ಜೀವ ರಕ್ಷಕನಾದ ಖಾಸಗಿ ಬಸ್ ಡ್ರೈವರ್: ಆ್ಯಂಬುಲೆನ್ಸ್ ರೀತಿ 6 ನಿಮಿಷದಲ್ಲಿ 6 ಕಿ.ಮೀ ಚಾಲನೆ
ಮಂಗಳವಾರ ಮಧ್ಯಾಹ್ನ ಸರಿಸುಮಾರು 3 ಗಂಟೆ ವೇಳೆಗೆ ಮಂಗಳೂರಿನ (Mangaluru) ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಆವರಣದೊಳಗಡೆ ಕೃಷ್ಣಪ್ರಸಾದ್ ಎಂಬ ಹೆಸರಿನ ಖಾಸಗಿ ಬಸ್ಸೊಂದು (Private Bus) ವೇಗವಾಗಿ ಬಂದು ನುಗ್ಗಿದೆ. ಬಸ್ ನಲ್ಲಿ ಇದ್ದ ಪ್ರಯಾಣಿಕರು ಬಸ್‌ನಿಂದ ಕೆಳಗಿಳಿದರು. ನಂತರ ವಿದ್ಯಾರ್ಥಿನಿಯೊಬ್ಬಳನ್ನು ಎತ್ತಿಕೊಂಡು ಆಸ್ಪತ್ರೆಯ ಒಳಗೆ ಹೋಗಿದ್ದಾರೆ. ಕೃಷ್ಣಪ್ರಸಾದ್ ಸ್‌ನ ಚಾಲಕ, ನಿರ್ವಾಹಕರ ಸಮಯಪ್ರಜ್ಞೆಗೆ ಜನರು ಸಲಾಂ ಹೇಳಿದ್ದಾರೆ. ಅಷ್ಟಕ್ಕೂ ಏನು ಈ ಘಟನೆ? ಖಾಸಗಿ ಬಸ್ ಯಾಕೆ ಆಸ್ಪತ್ರೆಯ ಆವರಣದೊಳಗೆ ನುಗ್ಗಿರುವುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೃಷ್ಣಪ್ರಸಾದ್ ಎಂಬ ಹೆಸರಿನ ಖಾಸಗಿ ಬಸ್ ಮಂಗಳೂರಿನ ಮಂಗಳಾದೇವಿ-ಕುಂಜತ್ತಬೈಲ್ ನಡುವೆ ಸಂಚರಿಸುವ ರೂಟ್ ನಂ.13F ಕೃಷ್ಣಪ್ರಸಾದ್ ಬಸ್ ಎಂದಿನಂತೆ ಕೂಳೂರು ಮಾರ್ಗವಾಗಿ ಮಂಗಳಾದೇವಿ ಕಡೆಗೆ ಸಂಚರ ನಡೆಸುತ್ತಿತ್ತು. ಈ ಮಾರ್ಗದಲ್ಲಿ ಯೆನಪೋಯ ಕಾಲೇಜಿನ 10 ವಿದ್ಯಾರ್ಥಿಗಳು ಬಸ್ ಹತ್ತಿದ್ದಾರೆ. ಬಸ್ ಪ್ರಯಾಣ ಮುಂದೆವರಿಸಿದ ಕೆಲವು ನಿಮಿಷಗಳ ನಂತರ ಏಕಾಏಕಿ ಓರ್ವ ವಿದ್ಯಾರ್ಥಿನಿಗೆ ಎದೆನೋವು ಕಾಣಿಸಿಕೊಂಡಿತು.

ತಕ್ಷಣ ಈ ವಿಚಾರವನ್ನು ವಿದ್ಯಾರ್ಥಿಗಳು ಚಾಲಕ ಮತ್ತು ನಿರ್ವಾಹಕರ ಗಮನಕ್ಕೆ ತಂದಿದ್ದಾರೆ. ಚಾಲಕ ಗಜೇಂದ್ರ ಕುಂದರ್ ಮತ್ತು ನಿರ್ವಾಹಕರಾದ ಮಹೇಶ್ ಪೂಜಾರಿಗೆ ಇತರ ಪ್ರಯಾಣಿಕರು ಕೂದ ಬೇಗ ಆಸ್ಪತ್ರೆಗೆ ಹೋಗಿ ಎಂದು ಸಲಹೆ ನೀಡಿದ್ದಾರೆ. ಚಾಲಕ ಗಜೇಂದ್ರ ಕುಂದರ್ ಅವರು ಸಮಯ ವ್ಯರ್ಥ್ಯ ಮಾಡದೇ ನೇರವಾಗಿ ಆಸ್ಪತ್ರೆಗೆ ಕೊಂಡೊಯ್ಯುವ ನಿರ್ಧಾರ ಮಾಡಿದ್ದಾರೆ.
ಗಜೇಂದ್ರ ಕುಂದರ್ ಆ್ಯಂಬುಲೆನ್ಸ್ ರೀತಿಯಲ್ಲಿ ಸ್ ಅನ್ನು ಎಲ್ಲೂ ಕೂಡ ನಿಲ್ಲಿಸದೆ ವೇಗವಾಗಿ ಚಲಾಯಿಸಿದ್ದಾರೆ. ಆಸ್ಪತ್ರೆಯ ಬಳಿ ಬಂದಾಗ ಸೆಕ್ಯುರಿಟಿಯ ಅನುಮತಿಗೆ ಕಾದು ಸಮಯ ವ್ಯರ್ಥ್ಯ ಮಾಡದೇ ನೇರವಾಗಿ ತುರ್ತು ಚಿಕಿತ್ಸೆ ವಿಭಾಗದ ಕಡೆ ಹೊಗಿ ಬಸ್ ನಿಲ್ಲಿಸಿದ್ದಾರೆ. ನಂತರ ವಿಧ್ಯಾರ್ಥಿಯನ್ನು ನೇರವಾಗಿ ತುರ್ತು ಚಿಕಿತ್ಸೆಗೆ ಕೊಂಡೊಯ್ಯುದ್ದರು.

ಈ ಮೂಲಕ ವಿದ್ಯಾರ್ಥಿನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ. ಬರೊಬ್ಬರಿ 6 ಕಿ.ಮೀ. ದೂರವನ್ನು ಕೇವಲ 6 ನಿಮಿಷಗಳಲ್ಲಿ ಕ್ರಮಿಸಿ ಕಂಕನಾಡಿ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ತಲುಪಿಸಿದ್ದಾರೆ. ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಅವರು ಕೃಷ್ಣಪ್ರಸಾದ್ ಬಸ್ ಚಾಲಕ, ನಿರ್ವಾಹಕರ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗಿದೆ. ನೆಟ್ಟಿಗರು
ಹೃದಯಾಘಾತವಾದಾಗ ತಕ್ಷಣ ಹೀಗೆ ಮಾಡಿ: ಹೃದಯಾಘಾತ ಯಾರಿಗೆ ಯಾವ ಸಂದರ್ಭದಲ್ಲಿ ಆಗುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಆದರೆ ನಿಮ್ಮ ಸುತ್ತಮುತ್ತಲಿನ ಜನರು ಅನುಸರಿಸಬೇಕಾದ ಪ್ರಥಮ ಚಿಕಿತ್ಸಾ ಕ್ರಮಗಳ ಬಗ್ಗೆ ಈಗಾಗಲೇ ತಿಳಿದಿದ್ದರೆ ಒಳ್ಳೆಯದು. ನೀವು ಪ್ರಥಮ ಚಿಕಿತ್ಸೆಯನ್ನು ನೀಡುವ ಮೂಲಕ ಒಂದು ಜೀವವನ್ನು ಉಳಿಸಬಹುದಾಗಿದೆ. ಹೃದಯಕ್ಕೆ ರಕ್ತದ ಕೊರತೆಯಿಂದ ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸಬಹುದು. ತ್ವರಿತ ಚಿಕಿತ್ಸೆಗೆ ಮೂಲಕ ಅವರನ್ನು ಉಳಿಸಿಕೊಳ್ಳಬಹುದು.

ಅದು ಹೃದಯಾಘಾತವಾಗಿದೆ ಎಂದು ನಿಮಗೆ ಖಚಿತವಾಗದಿದ್ದರೂ, ನೀವು ತಕ್ಷಣ ಆಂಬ್ಯುಲೆನ್ಸ್ ಅನ್ನು ಕರೆಯಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಯು ಉಸಿರಾಡದಿದ್ದರೆ ಅಥವಾ ನೀವು ನಾಡಿಮಿಡಿತವನ್ನು ಕಂಡುಹಿಡಿಯದಿದ್ದರೆ, ಹೃದಯಕ್ಕೆ ರಕ್ತವನ್ನು ಹರಿಯುವಂತೆ ಮಾಡಲು CPR ಪ್ರಾರಂಭಿಸಿ. ನೀವು ಮೊದಲು ತುರ್ತು ವೈದ್ಯಕೀಯ ಸಹಾಯಕ್ಕಾಗಿ ಕರೆ ಮಾಡಿ ಮತ್ತು ನಂತರ CPR ಅನ್ನು ಪ್ರಾರಂಭಿಸಿ.
CPR ವಿಧಾನ ವ್ಯಕ್ತಿಯ ಎದೆಯ ಮಧ್ಯಭಾಗದ ಮೇಲೆ ಒಂದು ಕೈಯ ಮೇಲೆ ಇನ್ನೊಂದು ಕೈಯನ್ನು ಇಟ್ಟು ಸಾಕಷ್ಟು ಕ್ಷಿಪ್ರ ಲಯದಲ್ಲಿ ಗಟ್ಟಿಯಾಗಿ ಮತ್ತು ವೇಗವಾಗಿ ಪುಶ್ ಮಾಡಬೇಕು. ಒಂದು ನಿಮಿಷಕ್ಕೆ ಸುಮಾರು 100 ರಿಂದ 120 ಸಂಕುಚನವನ್ನು ನೀಡಬೇಕು. ಇನ್ನು ಬಹಳಷ್ಟು ಜನರು ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಆದ್ದರಿಂದ ಅವರು ಆಸ್ಪತ್ರೆಗೆ ಬರುವ ಹೊತ್ತಿಗೆ ಪ್ರಾಣ ಹೋಗಿರುತ್ತದೆ.


Click it and Unblock the Notifications








