10 ರೂ. ಕಾಯಿನ್‌ ಕೊಟ್ಟು ಲಕ್ಷ ಬೆಲೆಯ ಸ್ಕೂಟರ್‌‌ ಬೇಕೆಂದ ಮಹಾಶಯ: ಸಿಇಒ ಮಾಡಿದ್ದೇನು ನೊಡಿ!

ಭಾರತದಲ್ಲಿ ಎಲ್ಲಿ ನೋಡಿದರೂ ವಾಹನಗಳ ಮೇಲಿನ ಹುಚ್ಚು ಪ್ರೀತಿಯನ್ನು ಹೊತ್ತುಕೊಂಡಿರುವವರೇ ಹೆಚ್ಚು. ಕೆಲವರಂತೂ ತಮ್ಮ ಗರ್ಲ್‌ ಫ್ರೆಂಡ್‌ಗಿಂತಲೂ ಹೆಚ್ಚು ಅವರ ಬೈಕ್‌ ಮತ್ತು ಕಾರುಗಳನ್ನು ಇಷ್ಟಪಡುತ್ತಾರೆ. ಅಷ್ಟರ ಮಟ್ಟಿಗೆ ಭಾರತೀಯರು ಸದಾ ಒಂದಿಲ್ಲೊಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇರುವುದನ್ನು ನಾವು ಕಂಡಿದ್ದೇವೆ.

ಇದೀಗ ನಮ್ಮ ನಡುವೆ ವಿಲಕ್ಷಣವಾದ ಘಟನೆಯೊಂದು ವರದಿಯಾಗಿದೆ. ಮಾಹಿತಿಗಳ ಪ್ರಕಾರ ವ್ಯಕ್ತಿಯೊಬ್ಬ ಕೇವಲ ಹತ್ತು ರೂಪಾಯಿಗಳ ನಾಣ್ಯಗಳನ್ನು ಬಳಸಿಕೊಂಡು ಎಲೆಕ್ಟ್ರಿಕ್ ಸ್ಕೂಟರ್‌ ಒಂದನ್ನು ಖರೀದಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಹೌದು, ಸ್ವತಃ ಆ ಎಲೆಕ್ಟ್ರಿಕ್‌ ಕಂಪನಿಯ ಸಿಇಒ ನೇ ಈ ಘಟನೆಯನ್ನು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಈ ಪೋಸ್ಟ್‌ ಭಾರೀ ಸದ್ದು ಮಾಡುತ್ತಿದೆ.

Man Purchased Ather 450 Buy Using 10 Rupee Coin In Jaipur

ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿಯ ವ್ಯಕ್ತಿಯೊಬ್ಬ ಒಂದು ಎಲೆಕ್ಟ್ರಿಕ್‌ ಸ್ಕೂಟರ್ ಅನ್ನು ಖರೀದಿಸುವ ಮನಸು ಮಾಡುತ್ತಾನೆ. ಸಾಧಾರಣವಾಗಿ ಎಲ್ಲರ ಹಾಗೆ ಖರೀದಿಸುವುದಕ್ಕಿಂತ ಕೊಂಚ ವಿಶೇಷವಾಗಿರಲಿ ಎಂದು ಈ ವ್ಯಕ್ತಿ ಮಾಡಿದ ಕೆಲಸವೇನೆಂದರೆ, ಸಾಕಷ್ಟು ಕಷ್ಟ ಪಟ್ಟು ಕೇವಲ ಹತ್ತು ರೂಪಾಯಿಗಳ ನಾಣ್ಯವನ್ನು ಸಂಗ್ರಹಿಸಿ, ಅದನ್ನು ಕೊಟ್ಟು ಸ್ಕೂಟರ್ ಖರೀದಿ ಮಾಡುತ್ತಾನೆ. ಅಂದ ಹಾಗೆ ಈತ ಖರೀದಿ ಮಾಡಿರುವುದು ಭಾರತದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಏಥರ್‌ 450.

ಈ ಇಂಟರೆಸ್ಟಿಂಗ್‌ ಆಗಿರುವ ಪೇಮೆಂಟ್‌ ಅನ್ನು ಗಮನಿಸಿದ ಏಥರ್‌ ಸಿಇಒ ಈತ ವಾಹನದ ಕೀ ಪಡೆಯುತ್ತಿರುವ ಚಿತ್ರವನ್ನು ತನ್ನ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದು, ಎಲ್ಲರ ಗಮನವನ್ನು ಸೆಳೆದಿದೆ. ಚಿತ್ರದಲ್ಲಿ ನಾವು ಟೇಬಲ್‌ ಮೇಲೆ ನೀಟಾಗಿ ಜೋಡಿಸಿಟ್ಟಿರುವ ಹತ್ತು ರೂಪಾಯಿಗಳ ನಾಣ್ಯವನ್ನು ಕಾಣಬಹುದಾಗಿದೆ.

ಇನ್ನು ಏಥರ್‌ 450 ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‌ ಬಗ್ಗೆ ನೋಡುವುದಾದರೆ, ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) ತನ್ನ 450 ಸರಣಿ ಎಲೆಕ್ಟ್ರಿಕ್ ಮಾರಾಟದೊಂದಿಗೆ ದೇಶಾದ್ಯಂತ ಖ್ಯಾತಿ ಗಳಿಸಿದೆ. ಇದೀಗ, ಮತ್ತಷ್ಟು ಹೊಸ ಗ್ರಾಹಕರನ್ನು ಆಕರ್ಷಿಸಲು ವಿವಿಧ ಮಾದರಿ ಹೊಸ ಸ್ಕೂಟರ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದೀಗ ಎಥರ್ ಕಂಪನಿಯು ತನ್ನ ಹೊಸ ಎಥರ್ 450 ಅಪೆಕ್ಸ್ (Ather 450 Apex) ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಇನ್ನು ಏಥರ್‌ 450 ಸರಣಿಯ ಮತ್ತೊಂದು ಸ್ಕೂಟರ್ ಎಥರ್ 450ಎಸ್ (Ather 450S) ಎಲೆಕ್ಟ್ರಿಕ್ ಸ್ಕೂಟರ್ 2.9 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ. ಇದರಲ್ಲಿ 5.4 kW ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 115 ಕಿ.ಮೀ (IDC) ರೇಂಜ್ ನೀಡುತ್ತದೆ. ಕೇವಲ 3.9 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯುತ್ತದೆ.

Man Purchased Ather 450 Buy Using 10 Rupee Coin In Jaipur

ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ 90 kmph ಟಾಪ್ ಸ್ವೀಡ್ ಹೊಂದಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಈ ಸ್ಕೂಟರ್ ಬ್ಯಾಟರಿ ಪ್ಯಾಕ್ ಶೇಕಡ 0 - 80% ಚಾರ್ಜ್ ಆಗಲು 6 ಗಂಟೆ 36 ನಿಮಿಷ ತೆಗೆದುಕೊಳ್ಳುತ್ತದೆ. ಇದು 7 - ಇಂಚಿನ ಡೀಪ್‌ವ್ಯೂ ಡಿಸ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್ಇಕೋ, ಇಕೋ, ರೈಡ್, ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ.

ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಇದು 2.9 kWh ಮತ್ತು 3.7 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಕ್ರಮವಾಗಿ ಪೂರ್ತಿ ಚಾರ್ಜ್ ನಲ್ಲಿ 115 ಕಿ.ಮೀ ರಿಂದ 145 ಕಿ.ಮೀ ಕ್ರಮಿಸಬಲ್ಲದು. ರೂ.1.26 ಲಕ್ಷ ಆರಂಭಿಕ ದರವನ್ನು ಹೊಂದಿದೆ. 7 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, February 19, 2024, 11:00 [IST]
English summary
Man purchased ather 450 buy using 10 rupee coin in jaipur
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+