ನೇತ್ರಾವತಿ ನದಿಗೆ ಕಸ ಎಸೆದ ಮಹಿಳೆಯ ಕಾರು ವಶಕ್ಕೆ ಪಡೆದ ಮಂಗಳೂರು ಪೊಲೀಸರು

ಭಾರತದ ವಿವಿಧ ರಾಜ್ಯಗಳಲ್ಲಿ ನದಿಗಳಿಗೆ ಕಸ ಎಸೆಯಲಾಗುತ್ತದೆ. ಹೀಗೆ ಕಸ ಎಸೆಯುವುದು ಕಾನೂನುಬಾಹಿರ. ಆದರೂ ಕೆಲವರು ಕಸವನ್ನು ಎಸೆಯುತ್ತಲೇ ಇರುತ್ತಾರೆ. ಈಗ ಮಂಗಳೂರಿನಲ್ಲಿ ಮಹಿಳೆಯೊಬ್ಬರು ನದಿಗೆ ಕಸ ಎಸೆದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನೇತ್ರಾವತಿ ನದಿಗೆ ಕಸ ಎಸೆದ ಮಹಿಳೆಯ ಕಾರು ವಶಕ್ಕೆ ಪಡೆದ ಮಂಗಳೂರು ಪೊಲೀಸರು

ಮಹಿಳೆ ನದಿಗೆ ಕಸ ಎಸೆಯುತ್ತಿರುವ ಘಟನೆಯ ವೀಡಿಯೊ ವೈರಲ್ ಆಗಿದೆ. ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಮೇಲೆ ಈ ಘಟನೆ ನಡೆದಿದೆ. ಈ ನದಿಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ವೀಡಿಯೊದಲ್ಲಿ ಸೇತುವೆಯ ಮೇಲೆ ಹ್ಯುಂಡೈ ವೆರ್ನಾ ಕಾರು ನಿಂತಿರುವುದನ್ನು ಹಾಗೂ ಮಹಿಳೆ ನದಿಗೆ ಕಸ ಎಸೆಯುವುದನ್ನು ಕಾಣಬಹುದು.

ನೇತ್ರಾವತಿ ನದಿಗೆ ಕಸ ಎಸೆದ ಮಹಿಳೆಯ ಕಾರು ವಶಕ್ಕೆ ಪಡೆದ ಮಂಗಳೂರು ಪೊಲೀಸರು

ಈ ವೀಡಿಯೊದಲ್ಲಿ ಮತ್ತೊಬ್ಬ ಮಹಿಳೆ ಹ್ಯುಂಡೈ ವರ್ನಾ ಕಾರಿನಿಂದ ಹೊರಬರುತ್ತಾರೆ. ನದಿಗೆ ಕಸ ಎಸೆದ ನಂತರ ಅವರಿಬ್ಬರೂ ಅಲ್ಲಿಂದ ಹೊರಡುತ್ತಾರೆ. ಘಟನಾ ಸ್ಥಳದಲ್ಲಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರು ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ನೇತ್ರಾವತಿ ನದಿಗೆ ಕಸ ಎಸೆದ ಮಹಿಳೆಯ ಕಾರು ವಶಕ್ಕೆ ಪಡೆದ ಮಂಗಳೂರು ಪೊಲೀಸರು

ಅಪ್ ಲೋಡ್ ಆದ ಈ ವೀಡಿಯೊ ವೈರಲ್ ಆಗಿದೆ. ವೀಡಿಯೊ ವೈರಲ್ ಆದ ನಂತರ ಕಾರ್ಯಪ್ರವೃತ್ತರಾದ ಪೊಲೀಸರು ಹ್ಯುಂಡೈ ವೆರ್ನಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ವೀಡಿಯೊ ವೀಕ್ಷಿಸಿರುವ ಸಾರ್ವಜನಿಕರು ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೇತ್ರಾವತಿ ನದಿಗೆ ಕಸ ಎಸೆದ ಮಹಿಳೆಯ ಕಾರು ವಶಕ್ಕೆ ಪಡೆದ ಮಂಗಳೂರು ಪೊಲೀಸರು

ವೀಡಿಯೊದಲ್ಲಿ ಕಾರಿನ ನೋಂದಣಿ ಸಂಖ್ಯೆ ತುಂಬಾ ಸ್ಪಷ್ಟವಾಗಿ ಗೋಚರಿಸಿದ್ದರಿಂದ ಘಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ನೇತ್ರಾವತಿ ನದಿಗೆ ಕಸ ಎಸೆದ ಮಹಿಳೆಯ ಕಾರು ವಶಕ್ಕೆ ಪಡೆದ ಮಂಗಳೂರು ಪೊಲೀಸರು

ಮಹಿಳೆ ವಿರುದ್ಧ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯಿಂದ ಮುಟ್ಟುಗೋಲು ಹಾಕಿಕೊಂಡ ಹ್ಯುಂಡೈ ವರ್ನಾ ಕಾರನ್ನು ಪೊಲೀಸ್ ಠಾಣೆಯಲ್ಲಿಡಲಾಗಿದೆ. ಈ ರೀತಿ ನದಿಗಳಲ್ಲಿ ಕಸ ಎಸೆಯುವುದು ಕಾನೂನು ಬಾಹಿರ.

ನೇತ್ರಾವತಿ ನದಿಗೆ ಕಸ ಎಸೆದ ಮಹಿಳೆಯ ಕಾರು ವಶಕ್ಕೆ ಪಡೆದ ಮಂಗಳೂರು ಪೊಲೀಸರು

ಇದರ ಜೊತೆಗೆ ಕೈಗಾರಿಕಾ ತ್ಯಾಜ್ಯವನ್ನು ಸಹ ನದಿಗೆ ಬಿಡಲಾಗುತ್ತದೆ. ಇದರಿಂದ ನದಿಗಳು ಮತ್ತಷ್ಟು ಕಲುಷಿತಗೊಳ್ಳುತ್ತವೆ. ಆ ನದಿಗಳ ನೀರನ್ನು ಕುಡಿಯುವವರಿಗೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ನೇತ್ರಾವತಿ ನದಿಗೆ ಕಸ ಎಸೆದ ಮಹಿಳೆಯ ಕಾರು ವಶಕ್ಕೆ ಪಡೆದ ಮಂಗಳೂರು ಪೊಲೀಸರು

ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಕಲುಷಿತ ನದಿಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜ್ಯ ಸರ್ಕಾರಗಳು ನದಿಗಳಲ್ಲಿ ಕಸ ಎಸೆಯುವುದನ್ನು ನಿಷೇಧಿಸಿವೆ. ಭಾರತದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಗಳ ಮೇಲೆ ಎತ್ತರದ ಬೇಲಿಗಳನ್ನು ನಿರ್ಮಿಸಲಾಗಿರುತ್ತದೆ.

ಜನರು ನದಿಗಳಿಗೆ ಕಸ ಎಸೆಯದಂತೆ ತಡೆಯುವುದು ಈ ಬೇಲಿಗಳನ್ನು ನಿರ್ಮಿಸುವುದರ ಹಿಂದಿನ ಉದ್ದೇಶವಾಗಿದೆ. ಆದರೂ ಜನರು ಇವುಗಳಿಗೆ ಪರ್ಯಾಯ ದಾರಿಗಳನ್ನು ಕಂಡುಕೊಂಡು ನದಿಗಳಲ್ಲಿ ಕಸವನ್ನು ಎಸೆಯುತ್ತಲೇ ಇದ್ದಾರೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ನೇತ್ರಾವತಿ ನದಿಗೆ ಕಸ ಎಸೆದ ಮಹಿಳೆಯ ಕಾರು ವಶಕ್ಕೆ ಪಡೆದ ಮಂಗಳೂರು ಪೊಲೀಸರು

ಜನರು ನದಿಯನ್ನು ಕಲುಷಿತಗೊಳಿಸುತ್ತಿರುವುದು ಕಂಡುಬಂದರೆ, ಅಧಿಕಾರಿಗಳು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ. ಜನರು ಇವುಗಳನ್ನು ಅರಿತುಕೊಂಡರೆ ಪ್ರಕೃತಿಯನ್ನು ರಕ್ಷಿಸಬಹುದು.

Most Read Articles

Kannada
English summary
Mangaluru police seizes Verna car for throwing garbage into river. Read in Kannada.
Story first published: Wednesday, May 5, 2021, 20:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X