ಉರುಳಿ ಬೀಳುತ್ತಿದ್ದ ಆಟೋರಿಕ್ಷಾ ಆಟೋ ಕರೆಕ್ಟ್ ಆಗಿದ್ದು ಹೇಗೆ?

ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಸದಾ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಅವರು ತಮ್ಮ ಸುತ್ತ ಮುತ್ತ ನಡೆಯುವ ಘಟನೆಗಳನ್ನು ತಮ್ಮ ಫಾಲೋವರ್'ಗಳೊಂದಿಗೆ ಶೇರ್ ಮಾಡುತ್ತಾರೆ.

ಉರುಳಿ ಬೀಳುತ್ತಿದ್ದ ಆಟೋರಿಕ್ಷಾ ಆಟೋ ಕರೆಕ್ಟ್ ಆಗಿದ್ದು ಹೇಗೆ?

ಆನಂದ್ ಮಹೀಂದ್ರರವರು ಇತ್ತೀಚೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊವನ್ನು ದೇಸಿ ಹಾಸ್ಯದ ಮಾದರಿ ಎಂದು ಬಣ್ಣಿಸಿದ್ದಾರೆ. 9 ಸೆಕೆಂಡುಗಳ ಈ ವೀಡಿಯೊದಲ್ಲಿ ಆಟೋವೊಂದು ಅಪಾಯಕರ ರೀತಿಯಲ್ಲಿ ಟರ್ನ್ ಆಗುವುದನ್ನು ಕಾಣಬಹುದು.

ಉರುಳಿ ಬೀಳುತ್ತಿದ್ದ ಆಟೋರಿಕ್ಷಾ ಆಟೋ ಕರೆಕ್ಟ್ ಆಗಿದ್ದು ಹೇಗೆ?

ಆಟೋ ತಿರುವಿನಲ್ಲಿ ಎಷ್ಟು ವೇಗವಾಗಿ ತಿರುಗುತ್ತದೆಯೆಂದರೆ ಇನ್ನೇನು ಬಿದ್ದೆ ಬಿಡುತ್ತದೆ ಎಂಬ ಭಾವನೆ ಮೂಡುವುದು ಸುಳ್ಳಲ್ಲ. ಆ ಆಟೋದ ಒಂದು ವ್ಹೀಲ್ ಮೇಲಕ್ಕೆ ಎತ್ತಿಕೊಂಡಿರುತ್ತದೆ.

ಉರುಳಿ ಬೀಳುತ್ತಿದ್ದ ಆಟೋರಿಕ್ಷಾ ಆಟೋ ಕರೆಕ್ಟ್ ಆಗಿದ್ದು ಹೇಗೆ?

ತಿರುವು ತೆಗೆದುಕೊಳ್ಳುವ ವೇಳೆ ಆ ಆಟೋ ಅಲ್ಲಿದ್ದ ವ್ಯಕ್ತಿಯೊಬ್ಬರಿಗೆ ಗುದಿಯಲು ಹೊರಟಿರುವುದನ್ನು ಕಾಣಬಹುದು. ಆದರೆ ಆ ವ್ಯಕ್ತಿ ತನ್ನ ಕೈಗಳಿಂದ ಆಟೋವನ್ನು ತಳ್ಳುತ್ತಾನೆ.

ಉರುಳಿ ಬೀಳುತ್ತಿದ್ದ ಆಟೋರಿಕ್ಷಾ ಆಟೋ ಕರೆಕ್ಟ್ ಆಗಿದ್ದು ಹೇಗೆ?

ಆಟೋವನ್ನು ಮತ್ತೆ ವ್ಹೀಲ್'ಗಳ ಮೇಲೆ ತರುವ ಮೂಲಕ ಉರುಳಿ ಬೀಳದಂತೆ ಮಾಡುತ್ತಾನೆ. ವೀಡಿಯೊದ ಕೊನೆಯಲ್ಲಿ ಆಟೋ ಕರೆಕ್ಟ್ ಅಂದರೆ ಆಟೋವನ್ನು ಸರಿಪಡಿಸಲಾಗಿದೆ ಎಂಬ ಶೀರ್ಷಿಕೆಯನ್ನು ತೋರಿಸಲಾಗುತ್ತದೆ.

ಉರುಳಿ ಬೀಳುತ್ತಿದ್ದ ಆಟೋರಿಕ್ಷಾ ಆಟೋ ಕರೆಕ್ಟ್ ಆಗಿದ್ದು ಹೇಗೆ?

ಈ ವೀಡಿಯೊ ತುಣುಕನ್ನು ಶೇರ್ ಮಾಡಿರುವ ಆನಂದ್ ಮಹೀಂದ್ರಾ, ಈ ವೀಡಿಯೊ ತುಂಬಾ ತಮಾಷೆಯಾಗಿದ್ದು, ಈ ದೇಸಿ ಟೆಕ್ ಹಾಸ್ಯಕ್ಕೆ ಯಾವುದೇ ಉತ್ತರವಿಲ್ಲ. ಈ ರೀತಿಯ ತಮಾಷೆಯ ದೇಸಿ ವೀಡಿಯೊವನ್ನು ನೋಡುವುದನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಉರುಳಿ ಬೀಳುತ್ತಿದ್ದ ಆಟೋರಿಕ್ಷಾ ಆಟೋ ಕರೆಕ್ಟ್ ಆಗಿದ್ದು ಹೇಗೆ?

9 ಸೆಕೆಂಡ್'ಗಳ ಈ ವೀಡಿಯೊ ಕ್ಲಿಪ್‌ ಇದುವರೆಗೆ 1.13 ಲಕ್ಷಕ್ಕೂ ಹೆಚ್ಚು ವೀವ್ಸ್ ಹಾಗೂ 6.5 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಆನಂದ್ ಮಹೀಂದ್ರಾ ಅವರ ಫಾಲೋವರ್'ಗಳು ಈ ವೀಡಿಯೊ ಬಗ್ಗೆ ನಾನಾ ವಿಧದ ಕಾಮೆಂಟ್'ಗಳನ್ನು ನೀಡುತ್ತಿದ್ದಾರೆ.

ಕೆಲವರು ಆಟೋ ಉರುಳಿ ಬೀಳದಂತೆ ಕಾಪಾಡಿದ ವ್ಯಕ್ತಿಯನ್ನು ಬಾಹುಬಲಿ ಎಂದು ಕರೆಯುತ್ತಿದ್ದಾರೆ. ಇನ್ನೂ ಕೆಲವರು ಆ ವ್ಯಕ್ತಿ ಸರಿಯಾಗಿ ಸಮಯಕ್ಕೆ ಆಟೋವನ್ನು ನಿಲ್ಲಿಸದಿದ್ದರೆ ಇಬ್ಬರೂ ಅಪಘಾತಕ್ಕೆ ಬಲಿಯಾಗುತ್ತಿದ್ದರು ಎಂದು ಹೇಳಿದ್ದಾರೆ.

ಉರುಳಿ ಬೀಳುತ್ತಿದ್ದ ಆಟೋರಿಕ್ಷಾ ಆಟೋ ಕರೆಕ್ಟ್ ಆಗಿದ್ದು ಹೇಗೆ?

ವೀಡಿಯೊದ ಕೊನೆಯಲ್ಲಿ ಬರುವ ಆಟೋ ಕರೆಕ್ಟ್ ಶೀರ್ಷಿಕೆ ಸರಿಯಾಗಿ ಹೊಂದಿಕೊಳ್ಳುತ್ತದೆ ಎಂದು ಕೆಲವರು ಹೇಳಿದ್ದಾರೆ. ವ್ಯಕ್ತಿಯು ಆಟೋವನ್ನು ಉರುಳಿಸುವುದನ್ನು ನಿಲ್ಲಿಸಿದ ರೀತಿ ನೋಡಿದರೆ ಆ ವ್ಯಕ್ತಿ ನಿಜವಾಗಿ ಆಟೋ ಕರೆಕ್ಟ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Most Read Articles

Kannada
English summary
Man saves auto rickshaw from overturning, Anand Mahindra shares the video. Read in Kannada.
Story first published: Wednesday, June 23, 2021, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X