ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರ ಬಲಿ

By Nagaraja

ಹೊಸ ಬೆಳಕನ್ನು ತರಬೇಕಾಗಿದ್ದ ದೀಪಾವಳಿ ಹಬ್ಬವು ಕುಟುಂಬವೊಂದರ ಪಾಲಿಗೆ ಯಮದೂತನಾಗಿ ಪರಿಣಮಿಸಿದೆ. ಜಲಂಧರ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರ ದುರ್ಮರಣವಾಗಿದೆ.

Also Read: ಸಿಸಿಟಿಯಲ್ಲಿ ಸೆರೆಯಾಯ್ತು ಪೆಟ್ರೋಲ್ ಬಂಕ್‌ ಶೂಟೌಟ್

ದೀಪಾವಳಿ ಹಬ್ಬದ ಪ್ರಯುಕ್ತ ಅವರ ಕುಟುಂಬಕ್ಕೆ ಹೊಸ ಆತಿಥಿಯೊಂದರ ಆಗಮನವಾಗಿತ್ತು. ಆದರೆ ಆ ಆತಿಥಿಯ ಆಗಮನದಿಂದಾಗಿ ಒಂದೇ ಕುಟುಂಬದ ನಾಲ್ವರ ಪ್ರಾಣ ಪಕ್ಷಿ ಹಾರಿ ಹೋಗಲಿದೆಯೆಂದು ಯಾರೂ ಅಂದುಕೊಂಡಿರಲಿಲ್ಲ.

ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರ ಬಲಿ

ಜಲಂಧರ್ ಮೂಲದ ಉದ್ಯಮಿ ಸಂಜಯ್ ಸೆಹಗಲ್ ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಅತಿ ನೂತನ ಮಾರುತಿ ಬಲೆನೊ ಕಾರನ್ನು ಖರೀದಿಸಿದ್ದರು. ಈಗಷ್ಟೇ ಹಸೆ ಮಣೆ ಏರಿರುವ ಪುತ್ರಿ ದೀಪ್ತಿ ಕತ್ಯಾಳ್ ಮತ್ತು ಅಳಿಯ ಅಮಿತ್ ಕತ್ಯಾಳ್ ಜೊತೆಗೆ ಮೊದಲ ಜನ್ಮದಿನದ ಸಂಭ್ರಮದಲ್ಲಿರುವ ಮೊಮ್ಮಗಳಿಗೆ ಸಪ್ರೈಸ್ ನೀಡುವುದು ಅವರ ಇರಾದೆಯಾಗಿತ್ತು.

ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರ ಬಲಿ

ಹಾಗೆ ಅಂದುಕೊಂಡು ಪತ್ನಿ ಕಿರಣ್ ಸೆಹಗಲ್ (48), ಸೋದರ ಪುತ್ರಿ ಪಲ್ಲವಿ (16) ಸೋದರಿಯ ಮಕ್ಕಳಾದ ಅಂಶುಲ್ (18), ಪರುಲ್ (17) ಮತ್ತು ಸೋನು (20) ಜೊತೆ ಸೇರಿಕೊಂಡು 52ರ ಹರೆಯದ ಸಂಜಯ್ ಸೆಹಗಲ್ ಪುತ್ರಿಯ ಮನೆಗೆ ಪಯಣ ಹೊರಟಿದ್ದರು.

ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರ ಬಲಿ

ಸೆಹಗಲ್ ಹಾಗೂ ಅವರ ಕುಟುಂಬ ಸದಸ್ಯರು, 2015 ನವೆಂಬರ್ 18ರಂದು ರಾತ್ರಿ 10.30ರ ವೇಳೆಯಾಗುವಾಗ ಜಲಂಧರ್ ನಿಂದ 400 ಕೀ.ಮೀ. ಗಿಂತಲೂ ಹೆಚ್ಚಿನ ದೂರದಲ್ಲಿರುವ ಪುತ್ರಿಯ ಮನೆಗೆ ರಾಷ್ಟ್ರೀಯ ಹೆದ್ದಾರಿ 1ರ ಮೂಲಕ ಪಯಣ ಬೆಳೆಸಿದ್ದರು.

ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರ ಬಲಿ

ಆದರೆ ವಿಧಿಯ ಆಟವೇ ಬೇರೆಯೇ ಆಗಿತ್ತು. ಕರ್ನಾಲ್ ಸಮೀಪ ಗರೊಂಡಾ ಸಮೀಪಿಸಿದಾದ ಆ ಭೀಕರ ಅಪಘಾತ ಘಟಿಸಿಯೇ ಹೋಗಿತ್ತು. ಟ್ರಕ್‌ವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಆರು ಮಂದಿಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರ ಬಲಿ

ಗಂಭೀರ ಗಾಯಗೊಳೊಂದಿಗೆ ಸೋನು ಹಾಗೂ ಪಲ್ಲವಿ ಸ್ವಲ್ಪದರಲ್ಲೇ ಅಪಘಾತದಿಂದ ಪಾರಾಗಿದ್ದರು. ಘಟನೆಯಲ್ಲಿ ಸಂಚರಿಸುತ್ತಿದ್ದ ಬಲೆನೊ ಕಾರು ಸಂಪೂರ್ಣ ನಜ್ಜುಗುಜ್ಜುಗೊಂಡಿದೆ.

ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರ ಬಲಿ

ಪೊಲೀಸರು ಈಗ ಪ್ರಕರಣ ದಾಖಲಿಸಿದ್ದು, ಅಪಘಾತದ ಕುರಿತಾಗಿನ ನಿಖರತೆಗಾಗಿ ತನಿಖೆ ಪ್ರಾರಂಭಿಸಿದ್ದಾರೆ. ಪ್ರಸ್ತುತ ಘಟನೆಯಿಂದಾಗಿ ಸಂಪೂರ್ಣ ಕುಟುಂಬಕ್ಕೆ ಶೋಕ ಮಡುಗಟ್ಟಿದೆ.

ಇವನ್ನೂ ಓದಿ

ಪ್ರಕ್ಷುಬ್ಧ ವಾಘಾ ಗಡಿಯಲ್ಲಿ ಪಾಕ್ ಗೇಟ್‌ ಗುದ್ದಿದ ಭಾರತೀಯ

More from DriveSpark

Article Published On: Thursday, November 26, 2015, 12:55 [IST]
English summary
maruti suzuki baleno collides with truck
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+