ಪ್ರವಾಹದಿಂದ ಕಾರ್ ಅನ್ನು ರಕ್ಷಿಸಲು ವಿಭಿನ್ನ ತಂತ್ರ ರೂಪಿಸಿದ ಕಾರು ಮಾಲೀಕ

ದೇಶಾದ್ಯಂತ ಮುಂಗಾರು ಮಳೆ ಆರ್ಭಟ ಜೋರಾಗಿದೆ. ದೇಶದ ಹಲವೆಡೆ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಭಾರೀ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿವೆ. ದೆಹಲಿಯಲ್ಲಿ ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದ ರಸ್ತೆಗಳು ಹದಗೆಟ್ಟು ರಸ್ತೆ ಗುಂಡಿಗಳು ಉಂಟಾದ ಕಾರಣ ಕಾರೊಂದು ರಸ್ತೆ ಗುಂಡಿಯಲ್ಲಿ ಸಿಕ್ಕಿ ಹಾಕಿ ಕೊಂಡಿತ್ತು.

ಪ್ರವಾಹದಿಂದ ಕಾರ್ ಅನ್ನು ರಕ್ಷಿಸಲು ವಿಭಿನ್ನ ತಂತ್ರ ರೂಪಿಸಿದ ಕಾರು ಮಾಲೀಕ

ಭಾರೀ ಮಳೆಯು ರಸ್ತೆಯಲ್ಲಿರುವ ವಾಹನಗಳನ್ನು ಸಹ ಕೊಚ್ಚಿ ಕೊಂಡು ಹೋಗುತ್ತಿದೆ. ಹೀಗೆ ಕೊಚ್ಚಿ ಕೊಂಡು ಹೋಗುವ ವಾಹನಗಳು ಭಾರೀ ಪ್ರಮಾಣದಲ್ಲಿ ಹಾನಿಗೀಡಾಗುತ್ತವೆ. ಹಾನಿಗೀಡಾಗುವ ವಾಹನಗಳನ್ನು ಸರಿ ಪಡಿಸಲು ದುಬಾರಿ ಮೊತ್ತವನ್ನೇ ಖರ್ಚು ಮಾಡಬೇಕಾಗುತ್ತದೆ. ಈ ರೀತಿಯ ಅನಾಹುತವನ್ನು ತಪ್ಪಿಸಲು ಕಾರು ಮಾಲೀಕರೊಬ್ಬರು ವಿಶಿಷ್ಟ ಯೋಜನೆಯನ್ನು ರೂಪಿಸಿದ್ದಾರೆ.

ಪ್ರವಾಹದಿಂದ ಕಾರ್ ಅನ್ನು ರಕ್ಷಿಸಲು ವಿಭಿನ್ನ ತಂತ್ರ ರೂಪಿಸಿದ ಕಾರು ಮಾಲೀಕ

ಅವರ ತಂತ್ರದ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೆಲಂಗಾಣ ರಾಜ್ಯದ ಸಿರಿಸಿಲ್ಲಾದ ಕಾರು ಮಾಲೀಕರೇ ಈ ರೀತಿ ವಿಲಕ್ಷಣ ತಂತ್ರವನ್ನು ರೂಪಿಸಿದವರು. ಅವರ ಹೆಸರು ಬಹಿರಂಗವಾಗಿಲ್ಲ. Maruti Suzuki ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದಾದ Alto ಕಾರ್ ಅನ್ನು ಹೊಂದಿರುವ ಅವರು ತಮ್ಮ ಕಾರ್ ಅನ್ನು ಧಾರಾಕಾರ ಮಳೆಯಿಂದ ರಕ್ಷಿಸಲು ವಿಭಿನ್ನ ತಂತ್ರವನ್ನು ರೂಪಿಸಿದ್ದಾರೆ.

ಪ್ರವಾಹದಿಂದ ಕಾರ್ ಅನ್ನು ರಕ್ಷಿಸಲು ವಿಭಿನ್ನ ತಂತ್ರ ರೂಪಿಸಿದ ಕಾರು ಮಾಲೀಕ

Maruti Alto ಕಾರು ಮಾಲೀಕರು ತಮ್ಮ ಮನೆಯ ಮಹಡಿ ಮೂಲಕ ಈ ಕಾರಿಗೆ ಹಗ್ಗ ಕಟ್ಟಿ ಭದ್ರಪಡಿಸಿದ್ದಾರೆ. ಕಾರಿನ ಬಳಿ ನೀರು ನಿಂತಿದ್ದರೂ ಸಹಪ್ರವಾಹವು ಆ ಕಾರ್ ಅನ್ನು ಕೊಚ್ಚಿ ಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ಮಳೆ ನೀರು ಕಾರಿನಲ್ಲಿರುವ ಇತರ ಬಿಡಿ ಭಾಗಗಳಿಗೆ ಅಪ್ಪಳಿಸಿದಾಗ ಮತ್ತಷ್ಟು ಹಾನಿಗೊಳಗಾಗುತ್ತದೆ. ಕೊನೆಗೆ ಕಾರು ಪ್ರವಾಹದ ನೀರಿನಲ್ಲಿ ಮುಳುಗುತ್ತದೆ. ಅಂತಹ ಕಾರುಗಳು ಬಳಸಲು ಯೋಗ್ಯವಲ್ಲ.

ಪ್ರವಾಹದಿಂದ ಕಾರ್ ಅನ್ನು ರಕ್ಷಿಸಲು ವಿಭಿನ್ನ ತಂತ್ರ ರೂಪಿಸಿದ ಕಾರು ಮಾಲೀಕ

ವಿಮಾ ಕಂಪನಿಗಳು ಸಾಮಾನ್ಯವಾಗಿ ಅಂತಹ ಕಾರುಗಳನ್ನು ಟೋಟಲ್ ಲಾಸ್ ಎಂದು ಕರೆಯುತ್ತವೆ. Alto ಕಾರು ಮಾಲೀಕರ ಈ ಯೋಜನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಳೆ ನೀರಿನಿಂದ ಉಂಟಾದ ಪ್ರವಾಹದಿಂದ ತಮ್ಮ ಕಾರ್ ಅನ್ನು ರಕ್ಷಿಸಲು ಅವರು ಈ ತಂತ್ರವನ್ನು ಬಳಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಇಂಟರ್ ನೆಟ್ ಬಳಕೆದಾರರನ್ನು ಆಕರ್ಷಿಸಲು ಇದನ್ನು ವಿನ್ಯಾಸಗೊಳಿಸಿರುವಂತಿದೆ.

ಪ್ರವಾಹದಿಂದ ಕಾರ್ ಅನ್ನು ರಕ್ಷಿಸಲು ವಿಭಿನ್ನ ತಂತ್ರ ರೂಪಿಸಿದ ಕಾರು ಮಾಲೀಕ

Alto ಕಾರಿನ ಸುತ್ತಮುತ್ತ ಮಳೆ ನೀರು ಹರಿಯುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಲಾಗಿದೆ. ಈ ಹಿಂದೆ ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಹಲವು ವಾಹನಗಳು ಕೊಚ್ಚಿ ಹೋಗಿದ್ದವು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ Alto ಕಾರಿನ ಮಾಲೀಕರು ತಮ್ಮ ಕಾರನ್ನು ಹಗ್ಗಗಳಿಂದ ಭದ್ರಪಡಿಸಿದ್ದಾರೆ.

ಪ್ರವಾಹದಿಂದ ಕಾರ್ ಅನ್ನು ರಕ್ಷಿಸಲು ವಿಭಿನ್ನ ತಂತ್ರ ರೂಪಿಸಿದ ಕಾರು ಮಾಲೀಕ

ವಾಹನಗಳನ್ನು ಕದಿಯಲು ಸಾಧ್ಯವಾಗದಂತೆ ಸರಪಳಿಯೊಂದಿಗೆ ಕಟ್ಟಿರುವುದನ್ನು ನಾವು ಹಲವೆಡೆ ಗಮನಿಸಬಹುದು. ಆದರೆ ಕಾರ್ ಅನ್ನು ಮಳೆ ನೀರಿನಿಂದ ಉಂಟಾಗುವ ಪ್ರವಾಹದಿಂದ ರಕ್ಷಿಸಲು ಹಗ್ಗವನ್ನು ಕಂಬ ಹಾಗೂ ಕಿಟಕಿಗಳಿಗೆ ಸುತ್ತಿ ಕಾರಿಗೆ ಕಟ್ಟಿರುವುದು ಇದೇ ಮೊದಲು. ಈ ತಂತ್ರವು ಮಳೆ ನೀರಿನಲ್ಲಿ ಕಾರು ಕೊಚ್ಚಿ ಕೊಂಡು ಹೋಗುವುದನ್ನು ತಡೆಯಬಹುದು.

ಪ್ರವಾಹದಿಂದ ಕಾರ್ ಅನ್ನು ರಕ್ಷಿಸಲು ವಿಭಿನ್ನ ತಂತ್ರ ರೂಪಿಸಿದ ಕಾರು ಮಾಲೀಕ

ಆದರೆ ಮಳೆ ನೀರಿನಿಂದ ಕಾರಿಗೆ ಆಗುವ ಹಾನಿಯನ್ನು ತಡೆಯಬಹುದೇ ಎಂಬ ಪ್ರಶ್ನೆಗೆ ಇಲ್ಲ ಎಂದೇ ಉತ್ತರ ನೀಡಬಹುದು. ಈ ತಂತ್ರವು ಕಾರು ಕೊಚ್ಚಿ ಕೊಂಡು ಹೋಗುವುದನ್ನು ತಡೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಮಳೆ ನೀರು ಕಾರ್ ಅನ್ನು ಸಂಪೂರ್ಣವಾಗಿ ಮುಳುಗಿಸುತ್ತದೆ. ಇದರಿಂದ ಕಾರಿನೊಳಗಿರುವ ಎಲ್ಲಾ ಭಾಗಗಳು ನೀರಿನಲ್ಲಿ ಮುಳುಗುತ್ತವೆ.

ಪ್ರವಾಹದಿಂದ ಕಾರ್ ಅನ್ನು ರಕ್ಷಿಸಲು ವಿಭಿನ್ನ ತಂತ್ರ ರೂಪಿಸಿದ ಕಾರು ಮಾಲೀಕ

ಕಾರು ನೀರಿನಲ್ಲಿ ಮುಳುಗುವುದರಿಂದ ಕಾರಿನಲ್ಲಿ ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಗಳಿರುತ್ತವೆ. ಈ ಅನಾಹುತವನ್ನು ತಪ್ಪಿಸಲು ಭಾರೀ ಮಳೆ ಬೀಳುವಾಗ ನಿಲ್ಲಿಸಿರುವ ಕಾರಿನಲ್ಲಿರುವ ನಂತರ ಬ್ಯಾಟರಿ ಸಂಪರ್ಕಗಳನ್ನು ಡಿಸ್ ಕನೆಕ್ಟ್ ಮಾಡುವುದು ಒಳ್ಳೆಯದು. ಹೀಗೆ ಸಂಪರ್ಕ ಕಡಿತಗೊಳಿಸುವ ಮೂಲಕ ಅನಗತ್ಯ ಶಾರ್ಟ್ ಸರ್ಕ್ಯೂಟ್‌ಗಳನ್ನು ತಪ್ಪಿಸಬಹುದು.

ಮಳೆ ನೀರಿನಿಂದ ಉಂಟಾದ ಪ್ರವಾಹದ ನಂತರ ತಕ್ಷಣವೇ ಕಾರ್ ಅನ್ನು ಸ್ಟಾರ್ಟ್ ಮಾಡದಿರಿ. ಕಾರಿನಲ್ಲಿರುವ ನೀರು ಸಂಪೂರ್ಣವಾಗಿ ಹೊರ ಹೋಗದೇ ಇರಬಹುದು. ಕಾರ್ ಅನ್ನು ಒಮ್ಮೆಲೇ ಸ್ಟಾರ್ಟ್ ಮಾಡುವುದರಿಂದ ತೆಗೆದುಕೊಂಡ ಎಲ್ಲಾ ಸುರಕ್ಷತಾ ಕ್ರಮಗಳು ವ್ಯರ್ಥವಾಗುತ್ತವೆ. ಸಾಧ್ಯವಾದರೆ ಕಾರು ಮೆಕಾನಿಕ್ ಅನ್ನು ಕರೆ ತಂದು ಕಾರ್ ಅನ್ನು ಪರೀಕ್ಷಿಸುವುದು ಒಳ್ಳೆಯದು.

ಪ್ರವಾಹದಿಂದ ಕಾರ್ ಅನ್ನು ರಕ್ಷಿಸಲು ವಿಭಿನ್ನ ತಂತ್ರ ರೂಪಿಸಿದ ಕಾರು ಮಾಲೀಕ

ಭಾರೀ ಮಳೆ ಬೀಳುವಾಗ ಸುರಕ್ಷಿತವಾದ ಪಾರ್ಕಿಂಗ್ ಪ್ರದೇಶದಲ್ಲಿ ಅಥವಾ ಎತ್ತರವಾಗಿರುವ ಪ್ರದೇಶಗಳಲ್ಲಿ ಕಾರುಗಳನ್ನು ಪಾರ್ಕ್ ಮಾಡುವುದು ಒಳ್ಳೆಯದು.ಮುಂಬೈನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಂದರ್ಭಗಳಲ್ಲಿ ಕಾರು ಮಾಲೀಕರು ತಮ್ಮ ಕಾರುಗಳನ್ನು ಫ್ಲೈ ಓವರ್ ಗಳ ಮೇಲೆ ನಿಲ್ಲಿಸುವುದನ್ನು ಗಮನಿಸಬಹುದು. ಹೆಚ್ಚಿನ ಪ್ರವಾಹವಿರುವ ಪ್ರದೇಶಗಳಲ್ಲಿ ಕಾರು ಇದ್ದಕ್ಕಿದ್ದಂತೆ ನಿಂತು ಹೋದರೆ ತಕ್ಷಣವೇ ಕಾರ್ ಅನ್ನು ಬಿಡುವುದು ಒಳ್ಳೆಯದು. ಇದರಿಂದ ಅನಗತ್ಯ ತೊಂದರೆಗಳಾಗುವುದನ್ನು ತಪ್ಪಿಸಬಹುದು.

Most Read Articles

Kannada
English summary
Maruti alto owner ties car to save it from flood details
Story first published: Wednesday, September 8, 2021, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X