ಪಿವಿಸಿ ಪೈಪ್‌ನಿಂದಲೇ ತಯಾರಾಯ್ತು ರಿಮೋಟ್ ಕಂಟ್ರೋಲ್ ದೋಣಿ

ಭಾರತೀಯರು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇರುತ್ತಾರೆ. ಭಾರತೀಯರು ವಿಭಿನ್ನವಾಗಿ ವಿಶಿಷ್ಟವಾಗಿ ತಯಾರಿಸಿರುವ ಅನೇಕ ವಾಹನಗಳ ಬಗ್ಗೆ ಈಗಾಗಲೇ ಹಲವು ಬಾರಿ ಹೇಳಲಾಗಿದೆ.

ಪಿವಿಸಿ ಪೈಪ್‌ನಿಂದಲೇ ತಯಾರಾಯ್ತು ರಿಮೋಟ್ ಕಂಟ್ರೋಲ್ ದೋಣಿ

ಕೆಲವರು ಬೈಕ್ ಗಳನ್ನು ಮೂರು ಚಕ್ರಗಳ ರಿಕ್ಷಾ ರೀತಿಯಲ್ಲಿ ಮಾಡಿಫೈಗೊಳಿಸಿದರೆ, ಇನ್ನೂ ಕೆಲವರು ಆಟೋಗಳನ್ನು ಐಷಾರಾಮಿ ಕಾರಿನಂತೆ ವಿನ್ಯಾಸಗೊಳಿಸುತ್ತಾರೆ. ಇವುಗಳೆಲ್ಲಾ ರಸ್ತೆಯ ಮೇಲೆ ಚಲಿಸುವ ವಾಹನಗಳಿವೆ. ಆದರೆ ಈ ಲೇಖನದಲ್ಲಿ ಹೇಳಲಾಗುತ್ತಿರುವ ವಾಹನವು ರಸ್ತೆಯ ಮೇಲೆ ಚಲಿಸುವುದಿಲ್ಲ. ಬದಲಿಗೆ ನೀರಿನಲ್ಲಿ ಚಲಿಸುವ ದೋಣಿಯಾಗಿದೆ. ಈ ದೋಣಿಯನ್ನು ಪಿವಿಸಿ ಪೈಪ್ ಗಳಿಂದ ತಯಾರಿಸಲಾಗಿದೆ. ಒಂದು ಬಾರಿಗೆ ಮೂರು ಜನರನ್ನು ಸಾಗಿಸಬಲ್ಲ ಈ ದೋಣಿ ರಿಮೋಟ್ ಕಂಟ್ರೋಲ್ ಅನ್ನು ಹೊಂದಿದೆ.

ಪಿವಿಸಿ ಪೈಪ್‌ನಿಂದಲೇ ತಯಾರಾಯ್ತು ರಿಮೋಟ್ ಕಂಟ್ರೋಲ್ ದೋಣಿ

ಈ ದೋಣಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಂ 4 ಟೆಕ್ಎಂಬ ಯೂಟ್ಯೂಬ್ ಚಾನೆಲ್ ಈ ದೋಣಿಯ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ದೋಣಿ ನಿರ್ಮಿಸುವ ಪ್ರಕ್ರಿಯೆಯೊಂದಿಗೆ ಈ ವೀಡಿಯೊ ಆರಂಭವಾಗುತ್ತದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಪಿವಿಸಿ ಪೈಪ್‌ನಿಂದಲೇ ತಯಾರಾಯ್ತು ರಿಮೋಟ್ ಕಂಟ್ರೋಲ್ ದೋಣಿ

ದೋಣಿ ತಯಾರಿಸಲು ಉದ್ದದ ನಾಲ್ಕು ಪಿವಿಸಿ ಪೈಪ್‌ಗಳನ್ನು ಕತ್ತರಿಸುವುದನ್ನು ವೀಡಿಯೊದ ಆರಂಭದಲ್ಲಿಯೇ ಕಾಣಬಹುದು. ಕತ್ತರಿಸಿದ ಈ ನಾಲ್ಕು ಪೈಪ್ ಗಳನ್ನು ಕೆಳಕ್ಕೆ ತಳಪಾಯದಂತೆ ಹಾಕಲಾದರೆ, ಮಧ್ಯದಲ್ಲಿರುವ ಎರಡು ಪೈಪ್ ಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ.

ಪಿವಿಸಿ ಪೈಪ್‌ನಿಂದಲೇ ತಯಾರಾಯ್ತು ರಿಮೋಟ್ ಕಂಟ್ರೋಲ್ ದೋಣಿ

ಮತ್ತೊಂದು ಪಿವಿಸಿ ಪೈಪ್ ಅನ್ನು ಅದರಲ್ಲಿ ಹಾಕಲಾಗಿದ್ದು, ಎಲ್ಬೋ ಜಾಯಿಂಟ್ ನಿಂದ ಕನೆಕ್ಟ್ ಮಾಡಲಾಗಿದೆ. ಇದನ್ನು ಈ ದೋಣಿಯ ಮುಂದಿನ ಭಾಗವಾಗಿ ಬಳಸಲಾಗುತ್ತದೆ. ನಂತರ ಮೆಟಲ್ ಫ್ರೇಮ್ ಗೆ ಜೋಡಿಸಲಾಗುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಈ ಮೆಟಲ್ ಫ್ರೇಮ್ ಅನ್ನು ಕಸ್ಟಮೈಸ್ ಮಾಡಲಾಗಿದ್ದು, ಪಿವಿಸಿ ಫ್ರೇಮ್‌ಗೆ ಸೇರಿಸಲಾಗಿರುವುದರಿಂದ ಬಲಶಾಲಿಯಾಗಿದೆ. ಈ ಮೆಟಲ್ ಫ್ರೇಮ್ ಗೆ ಜೋಡಿಸಿದ ನಂತರ ಪ್ಲೈವುಡ್ ಶೀಟ್ ಅನ್ನು ಈ ಫ್ರೇಮ್ ಮೇಲೆ ಅಳವಡಿಸಲಾಗಿದೆ.

ಪಿವಿಸಿ ಪೈಪ್‌ನಿಂದಲೇ ತಯಾರಾಯ್ತು ರಿಮೋಟ್ ಕಂಟ್ರೋಲ್ ದೋಣಿ

ಇವುಗಳ ಜೊತೆಗೆ ಸಣ್ಣ ಪಿವಿಸಿ ಪೈಪ್ ಗಳನ್ನು ರೇಲಿಂಗ್ ಸಹ ಮಾಡಲಾಗಿದೆ. ಈ ದೋಣಿಯನ್ನು ಚಲಾಯಿಸಲು ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಪ್ರೊಪೆಲ್ಲರ್‌ಗೆ ಕನೆಕ್ಟ್ ಮಾಡಲಾಗಿದೆ. ಮೋಟರ್ ಚಾಲನೆಗಾಗಿ 12 ವೋಲ್ಟ್ ಬ್ಯಾಟರಿಯನ್ನು ಬಳಸಲಾಗಿದೆ.

Most Read Articles

Kannada
English summary
Man from Kerala creates remote controlled boat in PVC pipes. Read in Kannada.
Story first published: Friday, July 17, 2020, 20:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X