ಕೈಬಿಟ್ಟು ಓಲಾ ಸ್ಕೂಟರ್ ಚಾಲನೆ: ಕ್ರೂಸ್ ಕಂಟ್ರೋಲ್‌ಗೆ ಶುಲ್ಕ ವಿಧಿಸಲು ಯೋಚಿಸುತ್ತೇನೆ ಎಂದ ಸಿಇಒ..!

ಬೆಂಗಳೂರು ಮೂಲದ ಓಲಾ (Ola) ಕಂಪನಿ ತಯಾರಿಸುವ ಎಸ್1 ಪ್ರೊ (S1 Pro) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ಇದು ಯಾವುದೇ ಕಾರಿಗೂ ಕಮ್ಮಿ ಇಲ್ಲದಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೆಲವೊಮ್ಮೆ ಅದರಿಂದಲೇ ಸುದ್ದಿಯಾಗುತ್ತಿರುತ್ತದೆ. ಇದೀಗ, ಅಂತಹದ್ದೇ ಫೀಚರ್ಸ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ.

ಇತ್ತೀಚೆಗೆ ಓಲಾ ಸಿಇಒ ಭವಿಶ್ ಅಗರ್ವಾಲ್ (Bhavish Aggarwal) ಅವರು, ಡಾ.ಅಜಯಿತಾ ಎಂಬುವವರೂ 'ಎಕ್ಸ್' (ಟ್ವಿಟರ್)ನಲ್ಲಿ ಮಾಡಿದ್ದ ವಿಡಿಯೋ ಪೋಸ್ಟ್ ಅನ್ನು ರೀ-ಪೋಸ್ಟ್ ಮಾಡಿದ್ದರು. 'ಇದನ್ನು ನೋಡಿದ ನಂತರ ಕ್ರೂಸ್ ಕಂಟ್ರೋಲ್‌ (Cruise Control)ಗೆ ಚಂದಾದಾರಿಕೆ (Subscription) ಶುಲ್ಕವನ್ನು ವಿಧಿಸಲು ಯೋಚಿಸುತ್ತಿದ್ದೇನೆ' ಎಂದು ಮೂರು ಎಮೋಜಿಗಳನ್ನು ಬಳಸಿ, ಭವಿಶ್ ಅಗರ್ವಾಲ್ ಶೀರ್ಷಿಕೆ ಬರೆದಿದ್ದರು.

ಕೈಬಿಟ್ಟು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ: ಕ್ರೂಸ್ ಕಂಟ್ರೋಲ್‌ಗೆ ಶುಲ್ಕ ಎಂದ ಸಿಇಒ..! ಸುರಕ್ಷತೆಯೂ ಮುಖ್ಯವಲ್ಲವೇ?

ಅಷ್ಟಕ್ಕೂ ವಿಡಿಯೋದಲ್ಲಿ ಹೆಲ್ಮೆಟ್ ಧರಿಸಿರುವ ವ್ಯಕ್ತಿಯೊಬ್ಬ, ಆಕ್ಸಿಲರೇಟರ್ ಹಿಡಿಯದೆ ಓಲಾ ಸ್ಕೂಟರ್ ಓಡಿಸುತ್ತಿರುವುದನ್ನು ನೋಡಬಹುದು. ಇದರಿಂದಾಗಿ ಆ ಸ್ಕೂಟರ್ ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯವನ್ನು ಹೊಂದಿದೆ ಎಂಬುದು ಗೊತ್ತಾಗುತ್ತದೆ. ಭವಿಶ್ ಅಗರ್ವಾಲ್ ಅವರು ರೀ-ಪೋಸ್ಟ್ ಮಾಡಿರುವ ಈ ವಿಡಿಯೋ 3 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರಿಂದ ತರಹೇವಾರಿ ಪ್ರತಿಕ್ರಿಯೆ ಪಡೆದುಕೊಂಡಿದೆ.

ಸಾಮಾಜಿಕ ಜಾಲತಾಣ ಬಳಕೆದಾರೊಬ್ಬರು, 'ಸ್ಕೂಟರ್ ರಿಮೋಟ್ ಆಪರೇಟ್ ಆಗಿದ್ದು, ರಿಮೋಟ್ ಪತ್ನಿ ಬಳಿಯಿದೆ' ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಆಟೋ - ಪೈಲಟ್ ಮೋಡ್' ಎಂದು ಹೇಳಿದ್ದಾರೆ. ಕೆಲವು ಬಳಕೆದಾರರು, 'ಅಗರ್ವಾಲ್ ಅವರು ರಸ್ತೆ ಸುರಕ್ಷತೆಯ ನಿಯಮಗಳ ಉಲ್ಲಂಘನೆಯನ್ನು ಉತ್ತೇಜಿಸುತ್ತಿದ್ದಾರೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೈಬಿಟ್ಟು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ: ಕ್ರೂಸ್ ಕಂಟ್ರೋಲ್‌ಗೆ ಶುಲ್ಕ ಎಂದ ಸಿಇಒ..! ಸುರಕ್ಷತೆಯೂ ಮುಖ್ಯವಲ್ಲವೇ?

ಇನ್ನೊಬ್ಬ ನೆಟ್ಟಿಗ, 'ಆತ ಹ್ಯಾಂಡಲ್ ಮೇಲೆ ಕೈ ಹಾಕದೆ ತನ್ನ ಸ್ಕೂಟರ್ ಅನ್ನು ಓಡಿಸುತ್ತಾನೆ. ಇದು ಅವನಿಗೂ, ಇತರರಿಗೆ ಅಪಾಯಕಾರಿ ಅಲ್ಲವೇ?' ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, 'ತುಂಬಾ ಅಸುರಕ್ಷಿತವಾಗಿದೆ. ನೀವು ಕ್ರೂಸ್ ಕಂಟ್ರೋಲ್ ಅನ್ನು ಯಾಕೆ ಪರೀಕ್ಷಿಸಲಿಲ್ಲ?' ಚಾಲಕನ ಕೈ ಹ್ಯಾಂಡಲ್‌ನಲ್ಲಿ ಇಲ್ಲದಿದ್ದರೆ, ಕ್ರೂಸ್ ಕಂಟ್ರೋಲ್ ತಾನಾಗಿಯೇ ನಿಲ್ಲುತ್ತದೆ' ಎಂದು ಹೇಳಿದ್ದಾರೆ.

ಓಲಾ ಕಂಪನಿ ಮಾರಾಟಗೊಳಿಸುವ ಟಾಪ್ ಎಂಡ್ ಮಾದರಿ ಎಸ್1 ಪ್ರೊ (S1 Pro) ಎಲೆಕ್ಟ್ರಿಕ್ ಸ್ಕೂಟರ್ ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯದೊಂದಿಗೆ ಖರೀದಿಗೆ ಲಭ್ಯವಿದೆ. ನಾರ್ಮಲ್, ಹೈಪರ್ ಹಾಗೂ ಸ್ಪೋರ್ಟ್ಸ್ ರೈಡಿಂಗ್ ಮೋಡ್ ಅಥವಾ ಈ ಸ್ಕೂಟರ್ ಗಂಟೆಗೆ 20 ರಿಂದ 80 ವೇಗದಲ್ಲಿ ಸಂಚರಿಸುವ ಕ್ರೂಸ್ ಕಂಟ್ರೋಲ್ ಫೀಚರ್ ಆಕ್ಟಿವ್ (ಸಕ್ರಿಯ) ಮಾಡಬಹುದು.

ಕಳೆದ ತಿಂಗಳು (ಅಕ್ಟೋಬರ್) ನವರಾತ್ರಿ ಹಬ್ಬದ ಹಿನ್ನೆಲೆ ಓಲಾ ಕಂಪನಿ, ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಭರ್ಜರಿಯಾಗಿ ಯಶಸ್ಸು ಸಾಧಿಸಿದೆ. 24,000 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಸೇಲ್ ಮಾಡಿದೆ. ಈ ಮೂಲಕ ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇಕಡ 35% ಪಾಲನ್ನು ತನ್ನದಾಗಿಸಿಕೊಂಡಿದೆ. ದೀಪಾವಳಿಯಿರುವುದರಿಂದ ನವೆಂಬರ್ ತಿಂಗಳು ಕೂಡ ಮಾರಾಟದಲ್ಲಿ ಒಳ್ಳೆಯ ಪ್ರಗತಿ ದಾಖಲಿಸಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಓಲಾ ಎಸ್1 ಪ್ರೊ, ರೂ.1,47,499 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಸಂಪೂರ್ಣ ಚಾರ್ಜ್ ನಲ್ಲಿ 195 ಕಿಮೀ ರೇಂಜ್ ನೀಡಲಿದ್ದು, 120 kmph ಟಾಪ್ ಸ್ವೀಡ್ ಹೊಂದಿದೆ. 7 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನಿಯೋ ಮಿಂಟ್, ಕೋರಲ್ ಗ್ಲಾಮ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 8, 2023, 12:50 [IST]
English summary
Man driving ola scooter without holding accelerator ceo says charges for cruise control safety also
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+