ರಯಾಣಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ನಾನು ನಿತ್ಯ ರೈಲಿನಲ್ಲಿ ಪ್ರಯಾಣಿಸುತ್ತೇನೆ ಮತ್ತು ಶೌಚಾಲಯದೊಳಗೆ ಧೂಮಪಾನ ಮಾಡುತ್ತೇನೆ. ಇಲ್ಲಿಯೂ ಅದೇ ರೀತಿ ಮಾಡಬಹುದೆಂದು ಯೋಚಿಸಿ ಬೀಡಿ ಸೇದಲು ನಿರ್ಧರಿಸಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ,
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇದರೊಂದಿಗೆ ಪ್ರಮುಖ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications