ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಮಣಿಪಾಲ್ ಪೊಲೀಸರು

ಉಡುಪಿಯ ಮಣಿಪಾಲ್'ನ ಪೊಲೀಸರು ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ 51 ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು ಅವುಗಳ ಮೇಲೆ ರೋಡ್ ರೋಲರ್ ಹರಿಸಿ ನಾಶಪಡಿಸಿದ್ದಾರೆ.

ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಮಣಿಪಾಲ್ ಪೊಲೀಸರು

ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಹೆಚ್ಚು ಶಬ್ದವನ್ನುಂಟು ಮಾಡುತ್ತಿದ್ದ ದ್ವಿಚಕ್ರ ವಾಹನಗಳ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದರು. ಈ ಸಂಬಂಧ ಒಟ್ಟು 51 ಪ್ರಕರಣಗಳನ್ನು ದಾಖಲಿಸಿ ರೂ.25,500 ದಂಡ ವಿಧಿಸಲಾಗಿದೆ.

ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಮಣಿಪಾಲ್ ಪೊಲೀಸರು

ರೋಡ್ ರೋಲರ್'ಗಳನ್ನು ಬಳಸಿ ಸೈಲೆನ್ಸರ್‌ಗಳನ್ನು ನಾಶಪಡಿಸುತ್ತಿರುವ ವೀಡಿಯೊವನ್ನು ಕನ್ನಡಿಗವರ್ಲ್ಡ್.ಕಾಮ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಮಣಿಪಾಲ್ ಪೊಲೀಸರು

ಈ ವಿಶೇಷ ಕಾರ್ಯಾಚರಣೆಯನ್ನು ಇಡೀ ಉಡುಪಿ ಜಿಲ್ಲೆಯಾದ್ಯಂತ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯು ಅನಗತ್ಯ ಸೈಲೆನ್ಸರ್‌ಗಳ ಬಳಕೆಯನ್ನು ಕೊನೆಗೊಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಮಣಿಪಾಲ್ ಪೊಲೀಸರು

ಗಮನಿಸಬೇಕಾದ ಅಂಶವೆಂದರೆ ಮೋಟಾರು ವಾಹನ ಕಾಯ್ದೆಯು 80 ರಿಂದ 91 ಡೆಸಿಬಲ್‌ಗಳ ನಡುವಿನ ಶಬ್ದಕ್ಕೆ ಮಾತ್ರ ಅನುಮತಿ ನೀಡುತ್ತದೆ. ದ್ವಿಚಕ್ರ ವಾಹನಗಳು 80 ಡೆಸಿಬಲ್ ಶಬ್ದವನ್ನು ಉತ್ಪಾದಿಸುತ್ತವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಮಣಿಪಾಲ್ ಪೊಲೀಸರು

ಪ್ರಯಾಣಿಕ ವಾಹನಗಳು ಹಾಗೂ 12 ಸಾವಿರ ಕೆ.ಜಿಗಳಿಗಿಂತ ಹೆಚ್ಚು ತೂಕವಿರುವ ವಾಣಿಜ್ಯ ವಾಹನಗಳು 91 ಡೆಸಿಬಲ್ ವರೆಗೆ ಶಬ್ದವನ್ನುಂಟು ಮಾಡುತ್ತವೆ. ಆದರೆ ಕೆಲವರು ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳನ್ನು ಬಳಸುವುದರಿಂದ ಹೆಚ್ಚಿನ ಶಬ್ದ ಉಂಟಾಗುತ್ತದೆ.

ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಮಣಿಪಾಲ್ ಪೊಲೀಸರು

ದ್ವಿಚಕ್ರ ವಾಹನಗಳು ಈ ರೀತಿಯ ಉಲ್ಲಂಘನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತವೆ. ಅದರಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮಾಲೀಕರು ಈಅಪರಾಧದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವುದು ಗಮನಾರ್ಹ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಮಣಿಪಾಲ್ ಪೊಲೀಸರು

ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಈ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಈ ಹಿಂದೆಯೂ ಮುಟ್ಟುಗೋಲು ಹಾಕಿಕೊಂಡಿದ್ದ ಸೈಲೆನ್ಸರ್‌ಗಳನ್ನು ಪೊಲೀಸರು ರೋಡ್ ರೋಲರ್ ಬಳಸಿ ನಾಶಪಡಿಸಿದ್ದರು.

ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದ ವಿವಿಧ ಭಾಗಗಳಲ್ಲಿಯೂ ಈ ಹಿಂದೆ ಇದೇ ರೀತಿಯ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಆದರೂ ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳ ಬಳಕೆ ಪ್ರಮಾಣ ಕಡಿಮೆಯಾಗುತ್ತಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಮಣಿಪಾಲ್ ಪೊಲೀಸರು

ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳಿಂದ ಉಂಟಾಗುವ ಶಬ್ದವು ವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ರೋಗಿಗಳ ಮೇಲೆ ನಾನಾ ರೀತಿಯಲ್ಲಿ ಹಾನಿಯನ್ನುಂಟುಮಾಡುತ್ತದೆ ಎಂಬುದನ್ನು ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳನ್ನು ಬಳಸುವ ವಾಹನ ಸವಾರರು ಅರಿತಿರಬೇಕು.

Most Read Articles

Kannada
English summary
Manipal police destroy aftermarket silencers using road roller. Read in Kannada.
Story first published: Monday, February 8, 2021, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X