ಮಾಡಿಫೈಗೊಂಡು ನೀಲಿ ಬಣ್ಣದಲ್ಲಿ ಮಿಂಚಿದ ಮಾರುತಿ ಡಿಜೈರ್
ಮಾರುತಿ ಸುಜುಕಿ ಭಾರತದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಹಲವಾರು ಜನಪ್ರಿಯ ಕಾರುಗಳಿವೆ. ಕೆಲವರು ಮಾರುತಿ ಸುಜುಕಿ ಕಾರುಗಳನ್ನು ಮಾಡಿಫೈಗೊಳಿಸುತ್ತಾರೆ. ಮಾರುತಿ ಸುಜುಕಿ ಸ್ವಿಫ್ಟ್, ಡಿಜೈರ್, ಆಲ್ಟೊ, ರಿಟ್ಜ್ ಮತ್ತು ಡಿಜೈರ್‌ನಂತಹ ಕಾರುಗಾಳನ್ನು ಹೆಚ್ಚಾಗಿ ಮಾಡಿಫೈಗೊಳಿಸುತ್ತಾರೆ.
ಕೇರಳದ ವ್ಯಕ್ತಿಯೊಬ್ಬರು ಆಕರ್ಷಕವಾಗಿ ಮಾರುತಿ ಡಿಜೈರ್ (Maruti Dzire) ಕಾರನ್ನು ಮಾಡಿಫೈಗೊಳಿಸಿದ್ದಾರೆ. ಈ ಕಾರಿನ ಮಾಡಿಫೈ ವೀಡಿಯೊವನ್ನು ರಾಬಿನ್ಸನ್ ಕಲ್ಲೂರ್ ಜಾಕೋಬ್ ಅವರು ತಮ್ಮ Instagram ಪ್ರೊಫೈಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ . ವೀಡಿಯೊದಲ್ಲಿ ಕಂಡುಬರುವ ಡಿಜೈರ್ ಪ್ರಸ್ತುತ ಜನರೇಷನ್ ಮಾದರಿಯಾಗಿದ್ದು, ಪ್ರಿ-ಫೇಸ್‌ಲಿಫ್ಟ್ ಆವೃತ್ತಿಯಾಗಿದೆ. ಈ ಕಾರನ್ನು ಆಕಾಶ ನೀಲಿ ಬಣ್ಣವನ್ನು ನೀಡಿ ಅತ್ಯಂತ ಆಕರ್ಷಕವಾಗಿ ಕಾಣುವಂತೆ ಮಾಡಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿನ ಮುಂಭಾಗದ ಗ್ರಿಲ್ ಅನ್ನು ಕಸ್ಟಮೈಸ್ ಮಾಡಲಾಗಿದೆ, ಬ್ಲ್ಯಾಕ್ ಔಟ್ ಮಾಡಲಾಗಿದೆ ಮತ್ತು ಗ್ಲಾಸ್ ಬ್ಲ್ಯಾಕ್ ಫಿನಿಶ್ ನೀಡಲಾಗಿದೆ. ಮುಂಭಾಗದಲ್ಲಿರುವ ಸುಜುಕಿ ಲೋಗೋ ಕೂಡ ಕಪ್ಪು ಬಣ್ಣಕ್ಕೆ ತಿರುಗಿಸಿದೆ. ಕಾರು ತನ್ನ ಸ್ಟಾಕ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು LED DRL ಗಳನ್ನು ಉಳಿಸಿಕೊಂಡಿದೆ. ಈ ಕಾರಿನ ಬಂಪರ್‌ನ ಕೆಳಗಿನ ಭಾಗವು ಬ್ಲ್ಯಾಕ್ ಅಕ್ಸೆಟ್ ಗಳೊಂದಿಗೆ ಸ್ಪ್ಲಿಟರ್ ಅನ್ನು ಹೊಂದಿದೆ, ಮುಂಭಾಗಕ್ಕೆ ಸ್ಪೋರ್ಟಿ ನೋಟವನ್ನು ನೀಡುತ್ತದೆ.
ಈ ಕಾರಿನ ಫಾಗ್ ಲ್ಯಾಂಪ್ ಗಳು ಮತ್ತು ಹೆಡ್‌ಲ್ಯಾಂಪ್‌ಗಳು ಎಲ್‌ಇಡಿ ಯುನಿಟ್ ಗಳಾಗಿವೆ. ಮಾರುತಿ ಸ್ವಿಫ್ಟ್ ಡಿಜೈರ್ ಕಾರಿನ ಸೈಡ್ ಪ್ರೊಫೈಲ್ ಮತ್ತಷ್ಟು ಮಾರ್ಪಾಡುಗಳನ್ನು ತೋರಿಸುತ್ತದೆ. ORVM ಗಳನ್ನು ಬಾಡಿಯ ಬಣ್ಣದ ಫಿನಿಶಿಂಗ್ ಅನ್ನು ಮಾಡಲಾಗಿದೆ ಮತ್ತು ಡೋರ್ ಬೀಡಿಂಗ್ ಬ್ಲೂ ಮತ್ತು ಬ್ಲ್ಯಾಕ್ ಡ್ಯುಯಲ್-ಟೋನ್ ಫಿನಿಶ್ ಹೊಂದಿದೆ. ಸೈಡ್ ಸ್ಕರ್ಟ್ ಅನ್ನು ಅಳವಡಿಸಲಾಗಿದೆ.

ಇನ್ನು ಕಾರಿಗೆ ಅಲಾಯ್ ವ್ಹೀಲ್ ಗಳನ್ನು ಆಫ್ಟರ್ ಮಾರ್ಕೆಟ್ ಮಲ್ಟಿ-ಸ್ಪೋಕ್ ಅಲಾಯ್ ವೀಲ್‌ಗಳನ್ನು ಬ್ರಷ್ಡ್ ಅಲ್ಯೂಮಿನಿಯಂ ಫಿನಿಶಿಂಗ್ ಅನ್ನು ನೀಡಲಾಗಿದೆ. ಈ ಕಾರಿನಲ್ಲಿ ಲೋ-ಪ್ರೊಫೈಲ್ ಟೈರ್‌ಗಳು ಸೆಡಾನ್‌ನ ಒಟ್ಟಾರೆ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸುತ್ತದೆ. ಇನ್ನು ಈ ವ್ಹೀಲ್ ಗಳ ನಿಖರವಾದ ಗಾತ್ರ ತಿಳಿದಿಲ್ಲವಾದರೂ, ಅವು ಸ್ಟಾಕ್ ಯುನಿಟ್ ಗಳಿಗಿಂತ ದೊಡ್ಡದಾಗಿರುತ್ತವೆ.
ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಪಿಯಾನೋ ಬ್ಲ್ಯಾಕ್ ಶಾರ್ಕ್ ಫಿನ್ ಆಂಟೆನಾ ಇದೆ. ಈ ಸೆಡಾನ್‌ನಲ್ಲಿ ಮಾಲೀಕರು ಸಸ್ಪೆಕ್ಷನ್ ಗಳನ್ನು ಅಪ್‌ಗ್ರೇಡ್ ಮಾಡಿದ್ದಾರೆಯೇ ಎಂಬುದು ನಮಗೆ ಖಚಿತವಿಲ್ಲ. ಇನ್ನು ಭಾರತದಲ್ಲಿ ಬಣ್ಣದ ವಿಂಡೋಗಳು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಕಾರಿನ ಹಿಂಭಾಗಕ್ಕೆ ಚಲಿಸುವಾಗ, ಹೆಚ್ಚಿನ ಕಸ್ಟಮೈಸ್ ಗಳುಸ್ಪಷ್ಟವಾಗಿ ಕಂಡುಬರುತ್ತವೆ. ಸೆಡಾನ್‌ನ ಬೂಟ್‌ನಲ್ಲಿನ ಕ್ರೋಮ್ ಅಪ್ಲಿಕ್ ಅನ್ನು ಬ್ಲ್ಯಾಕ್ ಬಣ್ಣದಲ್ಲಿ ನೀಡಲಾಗಿದೆ.

ಇನ್ನು ಈ ಕಾರಿನ ಟೈಲ್ ಲ್ಯಾಂಪ್‌ಗಳನ್ನು ಸಹ ಬ್ಲ್ಯಾಕ್ ಬಣ್ಣದಲ್ಲಿದೆ. ಈ ಟೈಲ್ ಲ್ಯಾಂಪ್‌ಗಳು ಸ್ಟಾಕ್‌ನಂತೆ ಕಾಣುತ್ತಿಲ್ಲ, ಅವುಗಳು ಆಫ್ಟರ್ ಮಾರ್ಕೇಟ್ ಎಲ್‌ಇಡಿ ಯುನಿಟ್ ಗಳಿಗೆ ಹೋಲುತ್ತವೆ. ಬಂಪರ್‌ನ ಕೆಳಗಿನ ಭಾಗವು ಗ್ಲಾಸ್ ಕಪ್ಪು ಡಿಫ್ಯೂಸರ್ ಅನ್ನು ಹೊಂದಿದೆ, ಇದು ಕಾರಿನ ಸ್ಪೋರ್ಟಿ ಲುಕ್ ಅನ್ನ್ನು ಹೆಚ್ಚಿಸುತ್ತಿದೆ. ಇನ್ನು ಈ ಕಾರಿನ ಎಂಜಿನ್‌ಗೆ ಯಾವುದೇ ನವೀಕರಣಗಳನ್ನು ಮಾಡಲಾಗಿದೆಯೇ ಎಂದು ತಿಳಿದಿಲ್ಲ.
ಇನ್ನು ಜಪಾನಿನ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ನ್ಯೂ ಜನರೇಷನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ತಾಯಿನಾಡು ಜಪಾನ್ ನಲ್ಲಿ ಪರಿಚಯಿಸಿದೆ. ಹೊಸ ಸುಜುಕಿ ಸ್ವಿಫ್ಟ್ (Suzuki Swift) ಕಾರುಪರಿಷ್ಕೃತ ಸ್ಟೈಲಿಂಗ್ ಮತ್ತು ಹೊಸ ಇಂಜಿನ್ ಆಯ್ಕೆಗಳೊಂದಿಗೆ ನವೀಕರಿಸಿದ ಒಳಾಂಗಣದೊಂದಿಗೆ ಬರುತ್ತಿದೆ. 2024ರ ಮಾರುತಿ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications