ಹೆಲ್ಮೆಟ್‍‍ನಲ್ಲಿ ಹಾವಿದ್ದರೂ 11 ಕಿ.ಮೀ ಚಲಿಸಿದ ಸ್ಕೂಲ್ ಟೀಚರ್..!

ಯಾರೇ ಆಗಲಿ ಹಾವುಗಳೆಂದರೆ ಬೆಚ್ಚಿ ಬೀಳುತ್ತಾರೆ. ಹಾವುಗಳನ್ನು ಕಂಡರೆ ಅವುಗಳಿಂದ ಮಾರು ದೂರ ಹೋಗುತ್ತಾರೆ. ಅಂತಹುದರಲ್ಲಿ ಹಾವುಗಳು ನಾವು ಧರಿಸುವ ಸಾಕ್ಸ್ ನಲ್ಲಿಯೋ ಅಥವಾ ಹೆಲ್ಮೆಟ್‍‍ನಲ್ಲಿಯೋ ಸೇರಿಕೊಂಡರೆ ಹೇಗಾಗುವುದಿಲ್ಲ.

ಹೆಲ್ಮೆಟ್‍‍ನಲ್ಲಿ ಹಾವಿದ್ದರೂ 11 ಕಿ.ಮೀ ಚಲಿಸಿದ ಸ್ಕೂಲ್ ಟೀಚರ್..!

ಹೆಲ್ಮೆಟ್‍‍ನಲ್ಲಿ ವಿಷಪೂರಿತ ಹಾವು ಸೇರಿಕೊಂಡರೂ ಸಹ ವ್ಯಕ್ತಿಯೊಬ್ಬ ಅದೇ ಹೆಲ್ಮೆಟ್ ಧರಿಸಿ ಸುಮಾರು 11 ಕಿ.ಮೀ ಬೈಕ್ ಚಲಾಯಿಸಿಕೊಂಡು ಹೋದ ಘಟನೆ ಕೇರಳದಲ್ಲಿ ನಡೆದಿದೆ. ಸಂಸ್ಕೃತ ವಿಷಯವನ್ನು ಬೋಧಿಸುವ ರಂಜಿತ್ ಎಂಬ ಸ್ಕೂಲ್ ಟೀಚರ್ ಸಾವನ್ನು ತಲೆ ಮೇಲೆ ಹೊತ್ತುಕೊಂಡು ಪಾರಾಗಿ ಬಂದಿರುವವರು.

ಹೆಲ್ಮೆಟ್‍‍ನಲ್ಲಿ ಹಾವಿದ್ದರೂ 11 ಕಿ.ಮೀ ಚಲಿಸಿದ ಸ್ಕೂಲ್ ಟೀಚರ್..!

ನಂತರ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ, ದೇಹಕ್ಕೆ ವಿಷ ಹರಡಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲಾಗಿದೆ. ಅದೃಷ್ಟವಶಾತ್ ಅವರಿಗೆ ಹಾವಿನಿಂದ ಯಾವುದೇ ತೊಂದರೆಯುಂಟಾಗಿಲ್ಲ. ಆದರೆ ಹೆಲ್ಮೆಟ್‍‍ನಲ್ಲಿದ್ದ ಹಾವು ಸಾವನ್ನಪ್ಪಿದೆ.

ಹೆಲ್ಮೆಟ್‍‍ನಲ್ಲಿ ಹಾವಿದ್ದರೂ 11 ಕಿ.ಮೀ ಚಲಿಸಿದ ಸ್ಕೂಲ್ ಟೀಚರ್..!

ಹೆಲ್ಮೆಟ್‍‍ನಲ್ಲಿ ಹಾವು ಸೇರಿಕೊಂಡಿರುವುದನ್ನು ಗಮನಿಸದ ರಂಜಿತ್‍‍ರವರು ಎಂದಿನಂತೆ ತಮ್ಮ ಮನೆಯಿಂದ ಕಂದಾನಾಡ್‍‍ನಲ್ಲಿರುವ ಸೇಂಟ್ ಮೇರಿಸ್ ಹೈ ಸ್ಕೂಲಿಗೆ ಹೊರಟಿದ್ದಾರೆ. ತಮ್ಮ ಮನೆಯಿಂದ 5 ಕಿ.ಮೀ ದೂರದಲ್ಲಿರುವ ಕಂದಾನಾಡ್ ಸ್ಕೂಲಿನ ಅವಧಿಯನ್ನು ಮುಗಿಸಿಕೊಂಡು ಮತ್ತೊಂದು ಸ್ಕೂಲಿಗೆ ಹೊರಟಿದ್ದಾರೆ.

ಹೆಲ್ಮೆಟ್‍‍ನಲ್ಲಿ ಹಾವಿದ್ದರೂ 11 ಕಿ.ಮೀ ಚಲಿಸಿದ ಸ್ಕೂಲ್ ಟೀಚರ್..!

ಆ ಮತ್ತೊಂದು ಸ್ಕೂಲ್ ಕಂದಾನಾಡ್‍‍ನಿಂದ 6 ಕಿ.ಮೀ ದೂರದಲ್ಲಿದೆ. ಆ ಸ್ಕೂಲಿಗೆ ಹೋದ ನಂತರ ರಂಜಿತ್‍‍ರವರಿಗೆ ಹೆಲ್ಮೆಟ್‍‍ನಲ್ಲಿ ಹಾವು ಸೇರಿಕೊಂಡಿರುವುದು ಕಂಡು ಬಂದಿದೆ. ಹೆಲ್ಮೆಟ್‍ನಲ್ಲಿ ಸಿಕ್ಕಿ ಕೊಂಡಿದ್ದ ಹಾವು ಅಲ್ಲಿಯೇ ಪ್ರಾಣ ಬಿಟ್ಟಿದೆ.

ಹೆಲ್ಮೆಟ್‍‍ನಲ್ಲಿ ಹಾವಿದ್ದರೂ 11 ಕಿ.ಮೀ ಚಲಿಸಿದ ಸ್ಕೂಲ್ ಟೀಚರ್..!

ಇದನ್ನು ಕಂಡ ರಂಜಿತ್‍‍ರವರು ಹೆಲ್ಮೆಟ್ ಅನ್ನು ದೂರ ಬಿಸಾಕಿ, ಬೆಂಕಿ ಹಚ್ಚಿದ್ದಾರೆ. ಇದರ ಬಗ್ಗೆ ಮಾತನಾಡಿರುವ ಅವರು, ಹಾವು ನಮ್ಮ ಮನೆಯ ಬಳಿಯಿರುವ ಕೆರೆಯಿಂದ ಬಂದು ಹೆಲ್ಮೆಟ್‍‍ನೊಳಗೆ ಸೇರಿಕೊಂಡಿರಬಹುದು. ಹಾವು ಹೆಲ್ಮೆಟ್‍‍ನೊಳಗೆ ಇದ್ದರೂ ಸಹ ನನ್ನ ಗಮನಕ್ಕೆ ಬರಲಿಲ್ಲ ಎಂದು ಹೇಳಿದ್ದಾರೆ.

ಹೆಲ್ಮೆಟ್‍‍ನಲ್ಲಿ ಹಾವಿದ್ದರೂ 11 ಕಿ.ಮೀ ಚಲಿಸಿದ ಸ್ಕೂಲ್ ಟೀಚರ್..!

ಕೇರಳ ರಾಜ್ಯವು ಹೆಚ್ಚಿನ ಸಂಖ್ಯೆಯಲ್ಲಿ ಹಸಿರು ಪ್ರದೇಶ ಹಾಗೂ ಕಾಡುಗಳನ್ನು ಹೊಂದಿರುವ ರಾಜ್ಯವಾಗಿದೆ. ಈ ಕಾರಣಕ್ಕೆ ಕೇರಳದಲ್ಲಿ ಹಾವುಗಳ ಸಂಖ್ಯೆಯು ಹೆಚ್ಚಾಗಿದೆ. ಕೇರಳದ ನಿವಾಸಿಗಳು ಪ್ರತಿನಿತ್ಯ ಹಾವುಗಳನ್ನು ಕಾಣುತ್ತಲೇ ಇರುತ್ತಾರೆ.

ಹೆಲ್ಮೆಟ್‍‍ನಲ್ಲಿ ಹಾವಿದ್ದರೂ 11 ಕಿ.ಮೀ ಚಲಿಸಿದ ಸ್ಕೂಲ್ ಟೀಚರ್..!

ಹೆಚ್ಚಿನ ಸಂಖ್ಯೆಯ ಹಾವುಗಳು ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ. ಇತ್ತೀಚಿಗಷ್ಟೇ ಕೇರಳದ ಮಲ್ಲಪುರಂ ಜಿಲ್ಲೆಯ ಶಾಲಾ ಬಾಲಕಿಯೊಬ್ಬಳ ಬ್ಯಾಗ್‍‍ನಲ್ಲಿ ಹಾವು ಕಂಡು ಬಂದಿತ್ತು. ಆದರೆ ಬಾಲಕಿಗೆ ಯಾವುದೇ ತೊಂದರೆಯಾಗಿರಲಿಲ್ಲ.

ಹೆಲ್ಮೆಟ್‍‍ನಲ್ಲಿ ಹಾವಿದ್ದರೂ 11 ಕಿ.ಮೀ ಚಲಿಸಿದ ಸ್ಕೂಲ್ ಟೀಚರ್..!

ಹಾವುಗಳು ಹೆಚ್ಚಾಗಿ ಬೆಚ್ಚಗಿರುವ ಸ್ಥಳಗಳಲ್ಲಿರಲು ಬಯಸುತ್ತವೆ. ಈ ಕಾರಣಕ್ಕೆ ಸ್ಕೂಟರ್, ಬೈಕ್‍‍ಗಳಲ್ಲಿ ಹೆಚ್ಚಾಗಿ ಸೇರಿಕೊಳ್ಳುತ್ತವೆ. ಕೇರಳದಲ್ಲಿ ಹಾವುಗಳು ಹೆಚ್ಚಾಗಿ ಕಾರುಗಳಲ್ಲಿ ಅವಿತುಕೊಳ್ಳುತ್ತವೆ. ಬೆಚ್ಚಗಿರುವ ಕಾರಣಕ್ಕೆ ಹಾವು ರಂಜಿತ್‍‍ರವರ ಹೆಲ್ಮೆಟ್‍ನಲ್ಲಿ ಅಡಗಿ ಕುಳಿತಿದೆ.

ಹೆಲ್ಮೆಟ್‍‍ನಲ್ಲಿ ಹಾವಿದ್ದರೂ 11 ಕಿ.ಮೀ ಚಲಿಸಿದ ಸ್ಕೂಲ್ ಟೀಚರ್..!

ನಿಮ್ಮ ವಾಹನಗಳಲ್ಲಿ ಯಾವುದಾದರೂ ಹಾವುಗಳು ಕಂಡು ಬಂದರೆ ಭಯ ಬೀಳದೇ ಹಾವು ಹಿಡಿಯುವ ಪರಿಣಿತರನ್ನು ಸಂಪರ್ಕಿಸುವುದು ಒಳ್ಳೆಯದು. ಒಂದು ವೇಳೆ ಹಾವು ಕಚ್ಚಿದರೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ. ಎಲ್ಲಕ್ಕಿಂತ ಮುಖ್ಯವಾಗಿ ವಾಹನ ಹೊರ ತೆಗೆಯುವ ಮುನ್ನ ವಾಹನ ಹಾಗೂ ಹೆಲ್ಮೆಟ್‍‍ಗಳನ್ನು ಪರೀಕ್ಷಿಸಿದರೆ ಒಳ್ಳೆಯದು.

Article Published On: Tuesday, February 11, 2020, 12:27 [IST]
English summary
School Teacher rides with snake in helmet for 11 Kms. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+