ಹಲ್ಲಿನಿಂದ ಬರೋಬ್ಬರಿ 5 ಕಾರುಗಳನ್ನು ಕಚ್ಚಿ ಎಳೆದು ವಿಶ್ವದಾಖಲೆ

ಆಸ್ಟ್ರೇಲಿಯಾ ಮೂಲದ ಟ್ರಾಯ್‌ ಕೋನ್ಲಿ ಮ್ಯಾಗ್ನುಸನ್‌ ಎಂಬ ವ್ಯಕ್ತಿಯೊಬ್ಬ ಒಂದು ವಿಶಿಷ್ಟ ರೀತಿಯ ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾನೆ. ಈತನ ಈ ಸಾಧನೆ ಕಂಡು ಇಡೀ ವಿಶ್ವವೇ ಬೆರಗಾಗಿದ್ದು, ಇಂದು ನಾವು ಆತನ ಸಾಧನೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಹಲ್ಲಿನಿಂದ ಬರೋಬ್ಬರಿ 5 ಕಾರುಗಳನ್ನು ಕಚ್ಚಿ ಎಳೆದು ವಿಶ್ವದಾಖಲೆ

ಟ್ರಾಯ್‌ ಕೋನ್ಲಿ ಮ್ಯಾಗ್ನುಸನ್ ಎಂಬ ವ್ಯಕ್ತಿಯೊಬ್ಬ ಬರೋಬ್ಬರಿ ಐದು ಹ್ಯುಂಡೈ ಕೋನಾ ಎಸ್‌ಯುವಿಯನ್ನು ಏಕಕಾಲಕ್ಕೆ ತನ್ನ ಹಲ್ಲಿನಿಂದ ಕಚ್ಚಿ ಎಳೆದು ವಿಶ್ವದಾಖಲೆಯನ್ನು ಬರೆದಿದ್ದಾನೆ. ಆಸ್ಟ್ರೇಲಿಯಾದ ಸಿಡ್ನಿಯ ಬ್ಯಾಂಕ್ಸ್‌ಟೌನ್‌ನಲ್ಲಿ ಈತ ವಿಶ್ವ ದಾಖಲೆ ಬರೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈತನ ಸಾಧನೆ ವೈರಲ್‌ ಆಗಿದೆ.

ಹಲ್ಲಿನಿಂದ ಬರೋಬ್ಬರಿ 5 ಕಾರುಗಳನ್ನು ಕಚ್ಚಿ ಎಳೆದು ವಿಶ್ವದಾಖಲೆ

ಈತನ ಸಾಧನೆಯ ವಿಡಿಯೋವನ್ನು ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ ಟೀಮ್‌ ತನ್ನ ಟ್ವಿಟ್ಟರ್‌ ಅಕೌಂಟ್‌ನಲ್ಲಿ ಶೇರ್‌ ಮಾಡಿದ್ದು ೫ ಹ್ಯುಂಡೈ ಕೋನಾ ಕಾರುಗಳನ್ನು ಒಂದರ ಹಿಂದೊಂದರಂತೆ ಕಟ್ಟಿ ಹಲ್ಲಿನಿಂದ ಕಚ್ಚಿ ಎಳೆಯುತ್ತಿರುವುದನ್ನು ಕಾಣಬಹುದಾಗಿದೆ. ಟ್ರಾಯ್‌ ಕೋನ್ಲಿ ಮ್ಯಾಗ್ನುಸನ್ ಒಬ್ಬ ರೆಕಾರ್ಡ್‌ ಬ್ರೇಕರ್‌. ಈ ಹಿಂದೆ ಈತ ಬೇರೊಂದು ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದ. ಅದೇನೆಂದರೆ ಲೈಟ್‌ ಏರ್‌ಕ್ರಾಫ್ಟ್‌ ಒಂದನ್ನು 20 ಮೀಟರ್ ದೂರ ಅತ್ಯಂತ ವೇಗವಾಗಿ ಹಲ್ಲಿನಿಂದ ಕಚ್ಚಿ ಎಳೆಯುವುದರ ಮೂಲಕ ವಿಶ್ವದಾಖಲೆಯನ್ನು ಸೃಷ್ಟಿಸಿದ್ದ.

ಹಲ್ಲಿನಿಂದ ಬರೋಬ್ಬರಿ 5 ಕಾರುಗಳನ್ನು ಕಚ್ಚಿ ಎಳೆದು ವಿಶ್ವದಾಖಲೆ

ಟ್ರಾಯ್‌ ಕೋನ್ಲಿ ಮ್ಯಾಗ್ನುಸನ್ ಬರೋಬ್ಬರಿ ಐದು ಹ್ಯುಂಡೈ ಕೋನಾ ಎಸ್‌ಯುವಿಯನ್ನು ಏಕಕಾಲಕ್ಕೆ ತನ್ನ ಹಲ್ಲಿನಿಂದ ಕಚ್ಚಿ ಎಳೆಯುತ್ತಿರುವ ವಿಡಿಯೋವು ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಗೊಳಿಸಲಾಗಿತ್ತು. ಆದರೆ ನಿಜವಾಗಿಯೂ ಈ ದಾಖಲೆಯ ವಿಡಿಯೋವು 2021 ರ ನವೆಂಬರ್‌ 17 ರಂದೇ ಸೆರೆಹಿಡಿಯಲಾಗಿತ್ತು. ಆದರೆ ಅದನ್ನು ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರಲಿಲ್ಲ.

ಹಲ್ಲಿನಿಂದ ಬರೋಬ್ಬರಿ 5 ಕಾರುಗಳನ್ನು ಕಚ್ಚಿ ಎಳೆದು ವಿಶ್ವದಾಖಲೆ

ಇನ್ನು ಔದ್ಯೋಗಿಕವಾಗಿ ಇದನ್ನು ಖಚಿತಪಡಿಸಲಾಗಿದ್ದು, ಟ್ರಾಯ್‌ ಕೋನ್ಲಿ ಮ್ಯಾಗ್ನುಸನ್ ಈ ದಾಖಲೆಯನ್ನು ಚಾರೀಟಿಗೆ ಫಂಡ್‌ ಕಲೆಹಾಕುವಲ್ಲಿ ಬಳಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ವಿಡಿಯೋದಿಂದ ಬರುವ ಹಣವನ್ನು ಚಾರಿಟಿ ಗೆ ದಾನ ಮಾಡುವ ಮೂಲಕ ತನ್ನ ಕೈಲಾದ ಸಹಯಾವನ್ನು ಮಾಡುವುದಕ್ಕಾಗಿ ಈ ಸಾಹಸಕ್ಕೆ ಕೈ ಹಾಕಿದ್ದಾನೆ ಟ್ರಾಯ್‌ ಕೋನ್ಲಿ ಮ್ಯಾಗ್ನುಸನ್ .

ಹಲ್ಲಿನಿಂದ ಬರೋಬ್ಬರಿ 5 ಕಾರುಗಳನ್ನು ಕಚ್ಚಿ ಎಳೆದು ವಿಶ್ವದಾಖಲೆ

ಈ ಟ್ರಾಯ್‌ ಕೋನ್ಲಿ ಮ್ಯಾಗ್ನುಸನ್ ನ ಸಾಧನೆ ನಿಜಕ್ಕೂ ಅದ್ಭುತವಾದದ್ದು. ಯಾಕೆಂದರೆ ಹ್ಯುಂಡೈ ಕೋನಾವು ಸುಮಾರು 1569 ಕಿಲೋ ಗ್ರಾಂನಷ್ಟು ತೂಗುತ್ತದೆ. ಅದರಲ್ಲೂ ಕೋನಾದ ಎಲೆಕ್ರಿಕ್‌ ಮಾದರಿಯ ವಾಹನವು ಇದಕ್ಕಿಂತಲೂ ಜಾಸ್ತಿ, ಅಂದರೆ 1743 ಕಿಲೋ ಗ್ರಾಂನಷ್ಟು ತೂಗುತ್ತದೆ. ಒಂದು ಕೋನಾವೇ ಇಷ್ಟೊಂದು ತೂಕವಿದ್ದರೆ, ಆತ ದಾಖಲೆ ನಿರ್ಮಿಸುವ ಸಂಧರ್ಭದಲ್ಲಿ ಒಟ್ಟು 5 ಕೋನಾ ವಾಹನವನ್ನು ಕೇವಲ ತನ್ನ ಹಲ್ಲಿನಿಂದ ಕಚ್ಚಿ ಎಳೆಯುತ್ತಿದ್ದ. ಅಂದರೆ ಐದು ಕೋನಾದ ಒಟ್ಟು ತೂಕ ಸುಮಾರು 7845 ಕಿಲೋ ಗ್ರಾಂ.

ಹಲ್ಲಿನಿಂದ ಬರೋಬ್ಬರಿ 5 ಕಾರುಗಳನ್ನು ಕಚ್ಚಿ ಎಳೆದು ವಿಶ್ವದಾಖಲೆ

ಇಷ್ಟೊಂದು ತೂಕವನ್ನು ಕೇವಲ ತನ್ನ ಹಲ್ಲಿನಿಂದಲೇ ಕಚ್ಚಿ ಎಳೆಯುತ್ತಿದ್ದ ಎಂದರೆ ಅದೊಂದು ಅದ್ಭುತ ಸಾಧನೆಯೇ ಸರಿ. ಹಲವಾರು ಬಾರಿ ಕಾರುಗಳು ದಾರಿ ಮಧ್ಯೆ ಕೈಕೊಟ್ಟಾಗ ಅದನ್ನು ಒಬ್ಬರೇ ಅಲುಗಾಡಿಸುವುದೂ ಸಹ ಕಷ್ಟ. ಹಲವಾರು ಬಾರಿ ಅದು ಸರಿಯಾಗದೇ ಇದ್ದಲ್ಲಿ, ಟೋ ಮಾಡಿಕೊಂಡು ಹೋಗುವುದು ವಾಡಿಕೆ. ಹಲವರಿಗೆ ಕೈಯಲ್ಲೇ ಕಾರನ್ನು ದೂಡಿ ಬದಿಗೆ ಇಡಲು ಹರಸಾಹಸ ಪಡುವಾಗ, ಇಲ್ಲೊಬ್ಬ ಕೇವಲ ತನ್ನ ಹಲ್ಲಿನಿಂದ ಒಂದಲ್ಲ ಎರಡಲ್ಲ, ಬರೋಬ್ಬರಿ 5 ಹ್ಯುಂಡೈ ಕಾರುಗಲನ್ನು ಕಚ್ಚಿ ಎಳೆದಿದ್ದಾನೆ.

ಹಲ್ಲಿನಿಂದ ಬರೋಬ್ಬರಿ 5 ಕಾರುಗಳನ್ನು ಕಚ್ಚಿ ಎಳೆದು ವಿಶ್ವದಾಖಲೆ

ಟ್ರಾಯ್‌ ಕೋನ್ಲಿ ಮ್ಯಾಗ್ನುಸನ್ ಸಾಧನೆ ಬಗ್ಗೆ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟ್ರಾಯ್‌ ಕೋನ್ಲಿ ಮ್ಯಾಗ್ನುಸನ್ ನ ವಿಸ್ವದಾಖಲೆಯ ವಿಡಿಯೋದಲ್ಲಿ ಆತ ಹಲ್ಲಿನಿಂಧ ಕಚ್ಚಿ 5 ಕೋನಾಗಳನ್ನು ಎಳೆಯುತ್ತಿರುವುದು ನಿಜಕ್ಕೂ ನಂಬಲು ಅಸಾದ್ಯವಾದಂತಹ ವಿಡಿಯೋ. ಒಬ್ಬ ವ್ಯಕ್ತಿ ಕೇವಲ ತನ್ನ ಹಲ್ಲಿನಿಂದ ಇಷ್ಟೊಂದು ದೊಡ್ಡ ಭಾರ ಎಳೆಯುವುದೆಂದರೆ ನಿಜಕ್ಕೂ ಅದು ಸಾಧನೆಯೇ ಸರಿ. ಟ್ರಾಯ್‌ ಕೋನ್ಲಿ ಮ್ಯಾಗ್ನುಸನ್ ನ ಶಕ್ತಿಗೆ ತಲೆದೂಗುವುದು ಮಾತ್ರವಲ್ಲ, ಆತ ಇಷ್ಟೊಂದು ಸಾಧನೆ ಮಾಡಿರಲು ಕಾರಣ ಒಂದು ಚಾರಿಟಿಗೆ ಫಂಡ್‌ ಸಂಗ್ರಹಿಸಲು ಎಂದು ತಿಳಿದಾಗ ನಿಜಕ್ಕೂ ಆತನ ಬಗ್ಗೆ ಹೆಮ್ಮೆಯಾಗುತ್ತದೆ.

Most Read Articles

Kannada
English summary
Man pulled five kona cars with his teeth
Story first published: Friday, July 8, 2022, 16:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X