ದುಬಾರಿ ಕಾರಿನಲ್ಲಿ ಮನೆಯೂಟ ಮಾರಾಟ: ಲಾಭ ಗಳಿಸಲು ಯಾವ ಕೆಲಸವಾದ್ರೇನು ಎಂದ ಮಾಲೀಕ!
ಕೆಲವು ವರ್ಷಗಳಿಂದ ಭಾರತದಲ್ಲಿ ಉದ್ಯಮ ಆರಂಭಿಸುವವರ ಸಂಖ್ಯೆ ಹೆಚ್ಚಾಗಿದೆ. ಅವರಲ್ಲಿ ಹೆಚ್ಚಿನವರು ತಮ್ಮ ವ್ಯವಹಾರವನ್ನು ಇತರರಿಂದ ಪ್ರತ್ಯೇಕಿಸಲು ನೋಡುತ್ತಿದ್ದಾರೆ. ಕೆಲವರು ಈಗಾಗಲೇ ವಿಭಿನ್ನ ಉದ್ಯಮ ಪ್ರಾರಂಭಿಸಿ ಭಾರೀ ಯಶಸ್ವಿಯನ್ನು ಕಂಡಿದ್ದಾರೆ. ಉದಾಹರಣೆಗೆ ಕೆಲವರು ಈಗಾಗಲೇ ನಮ್ಮ ನಗರದಲ್ಲಿ ಹಲವಾರು ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ.
ಹಲವರು ವಿಭಿನ್ನ ರೆಸ್ಟೋರೆಂಟ್‌ಗಳನ್ನು ಪ್ರಾರಂಬಿಸಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರವನ್ನು ಪಡೆಯುತ್ತಾರೆ. ಇದೇ ರೀತಿ ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಹೊಸ ಕಿಯಾ ಕಾರೆನ್ಸ್ (Kia Carens) ಕಾರಿನ ಹಿಂಭಾಗದಿಂದ ಹೋಮ್ ಮೇಡ್ ಫುಡ್ ಮಾರಾಟ ಮಾಡುತ್ತಿರುವ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಈ ವಿಡಿಯೋವನ್ನು ಹರ್‌ಸಿಮ್ರಾನ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿರುವ ವ್ಲಾಗರ್ ತನ್ನ ಕಾರಿನ ಹಿಂಭಾಗದಿಂದ ಆಹಾರವನ್ನು ಮಾರಾಟ ಮಾಡುವ ವ್ಯಕ್ತಿಯು ಮಾತನಾಡಿದ್ದಾರೆ. ಕಾರು ಮಾಲೀಕರು ವಾಸ್ತವವಾಗಿ ತಮ್ಮ ಕಿಯಾ ಕ್ಯಾರೆನ್ಸ್‌ನ ಹಿಂಭಾಗದಲ್ಲಿ ಹೋಮ್ ಮೇಡ್ ಫುಡ್ ಮಾರಾಟ ಮಾಡುತ್ತಿದ್ದಾರೆ. ತನ್ನ ಕಾರಿನ ಹಿಂಬದಿಯಿಂದ ಮಾರಾಟ ಮಾಡುವ ಎಲ್ಲಾ ಆಹಾರವು ಅವರ ಹೆಂಡತಿಯು ಅಡುಗೆ ಮಾಡಿರುವುದು.
ಇವರು ಕಾರು ನಿಲ್ಲಿಸಿ ಮಾರಾಟ ಮಾಡುವ ನಿಖರವಾದ ಸ್ಥಳ ದೆಹಲಿಯಲ್ಲಿ ಎಲ್ಲಿ ಇರುವುದು ಎಂಬುವುದು ತಿಳಿದು ಬಂದಿಲ್ಲ. ಅವರು ಸಂಪೂರ್ಣ ವ್ಯವಹಾರವನ್ನು ಹೇಗೆ ಪ್ರಾರಂಭಿಸಿದರು ಅಥವಾ ಅದರ ಹಿಂದಿನ ಕಾರಣವನ್ನು ವೀಡಿಯೊದಲ್ಲಿ ಈ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಕಾರಿನ ಮಾಲೀಕರು ಈ ಕಿಯಾ ಕ್ಯಾರೆನ್ಸ್‌ನ ಮೂರನೇ ಸಾಲಿನ ಸೀಟುಗಳನ್ನು ಮಡಚುತ್ತಾರೆ ಮತ್ತು ಹಿಂಭಾಗದಿಂದ ಗ್ರಾಹಕರಿಗೆ ಆಹಾರವನ್ನು ಮಾರಾಟ ಮಾಡುತ್ತಾರೆ.

ಭಾರತದಲ್ಲಿ ಕಿಯಾ ಕಾರೆನ್ಸ್ ಎರ್ಟಿಗಾ ಮತ್ತು XL6 ಗಿಂತ ಹೆಚ್ಚು ಸ್ಥಳಾವಕಾಶ ಮತ್ತು ಪ್ರೀಮಿಯಂ-ನೆಸ್ ಅನ್ನು ನೀಡುವ ಉತ್ತಮ MPV ಆಗಿದೆ. ಭಾರತದಲ್ಲಿ SUV ಮತ್ತು MPV ಕಾರು ಪ್ರಿಯರನ್ನು ಸೆಳೆಯಲು ಕಿಯಾ ಕಂಪನಿಯು ಈ ಮಾದರಿಗೆ ಅಂತಹ ನೋಟವನ್ನು ನೀಡಿದೆ. ಭಾರತದ ದೊಡ್ಡ ಕುಟುಂಬಗಳಿಗೆ ಸೂಕ್ತವಾದ ವಾಹನವಾಗಿಯೂ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಕಾರೆನ್ಸ್ ಆರು ಮತ್ತು ಏಳು ಆಸನಗಳ ಆಯ್ಕೆಗಳಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಹೆಚ್ಚು ಐಷಾರಾಮಿ ಜಾಗವನ್ನು ಹುಡುಕುತ್ತಿರುವವರಿಗೆ ಆರು ಆಸನಗಳ ಆಯ್ಕೆಯು ಇದರಲ್ಲಿ ಪರಿಪೂರ್ಣ ಆಯ್ಕೆಯಾಗಿದೆ. ಕಿಯಾ ಕ್ಯಾರೆನ್ಸ್ ಭಾರತದಲ್ಲಿ ಮಾರುತಿ ಸುಜುಕಿ XL6 ಮತ್ತು ಎರ್ಟಿಗಾದೊಂದಿಗೆ ಸ್ಪರ್ಧಿಸುತ್ತದೆ. ಕಿಯಾ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮಧ್ಯಮ ಕ್ರಮಾಂಕದ ಎಂಪಿವಿ ಮತ್ತು ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಈ ಕಿಯಾ ಕಾರು ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಕಾರು ಖರೀದಿಗೆ ಲಭ್ಯವಿದೆ. ಕಿಯಾ ಕಂಪನಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯುವಂತೆಯೇ ಹೊಸ ಕಾರೆನ್ಸ್ ಕಾರಿನಲ್ಲೂ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಈ ವಿಭಾಗದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡುವ ಮಾದರಿ ಇದಾಗಿದೆ.
ವಿವಿಧ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದ್ದು, 1.5-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.4-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 140-ಬಿಎಚ್‌ಪಿ, 242-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications