7 ಲಕ್ಷ ಕಿ.ಮೀ ಓಡಿದ್ರೂ ಶೋರೂಂ ಕಂಡಿಷನ್: ಟೊಯೋಟಾ ಎಂಜಿನ್‌ಗೆ ಸೆಡ್ಡು ಹೊಡೆದ ಜನಪ್ರಿಯ ಕಾರು!
ಭಾರತದಲ್ಲಿ ಮಾರುತಿ ಸುಜುಕಿ ಅತ್ಯಂತ ಜನಪ್ರಿಯ ಕಾರು ತಯಾರಕರಾಗಿದ್ದು, ಸುರಕ್ಷತೆಯನ್ನು ಪಕ್ಕಕ್ಕಿಟ್ಟರೆ ಅಗ್ಗದ ಬೆಲೆಗೆ ಬೆಸ್ಟ್ ಕಾರುಗಳನ್ನು ನೀಡುವ ಅತ್ಯುತ್ತಮ ಬ್ರಾಂಡ್ ಆಗಿದೆ. ಮಾರಾಟದಲ್ಲೂ ನಂ.1 ಸ್ಥಾನದಲ್ಲಿ ಮುಂದುವರಿಯುತ್ತಿರುವ ಮಾರುತಿ ಸುಜುಕಿ, ಕೆಲವು ಅತ್ಯುತ್ತಮ ಕಾರುಗಳನ್ನು ನೀಡುತ್ತಿದೆಯಾದ್ರೂ ಅವು ಅಷ್ಟು ಜನಪ್ರಿಯತೆ ಪಡೆದಿಲ್ಲ. ಅಂತಹ ಕಾರುಗಳಲ್ಲಿ ಮಾರುತಿ ಸುಜುಕಿ ಸಿಯಾಜ್ ಕೂಡ ಒಂದು. ಇದು ಮಾರುತಿಯ ಇತರ ಕಾರುಗಳಂತೆ ಭಾರತದಲ್ಲಿ ಜನಪ್ರಿಯವಾಗಿಲ್ಲದಿದ್ದರೂ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಯಶಸ್ವಿ ಕಾರಾಗಿದೆ. ಸದ್ಯ ಈ ಕಾರಿನ ಕುರಿತ ಅಚ್ಚರಿಯ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
ಮಾರುತಿ ಸಿಯಾಜ್ ಸೆಡಾನ್ 7 ಲಕ್ಷ ಕಿ.ಮೀ ಓಡಿದರು ಇನ್ನೂ ಅದೇ ಕಂಡಿಷನ್‌ನಲ್ಲಿ ಇರುವುದು ಅಚ್ಚರಿಗೊಳಿಸಿದೆ. ಹೌದು ಈ ಕುರಿತ ಮಾಹಿತಿಯನ್ನು ಫೇಸ್ ಬುಕ್‌ನ #ClubCiaz ಎಂಬ ಮಾರುತಿ ಸುಜುಕಿ ಸಿಯಾಜ್‌ನ ಮಾಲೀಕರೊಬ್ಬರ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ತಮ್ಮ ಸಿಯಾಜ್ ಅದ್ದೂರಿಯಾಗಿ 7 ಲಕ್ಷ ಕಿ.ಮೀ ಓಡಿದೆ, ಇನ್ನೂ ಅದರ ಪರ್ಫಾಮೆನ್ಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಲೀಕರು ಹೇಳಿಕೊಂಡಿದ್ದಾರೆ.

ಮಾರುತಿ ಸುಜುಕಿ ಸಿಯಾಜ್ ಕಾರಿನ ಮಾಲೀಕ ಕನ್ವಾಲ್‌ಪ್ರೀತ್ ಸಿಂಗ್ ಬೆನಿಪಾಲ್ ಅವರು ಸಿಯಾಜ್‌ನೊಂದಿಗೆ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದು, "7 ಲಕ್ಷ ಕಿಲೋಮೀಟರ್ ಪೂರ್ಣಗೊಂಡಿದೆ. ಈ ವಿಭಾಗದಲ್ಲಿ ಇದುವರೆಗಿನ ಅತ್ಯುತ್ತಮ ಸೆಡಾನ್ ಇದಾಗಿದೆ. ನನ್ನ ಸಿಯಾಜ್ 2015ರ ಮಾದರಿಯಾಗಿದ್ದು, ಡೀಸೆಲ್ ಮ್ಯಾನುವಲ್‌ನಲ್ಲಿ ಖರೀದಿಸಲಾಗಿತ್ತು. ಬಳಿಕ ಇದನ್ನು ಫೇಸ್ ಲಿಫ್ಟ್‌ಗೆ ಪರಿವರ್ತಿಸಲಾಗಿದೆ" ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮಾಲೀಕರು ಹಂಚಿಕೊಂಡಿರುವ ಚಿತ್ರಗಳಲ್ಲಿ ಸಿಯಾಜ್ ಹೊಸ ಫೆಸ್‌ಲಿಫ್ಟ್‌ನಂತೆ ಕಾಣುತ್ತಿದೆ. ಅದನ್ನು ಹೊಸ ಮಾಡೆಲ್‌ನಂತೆ ಕಾಣಲು, ಪ್ರಸ್ತುತ ಮಾದರಿಯಾಗಿ ಪರಿವರ್ತಿಸಿದ್ದಾರೆ. ಅಂದರೆ ಅವರ 2015ರ ಮಾದರಿಯನ್ನು 2018 ರಲ್ಲಿ ನವೀಕರಿಸಿದ್ದಾರೆ. ಹಾಗೆಯೇ ಅದರ ಮೇಂಟೆನೆನ್ಸ ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸಿದ್ದು, 9 ವರ್ಷಗಳಲ್ಲಿ ಬರೋಬ್ಬರಿ 7 ಲಕ್ಷ ಕಿ.ಮೀ ಓಡಿದೆ.

ಇಷ್ಟು ಕಿ.ಮೀ ಕಾರು ಒಡಿದೆ ಎಂದರೆ ಮಾಲೀಕರು ನಿಯಮಿತವಾಗಿ ವಾಹನವನ್ನು ಓಡಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ. ಹಾಗೆಯೇ, ಅವರು ಡೀಸೆಲ್ ಟ್ರಿಮ್ ಅನ್ನು ಆಯ್ಕೆ ಮಾಡಲು ಇದು ಕಾರಣವಾಗಿರಬಹುದು. ಆ ಸಮಯದಲ್ಲಿ, ಬೆಲೆಗಳು ಎಕ್ಸ್ ಶೋರೂಂ ದರದಂತೆ ರೂ.7.24 (ಎಕ್ಸ್ ಶೋರೂಂ) ಲಕ್ಷದಿಂದ ರೂ.10.52 (ಎಕ್ಸ್ ಶೋರೂಂ) ಲಕ್ಷಗಳವರೆಗೆ ಇತ್ತು.
ಮಾರುತಿ ಸುಜುಕಿ 2019 ರಲ್ಲಿ ಡೀಸೆಲ್ ಎಂಜಿನ್ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿತು. ಆದ್ದರಿಂದ, ಅಂದಿನಿಂದ ಡೀಸೆಲ್ ಟ್ರಿಮ್‌ನಲ್ಲಿ ಯಾವುದೇ ಕಾರಿನ ಮಾದರಿ ಇಲ್ಲ. ಮಾರುತಿ ಸುಜುಕಿ ಸಿಯಾಜ್ ಎಂಜಿನ್ ಬಗ್ಗೆ ಮಾತನಾಡುವುದಾದ್ರೆ 90 ಬಿಹೆಚ್ ಪವರ್ ಮತ್ತು 200 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್: ಕಾರುಗಳು ಬರೋಬ್ಬರಿ 7 ಲಕ್ಷ ಕಿ.ಮೀ ಓಡುವುದು ಎಂದರೆ ಸಾಮಾನ್ಯ ವಿಷಯವಲ್ಲ, ಕಾರುಗಳು ಹೆಚ್ಚು ಕಾಲ ಉಳಿಯುವಂತೆ ಮಾಡಲು ಚಾಲನಾ ಕೌಶಲ್ಯ ಮತ್ತು ಉತ್ತಮ ಚಾಲನಾ ಶಿಸ್ತು ಬೇಕು. ಕಾಲ ಕಾಲಕ್ಕೆ ಸರಿಯಾದ ಸರ್ವಿಸ್, ಎರಡನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೇ ಮೇಂಟೇನ್ ಮಾಡುವುದು ಸಾಹಸವೆಂದೇ ಹೇಳಬಹುದು. ಇನ್ನೂ ವಾಹನವು ಉತ್ತಮ ಸ್ಥಿತಿಯಲ್ಲಿ ಕಾಣುತ್ತಿದ್ದು, ಮಾಲೀಕರು ಇನ್ನೂ ಹಲವು ವರ್ಷ ಓಡಿಸುತ್ತಾರೆ ಎಂಬ ವಿಶ್ವಾಸವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Image Courtesy: Kanwalpreet Singh Benipal/Facebook


Click it and Unblock the Notifications