'ದೈವಂ ಮಾನುಷ ರೂಪೇಣ' ಅಂದ್ರೆ ಇದೆ ಇರಬೇಕು! ಮಗುವಿನ ಕುಟುಂಬಕ್ಕೆ ದೇವರಾದ ವ್ಯಕ್ತಿ!
1 ವರ್ಷದ ಮಗುವೊಂದು ತನ್ನ ಮನೆಯಿಂದ ಅತಿವೇಗದ ವಾಹನ ಸಂಚಾರವಿರುವ ರಸ್ತೆಯೆಡೆಗೆ ಹೋಗಿದ್ದು, ಅದೃಷ್ಟವಶಾತ್ ಅದೇ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮಗುವನ್ನು ಗಮನಿಸಿ ರಕ್ಷಿಸಿದ್ದಾರೆ. ಮನೆಯ ಹೊರಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ ದಾಖಲಾಗಿದ್ದು, ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಏಷ್ಯಾನೆಟ್ ನ್ಯೂಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವರದಿಯ ಪ್ರಕಾರ, 1 ವರ್ಷದ ಮಗು ತನ್ನಷ್ಟಕ್ಕೆ ತಾನೆ ಮನೆಯಿಂದ ಹೊರನಡೆದಿದೆ. ಪೋಷಕರು ಬಹುಶಃ ಕಾರ್ಯನಿರತರಾಗಿದ್ದರು ಅಥವಾ ಮಗು ಹೊರಗೆ ಹೋಗುವುದನ್ನು ಗಮನಿಸಿಲ್ಲ ಎಂದು ತೋರುತ್ತದೆ.

ವಿಡಿಯೋವನ್ನು ನೊಡಿದ್ರೆ ಆ ಮಗುವಿನ ಮನೆ ರಸ್ತೆಗೆ ತುಂಬಾ ಪಕ್ಕದಲ್ಲಿದ್ದು, ಮಗುವನ್ನು ರಸ್ತೆಯಿಂದ ದೂರವಿರಿಸಲು ಯಾವುದೇ ತಡೆ ಗೋಡೆ ಕಾಣುತ್ತಿಲ್ಲ. ಮಗು ನಿಧಾನವಾಗಿ ತನ್ನ ಕೈಯಲ್ಲಿ ಪ್ಲಾಸ್ಟಿಕ್ ಬಾಟಲಿ ಹಿಡಿದು ರಸ್ತೆ ಕಡೆ ಹೋಗಿದೆ. ರಸ್ತೆಯ ಮೂಲಕ ಹಾದುಹೋಗುವ ಎಲ್ಲಾ ಕಾರುಗಳು ಮತ್ತು ಭಾರೀ ವಾಹನಗಳನ್ನು ನೋಡಿ ಮಗು ಬಹುಶಃ ಆಕರ್ಷಿತವಾಗಿರಬಹುದು.
ಇದು ಅತ್ಯಂತ ಜನನಿಬಿಡ ರಸ್ತೆಯಾಗಿದ್ದು, ಟ್ರಕ್‌ಗಳು ಸಹ ಹಾದು ಹೋಗುವುದನ್ನು ನಾವು ನೋಡಬಹುದು. ಮಗು ರಸ್ತೆಯ ಹತ್ತಿರಕ್ಕೆ ಹೋಗುತ್ತಿದ್ದರೆ ಅಪಾಯಕ್ಕೆ ಹತ್ತಿರವಾದಂತೆ ಕಾಣುತ್ತದೆ. ಮಗು ರಸ್ತೆಯನ್ನು ಸಮೀಪಿಸುತ್ತಿದ್ದಾಗ Datsun Redi-Go ವಾಹನ ಹಾದುಹೋಗುವುದನ್ನು ನಾವು ನೋಡಬಹುದು. ಕಾರು ಚಾಲಕ ಅಥವಾ ಪ್ರಯಾಣಿಕರು ಮಗು ರಸ್ತೆಬದಿಯಲ್ಲಿ ಏಕಾಂಗಿಯಾಗಿ ನಿಂತಿರುವುದನ್ನು ಗಮನಿಸಿರುವಂತಿದೆ.

ಕಾರು ಚಾಲಕ ತಕ್ಷಣವೇ ಕಾರನ್ನು ನಿಲ್ಲಿಸಿ, ಎಲ್ಲ ವಾಹನಗಳು ಹಾದು ಹೋಗುವವರೆಗೆ ಕಾದು ನಿಧಾನವಾಗಿ ಹಿಂದಕ್ಕೆ ಬಂದಿದ್ದಾನೆ. ಕಾರಿನ ಹಿಂದಿನ ಬಾಗಿಲು ತೆರೆಯುತ್ತಿದ್ದಂತೆ ಪ್ರಯಾಣಿಕರೊಬ್ಬರು ಹೊರಬಂದು ಮಗುವನ್ನು ಮನೆಯ ಪ್ರವೇಶದ್ವಾರದ ಕಡೆಗೆ ಹೊತ್ತೊಯ್ದಿದ್ದಾರೆ. ಆ ನಂತರವೇ ಮಗು ಹೊರಗೆ ಹೋಗಿರುವುದು ಪೋಷಕರಿಗೆ ತಿಳಿದಿರುವಂತೆ ತೋರುತ್ತದೆ.
ಮಗು ವಾಸ್ತವವಾಗಿ ಅದೃಷ್ಟಶಾಲಿಯಾಗಿದ್ದು, ಕಾರು ಪ್ರಯಾಣಿಕರು ಮಗುವನ್ನು ಗಮನಿಸಿ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ. ಮಗು ಮುಂದೆ ನಡೆದಿದ್ದರೆ, ಕಾರು ಅಥವಾ ಇನ್ನಾವುದೇ ವಾಹನಕ್ಕೆ ಡಿಕ್ಕಿಯಾಗುವ ಸಾಧ್ಯತೆಗಳು ಹೆಚ್ಚುಗುತ್ತಿದ್ದವು. ಮಗು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದೆ. ಇದಕ್ಕೆ ಹೇಳೋದು ದೇವರು ನಾವಂದುಕೊಂಡಂತೆ ದೇವಾಲಯಗಳಲ್ಲಿ ಇರುವುದಿಲ್ಲ, ಬದಲಿಗೆ ನಾವು ಮಾಡುವ ಪ್ರತಿ ಒಳ್ಳೆಯ ಕಾರ್ಯದಲ್ಲೂ ಇರುತ್ತಾನೆ.

ಇಂತಹ ಘಟನೆ ನಮಗೆ ಎದುರಾಗುತ್ತಿರುವುದು ಇದೇ ಮೊದಲಲ್ಲ. ಥಾಯ್ಲೆಂಡ್ ಅಥವಾ ಇಂಡೋನೇಷ್ಯಾದಲ್ಲಿ ಇಂತಹದ್ದೆ ಘಟನೆ ಇತ್ತೀಚೆಗೆ ವೈರಲ್ ಆಗಿದ್ದು, ರಸ್ತೆಗೆ ಅಡ್ಡಲಾಗಿ ಓಡುತ್ತಿರುವ ಮಗು ಟೊಯೋಟಾ ಯಾರಿಸ್‌ಗೆ ಡಿಕ್ಕಿ ಹೊಡೆದಿದೆ. ಕಾರು ಮಗುವಿನ ಮೇಲೆ ಹರಿದಿದೆ. ಅದೃಷ್ಟವಶಾತ್ ಮಗು ಸುರಕ್ಷಿತವಾಗಿತ್ತು. ಕಾರು ಹಾದುಹೋದ ತಕ್ಷಣ ಎದ್ದು ನಿಂತಿತು. ಕಾರಿನ ಗ್ರೌಂಡ್ ಕ್ಲಿಯರೆನ್ಸ್‌ನಿಂದಾಗಿ ಮಗು ಬಹುಶಃ ಬದುಕುಳಿದಿದೆ.
ನೀವು ನಿಮ್ಮ ಮಗುವಿನೊಂದಿಗೆ ಇದ್ದರೆ, ಅವರು ಅಲೆದಾಡದಂತೆ ನೋಡಿಕೊಳ್ಳಲು ಅವರನ್ನು ಹಿಡಿದಿಟ್ಟುಕೊಳ್ಳುವುದು ಯಾವಾಗಲೂ ಒಳ್ಳೆಯದು. ಅನೇಕ ಆಧುನಿಕ ವಾಹನಗಳು ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆಯೊಂದಿಗೆ ಬರುತ್ತವೆ. ಇವು ಅಪಘಾತಗಳನ್ನು ತಪ್ಪಿಸುತ್ತವಾದರೂ ಎಲ್ಲರೂ ಹೊಸ ವಾಹನಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಮಕ್ಕಳಿದ್ದವರು ಎಚ್ಚರವಾಗಿರಬೇಕು. ಪ್ರಯಾಣಿಕರ ಈ ತಕ್ಷಣ ಪ್ರತಿಕ್ರಿಯೆ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications