77 ವರ್ಷ ಒಂದೇ ಕಾರನ್ನು ಬಳಸಿದ ವಿಶ್ವದ ಏಕೈಕ ವ್ಯಕ್ತಿ ಇವರು

ರೋಲ್ಸ್ ರಾಯ್ಸ್ ವಿಶ್ವದ ಅತ್ಯಂತ ಹಳೆಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿದ್ದು, ಇನ್ನೂ ಸಹ ಕಾರುಗಳನ್ನು ಉತ್ಪಾದಿಸುತ್ತಿದೆ. ರೋಲ್ಸ್ ರಾಯ್ಸ್ 1904ರಲ್ಲಿ ಬ್ರಿಟನ್‌ನಲ್ಲಿ ಕಾರುಗಳ ಉತ್ಪಾದನೆಯನ್ನು ಆರಂಭಿಸಿತು.

77 ವರ್ಷ ಒಂದೇ ಕಾರನ್ನು ಬಳಸಿದ ವಿಶ್ವದ ಏಕೈಕ ವ್ಯಕ್ತಿ ಇವರು

ಅಂದಿನಿಂದ ಕಂಪನಿಯು ಐಷಾರಾಮಿ ಕಾರುಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ರೋಲ್ಸ್ ರಾಯ್ಸ್ ಕಾರು ಹಾಗೂ ಅದರ ಮಾಲೀಕರ ಚಿತ್ರ ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿದೆ. 77 ವರ್ಷ ಒಂದೇ ರೋಲ್ಸ್ ರಾಯ್ಸ್ ಕಾರನ್ನು ಬಳಸಿದ ವಿಶ್ವದ ಏಕೈಕ ವ್ಯಕ್ತಿ ಅಮೆರಿಕದ ಅಲನ್ ಸ್ವಿಫ್ಟ್ ಎಂದು ಹೇಳಲಾಗಿದೆ. ಅಲನ್ ಈಗ ಜೀವಂತವಾಗಿಲ್ಲ.

77 ವರ್ಷ ಒಂದೇ ಕಾರನ್ನು ಬಳಸಿದ ವಿಶ್ವದ ಏಕೈಕ ವ್ಯಕ್ತಿ ಇವರು

ಆದರೆ ಅವರ ಕಾರಿನ ಬಗ್ಗೆ ಪ್ರಪಂಚದಾದ್ಯಂತ ಚರ್ಚಿಸಲಾಗುತ್ತಿದೆ. ಫೋಟೋಗಳಲ್ಲಿ ಅಲನ್ ರವರ ಜೊತೆಗಿರುವ 1928ರ ಮಾದರಿಯ ರೋಲ್ಸ್ ರಾಯ್ಸ್ ಕಾರು, 2.75 ಲಕ್ಷ ಕಿ.ಮೀ ಸಂಚರಿಸಿದೆ. ವಿಶೇಷವೆಂದರೆ ಈ ಕಾರು ಎಂದೂ ಕೆಟ್ಟಿಲ್ಲ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

77 ವರ್ಷ ಒಂದೇ ಕಾರನ್ನು ಬಳಸಿದ ವಿಶ್ವದ ಏಕೈಕ ವ್ಯಕ್ತಿ ಇವರು

ಈ ಕಾರಿನಲ್ಲಿರುವ ಎಂಜಿನ್ ಅನ್ನು ಯಾವುದೇ ಒಂದು ದೊಡ್ಡ ಸಮಸ್ಯೆಯನ್ನು ಎದುರಿಸದ ರೀತಿಯಲ್ಲಿ ನಿರ್ಮಿಸಲಾಗಿದೆ. ಅಲೆನ್ ಈ ಕಾರಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಈ ಕಾರಣಕ್ಕೆ ಈ ಕಾರು ಅವರ ಬಳಿ 77 ವರ್ಷಗಳ ಕಾಲ ಇತ್ತು.

77 ವರ್ಷ ಒಂದೇ ಕಾರನ್ನು ಬಳಸಿದ ವಿಶ್ವದ ಏಕೈಕ ವ್ಯಕ್ತಿ ಇವರು

ರೋಲ್ಸ್ ರಾಯ್ಸ್ ಕಂಪನಿಯು, ಅಲನ್ ಸ್ವಿಫ್ಟ್ ಅವರನ್ನು ಸ್ಪಿರಿಟ್ ಆಫ್ ಎಕ್ಟಾಸಿ ಎಂದು ಗೌರವಿಸಿದೆ. 1903ರಲ್ಲಿ ಜನಿಸಿದ ಅಲನ್ ಸ್ವಿಫ್ಟ್ ಬಾಲ್ಯದಿಂದಲೂ ಕಾರುಗಳ ಬಗ್ಗೆ ಒಲವನ್ನು ಹೊಂದಿದ್ದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

77 ವರ್ಷ ಒಂದೇ ಕಾರನ್ನು ಬಳಸಿದ ವಿಶ್ವದ ಏಕೈಕ ವ್ಯಕ್ತಿ ಇವರು

ಅವರು ತಮ್ಮ 24ನೇ ವಯಸ್ಸಿನಲ್ಲಿ ಫ್ರಾಂಕ್ಲಿನ್ ಕಾರನ್ನು ಖರೀದಿಸಿದ್ದರು. ಮಾರ್ಮನ್, ಅವರು ಖರೀದಿಸಿದ ಎರಡನೇ ಕಾರು. ಅವರ 26ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ತಂದೆ ಅವರಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದರು.

77 ವರ್ಷ ಒಂದೇ ಕಾರನ್ನು ಬಳಸಿದ ವಿಶ್ವದ ಏಕೈಕ ವ್ಯಕ್ತಿ ಇವರು

ಅವರು ರೋಲ್ಸ್ ರಾಯ್ಸ್ ಕಾರುಗಳ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. ಅವರು ಅಮೆರಿಕದ ಸ್ಪ್ರಿಂಗ್ಫೀಲ್ಡ್ ನಗರದಲ್ಲಿ ರೋಲ್ಸ್ ರಾಯ್ಸ್ ಕಾರುಗಳ ವಸ್ತುಸಂಗ್ರಹಾಲಯವನ್ನು ನಿರ್ಮಿಸಿದ್ದರು. ಈ ವಸ್ತುಸಂಗ್ರಹಾಲಯದಲ್ಲಿ ಅವರು, ಅವರ ತಂದೆ ಹಾಗೂ ಸಹೋದರರ ರೋಲ್ಸ್ ರಾಯ್ಸ್ ಕಾರುಗಳನ್ನು ಪ್ರದರ್ಶಿಸಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

77 ವರ್ಷ ಒಂದೇ ಕಾರನ್ನು ಬಳಸಿದ ವಿಶ್ವದ ಏಕೈಕ ವ್ಯಕ್ತಿ ಇವರು

ರೋಲ್ಸ್ ರಾಯ್ಸ್ ಕಂಪನಿಯ ಉತ್ಪಾದನಾ ಘಟಕವು ಸಹ ಸ್ಪ್ರಿಂಗ್ಫೀಲ್ಡ್ ನಗರದಲ್ಲಿಯೇ ಇದೆ ಎಂಬುದು ವಿಶೇಷ. ಈ ಘಟಕದಲ್ಲಿ ಅಲನ್ ಕಾರುಗಳ ಉತ್ಪಾದನೆಯನ್ನು ವೀಕ್ಷಿಸುತ್ತಿದ್ದರು. ಈ ಘಟಕದಲ್ಲಿ ಪ್ರತಿಯೊಂದು ಕಾರನ್ನು ಎಚ್ಚರಿಕೆಯಿಂದ ಉತ್ಪಾದಿಸಲಾಗಿದೆ ಎಂದು ಅವರು ಹೇಳಿದ್ದರು.

77 ವರ್ಷ ಒಂದೇ ಕಾರನ್ನು ಬಳಸಿದ ವಿಶ್ವದ ಏಕೈಕ ವ್ಯಕ್ತಿ ಇವರು

ಕಾರಿನ ಪ್ರತಿಯೊಂದು ಭಾಗವನ್ನು ಹಲವಾರು ಪ್ಯಾರಾಮೀಟರ್ ಗಳಲ್ಲಿ ಪರೀಕ್ಷಿಸಲಾಗುತ್ತದೆ. ಕಾರಿನ ಎಂಜಿನ್ ಅನ್ನು ಹಲವಾರು ಹಂತದ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಕಾರು ಸಂಪೂರ್ಣವಾಗಿ ಸಿದ್ಧವಾದ ನಂತರ ಹಲವು ಗಂಟೆಗಳ ಕಾಲ ಚಾಲನೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

77 ವರ್ಷ ಒಂದೇ ಕಾರನ್ನು ಬಳಸಿದ ವಿಶ್ವದ ಏಕೈಕ ವ್ಯಕ್ತಿ ಇವರು

ಈ ಸಮಯದಲ್ಲಿ ಉದ್ಯೋಗಿಯೊಬ್ಬರು ಕಾರಿನ ಎಂಜಿನ್‌ನಿಂದ ಹೊರಹೊಮ್ಮುವ ಶಬ್ದವನ್ನು ಹಲವು ಗಂಟೆಗಳ ಕಾಲ ಸ್ಟೆತೊಸ್ಕೋಪ್ ಮೂಲಕ ಪರೀಕ್ಷಿಸುತ್ತಿದ್ದರು. ನಂತರ ಕಾರನ್ನು 200 ಮೈಲಿ ಚಾಲನೆ ಮಾಡುವ ಮೂಲಕ ಕೊನೆಯ ಬಾರಿಗೆ ಪರೀಕ್ಷಿಸಲಾಗುತ್ತದೆ.

Most Read Articles

Kannada
English summary
Man from USA owned Rolls Royce for 77 years. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X