ಮಗಳಿಗಾಗಿ ಸರ್ವಸ್ವ ತ್ಯಜಿಸಿದ ಅಪ್ಪನಿಗೆ ದುಬಾರಿ ಉಡುಗೊರೆ! ಮೂಕವಿಸ್ಮಿತರಾದ ತಂದೆ

ಮಕ್ಕಳು ಎಷ್ಟೇ ದೊಡ್ಡವರಾಗಲಿ ಅವರು ಸದಾ ಕಣ್ಣ ಮುಂದಿದ್ದರೇ ಸಾಕು ಎಂದು ಖುಷಿಪಡುವವರು ಹೆತ್ತವರು. ತಮ್ಮ ಮಕ್ಕಳು ಜೀವನದಲ್ಲಿ ಒಳ್ಳೆಯ ಹೆಸರು ಮಾಡಬೇಕು, ನಾಲ್ಕು ಮಂದಿಯ ಬಳಿ ಸಾಲ ಪಡೆಯಬಾರದು ಎಂಬುದು ಎಲ್ಲಾ ತಂದೆ-ತಾಯಿಯ ಆಶಯವಾಗಿರುತ್ತದೆ. ಇನ್ನು ಮಕ್ಕಳು ಐಷಾರಾಮಿ ಉಡುಗೊರೆ ಕೊಡಬೇಕು ಎಂಬ ಬಯಕೆಗಳು ಹೆತ್ತವರಿಗೆ ಇರುವುದಿಲ್ಲ. ಆದ್ರೆ ಮಕ್ಕಳು ಪ್ರಯೋಜಕರಾಗಿ ಅನಿರೀಕ್ಷಿತವಾಗಿ ಉಡುಗೊರೆ ಕೊಟ್ಟರೆ ಅಂತಹ ಕ್ಷಣಗಳನ್ನು ಅವರು ಮರೆಯುವುದಿಲ್ಲ. ಇಂಥಹದ್ದೇ ಅಪರೂಪದ ಘಟನೆ ಇತ್ತೀಚಗೆ ನಡೆದಿದೆ. ಯುವತಿಯೊಬ್ಬರು ತಂದೆಗೆ ದುಬಾರಿ ಕಾರನ್ನು ಉಡುಗೊರೆ ನೀಡಿ ಅಚ್ಚರಿಗೊಳಿಸಿದ್ದಾರೆ.

ಮನೀಷಾ ರಾಣಿ' ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರಾಗಿದೆ. ಈಕೆ ಹಿಂದಿ ಟಿವಿ‍ಶೋನಲ್ಲಿ ಬರುವ ಝಲಕ್ ದಿಖ್ಲಾಜಾ ಗೆದ್ದ ಮೊದಲ ವೈಲ್ಡ್‌ ಕಾರ್ಡ್ ಸ್ಪರ್ಧಿ ಎಂದು ಗುರ್ತಿಸಿಕೊಂಡಿದ್ದಾರೆ. ಹಾಗೆಯೇ ಹಿಂದಿ ಬಿಗ್‌ಬಾಸ್ OTT ರನ್ನರ್ ಅಪ್‌ ಆಗಿ ಹೊರಹೊಮ್ಮಿದ್ದಾರೆ. ಮನೀಷಾ ಬಿಹಾರ ಮೂಲದವರಾಗಿದ್ದು, ಮಧ್ಯಮ ವರ್ಗದ ಕುಟುಂಬದಿಂದ ಬಂದವರು.

manisha-rani-gifted-mahindra-xuv-3xo-suv-to-his-father

ಮನೀಷಾಗೆ 8 ವರ್ಷವಿದ್ದಾಗಲೇ ತಂದೆ-ತಾಯಿ ಬೇರೆಯಾಗಿದ್ದರು, ಬಳಿಕ ತಂದೆಯೇ ಮನೀಷಾ ಸೇರಿದಂತೆ ಒಡಹುಟ್ಟಿದ ನಾಲ್ವರನ್ನು ಬೆಳೆಸಿದ್ದರು. ಸಣ್ಣ ವಯಸ್ಸಿನಿಂದ ತಂದೆಯ ಪ್ರೀತಿಯನ್ನು ಮಾತ್ರ ನೋಡಿದ್ದ ಮನೀಷಾಗೆ ಏನಾದರೊಂದು ಸಾಧಿಸುವ ಛಲವಿತ್ತು. ಅಂತೆಯೇ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟು ನಿಧಾನವಾಗಿ ತಮ್ಮನ್ನು ತಾವು ಗುರ್ತಿಸುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಚಿಕ್ಕಿ ವಯಸ್ಸಿನಿಂದ ಅಮ್ಮನಂತೆ ನೋಡಿಕೊಂಡಿದ್ದ ಅಪ್ಪನ ಮುಖದಲ್ಲಿ ಖುಷಿ ನೋಡಲು ಮನೀಷಾ ಮಹೀಂದ್ರಾ XUV 3XO ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೋಡುಗರ ಹೃದಯಗಳನ್ನು ಗೆದ್ದಿದೆ. ಅಪ್ಪ-ಮಗಳು ಕಾರನ್ನು ಡೆಲಿವರಿ ಪಡೆದು ಕಾರಿನ ಮುಂದೆ ಪೋಸ್ ಕೊಡುತ್ತಿದ್ದ ದೃಶ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

manisha-rani-gifted-mahindra-xuv-3xo-suv-to-his-father

ಕಾರಿನ ವಿಶೇಷತೆಗಳು: ಮಹೀಂದ್ರಾ XUV 3XO ಎಸ್‍ಯುವಿಯನ್ನು ಇತ್ತೀಚೆಗಷ್ಟೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಇದು ಸಬ್‌ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 7.49 ಲಕ್ಷ (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಇದರ ಟಾಪ್ ಎಂಡ್ ವೇರಿಯೆಂಟ್ ಬೆಲೆಯು 15 ಲಕ್ಷ (ಎಕ್ಸ್‌ ಶೋರೂಂ)ದವರಗೆ ಇದೆ.

ಹೊಸ ಮಹೀಂದ್ರಾ XUV 3XO ಎಸ್‌ಯುವಿ, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಯೊಂದಿಗೆ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೊಸ 7 ಸ್ಪೀಕರ್ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, 10.25 ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ.

ಇವಿಷ್ಟೇ ಅಲ್ಲದೇ ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಆಂಬಿಯೆಂಟ್ ಸೌಂಡ್ ಮೋಡ್‌ಗಳು, ಹಿಂದಿನ ಎಸಿ ವೆಂಟ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, ಮಲ್ಟಿಪಲ್ ಟೈಪ್ ಎ ಮತ್ತು ಟೈಪ್ ಸಿ ಯುಎಸ್‌ಬಿ ಪೋರ್ಟ್‌ಗಳು, ಆಂಬಿಯೆಂಟ್ ಲೈಟಿಂಗ್, 360-ಡಿಗ್ರಿ ಸರೌಂಡ್ ಕ್ಯಾಮೆರಾ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಮಹೀಂದ್ರಾ XUV 3XO ಎಸ್‍ಯುವಿ 1.2 ಲೀಟರ್ ಟರ್ಬೊ ಪೆಟ್ರೋಲ್, 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಮತ್ತು 1.5 ಡೀಸೆಲ್ ಎಂಜಿನ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 108 bhp ಮತ್ತು 200 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದರೊಂದಿಗೆ 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಎಂಜಿನ್ 129 bhp ಮತ್ತು 230 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ 115 bhp ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‌ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಸ್‍ಯುವಿಯು 18.89 ನಿಂದ 20.1 ಕಿ.ಮೀ ಮೈಲೇಜ್ ನೀಡುತ್ತದೆ.

More from DriveSpark

Article Published On: Monday, July 29, 2024, 16:21 [IST]
English summary
Manisha rani gifted mahindra xuv 3xo suv to his father
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+