Bharat NCAP: ಭಾರತ್‌ NCAP ಪಾಲಿಸಿಗೆ OK ಎಂದ ಕಂಪನಿಗಳು ಯಾವುದೆಲ್ಲಾ ಗೊತ್ತಾ?

ಮೊನ್ನೆಯಷ್ಟೇ ಪ್ರಸಿದ್ದ ಕಾರು ತಯಾರಿಕಾ ಕಂಪನಿಯಾದ ಸ್ಕೋಡಾ ನಡೆಸಿದ ಸಮೀಕ್ಷೆಯೊಂದರಲ್ಲಿ ಭಾರತೀಯರು ಇತ್ತೀಚಿನ ದಿನಮಾನಗಳಲ್ಲಿ ಮೈಲೇಜ್‌ ನೀಡುವ ಕಾರುಗಳಿಗಿಂತ ಹೆಚ್ಚಾಗಿ. ಸುರಕ್ಷಿತವಾಗಿರುವ ಕಾರುಗಳನ್ನು ಕೊಳ್ಳುವಲ್ಲಿ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಎಂದು ಬಹಿರಂಗ ಪಡಿಸಿತ್ತು. ಇದರಿಂದ ಇತ್ತೀಚೆಗೆ ಭಾರತೀಯರ ಕಾರು ಕೊಳ್ಳುವ ಮನೋಭಾವ ಬದಲಾಗುತ್ತಿರುವುದನ್ನು ಗಮನಿಸಬಹುದು.

ಗ್ಲೋಬಲ್‌ N-CAP ರೀತಿಯಲ್ಲಿ ಭಾರತೀಯ ಮಾನ ದಂಡಗಳನ್ನು ಒಳಗೊಳ್ಳಿಸಿ ಒಂದು ವ್ಯವಸ್ಥೆಯನ್ನು ತರಬೇಕೆನ್ನುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಲೇ ಇತ್ತು. ಇದೀಗ ಅದೆಲ್ಲವನ್ನು ಒಳಗೂಡಿಸಿ ಭಾರತ್‌ NCAP (Bharat NCAP) ಎನ್ನುವ ಭಾರತೀಯ ಮಾನದಂಡಗಳನ್ನು ಒಳಗೂಡಿಸಿದ ವ್ಯವಸ್ಥೆಯನ್ನು ಅಕ್ಟೋಬರ್‌ ಒಂದರಿಂದ ದೇಶದಲ್ಲಿ ಜಾರಿ ಮಾಡಲಿದೆ.

Maruti Suzuki Mahindra And Toyota

ಇದರ ನಿಟ್ಟಿನಲ್ಲಿ ಪ್ರಯತ್ನಗಳು ಭರದಿಂದ ಸಾಗುತ್ತಿದ್ದು, ಹಲವು ಕಂಪನಿಗಳು ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಸಿದ್ದ ಕಾರು ಕಂಪನಿಗಳಾದಂತಹ ಮಹೀಂದ್ರಾ, ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಭಾರತ್‌ NCAP (Bharat NCAP) ಅನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ್‌ NCAP (Bharat NCAP) ಸ್ವಾಗತಿಸುವುದರ ಮೂಲಕ ಕಂಪನಿಗಳು ಬಹುದೊಡ್ಡ ಹೆಜ್ಜೆಯನ್ನು ಇಟ್ಟಿದೆ ಎಂದೇ ಹೇಳಬಹುದು. ಮೂಲಕ ಇನ್ನುಮುಂದೆ ಭಾರತ್‌ NCAP ನಿಗದಿಪಡಿಸುವ ಮಾನದಂಡಗಳನ್ನು ಅನುಸರಿಸಿ ಸುರಕ್ಷಿತವಾದ ವಾಹನಗಳು ಭಾರತದ ಮಾರುಕಟ್ಟೆಗೆ ಕಾಲಿಡಲಿದೆ ಎಂಬುದು ಭಾರತದ ವಾಹನ ಪ್ರೀಯರಿಗೆ ಸಂತಸದ ಸುದ್ದಿ.

Maruti Suzuki Mahindra And Toyota

ಮಹೀಂದ್ರಾ ಕಂಪನಿಯ ಆಟೋಮೋಟಿವ್‌ ಟೆಕ್ನಾಲಜಿಯ ಪ್ರೆಸಿಡೆಂಟ್‌ ಆದ ವೇಲುಸ್ವಾಮಿ ಅವರ ಪ್ರಕಾರ ಭಾರತದಲ್ಲಿ ಭಾರತ್‌ NCAP (Bharat NCAP) ಜಾರಿಗೆ ತರುವಲ್ಲಿ ತೊಡಗಿರುವ ಭಾರತೀಯ ಸಾರಿಗೆ ಸಚಿವಾಲಯದ ನಡೆ ನಿಜಕ್ಕೂ ಶ್ಲಾಘನೀಯವಾದುದು. ಕುರಿತಾಗಿ ಮಹೀಂದ್ರಾ ಕಂಪನಿಯು ಕ್ರಮವನ್ನು ಎರಡೂ ಕೈಗಳಿಂದ ಸ್ವಾಗತಿಸುತ್ತಿದೆ.

ಇದರಿಂದ ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಎಲ್ಲರೂ ಸಮಾನವಾಗಿ ಆರೋಗ್ಯಕರ ರೀತಿಯ ಪೈಪೋಟಿ ನಡೆಯಲಿದೆ ಎಂದು ಹೇಳಿದ್ದಾರೆ. ಇನ್ನು ಭಾರತ್‌ NCAP (Bharat NCAP) ಅನ್ನು ಭಾರತದಲ್ಲಿ ಜಾರಿಗೊಳಿಸುವುದರ ಮೂಲಕ ಬಹುತೇಕ ಕಂಪನಿಗಳೆಲ್ಲವೂ ಇನ್ನು ಮುಂದೆ ವಾಹಗಳನ್ನು ನಿರ್ಮಿಸುವಾಗ ಭಾರತ್‌ NCAP (Bharat NCAP) ನಿಗದಿಪಡಿಸಿದ ಮಾನದಂಡಗಳೊಂದಿಗೆ ವಾಹನಗಳನ್ನು ನಿರ್ಮಿಸಲಿದೆ.

ಇದರಿಂದ ವಾಹನಗಳನ್ನು ಕೊಳ್ಳುವ ಗ್ರಾಹಕರು ಸುರಕ್ಷಿತವಾಗಿರುವ ವಾಹನಗಳನ್ನು ಖರೀದಿಸುವಂತಾಗುತ್ತದೆ. ಕುರಿತಾಗಿ ಮಹೀಂದ್ರಾ ಕಂಪನಿಯ ಮುಖ್ಯಸ್ಥರು ಮಾತ್ರವಲ್ಲದೇ, ಮಾರುತಿ ಸುಜುಕಿ ಇಂಡಿಯಾದ ಎಕ್ಸಿಕ್ಯೂಟಿವ್ ಆಫಿಸರ್‌ ಆದ ರಾಹುಲ್ ಭಾರತಿ ಸಹ ತಮ್ಮ ಬೆಂಬಲವನ್ನು ಭಾರತ್‌ NCAP ಗೆ ಸೂಚಿಸಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 18, 2023, 11:30 [IST]
English summary
Maruti suzuki mahindra and toyota wholeheartedly welcome bharat ncap
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+