Google Map ನಂಬಿ ಮುರಿದ ಸೇತುವೆ ಮೇಲೆ ಹೋದ ವ್ಯಕ್ತಿ ಸಾವು: ಗೂಗಲ್ ವಿರುದ್ಧ ಕೇಸ್
ಅನೇಕ ಜನರು ಒಂದ ಸ್ಥಳದಿಂದ ಮತ್ತೊಂದು ಜಾಗಕ್ಕೆ ಹೋಗಲು ದಾರಿ ಗೊತ್ತಿಲ್ಲ ಅಂದರೆ ಗೂಗಲ್ ಮ್ಯಾಪ್ಸ್ (Google Map) ಮೇಲೆ ಅವಲಂಬಿತರಾದ್ದಾರೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಗೂಗಲ್ ಮ್ಯಾಪ್ ಸಾಮಾನ್ಯವಾಗಿ ನಿಖರವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಗೂಗಲ್ ಮ್ಯಾಪ್ ಅಷ್ಟು ನಿಖರವಿರಲ್ಲ. ಕೆಲವು ಸಲ ಇತರ ಜಾಗಗಳಿಗೂ ಕರೆದುಕೊಂಡಿರುವ ಉದಾಹರಣೆಗಳಿವೆ.
ನಾವು ಗೂಗಲ್ ಮ್ಯಾಪ್ ನೋಡಿ ಹೋಗುವಾಗ, ಸಾಮಾನ್ಯವಾಗಿ ಫ್ಲೈಓವರ್ ತೆಗೆದುಕೊಳ್ಳುವ ಅಥವಾ ಅದರ ಕೆಳಗೆ ಹೋಗುವುದರ ಬಗ್ಗೆ ಗೊಂದಲಕ್ಕೊಳಗಾಗುತ್ತೇವೆ. ಗೂಗಲ್ ಮ್ಯಾಪ್ ನಮ್ಮ ಡ್ರೈವಿಂಗ್‌ನ ಅವಿಭಾಜ್ಯ ಅಂಗವಾಗಿರುವುದರಿಂದ, ನಮ್ಮಲ್ಲಿ ಹೆಚ್ಚಿನವರು ನಾವು ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ ಗೂಗಲ್ ಮ್ಯಾಪ್ ಅನ್ನು ಆನ್ ಮಾಡುತ್ತೇವೆ. ಗೂಗಲ್ ಮ್ಯಾಪ್ ಅನ್ನು ಕಣ್ಮುಚ್ಚಿ ನಂಬುವ ಹಾಗೆಯೇ ಇಲ್ಲ. ಇದಕ್ಕೆ ಸಾಕ್ಷಿಯಾಗಿ ಈಗಾಗಲೇ ಬಹಳಷ್ಟು ಘಟನೆಗಳನ್ನು ನೀವು ಕೇಳಿರುತ್ತೀರಾ.

ಯುಎಸ್ ಮೂಲದ ನಾರ್ತ್ ಕೆರೊಲಿನಾ ಎಂಬ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ ಅನ್ನು ನೋಡಿ ಹೋಗಿ ಮುರಿದು ಸೇತುವೆ ಮಾರ್ಗದ ಮೂಲಕ ತೆರಳಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸುಮಾರು 20 ಅಡಿಗಳಷ್ಟು ಕೆಳಗೆ ಬಿದ್ದಿದೆ. 2022ರ ಸೆಪ್ಟೆಂಬರ್ 30ರಂದು ಈ ಘಟನೆಯು ನಡೆದಿದೆ. ಫಿಲಿಪ್ ಪ್ಯಾಕ್ಸನ್ ಅವರು ಪರಿಚಯವಿಲ್ಲದ ರಸ್ತೆಯಲ್ಲಿ ಸಂಚರಿಸುವಾಗ ಗೂಗಪ್ ಮ್ಯಾಪ್ ನೋಡಿ ಹೋಗಿದ್ದರು.
US ನೌಕಾಪಡೆಯ ಅಧಿಕಾರಿಯ ಫಿಲಿಪ್ ರಾತ್ರಿಯಲ್ಲಿ ತನ್ನ ಮಗಳ ಒಂಬತ್ತನೇ ಹುಟ್ಟುಹಬ್ಬದ ಪಾರ್ಟಿಯಿಂದ ಮನೆಗೆ ಹೋಗುತ್ತಿದರುವಾಗ ಈ ದುರಂತ ಸಂಭವಿಸಿದೆ. ಸಂಜೆ ಹೊತ್ತಿನಲ್ಲಿ ಕತ್ತಲೆ ಮತ್ತು ಮಳೆ ಇದ್ದ ಕಾರಣ ರಸ್ತೆಯು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಸೇತುವೆಯು ಬಗ್ಗೆ ಚಾಲಕರನ್ನು ಎಚ್ಚರಿಸಲು ಯಾವುದೇ ಅಡೆತಡೆಗಳು, ಎಚ್ಚರಿಕೆ ಚಿಹ್ನೆಗಳು ಅಥವಾ ಇತರ ವೈಶಿಷ್ಟ್ಯಗಳು ಹೊಂದಿಲ್ಲ ಎಂದು ಪೊಲೀಸರು ಗಮನಿಸಿದ್ದಾರೆ. ಸೇತುವೆಯು ಸುಮಾರು ಒಂದು ದಶಕದ ಹಿಂದೆ ಕುಸಿದುಬಿದ್ದಿದ್ದು, ಅಂದಿನಿಂದ ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ.

ಹಲವಾರು ಕರೆಗಳನ್ನು ಸ್ವೀಕರಿಸಿದರೂ Google ಮ್ಯಾಪ್ ತನ್ನ ಮಾರ್ಗ ಮಾರ್ಗದರ್ಶನದಿಂದ ಅದನ್ನು ತೆಗೆದುಹಾಕಲಿಲ್ಲ ಎಂದು ಮೊಕದ್ದಮೆಯಲ್ಲಿ ಸೇರಿಸಲಾಗಿದೆ. ಗಮನಾರ್ಹವಾಗಿ, ಮೃತರ ಕುಟುಂಬವು ಸೇತುವೆಯ ಮಾಲೀಕರಾದ ಟಾರ್ಡೆ, ಎಲ್ಎಲ್ ಸಿ, ಜೇಮ್ಸ್ ಟಾರ್ಲ್ಟನ್ ಮತ್ತು ಹಿಂಕ್ಲೆ ಗೌವೈನ್, ಎಲ್ಎಲ್ ಸಿಯನ್ನು ಮೊಕದ್ದಮೆಯಲ್ಲಿ ಸೇರಿಸಿದೆ. Google ವಕ್ತಾರ ಜೋಸ್ ಕ್ಯಾಸ್ಟನೆಡಾ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಟೆಕ್ ದೈತ್ಯ ಮೊಕದ್ದಮೆಯನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಭವಿಷ್ಯದಲ್ಲಿ ಇದೇ ರೀತಿಯ ದುರಂತಗಳನ್ನು ತಡೆಗಟ್ಟಲು ಸುರಕ್ಷತಾ ಕಾಳಜಿಗಳನ್ನು ತಿಳಿಸುವ ಮಹತ್ವವನ್ನು ಒತ್ತಿಹೇಳಿದರು ಮತ್ತು ಗೂಗಲ್ ಮ್ಯಾಪ್ ನಿಖರವಾದ ರೂಟಿಂಗ್ ಮಾಹಿತಿಯನ್ನು ಒದಗಿಸುವುದು ಕಂಪನಿಯ ಪ್ರಾಥಮಿಕ ಗುರಿಯಾಗಿದೆ ಎಂದು ಹೇಳಿದ್ದಾರೆ. ಈ ದುರಂತ ಘಟನೆಯು ಗೂಗಲ್ ಮ್ಯಾಪ್ ನಿಖರತೆ ಮತ್ತು ಅದರ ಮಾರ್ಗ ಮಾರ್ಗದರ್ಶನವನ್ನು ಕುರುಡಾಗಿ ಅನುಸರಿಸುವ ಅಭ್ಯಾಸದ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನು ಗೂಗಲ್ ಮ್ಯಾಪ್ ರಸ್ತೆ ಗೊತ್ತಿಲ್ಲದ ವಾಹನ ಸವಾರರಿಗೆ ನೆರವಾಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಕೆಲವೊಮ್ಮೆ ಗೂಗಲ್ ಮ್ಯಾಪ್ ಅನ್ನು ಕಣ್ಣುಮುಚ್ಚಿ ನಂಬುವುದು ಅಪಾಯಕ್ಕೆ ದೂಡಬಹುದು. ಈ ರೀತಿಯ ಹಲವಾರು ಘಟನೆಗಳು ವಿಶ್ವಾದ್ಯಂತ ಹಾಗೂ ಭಾರತದಲ್ಲಿಯೂ ನಡೆದಿವೆ. ಕೆಲವರು ಗೂಗಲ್ ಮ್ಯಾಪ್ ಅನ್ನು ನಂಬಿ ದಾರಿ ತಪ್ಪಿರುವ ಹಲವಾರು ಉದಾಹರಣೆಗಳಿವೆ. ಗೂಗಲ್ ಮ್ಯಾಪ್ ಅನ್ನು ಅತಿಯಾಗಿ ನಂಬಿಕೊಂಡವರಿಗೆ ಈ ಘಟನೆಯು ಆಘಾತವನ್ನುಂಟು ಮಾಡಿದೆ.
ನಗರ ಪ್ರದೇಶಗಳಲ್ಲಿ ದಿನ ನಿತ್ಯ ಗೂಗಲ್ ಮ್ಯಾಪ್ ಬಳಸಿದರೆ ಯಾವುದೇ ತೊಂದರೆಯಿಲ್ಲ. ಆದರೆ ದೂರದ ಪ್ರಯಾಣ ಮಾಡುವಾಗ, ಗೂಗಲ್ ಮ್ಯಾಪ್ ಅನ್ನು ಕುರುಡಾಗಿ ನಂಬುವುದು ಅಪಾಯಕಾರಿಯಾಗಬಲ್ಲದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ದೂರದ ಪ್ರಯಾಣವನ್ನು ಆರಂಭಿಸುವ ಮೊದಲು ಆ ಮಾರ್ಗದಲ್ಲಿ ಓಡಾಡಿ ಅನುಭವವಿರುವವರಿಂದ ಮಾರ್ಗದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಒಂದು ವೇಳೆ ಗೂಗಲ್ ಮ್ಯಾಪ್ ಬಳಸುವುದೇ ಆದರೆ ಎರಡೆರಡು ಬಾರಿ ಪರಿಶೀಲಿಸುವುದು ಉತ್ತಮ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








