"ಇನ್ಮುಂದೆ ಹೆಲ್ಮೆಟ್ ಹಾಕಿಕೊಂಡು ಕಾರು ಚಲಾಯಿಸುತ್ತೇನೆ" ವಿಷ್ಣು ಶರ್ಮಾ
ಸಾಮಾನ್ಯವಾಗಿ, ದ್ವಿಚಕ್ರ ವಾಹನ ಸವಾರರು ಮಾತ್ರ ಹೆಲ್ಮೆಟ್ ಧರಿಸಿ ವಾಹನ ಸವರಿ ಮಾಡುವುದನ್ನು ನೋಡುತ್ತೇವೆ. ಆದರೆ, ಇಲ್ಲೊಬ್ಬ ಮಾರುತಿ ಓಮ್ನಿ ಕಾರನ್ನು ಚಾಲನೆ ಮಾಡುವಾಗ ಕೂಡ ಹೆಲ್ಮೆಟ್ ಧರಿಸಿ ಕಾರು ಚಾಲನೆ ಮಾಡಿದ್ದಾನೆ.
ಸಾಮಾನ್ಯವಾಗಿ, ದ್ವಿಚಕ್ರ ವಾಹನ ಸವಾರರು ಮಾತ್ರ ಹೆಲ್ಮೆಟ್ ಧರಿಸಿ ವಾಹನ ಸವರಿ ಮಾಡುವುದನ್ನು ನೋಡುತ್ತೇವೆ. ಆದರೆ, ಇಲ್ಲೊಬ್ಬ ಮಾರುತಿ ಓಮ್ನಿ ಕಾರನ್ನು ಚಾಲನೆ ಮಾಡುವಾಗ ಕೂಡ ಹೆಲ್ಮೆಟ್ ಧರಿಸಿ ಕಾರು ಚಾಲನೆ ಮಾಡಿದ್ದಾನೆ.

ಹೌದು, ಆಶ್ಚರ್ಯವೆನ್ನಿಸಿದರೂ ಸಹ ಈ ವಿಚಿತ್ರ ಘಟನೆಯೊಂದು ರಾಜಸ್ಥಾನದಲ್ಲಿ ನೆಡೆದಿದೆ. ಕಾರಿನಲ್ಲಿ ಹೆಲ್ಮೆಟ್ ಧರಿಸಿರುವುದರ ಹಿಂದೆ ಒಂದು ಕಾರಣವಿದ್ದು, ಈ ವಿಚಾರ ಸದ್ಯ ಹೆಚ್ಚು ವೈರಲ್ ಆಗಿದೆ. ಭಾರತದಲ್ಲಿ ಎಲ್ಲವೂ ಸದ್ಯ ಎನ್ನುವುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.

ಕಳೆದ ಡಿಸೆಂಬರ್ 1ರಂದು ರಾಜಸ್ಥಾನದ ಭರತ್‌ಪುರ್ ಎಂಬಲ್ಲಿ ವಿಷ್ಣು ಶರ್ಮಾ ಎಂಬುವವರು ಓಮ್ನಿ ಚಾಲಾಯಿಸಿಕೊಂಡು ಬರುತ್ತಿದ್ದರು. ಆದರೆ ಅವರ ಗ್ರಹಚಾರ ಅಂದು ನೆಟ್ಟಗಿರಲಿಲ್ಲ ಎನ್ನುವುದು ಸತ್ಯ ಸಂಗತಿಯಾಗಿದೆ.

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ವಿಷ್ಣು ಶರ್ಮಾ ಅವರನ್ನು ರಸ್ತೆಯ ಮಧ್ಯೆ ತಡೆದು ಚೇಚಿಂಗ್ ವೇಳೆ ಕಾರಿನಲ್ಲಿ ಏಕೆ ಹೆಲ್ಮೆಟ್ ಧರಿಸಿಲ್ಲ ಎಂದು ಪ್ರೆಶ್ನಿಸಿದ ಟ್ರಾಫಿಕ್ ಪೊಲೀಸರು, ಧರಿಸದೇ ಇರುವ ಕಾರಣಕ್ಕೆ ದಂಡ ವಿಧಿಸಿ ಮನೆಗೆ ಕಳುಹಿಸಿದ್ದಾರೆ.

ತಪಾಸಣಾ ಸಮಯದಲ್ಲಿ, ಹೆಲ್ಮೆಟ್ ಧರಿಸದೆ ಇರುವುದಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಪ್ರಹ್ಲಾದ್ ಸಿಂಗ್ ಎಂಬುವವರು ರೂ.200 ರೂಪಾಯಿ ದಂಡ ವಿಧಿಸಿದ್ದರು. ಭವಿಷ್ಯದಲ್ಲಿ ಇಂತಹ ಯಾವುದೇ ರೀತಿಯ ದಂಡದಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಕಂಡುಕೊಂಡಿರುವ ವಿಷ್ಣು ಶರ್ಮಾ ಅವರು ಮಾರುತಿ ಓಮ್ನಿ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಲು ನಿರ್ಧರಿಸಿದ್ದಾರೆ.

ಈ ವಿಚಾರವಾಗಿ ಕಾಸ್ಟೇಬಲ್ ಅವರನ್ನು ವಿಚಾರಿಸಿದಾಗ, 'ಸೀಟ್ ಬೆಲ್ಟ್ ಪದ ಬಳಕೆಯ ಬದಲು ಹೆಲ್ಮೆಟ್ ಧರಿಸಿಲ್ಲ' ಎಂದು ತಪ್ಪಾಗಿ ಬರೆದಿರುವುದಾಗಿ ತಿಳಿಸಿದ್ದಾರೆ. 'ಪೋಲೀಸರ ತಪಾಸಣೆ ವೇಳೆ ತಾನು ಸೀಟ್ ಬೆಲ್ಟ್ ಧರಿಸಿ ಚಾಲನೆ ಮಾಡುತ್ತಿದೆ' ಎಂದು ವಿಷ್ಣು ಶರ್ಮಾ ಹೇಳಿಕೆ ನೀಡಿದ್ದಾರೆ.

ಯಾರನ್ನ ನಂಬುವುದು ? ಯಾರನ್ನು ಬಿಡುವುದು ? ಒಟ್ಟಿನಲ್ಲಿ ದಂಡ ಬಿದ್ದಿದೆ. ಒಂದು ವೇಳೆ ವಿಷ್ಣು ಶರ್ಮಾ ಅವರು ನಿಜ ಹೇಳುತ್ತಿದ್ದರೆ, ಪೊಲೀಸರು ಮೋಸ ಮಾಡುತ್ತಿದ್ದಾರೆ ಎಂದು ಅರ್ಥ. ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದರೆ, ಪೊಲೀಸರಿಗೆ ಕ್ಯಾಮೆರಾ ಅಳವಡಿಸಬೇಕು. ಅಲ್ಲವೇ ?


Click it and Unblock the Notifications