ಬೆಂಕಿಗಾಹುತಿಯಾದ ನಂತರ ದೈತ್ಯಾಕಾರದಲ್ಲಿ ಮಾಡಿಫೈಗೊಂಡ ಮಾರುತಿ 800

ಮಾರುತಿ ಸುಜುಕಿ 800 ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಕಂಪನಿಯು ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿದೆ. ಈಗ ಈ ಕಾರು ಮಾರಾಟವಾಗದೇ ಇದ್ದರೂ ಈ ಹ್ಯಾಚ್‌ಬ್ಯಾಕ್ ಕಾರನ್ನು ಹೊಂದಿರುವ ಹಲವಾರು ಜನರಿದ್ದಾರೆ.

ಬೆಂಕಿಗಾಹುತಿಯಾದ ನಂತರ ದೈತ್ಯಾಕಾರದಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಈ ಕಾರನ್ನು ಹೊಂದಿರುವವರಲ್ಲಿ ಕೆಲವರು ಈ ಕಾರನ್ನು ಮಾಡಿಫೈಗೊಳಿಸಿದ್ದಾರೆ. ಇದುವರೆಗೂ ನೋಡಿರದ ರೀತಿಯಲ್ಲಿ ಈ ಕಾರನ್ನು ಗೋವಾದಲ್ಲಿ ಮಾಡಿಫೈಗೊಳಿಸಲಾಗಿದೆ. ಈ ಕಾರಿನ ಮಾಲೀಕರ ಹೆಸರು ದೀಪರಾಜ್ ಚಾರಿ ಎಂದು ತಿಳಿದು ಬಂದಿದೆ.

ಬೆಂಕಿಗಾಹುತಿಯಾದ ನಂತರ ದೈತ್ಯಾಕಾರದಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಈ ಕಾರಿನ ಚಿತ್ರಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗಿವೆ. ಅಸಮರ್ಪಕ ಕಾರ್ಯದಿಂದಾಗಿ ಈ ಕಾರು ಬೆಂಕಿಗಾಹುತಿಯಾಗಿತ್ತು. ಆದರೆ ಬೆಂಕಿಗೆ ಆಹುತಿಯಾದ ಕೇವಲ ಒಂದು ವಾರದಲ್ಲಿ ಈ ಕಾರನ್ನು ದೀಪರಾಜ್ ಈ ಕಾರನ್ನು ಮಾಡಿಫೈಗೊಳಿಸಿದ್ದಾರೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಬೆಂಕಿಗಾಹುತಿಯಾದ ನಂತರ ದೈತ್ಯಾಕಾರದಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಬೆಂಕಿ ಅನಾಹುತದಲ್ಲಿ ಈ ಕಾರಿನ ಹೊರಭಾಗವು ಗುರುತಿಸಲಾಗದ ರೀತಿಯಲ್ಲಿ ಹಾಳಾಗಿತ್ತು. ಆದರೆ ಒಂದು ವಾರದಲ್ಲಿಯೇ ಈ ಕಾರನ್ನು ಮಾಡಿಫೈ ಮಾಡಲಾಗಿದೆ. ಈ ಕಾರನ್ನು ರಿ ಬಿಲ್ಟ್ ಮಾಡಿದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ಬೆಂಕಿಗಾಹುತಿಯಾದ ನಂತರ ದೈತ್ಯಾಕಾರದಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಬೆಂಕಿ ಅನಾಹುತಕ್ಕೀಡಾದ ಮಾರುತಿ 800 ಕಾರಿನ ಬಾಡಿಯನ್ನು ತೆಗೆದು ಹಾಕಲಾಗಿದೆ. ಈ ಕಾರಿನಲ್ಲಿ ಹೊಸ ಬಾಡಿಯನ್ನು ಬಳಸಲಾಗಿದ್ದು, ಅದನ್ನು ಜಿಪ್ಸಿ ಚಾಸಿಸ್ ಮೇಲೆ ಅಳವಡಿಸಲಾಗಿದೆ. ಇದು ಸುಲಭದ ಪ್ರಕ್ರಿಯೆಯಂತೆ ತೋರುತ್ತದೆಯಾದರೂ, ಅಂದು ಕೊಂಡಷ್ಟು ಸುಲಭವಲ್ಲ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಬೆಂಕಿಗಾಹುತಿಯಾದ ನಂತರ ದೈತ್ಯಾಕಾರದಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಈ ಕಾರಿಗೆ ಹೊಸ ಬಣ್ಣವನ್ನು ನೀಡಲಾಗಿದ್ದು, ನೋಡಿದ ತಕ್ಷಣ ಹಾಟ್‌ವೀಲ್ ಆಟಿಕೆ ಕಾರಿನಂತೆ ಕಾಣುತ್ತದೆ. ಈ ಕಾರಿನ ಮೇಲೆ ಹೊಸ ಸ್ಟಿಕ್ಕರ್‌ ಅಳವಡಿಸಲಾಗಿದ್ದು, ಹೊಸ ಬಣ್ಣವನ್ನು ಬಳಸಲಾಗಿದೆ.

ಬೆಂಕಿಗಾಹುತಿಯಾದ ನಂತರ ದೈತ್ಯಾಕಾರದಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಈ ಕಾರಿನಲ್ಲಿ ಹೊಸದಾಗಿ ಸಿಂಗಲ್ ಟೋನ್ ಬಣ್ಣವನ್ನು ನೀಡಲಾಗಿದ್ದು, ಸಾಕಷ್ಟು ಸ್ಟಿಕ್ಕರ್‌ಗಳನ್ನು ಅಳವಡಿಸಲಾಗಿದೆ. ಮಾಡಿಫಿಕೇಶನ್ ಮೂಲಕ ಈ ಮಾರುತಿ 800 ಕಾರನ್ನು 4x4 ಮಾನ್'ಸ್ಟರ್ ರೀತಿಯಲ್ಲಿ ಬದಲಿಸಲಾಗಿದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಬೆಂಕಿಗಾಹುತಿಯಾದ ನಂತರ ದೈತ್ಯಾಕಾರದಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಮಾರುತಿ 800 ಕಾರಿನ ಬಾಡಿಯನ್ನು ಮಾರುತಿ ಸುಜುಕಿ ಜಿಪ್ಸಿ ಚಾಸಿಸ್ ಮೇಲೆ ಜೋಡಿಸಲಾಗಿದೆ. ಈ ಪ್ಲಾಟ್ ಫಾರಂನಲ್ಲಿ ಮಾರುತಿ 800 ಕಾರಿನ ಬಾಡಿ ಪೂರ್ತಿಯಾಗಿ ಹೊಂದಿಕೊಳ್ಳುತ್ತದೆ ಎಂಬುದು ಗಮನಾರ್ಹ.

ಹೆಚ್ಚು ರಿ ಡಿಸೈನ್ ಮಾಡಲಾದ ಲ್ಯಾಡರ್ ಫ್ರೇಮ್ ಚಾಸಿಸ್ ಈ ಕಾರಿನ ಆಧಾರವಾಗಿದೆ. ಸಸ್ಪೆಂಷನ್ ಕಿಟ್‌ನಲ್ಲಿ ಡ್ಯುಯಲ್ ಸಸ್ಪೆಂಷನ್ ಸಿಸ್ಟಂ ಬಳಸಲಾಗಿದೆ. ಈ ಸಿಸ್ಟಂ 30 ಇಂಚಿನ ಆಫ್ಟರ್ ಮಾರ್ಕೆಟ್ ಅಲಾಯ್ ವ್ಹೀಲ್'ಗಳನ್ನು ಹೊಂದಿದೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಬೆಂಕಿಗಾಹುತಿಯಾದ ನಂತರ ದೈತ್ಯಾಕಾರದಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಮಾಡಿಫೈಗೊಂಡ ನಂತರ ದೈತ್ಯಾಕಾರದಲ್ಲಿರುವ ಈ ಕಾರಿನ ಗ್ರೌಂಡ್ ಕ್ಲಿಯರೆನ್ಸ್ 580 ಎಂಎಂಗಳಾಗಿದೆ. ಮಾಡಿಫೈಗೊಂಡ ಈ ಕಾರು ಮಾರುತಿ ಸುಜುಕಿ ಜಿಪ್ಸಿಯ 4x4 ಸಿಸ್ಟಂ ಹೊಂದಿದೆ.

Most Read Articles

Kannada
English summary
Maruti 800 extremely rebuilt in one week after catching fire. Read in Kannada.
Story first published: Monday, May 3, 2021, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X