ಬೊಲೆರೊಗೆ ಹಿನ್ನೆಡೆ; ಎರ್ಟಿಗಾಗೆ ಜೈಕಾರ ಹಾಕಿದ ಮುಂಬೈ ಪೊಲೀಸ್
ಭಾರಿ ಕುತೂಹಲದಾಯಕ ಬೆಳವಣಿಗೆಯೊಂದರಲ್ಲಿ ಐಕಾನಿಕ್ ಬೊಲೆರೊ ಕಾರಿಗೆ ಟಾಂಗ್ ಕೊಟ್ಟಿರುವ ಮುಂಬೈ ಪೊಲೀಸ್, ಅತ್ಯಾಧುನಿಕ ಶೈಲಿಯ ಮಾರುತಿ ಎರ್ಟಿಗಾ ಬಹು ಬಳಕೆಯ ವಾಹನಗಳನ್ನು (ಎಂಪಿವಿ) ತನ್ನ ಪಡೆಗೆ ಸೇರ್ಪಡೆಗೊಳಿಸಿದೆ.
Also Read: ದುಬೈ ಪೊಲೀಸ್ ತೆಕ್ಕೆಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು
ಮುಂಬೈ ಪೊಲೀಸ್ ದೇಶದ ಅತ್ಯಂತ ಯಶಸ್ವಿ ಕ್ರೀಡಾ ಬಳಕೆಯ ವಾಹನಗಳಲ್ಲಿ (ಎಸ್‌ಯುವಿ) ಒಂದಾಗಿರುವ ಬೊಲೆರೊ ಜೀಪ್ ಗಳನ್ನು ಕಡೆಗಣಿಸಲು ಯಾವುದೇ ನಿಖರ ಕಾರಣಗಳಿವೆಯೇ ಎಂಬುದು ತಿಳಿದು ಬಂದಿಲ್ಲ. ಆದರೆ ಎರ್ಟಿಗಾಗಳಂತಹ ಹೆಚ್ಚು ಆಧುನಿಕ ಹಾಗೂ ಆರಾಮದಾಯಕ ಕಾರುಗಳತ್ತ ಮುಂಬೈ ಪೊಲೀಸ್ ಮೊರೆ ಹೋಗಿರುವುದಂತೂ ಸತ್ಯ.

ಮುಂಬೈ ಪೊಲೀಸ್ ಸದ್ಯಕ್ಕೆ 94ರಷ್ಟು ಮಾರುತಿ ಎರ್ಟಿಗಾ ಕಾರುಗಳನ್ನು ಬರಮಾಡಿಕೊಂಡಿದೆ. ಅಲ್ಲದೆ ಈ ಬಗ್ಗೆ ಮೂಲಗಳಿಂದ ತಿಳಿದು ಬಂದಿರುವ ವಿಚಾರವೆಂದರೆ ಬೊಲೆರೊ ಕಾಲ ಮಿಂಚಿ ಹೋಗಿರುವುದೇ ಹೊಸ ಬದಲಾವಣೆಗೆ ಕಾರಣವಾಗಿದೆ.
ಚಿತ್ರ ಕೃಪೆ: ಟ್ವಿಟರ್
ಬೊಲೆರೊ ಜೊತೆಗೆ ಕ್ವಾಲಿಸ್ ಮಾದರಿಗಳು ಮುಂಬೈ ಪೊಲೀಸ್ ಸೇವೆಯಲ್ಲಿತ್ತು. ಈಗ ನಾವೀನ್ಯ ವಿನ್ಯಾಸಿತ ಹೆಚ್ಚು ಸೌಲಭ್ಯಗಳನ್ನು ಒಳಗೊಂಡಿರುವ ಎರ್ಟಿಗಾ ಕಾರುಗಳು ಇವೆಲ್ಲದರ ಸ್ಥಾನವನ್ನು ತುಂಬಲಿದೆ.
ಚಿತ್ರ ಕೃಪೆ: ಟ್ವಿಟರ್
ದೇಶದ ವಾಣಿಜ್ಯ ನಗರಿ ಎಂದೇ ಖ್ಯಾತಿಯ ಮುಂಬೈನಲ್ಲಿ ವಾಯು ಮಾಲಿನ್ಯ ಜಾಸ್ತಿಯಾಗಿದ್ದು, ಬೊಲೆರೊದಲ್ಲಿ ಕನಿಷ್ಠ ಎಸಿ ಸೌಲಭ್ಯವೂ ಇಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗ ಬಂದಿರುವ ಎರ್ಟಿಗಾ ಈ ಸಮಸ್ಯೆಗಳಿಗೆ ಪರಿಹಾರವಾಗಲಿದ್ದು, ನಗರ ಚಾಲನೆಗೆ ಪರಿಪೂರ್ಣವೆನಿಸಲಿದೆ.
ಚಿತ್ರ ಕೃಪೆ: ಟ್ವಿಟರ್
ನೂತನ ಮಾರುತಿ ಎರ್ಟಿಗಾ ಕಾರಿನ ಮುಂಭಾಗ ಹಾಗೂ ಬದಿಯಲ್ಲಿ ಮುಂಬೈ ಪೊಲೀಸ್ ಲಾಂಛನ ಎದ್ದು ಕಾಣಿಸಲಿದೆ. ಅಲ್ಲದೆ ಮೇಲ್ಬಾಗದಲ್ಲಿ ಸೈರನ್ ದೀಪವೂ ಉರಿಯಲಿದೆ.
ಚಿತ್ರ ಕೃಪೆ: ಟ್ವಿಟರ್
ಮುಂಬೈ ಪೊಲೀಸ್ ಮಾರುತಿ ಎರ್ಟಿಗಾ ಎಲ್‌ಎಕ್ಸ್‌ಐ ಮಾದರಿಗಳನ್ನು ಖರೀದಿಸಿದೆ. ಇದರಲ್ಲಿರುವ 1.4 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ 130 ಎನ್ ಎಂ ತಿರುಗುಬಲದಲ್ಲಿ 80 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.
ಚಿತ್ರ ಕೃಪೆ: ಟ್ವಿಟರ್
ದುಬೈ ಪೊಲೀಸ್ ಬಲೆಗೆ ಬಿತ್ತು ಟ್ಯಾಂಕರ್


Click it and Unblock the Notifications








