ಹಸು ಸಗಣಿಯಿಂದ ಅಲಂಕಾರಗೊಂಡ ಇಗ್ನಿಸ್ ಕಾರಿಗೆ ಮೊದಲ ಬಹುಮಾನ..!

ಕಳೆದ ವರ್ಷದ ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಿದ್ದರು. ಇವುಗಳಲ್ಲಿ ತಮ್ಮ ಕಾರುಗಳ ಮೇಲೆ ಹಸುವಿನ ಸಗಣಿಯನ್ನು ಮೆತ್ತುವುದು ಸಹ ಸೇರಿತ್ತು.

ಹಸು ಸಗಣಿಯಿಂದ ಅಲಂಕಾರಗೊಂಡ ಇಗ್ನಿಸ್ ಕಾರಿಗೆ ಮೊದಲ ಬಹುಮಾನ..!

ಗುಜರಾತ್‍‍ನ ಮಹಿಳೆಯೊಬ್ಬರು ತಮ್ಮ ಟೊಯೊಟಾ ಕರೊಲಾ ಕಾರಿಗೆ ಹಸುವಿನ ಸಗಣಿಯನ್ನು ಮೆತ್ತಿದ್ದು ಅಂತರ್‍‍ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದಾದ ನಂತರ ಭಾರತದ ಉಳಿದೆಡೆ ಇರುವವರೂ ಸಹ ಇದನ್ನೇ ಮುಂದುವರೆಸಿದರು.

ಹಸು ಸಗಣಿಯಿಂದ ಅಲಂಕಾರಗೊಂಡ ಇಗ್ನಿಸ್ ಕಾರಿಗೆ ಮೊದಲ ಬಹುಮಾನ..!

ಡಾಕ್ಟರ್‍ ಒಬ್ಬರೂ ಸಹ ತಮ್ಮ ಮಹೀಂದ್ರಾ ಎಕ್ಸ್ ಯುವಿ 500 ಕಾರ್ ಅನ್ನು ಹಸುವಿನ ಸಗಣಿಯಿಂದ ಸಿಂಗರಿಸಿದ್ದರು. ಈಗ ಛತ್ತೀಸ್‍‍ಗಢದ ವ್ಯಕ್ತಿಯೊಬ್ಬರು ತಮ್ಮ ಮಾರುತಿ ಸುಜುಕಿ ಇಗ್ನಿಸ್ ಕಾರಿಗೆ ಸಗಣಿಯನ್ನು ಮೆತ್ತಿ ಅದರಿಂದ ಮೊದಲ ಬಹುಮಾನವನ್ನು ಪಡೆದಿದ್ದಾರೆ.

ಹಸು ಸಗಣಿಯಿಂದ ಅಲಂಕಾರಗೊಂಡ ಇಗ್ನಿಸ್ ಕಾರಿಗೆ ಮೊದಲ ಬಹುಮಾನ..!

ಈ ತಿಂಗಳ ಆರಂಭದಲ್ಲಿ ರಾಯಪುರದಲ್ಲಿ ಕಾರು ರ್‍ಯಾಲಿಯನ್ನು ಆಯೋಜಿಸಲಾಗಿತ್ತು. ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಕಾರು ಮಾಲೀಕರು ತಮ್ಮ ಕಾರುಗಳನ್ನು ವಿಭಿನ್ನವಾಗಿ ಅಲಂಕರಿಸಬೇಕಿತ್ತು. ಈ ರ್‍ಯಾಲಿಯಲ್ಲಿ ಒಟ್ಟು 30 ಕಾರುಗಳು ಭಾಗವಹಿಸಿದ್ದವು.

ಹಸು ಸಗಣಿಯಿಂದ ಅಲಂಕಾರಗೊಂಡ ಇಗ್ನಿಸ್ ಕಾರಿಗೆ ಮೊದಲ ಬಹುಮಾನ..!

ಈ ರ್‍ಯಾಲಿಯ ಕೊನೆಯಲ್ಲಿ ತಮ್ಮ ಕಾರುಗಳನ್ನು ವಿಶಿಷ್ಟವಾಗಿ ಅಲಂಕರಿಸಿದ್ದ ಕಾರು ಮಾಲೀಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದರಲ್ಲಿ ತಮ್ಮ ಕಾರ್ ಅನ್ನು ಹಸು ಸಗಣಿಯಿಂದ ಅಲಂಕರಿಸಿದ್ದ ರಾಜೇಶ್‍‍ರವರಿಗೆ ಮೊದಲ ಬಹುಮಾನವನ್ನು ನೀಡಲಾಯಿತು.

ಹಸು ಸಗಣಿಯಿಂದ ಅಲಂಕಾರಗೊಂಡ ಇಗ್ನಿಸ್ ಕಾರಿಗೆ ಮೊದಲ ಬಹುಮಾನ..!

ರ್‍ಯಾಲಿಯಲ್ಲಿ ಭಾಗವಹಿಸಿದ್ದ ಕಾರುಗಳನ್ನು ಅಲಂಕರಿಸಲು ಮಹಿಳಾ ಸಬಲೀಕರಣ, ಪರಿಸರ ಸ್ನೇಹಿ ಹಾಗೂ ಇನ್ನಿತರ ವಿಷಯಗಳನ್ನು ನೀಡಲಾಗಿತ್ತು. ಮೊದಲ ಬಹುಮಾನವನ್ನು ಪಡೆದ ಇಗ್ನಿಸ್ ಕಾರು, ಹಸು ಸಗಣಿಯನ್ನು ಮರುಬಳಕೆ ಮಾಡುವ ವಿಷಯವನ್ನು ಬಳಸಿಕೊಂಡಿತ್ತು.

ಹಸು ಸಗಣಿಯಿಂದ ಅಲಂಕಾರಗೊಂಡ ಇಗ್ನಿಸ್ ಕಾರಿಗೆ ಮೊದಲ ಬಹುಮಾನ..!

ಮೊದಲ ಬಹುಮಾನದಲ್ಲಿ ನಗದು ನೀಡಿರುವ ಬಗ್ಗೆ ಯಾವುದೇ ವರದಿಗಳಾಗಿಲ್ಲ. ರಾಜೇಶ್‍‍ರವರು ಈ ಕಾರ್ ಅನ್ನು ಅಲಂಕರಿಸಲು 21 ಕೆ.ಜಿ ಸಗಣಿಯನ್ನು ಬಳಸಿರುವುದಾಗಿ ತಿಳಿಸಿದ್ದಾರೆ. ಹಸು ಸಗಣಿಯಿಂದ ಅಲಂಕೃತಗೊಂಡಿದ್ದ ಈ ಕಾರು ರಾಯಪುರ ನಗರದಲ್ಲಿ ಸಂಚರಿಸಿ ಜನರ ಗಮನವನ್ನು ತನ್ನತ್ತ ಸೆಳೆದಿದೆ.

ಹಸು ಸಗಣಿಯಿಂದ ಅಲಂಕಾರಗೊಂಡ ಇಗ್ನಿಸ್ ಕಾರಿಗೆ ಮೊದಲ ಬಹುಮಾನ..!

ಕಾರಿನೊಳಗೆ ತಂಪಾಗಿರಲು ಈ ರೀತಿಯಾಗಿ ಮಾಡುವುದಾಗಿ ಕಾರು ಮಾಲೀಕರುಗಳು ತಿಳಿಸಿದರೂ ಸಹ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಸಗಣಿಯನ್ನು ಕಾರಿಗೆ ಮೆತ್ತುವುದರಿಂದ ಕಾರಿನ ಬಣ್ಣ ಕಿತ್ತುಬರುವ ಸಾಧ್ಯತೆಗಳಿರುತ್ತವೆ.

Article Published On: Tuesday, February 11, 2020, 13:49 [IST]
English summary
Maruti Ignis covered with cow dung wins first prize in a car competition. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+