ಕರೋನಾ ವೈರಸ್: ಮರುಬಳಕೆಯ ಫೇಸ್ ಶೀಲ್ಡ್ ಬಿಡುಗಡೆಗೊಳಿಸಿದ ಹೆಲ್ಮೆಟ್ ತಯಾರಕ ಕಂಪನಿ

ಕರೋನಾ ವೈರಸ್‌ಗೆ ಯಾವುದೇ ಚಿಕಿತ್ಸೆಯಿಲ್ಲ. ಈ ವೈರಸ್ ಹರಡದಂತೆ ತಡೆಯುವುದೇ ಇದಕ್ಕಿರುವ ಮದ್ದು. ಕರೋನಾ ವೈರಸ್ ಹರಡದಂತೆ ತಡೆಯಲು ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಇದನ್ನೇ ಒತ್ತಿ ಹೇಳುತ್ತಿವೆ.

ಕರೋನಾ ವೈರಸ್: ಮರುಬಳಕೆಯ ಫೇಸ್ ಶೀಲ್ಡ್ ಬಿಡುಗಡೆಗೊಳಿಸಿದ ಹೆಲ್ಮೆಟ್ ತಯಾರಕ ಕಂಪನಿ

ಕರೋನಾ ವೈರಸ್ ಮೂಗು, ಬಾಯಿ ಹಾಗೂ ಕಣ್ಣುಗಳ ಮೂಲಕ ಹರಡುತ್ತದೆ. ಈ ವೈರಸ್ ಮಾನವನ ದೇಹ ಸೇರಿದ ನಂತರ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಈ ಕಾರಣಕ್ಕೆ ಜನರಿಗೆ ಮಾಸ್ಕ್ ಧರಿಸುವಂತೆ ಸೂಚಿಸಲಾಗುತ್ತಿದೆ. ಅಗತ್ಯ ಕಾರ್ಯಗಳಿಗಾಗಿ ಮಾತ್ರ ಹೊರಬರುವಂತೆ ಜನರಿಗೆ ಸೂಚಿಸಲಾಗಿದೆ. ಹಾಗೆ ಹೊರಬರುವಾಗ ಫೇಸ್ ಶೀಲ್ಡ್, ಮಾಸ್ಕ್‌ಗಳನ್ನು ಧರಿಸುವಂತೆ ಸೂಚನೆ ನೀಡಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದರ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶ ನೀಡಲಾಗಿದೆ.

ಕರೋನಾ ವೈರಸ್: ಮರುಬಳಕೆಯ ಫೇಸ್ ಶೀಲ್ಡ್ ಬಿಡುಗಡೆಗೊಳಿಸಿದ ಹೆಲ್ಮೆಟ್ ತಯಾರಕ ಕಂಪನಿ

ಸದ್ಯಕ್ಕೆ ಫೇಸ್ ಶೀಲ್ಡ್‌ಗಳ ಕೊರತೆ ಎದುರಾಗಿದೆ. ಮಾಸ್ಕ್ ಹಾಗೂ ಆಂಟಿಸೆಪ್ಟಿಕ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಈ ಸಂದರ್ಭದಲ್ಲಿ, ಪ್ರಸಿದ್ಧ ಹೆಲ್ಮೆಟ್ ತಯಾರಕ ಕಂಪನಿಯಾದ ಮಾವೋಕ್ಸ್ ಮರುಬಳಕೆ ಮಾಡಬಹುದಾದ ಫೇಸ್ ಶೀಲ್ಡ್ ಅನ್ನು ಬಿಡುಗಡೆಗೊಳಿಸಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವೈರಸ್: ಮರುಬಳಕೆಯ ಫೇಸ್ ಶೀಲ್ಡ್ ಬಿಡುಗಡೆಗೊಳಿಸಿದ ಹೆಲ್ಮೆಟ್ ತಯಾರಕ ಕಂಪನಿ

ಮಾವೋಕ್ಸ್ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಗಾಜಿನ ಫೇಸ್ ಶೀಲ್ಡ್ ಅನ್ನು ತಯಾರಿಸಿದೆ. ಈ ಫೇಸ್ ಶೀಲ್ಡ್ ಅನ್ನು ಡಾಕ್ಟರ್‌ಗಳು ಹಾಗೂ ಆರೋಗ್ಯ ಕಾರ್ಯಕರ್ತರು ಬಳಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ವೈರಸ್ ಹರಡದಂತೆ ತಡೆಯಲು ಫೇಸ್ ಶೀಲ್ಡ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಮಾವೋಕ್ಸ್ ಹೇಳಿದೆ.

ಕರೋನಾ ವೈರಸ್: ಮರುಬಳಕೆಯ ಫೇಸ್ ಶೀಲ್ಡ್ ಬಿಡುಗಡೆಗೊಳಿಸಿದ ಹೆಲ್ಮೆಟ್ ತಯಾರಕ ಕಂಪನಿ

ಕೆಲವು ಫೇಸ್ ಶೀಲ್ಡ್‌ಗಳನ್ನು ಒಮ್ಮೆ ಮಾತ್ರ ಬಳಸುವಂತೆ ತಯಾರಿಸಲಾಗಿರುತ್ತದೆ. ಆದರೆ ಮಾವೋಕ್ಸ್ ಕಂಪನಿಯ ಫೇಸ್ ಶೀಲ್ಡ್ ಅನ್ನು ಒಮ್ಮೆ ಬಳಸಿದ ನಂತರ ಎಸೆಯುವ ಅಗತ್ಯವಿಲ್ಲ. ಈ ಫೇಸ್ ಶೀಲ್ಡ್ ಅನ್ನು ಪದೇ ಪದೇ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್: ಮರುಬಳಕೆಯ ಫೇಸ್ ಶೀಲ್ಡ್ ಬಿಡುಗಡೆಗೊಳಿಸಿದ ಹೆಲ್ಮೆಟ್ ತಯಾರಕ ಕಂಪನಿ

ಪ್ರತಿದಿನ ಹೊಸ ಫೇಸ್ ಶೀಲ್ಡ್‌ಗಳನ್ನು ಬಳಸಬೇಕಾಗುತ್ತದೆ. ಈ ಫೇಸ್ ಶೀಲ್ಡ್ ಅನ್ನು ಆಂಟಿಸೆಪ್ಟಿಕ್‌ನಿಂದ ಸರಿಯಾಗಿ ಸ್ವಚ್ವಗೊಳಿಸಿದ ನಂತರ ಮತ್ತೆ ಬಳಸಬಹುದೆಂದು ಮಾವೋಕ್ಸ್ ಹೇಳಿದೆ. ಪದೇ ಪದೇ ಸ್ವಚ್ವಗೊಳಿಸಿದರೂ ದೀರ್ಘಕಾಲದವರೆಗೆ ಈ ಫೇಸ್ ಶೀಲ್ಡ್ ಅನ್ನು ಬಳಸಬಹುದೆಂದು ಕಂಪನಿ ಹೇಳಿದೆ.

ಕರೋನಾ ವೈರಸ್: ಮರುಬಳಕೆಯ ಫೇಸ್ ಶೀಲ್ಡ್ ಬಿಡುಗಡೆಗೊಳಿಸಿದ ಹೆಲ್ಮೆಟ್ ತಯಾರಕ ಕಂಪನಿ

ಈ ಫೇಸ್ ಶೀಲ್ಡ್ ಅನ್ನು ಅಗ್ಗದ ಹಾಗೂ ಕೈಗೆಟುಕುವ ಬೆಲೆಯಲ್ಲಿ ದೊರೆಯುವಂತೆ ತಯಾರಿಸಲಾಗಿದೆ. ಈ ಫೇಸ್ ಶೀಲ್ಡ್‌ ಹೆಚ್ಚು ಕಾಲ ಬಾಳಿಕೆ ಬರಲಿ ಎಂಬ ಕಾರಣಕ್ಕೆ

ಪಾಲಿಕಾರ್ಬೊನೇಟ್ ವೈಸರ್ ಲೇಪನ ನೀಡಲಾಗಿದೆ. ಇದು ಫೇಸ್ ಶೀಲ್ಡ್ ಸ್ಕ್ರಾಚ್ ಆಗುದಂತೆ ತಡೆಯುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್: ಮರುಬಳಕೆಯ ಫೇಸ್ ಶೀಲ್ಡ್ ಬಿಡುಗಡೆಗೊಳಿಸಿದ ಹೆಲ್ಮೆಟ್ ತಯಾರಕ ಕಂಪನಿ

ಈ ಫೇಸ್ ಶೀಲ್ಡ್ ಅನ್ನು ತಲೆಯ ಗಾತ್ರಕ್ಕೆ ಹೊಂದಿಕೊಳ್ಳುವಂತೆ ತಯಾರಿಸಲಾಗಿದೆ. ಹೆಚ್ಚಿನ ಶಬ್ದದಿಂದ ಕಣ್ಣುಗಳಿಗೆ ಯಾವುದೇ ಹಾನಿಯಾಗದಂತೆ ಯುವಿ ಲೇಪನವನ್ನು ನೀಡಲಾಗಿದೆ. ಈ ಫೇಸ್ ಶೀಲ್ಡ್ ತಲೆನೋವು, ಕಣ್ಣಿನ ಕಿರಿಕಿರಿ ಹಾಗೂ ದೃಷ್ಟಿ ಅಸ್ವಸ್ಥತೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಈ ಫೇಸ್ ಶೀಲ್ಡ್ ಐಎಸ್‌ಐ ಗುಣಮಟ್ಟವನ್ನು ಹೊಂದಿದೆ.

ಕರೋನಾ ವೈರಸ್: ಮರುಬಳಕೆಯ ಫೇಸ್ ಶೀಲ್ಡ್ ಬಿಡುಗಡೆಗೊಳಿಸಿದ ಹೆಲ್ಮೆಟ್ ತಯಾರಕ ಕಂಪನಿ

ಈ ಫೇಸ್ ಶೀಲ್ಡ್ ಅನ್ನು ಮುಖವನ್ನು ಪೂರ್ತಿಯಾಗಿ ಮುಚ್ಚುವಂತೆ ಹಾಗೂ ಸೋಂಕಿನಿಂದ ರಕ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಫೇಸ್ ಶೀಲ್ಡ್ ಅನ್ನು ಸ್ವಚ್ವಗೊಳಿಸಲು ಕಂಪನಿಯು ಹಲವು ಸಲಹೆಗಳನ್ನು ನೀಡಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್: ಮರುಬಳಕೆಯ ಫೇಸ್ ಶೀಲ್ಡ್ ಬಿಡುಗಡೆಗೊಳಿಸಿದ ಹೆಲ್ಮೆಟ್ ತಯಾರಕ ಕಂಪನಿ

ಸೋಪ್ ದ್ರಾವಣ ಅಥವಾ ಐಸೊಪ್ರೊಪಿಲ್ ಆಲ್ಕೋಹಾಲ್‌ನಂತಹ ಆಂಟಿಸೆಪ್ಟಿಕ್ ದ್ರಾವಣದಲ್ಲಿ ಕನಿಷ್ಟ 5 ನಿಮಿಷ ಈ ಫೇಸ್ ಶೀಲ್ಡ್ ಅನ್ನು ನೆನೆಸಬೇಕು. ನಂತರ ಬಟ್ಟೆ ಅಥವಾ ಕಾಗದದಿಂದ ಸ್ವಚ್ವಗೊಳಿಸಬೇಕು. ಇದರಿಂದ ಈ ಫೇಸ್ ಶೀಲ್ಡ್ ಸೋಂಕಿಗೆ ಒಳಗಾಗಿದ್ದರೂ ನಮಗೆ ಸೋಂಕು ಹತ್ತದಂತೆ ತಡೆಯುತ್ತದೆ.

Most Read Articles

Kannada
English summary
Mavox revealed reusable Face Shield. Read in Kannada.
Story first published: Wednesday, April 29, 2020, 15:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X