45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿದ್ದಾರೆ ಈ ಮಾರುತಿ ಸುಜುಕಿ ಡೀಲರ್

ಮಾರುತಿ ಸುಜುಕಿ ಕಾರು ಮಾರಾಟಗಾರರೊಬ್ಬರು ಹಲವಾರು ಐಷಾರಾಮಿ ಹಾಗೂ ಸೂಪರ್ ಕಾರುಗಳನ್ನು ಬಳಸುತ್ತಿರುವ ಬಗ್ಗೆ ವರದಿಯಾಗಿದೆ. ಅವರು ಒಟ್ಟು 45 ಸೂಪರ್‌ಕಾರ್‌ ಹಾಗೂ 9 ಸೂಪರ್‌ಬೈಕ್‌ಗಳನ್ನು ಹೊಂದಿದ್ದಾರೆ ಎಂಬುದು ವಿಶೇಷ.

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಒಡಿಶಾದ ದೇವ್ ಜ್ಯೋತಿ ಗ್ರೂಪ್‌ನ ಸ್ಥಾಪಕ ಹಾಗೂ ಸಿಇಒ ಆಗಿರುವ ದೇವ್ ಜ್ಯೋತಿ ಪಟ್ನಾಯಕ್ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರನ್ನು ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ಬುಲು ಪಟ್ನಾಯಕ್ ಎಂಬ ವ್ಯಕ್ತಿ ಸಂದರ್ಶಿಸಿದ್ದರು.

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಈ ಸಂದರ್ಶನದಲ್ಲಿ ದೇವ್ ಜ್ಯೋತಿ ಪಟ್ನಾಯಕ್ ರವರ ಬಳಿಯಿರುವ ಐಷಾರಾಮಿ ಕಾರುಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ. ಅವರ ಬಳಿ ಟಿವಿಎಸ್, ಸುಜುಕಿ ಕಂಪನಿಗಳಿಂದ ಹಿಡಿದು ಹಾರ್ಲೆ - ಡೇವಿಡ್ಸನ್‌ನ ಕಂಪನಿಯವರೆಗೆ ಹಲವಾರು ಪ್ರೀಮಿಯಂ ಬೈಕ್'ಗಳಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಅದೇ ರೀತಿ ದೇವ್ ಜ್ಯೋತಿ ಪಟ್ನಾಯಕ್'ರವರ ಬಳಿ ಮಾರುತಿ ಸುಜುಕಿ ಕಂಪನಿಯ ಕಾರುಗಳಿಂದ ಆಡಿ ಐಷಾರಾಮಿ ಕಾರುಗಳವರೆಗೆ ವಿವಿಧ ಕಂಪನಿಗಳ ಐಷಾರಾಮಿ ಕಾರುಗಳಿವೆ. ಈ ಲೇಖನದಲ್ಲಿ ದೇವ್ ಜ್ಯೋತಿ ಪಟ್ನಾಯಕ್'ರವರ ಬಳಿಯಿರುವ ಐಷಾರಾಮಿ ಕಾರುಗಳ ಬಗೆಗಿನ ಮಾಹಿತಿಯನ್ನು ನೋಡೋಣ.

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಮಾರುತಿ 800:

ದೇವ್ ಜ್ಯೋತಿ ಪಟ್ನಾಯಕ್ ಮಾರುತಿ ಸುಜುಕಿ ಕಂಪನಿಯ ಮೊದಲ ಕಾರ್ ಆದ ಮಾರುತಿ 800 ಅನ್ನು ಸಹ ಹೊಂದಿದ್ದಾರೆ. ಅವರು ಈ ಕಾರ್ ಅನ್ನು 1998ರಲ್ಲಿ ಖರೀದಿಸಿದರು ಎಂದು ಹೇಳಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ದೇವ್ ಜ್ಯೋತಿ ಪಟ್ನಾಯಕ್ ಹಾಗೂ ಅವರ ಸ್ನೇಹಿತರು ಕೆಲವೊಮ್ಮೆ ಈ ಕಾರಿನಲ್ಲಿಯೂ ಪ್ರಯಾಣಿಸುತ್ತಾರೆ. ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಇದನ್ನೇ ಹೇಳಿದ್ದಾರೆ.

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿ

ಅವೆಂಟಡಾರ್, ಲ್ಯಾಂಬೊರ್ಗಿನಿ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು ವಿಶ್ವದಲ್ಲಿ ಕೆಲವೇ ಕೆಲವು ಜನರು ಮಾತ್ರ ಬಳಸುತ್ತಾರೆ. ಈಕಾರಿನಲ್ಲಿ ಅಳವಡಿಸಿರುವ 6.5 ಲೀಟರ್ ವಿ 12 ಎಂಜಿನ್ 740 ಬಿಹೆಚ್‌ಪಿ ಪವರ್ ಹಾಗೂ 690 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಲ್ಯಾಂಬೊರ್ಗಿನಿ ಉರುಸ್

ದೇವ್ ಜ್ಯೋತಿ ಪಟ್ನಾಯಕ್'ರವರು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಸಹ ಬಳಸುತ್ತಿದ್ದಾರೆ. ಹೆಚ್ಚು ಪರ್ಫಾಮೆನ್ಸ್ ಹೊಂದಿರುವ ಕಾರು ಎಂಬುದು ಗಮನಾರ್ಹ. ಈ ಕಾರು ಪ್ರತಿ ಗಂಟೆಗೆ 305 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಮಿನಿ ಕೂಪರ್

ಮಿನಿ ಕಂಪನಿಯ ಪ್ರೀಮಿಯಂ ಗುಣಮಟ್ಟದ ಕಾರುಗಳಲ್ಲಿ ಕೂಪರ್ ಸಹ ಒಂದು. ಪ್ರೀಮಿಯಂ ಹಾಗೂ ಐಷಾರಾಮಿ ಫೀಚರ್'ಗಳಿಗಾಗಿ ಖ್ಯಾತಿ ಪಡೆದಿರುವ ಈ ಕಾರುವಿಶ್ವದಾದ್ಯಂತದ ಐಷಾರಾಮಿ ಕಾರು ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಬೆಂಟ್ಲಿ ಫ್ಲೈಯಿಂಗ್ ಸ್ಪರ್

ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಐಷಾರಾಮಿ ಸೆಡಾನ್ ಕಾರ್ ಆಗಿದೆ. ಈ ಕಾರಿನ ಬೆಲೆ ರೂ.1.7 ಕೋಟಿಗಳಾಗಿದೆ. ಈ ಕಾರು ವಿಶ್ವದಲ್ಲಿರುವ ಅತ್ಯಂತ ಪ್ರೀಮಿಯಂ ಹಾಗೂ ಶಕ್ತಿಯುತ ಸೆಡಾನ್‌ ಕಾರುಗಳಲ್ಲಿ ಒಂದಾಗಿದೆ.

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಆಡಿ ಎ 8

ಎ 8, ಆಡಿ ಕಂಪನಿಯ ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ. ಇದು ದೇವ್ ಜ್ಯೋತಿ ಪಟ್ನಾಯಕ್ ಅವರ ನೆಚ್ಚಿನ ಕಾರು ಎಂದು ಹೇಳಲಾಗಿದೆ. ಈ ಕಾರು ಉದ್ದವಾದ ವ್ಹೀಲ್ ಬೇಸ್ ಅನ್ನು ಹೊಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಆಡಿ ಕ್ಯೂ 8

ಆಡಿ ಕ್ಯೂ 8 ಎಸ್‌ಯುವಿಯು ಹೆಚ್ಚು ಆಕರ್ಷಕ ಫೀಚರ್'ಗಳನ್ನು ಹೊಂದಿದೆ. ಕಂಪನಿಯು ಈ ಕಾರನ್ನು ಭಾರತದಲ್ಲಿ ಸಿಬಿಯು ಮೂಲಕ ಮಾರಾಟ ಮಾಡುತ್ತದೆ. ಈ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.99 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ರೂ.1.35 ಕೋಟಿಗಳಾಗಿದೆ.

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಇದರ ಜೊತೆಗೆ ದೇವ್ ಜ್ಯೋತಿ ಪಟ್ನಾಯಕ್'ರವರು ಆಡಿ ಎ 7 ಕಾರ್ ಅನ್ನು ಸಹ ಹೊಂದಿದ್ದಾರೆ. ಈ ಕಾರು ಭಾರತದಲ್ಲಿರುವ ಸೂಪರ್ ಸಾಮರ್ಥ್ಯದ ಕಾರುಗಳಲ್ಲಿ ಒಂದಾಗಿದೆ ಎಂಬುದು ಗಮನಾರ್ಹ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಫೋರ್ಡ್ ಮಸ್ಟಾಂಗ್

ಮಸ್ಟಾಂಗ್ ಅಮೆರಿಕಾದ ಫೋರ್ಡ್ ಕಂಪನಿಯ ಸೂಪರ್ ಕಾರು. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.74.6 ಲಕ್ಷಗಳಾಗಿದೆ. ಈ ಕಾರಿನಲ್ಲಿ ಅಳವಡಿಸಿರುವ 5.0 ಲೀಟರ್ ನ್ಯಾಚುರಲಿ ಆಸ್ಪೈರ್ಡ್ ವಿ 8 ಎಂಜಿನ್ 396 ಬಿಹೆಚ್‌ಪಿ ಪವರ್ ಹಾಗೂ 515 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಹೊಸ ಥಾರ್ ಎಸ್‌ಯುವಿ

ದೇವ್ ಜ್ಯೋತಿ ಪಟ್ನಾಯಕ್, ಮಹೀಂದ್ರಾ ಕಂಪನಿಯ ಹೊಸ ಥಾರ್ ಎಸ್‌ಯುವಿಯನ್ನು ಸಹ ಹೊಂದಿದ್ದಾರೆ. ಈ ಎಸ್‌ಯುವಿಯು ಆಫ್-ರೋಡ್'ಗಳಿಗೆ ಸೂಕ್ತವಾದ ವಾಹನವಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಜೀಪ್ ವ್ರಾಂಗ್ಲರ್

ದೇವ್ ಜ್ಯೋತಿ ಪಟ್ನಾಯಕ್'ರವರು ಜೀಪ್ ಕಂಪನಿಯ ವ್ರಾಂಗ್ಲರ್ ಕಾರ್ ಅನ್ನು ಸಹ ಬಳಸುತ್ತಿದ್ದಾರೆ. ಜೀಪ್ ಕಂಪನಿಯು ಈ ಕಾರ್ ಅನ್ನು ಸ್ಥಳೀಯವಾಗಿ ಉತ್ಪಾದಿಸುತ್ತಿದೆ. ಈ ಕಾರಣಕ್ಕೆ ಈ ಕಾರಿನ ಬೆಲೆಯು ಹಲವು ಪಟ್ಟು ಕಡಿಮೆಯಾಗಿದೆ.

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಜೀಪ್ ಗ್ರ್ಯಾಂಡ್ ಚಿರೋಕೀ ಎಸ್‌ಆರ್‌ಟಿ

ಜೀಪ್‌ನ ಗ್ರ್ಯಾಂಡ್ ಚೆರೋಕೀ ಎಸ್‌ಆರ್‌ಟಿ ವಿಶ್ವದ ಅತ್ಯಂತ ಪ್ರಸಿದ್ಧ ಕಾರು ಮಾದರಿಯಾಗಿದೆ. ಈ ಕಾರಿನಲ್ಲಿ ಅಳವಡಿಸಿರುವ 6.4 ಲೀಟರ್ ಹೆಮಿ ವಿ 8 ಎಂಜಿನ್ 462 ಬಿಹೆಚ್‌ಪಿ ಪವರ್ ಹಾಗೂ 624 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯು ಈ ಕಾರನ್ನು ಭಾರತದಲ್ಲಿ ಸಿಬಿಯು ಮೂಲಕ ಮಾರಾಟ ಮಾಡುತ್ತದೆ. ಜೀಪ್ ಕಂಪನಿಯು ವ್ರಾಂಗ್ಲರ್ ಕಾರಿನಂತೆ ಈ ಕಾರ್ ಅನ್ನು ಸಹ ಶೀಘ್ರದಲ್ಲಿಯೇ ಸ್ಥಳೀಯವಾಗಿ ಉತ್ಪಾದಿಸಲು ಚಿಂತನೆ ನಡೆಸುತ್ತಿದೆ. ಇದರಿಂದಾಗಿ ಈ ಕಾರಿನ ಬೆಲೆಯು ಸಹ ಕಡಿಮೆಯಾಗಲಿದೆ.

ಆಯ್ಸ್ಟನ್ ಮಾರ್ಟಿನ್ ಡಿಬಿ 11

ಆಯ್ಸ್ಟನ್ ಮಾರ್ಟಿನ್ ಡಿಬಿ 11 ಐಷಾರಾಮಿ ಸ್ಪೋರ್ಟ್ಸ್ ಕಾರು ಜೇಮ್ಸ್ ಬಾಂಡ್‌ನಂತಹ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರ ಗಮನ ಸೆಳೆದಿದೆ. ದೇವ್ ಜ್ಯೋತಿ ಪಟ್ನಾಯಕ್ ಈ ಕಾರನ್ನು ಸಹ ಬಳಸುತ್ತಿದ್ದಾರೆ. ದೇವ್ ಜ್ಯೋತಿ ಪಟ್ನಾಯಕ್'ರವರು ಆಯ್ಸ್ಟನ್ ಮಾರ್ಟಿನ್ ಕಂಪನಿಯ ಮತ್ತೊಂದು ವಿಂಟೇಜ್ ಕಾರ್ ಅನ್ನು ಸಹ ಬಳಸುತ್ತಿದ್ದಾರೆ. ಈ ಕಾರು ಮರ್ಸಿಡಿಸ್ ಬೆಂಜ್ ಎಎಂಜಿ ಕಾರುಗಳಲ್ಲಿರುವಂತಹ ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿದೆ.

45ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಕಾರು ಮಾರಾಟಗಾರ

ಮೇಲೆ ತಿಳಿಸಿದ ಕಾರುಗಳನ್ನು ಮಾತ್ರವಲ್ಲದೇ ದೇವ್ ಜ್ಯೋತಿ ಪಟ್ನಾಯಕ್'ರವರು ಇನ್ನೂ ಹಲವು ಕಾರುಗಳನ್ನು ಬಳಸುತ್ತಿದ್ದಾರೆ. ಅವರು ಕಳೆದ 35 ವರ್ಷಗಳಿಂದಆಟೋಮೋಟಿವ್ ವ್ಯವಹಾರದಲ್ಲಿದ್ದಾರೆ. ದೇವ್ ಜ್ಯೋತಿ ಪಟ್ನಾಯಕ್'ರವರು ಸದ್ಯಕ್ಕೆ ಒಡಿಶಾದಲ್ಲಿಯೇ 14 ಕಾರು ಶೋರೂಂಗಳನ್ನು ಹೊಂದಿದ್ದಾರೆ. ಇವುಗಳ ಮೂಲಕ ಅವರು ಪ್ರತಿ ತಿಂಗಳು 1,500ಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡುತ್ತಾರೆ.

ಚಿತ್ರಕೃಪೆ: ಬುಲು ಪಟ್ನಾಯಕ್

Most Read Articles

Kannada
English summary
Maruti Suzuki car dealer owns more than 45 super cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X