ಮಾರುತಿ ಡಿಜೈರ್ ಅಪಘಾತ: ಹಿಂಬದಿ ಡಿಕ್ಕಿಯಾದ್ರೆ ಮುಂಬದಿಯಿದ್ದವರ ಅನ್ಯಾಯದ ಸಾವು, ವಿಡಿಯೋ
ಇತ್ತೀಚಿನ ಮಾರುತಿ ಡಿಜೈರ್ ಅಪಘಾತವು ಸೀಟ್ ಬೆಲ್ಟ್ ಧರಿಸುವುದರ ಮಹತ್ವವನ್ನು ತಿಳಿಸಿದೆ. ಹೆದ್ದಾರಿಯಲ್ಲಿ ನಾಲ್ವರನ್ನು ಒಳಗೊಂಡಿದ್ದ ಮಾರುತಿ ಡಿಜೈರ್ ಇದ್ದಕ್ಕಿದ್ದಂತೆ, ಕಾರಣಾಂತರಗಳಿಂದ ನಿಲ್ಲಿಸಿದ್ದು ಹಿಂದೆ ವೇಗವಾಗಿ ಬಂದ ಟ್ರಕ್ ಕಾರನ್ನು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಉಳಿದಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾರುತಿ ಡಿಜೈರ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ ಸೆಡಾನ್ ಆಗಿದೆ. ಖರೀದಿದಾರರು ಖಾಸಗಿ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಈ ಕಾರನ್ನು ಹೆಚ್ಚಾಗಿ ಖರೀದಿಸುತ್ತಾರೆ. ಇದು ಗ್ಲೋಬಲ್ NCAP ಕ್ರಾಷ್ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ತೋರಿದೆ. ಇದೊಂದೆ ಅಲ್ಲ ಹಲವು ಮಾರುತಿ ಕಾರುಗಳ ವಿಷಯದಲ್ಲಿ ಹೀಗೇ ಆಗಿದೆ.

ಅದೇನೇ ಇದ್ದರೂ, ನೀವು ಸೀಟ್‌ಬೆಲ್ಟ್ ಧರಿಸದಿದ್ದರೆ ಅಥವಾ ವೇಗದ ಮಿತಿಯನ್ನು ಮೀರಿ ಚಾಲನೆ ಮಾಡಿದರೆ, ಯಾವುದೇ ಸುರಕ್ಷತಾ ರೇಟಿಂಗ್ ಮತ್ತು ಉಪಕರಣಗಳು ನಿಮ್ಮನ್ನು ಉಳಿಸುವುದಿಲ್ಲ. ಇದಲ್ಲದೆ, ಮಾರುತಿ ತನ್ನ ಇತ್ತೀಚಿನ ಕಾರುಗಳ ಗುಣಮಟ್ಟವನ್ನು ಸುಧಾರಿಸುತ್ತಿದೆ. ಆದರೆ ಅದಕ್ಕೂ ಮುನ್ನ ಮಾರುತಿ ಕಾರುಗಳನ್ನು ಖರೀದಿಸಿದವರ ಪರಿಸ್ಥಿತಿ ಏನು? ಆ ದೇವರೇ ಬಲ್ಲ.
ಮಾರುತಿ ಡಿಜೈರ್ ಅಪಘಾತ: ಈ ಅಪಘಾತದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ನಿಖಿಲ್ ರಾಣಾ ಎಂಬಾತ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿರುವ ಮಾಹಿತಿ ಪ್ರಕಾರ, ಹೆದ್ದಾರಿಯಲ್ಲಿ ನಾಲ್ವರು ಮಾರುತಿ ಡಿಜೈರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇದ್ದಕ್ಕಿದ್ದಂತೆ, ಕಾರಣಾಂತರಗಳಿಂದ, ಚಾಲಕ ನಿಲ್ಲಿಸಬೇಕಾಯಿತು. ಅದರ ಹಿಂದೆ ವೇಗವಾಗಿ ಬಂದ ಟ್ರಕ್ ಕಾರಿಗೆ ಅಪ್ಪಳಿಸಿದೆ.

ಮಾರುತಿ ಸುಜುಕಿ ಆರಂಭದಿಂದಲೂ ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಬೃಹತ್ ಡೀಲರ್‌ಶಿಪ್ ಮತ್ತು ಸೇವಾ ನೆಟ್‌ವರ್ಕ್, ಹೆಚ್ಚಿನ ಮೈಲೇಜ್, ಉತ್ತಮ ಎಂಜಿನ್‌ಗಳು, ಕಡಿಮೆ ನಿರ್ವಹಣೆ, ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಆಕರ್ಷಕ ಬೆಲೆಯಿಂದಾಗಿ ಕಂಪನಿಯ ಕಾರುಗಳು ಬಿಸಿ ಬಿಸಿ ದೋಸೆಗಳಂತೆ ಮಾರಾಟವಾಗುತ್ತವೆ. ಆದರೆ ಮಾರುತಿಯ ಹಲವು ಕಾರುಗಳು ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ ಮಾತ್ರ ಉತ್ತಮ ಅಂಕ ಗಳಿಸಲು ಪರದಾಡುತ್ತಿವೆ.

ಇದು ತನ್ನ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗಮನಹರಿಸಬೇಕಾದ ಪ್ರಮುಖ ಅಂಶವಾಗಿದೆ. ಡಿಜೈರ್ ಆಧಾರಿತ ಮೂರನೇ-ಜನ್ ಸ್ವಿಫ್ಟ್ ಗ್ಲೋಬಲ್ ಎನ್‌ಸಿಎಪಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ಅದು ಎಲ್ಲರಿಂದಲೂ ಟೀಕೆಗೆ ಗುರಿಯಾಗುತ್ತಿದೆ. ಜನರು ಈ ಕಾರುಗಳಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ವಿಶ್ವಾಸ ಹೊಂದಲು ಮಾರುತಿ ಈ ಅಂಶದಲ್ಲಿ ಕಾರ್ಯನಿರ್ವಹಿಸುತ್ತಲೇ ಇದೆ.
ಕೇವಲ ಈ ಒಂದು ಕಾರು ಮಾತ್ರವಲ್ಲ, ಕಂಪನಿಯ 20 ಕ್ಕೂ ಹೆಚ್ಚು ವಾಹನಗಳು ಗುಣಮಟ್ಟದಲ್ಲಿ ಸುಧಾರಣೆಗೊಳ್ಳಬೇಕಿದೆ. ಗ್ರಾಹಕರು ಕೇವಲ ಬಜೆಟ್ ಕಾರುಗಳೆಂದು ಖರೀದಿಸಿ ಸುರಕ್ಷತೆಯನ್ನು ಮರೆಯುತ್ತಿದ್ದಾರೆ. ಇಂತಹ ಅಪಘಾತಗಳು ಸಂಭವಿಸಿದಾಗ ಸಾವನ್ನಪ್ಪಿದವರ ಕುರಿತು ಸಾರ್ವಜನಿಕರು ಅನುಕಂಪ ತೋರಿಸುತ್ತಾರೆ. ಮತ್ತೆ ಕಾರು ಖರೀದಿಸುವಾಗ ಬಜೆಟ್ ಕಾರುಗಳೆಂದು ಮಾರುತಿ ಕಾರುಗಳನ್ನು ಖರೀದಿಸುತ್ತಾರೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಕಾರು ಖರೀದಿ ವಿಷಯದಲ್ಲಿ ಜನರ ಮನಃಸ್ಥಿತಿ ಬದಲಾಗಬೇಕಿದೆ, ಜೀವ ಇದ್ದರೇ ಏನು ಬೇಕಾದರೂ ಖರೀದಿಸಬಹುದು. ಇಂತಹ ಗುಣಮಟ್ಟವಿಲ್ಲದ ವಾಹನಗಳಿಂದಾಗಿ ಸಾವನ್ನಪ್ಪುವ ಬದಲು ಸುರಕ್ಷೆತೆಗೆ ಆದ್ಯತೆ ನೀಡಿ ಬೆಲೆ ಹೆಚ್ಚಾದ್ರೂ ಉತ್ತಮ ಕಾರುಗಳನ್ನು ಖರೀದಿಸಿ ಜೀವ ಉಳಿಸಿಕೊಳ್ಳಿ. ಇಲ್ಲವೇ ಸುರಕ್ಷತೆಯನ್ನು ಕಡೆಗಣಿಸುವ ಕಾರು ಕಂಪನಿಗಳ ವಿರುದ್ಧ ಹೋರಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications