ರೈಲಿನ 'ಹಾರನ್' ಬಗ್ಗೆ ಈ ವಿಚಾರ ನಿಮಗೆ ಖಂಡಿತ ಗೊತ್ತಿರೋದಿಲ್ಲ !!
ರೈಲು ಎಂಬುದು ಪ್ರತಿಯೊಬ್ಬ ಭಾರತೀಯನ ಪ್ರಯಾಣ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇಂತಹ ರೈಲಿನ ಬಗ್ಗೆ ನಮಗೆ ಎಷ್ಟೋ ವಿಚಾರಗಳು ತಿಳಿದಿರುವುದಿಲ್ಲ. ಇಂತಹ ವಿಚಾರದಲ್ಲಿ ರೈಲಿನ ಹಾರನ್ ಕೂಡ ಒಂದು.
ರೈಲು ಎಂಬುದು ಪ್ರತಿಯೊಬ್ಬ ಭಾರತೀಯನ ಪ್ರಯಾಣ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇಂತಹ ರೈಲಿನ ಬಗ್ಗೆ ನಮಗೆ ಎಷ್ಟೋ ವಿಚಾರಗಳು ತಿಳಿದಿರುವುದಿಲ್ಲ. ಇಂತಹ ವಿಚಾರದಲ್ಲಿ ರೈಲಿನ ಹಾರನ್ ಕೂಡ ಒಂದು.

ಸಾಕಷ್ಟು ಬಾರಿ ರೈಲಿನ ಹಾರನ್ ಕೇಳಿಸಿಕೊಂಡು ಕಿರಿ ಕಿರಿ ಅನುಭವಿಸಿ, ಅದನ್ನು ಮರೆತು ಬಿಡುತ್ತೇವೆ. ಭಾರತದಲ್ಲಿರುವ ಸಾಕಷ್ಟು ಹಳೆಯ ರೈಲುಗಳಲ್ಲಿ ಈಗಲೂ ಸಹ ಹಾರನ್ ಇರುತ್ತದೆ. ಅದೇ ಹೊಸ ರೈಲಾದರೆ, ಅದರ ಹಾರನ್ ಬೇರೆ ರೀತಿ ಇರುತ್ತದೆ. ಈ ಹಾರನ್ ಬಗ್ಗೆ ಹೇಳಲು ಹೊರಟರೆ, ಅದರಲ್ಲೇನಿದೆ ವಿಶೇಷ ಎಂದು ಕೇಳುವುದುಂಟು. ಆದ್ರೆ, ಹಾರನ್ ಬಗ್ಗೆ ಈ ವಿಚಾರಗಳನ್ನು ತಿಳಿದುಕೊಂಡರೆ ಖಂಡಿತ ಅಚ್ಚರಿ ಪಡ್ತೀರಿ... ಮುಂದೆ ಓದಿ.

1. ಒಮ್ಮೆ ಹಾರನ್ ಮೊಳಗಿದರೆ :
ಯಾವುದಾದರೂ ಸ್ಟೇಷನ್‌ನಲ್ಲಿ ನಿಲ್ಲಿಸಿ ಮತ್ತೆ ಮುಂದಿನ ಸ್ಟೇಷನ್‌ಗೆ ಹೊರಡುತ್ತಿದ್ದರೆ ಟ್ರೈನ್ ಒಂದು ಸಲ ಶಾರ್ಟ್ ಹಾರನ್ ಹಾಕುತ್ತದೆ. ಟ್ರೈನ್ ಹೋರಾಡಲು ನಿದ್ಧವಾಗಿ ನಿಂತಿದೆ ಎಂದರ್ಥ.

2. ಎರಡು ಬಾರಿ ಹಾರನ್ ಮೊಳಗಿದರೆ :
ಕೆಲವೊಮ್ಮೆ, ರೈಲು ಇಂಜಿನ್ ಚಾಲಕ ಸಂಕೇತವಾಗಿ ಎರಡು ಬಾರಿ ಕಡಿಮೆ ಹಾರನ್ ಮೊಳಗಿಸುತ್ತಾರೆ. ಇದರಿಂದ ರೈಲಿನ ಗಾರ್ಡ್ ಸಿಗ್ನಲ್ ಕ್ಲಿಯರ್ ಆಗಿರುವುದೇ ? ಅತ್ವ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೋಟಾರ್ ಮ್ಯಾನ್‌ಗೆ ಹೇಳಲು ಬಳಸುತ್ತಾರೆ.

3. ಮೂರು ಬಾರಿ ಶಾರ್ಟ್ ಹಾರನ್ ಮೊಳಗಿದರೆ :
ರೈಲು ಮೂರು ಬಾರಿ ಶಾರ್ಟ್ ಹಾರನ್ ಮೊಳಗಿಸಿದೆ ಎಂದರೆ ರೈಲು ಚಾಲಕನ ಕಂಟ್ರೋಲ್ ತಪ್ಪಿದೆ ಎಂದರ್ಥ. ಇದನ್ನು ಅರಿತ ಗಾರ್ಡ್ ತನ್ನ ಬಳಿ ಇರುವಂತಹ ವ್ಯಾಕ್ಯೂಮ್ ಬ್ರೇಕ್ ಹಾಗುವ ಮೂಲಕ ಟ್ರೇನ್ ನಿಲ್ಲಿಸುತ್ತಾನೆ.

4. ನಾಲ್ಕು ಬಾರಿ ಶಾರ್ಟ್ ಹಾರನ್ :
ರೈಲು ನಾಲ್ಕು ಸಲ ಶಾರ್ಟ್ ಹಾರನ್ ಮೊಳಗಿಸಿದರೆ ಆ ರೈಲಿನಲ್ಲಿ ಏನೋ ತಾಂತ್ರಿಕ ಸಮಸ್ಯೆ ಇದೆ ಎಂದರ್ಥ. ಹಾಗಾಗಿ ರೈಲು ಮುಂದೆ ಚಲಿಸಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು.

5. ಒಂದು ಲಾಂಗ್, ಒಂದು ಶಾರ್ಟ್ ಹಾರನ್ :
ರೈಲು ಈ ರೀತಿ ಹಾರನ್ ಮೊಳಗಿಸಿದೆ ಎಂದರೆ ಗಾರ್ಡ್ ಬ್ರೇಕ್ ಪೈಪ್ ಸಿಸ್ಟಮನ್ನು ಸೆಟ್ ಮಾಡಬೇಕಾಗುತ್ತದೆ. ಆ ಬಳಿಕ ಮೋಟಾರ್ ಮ್ಯಾನ್ ರೈಲು ಇಂಜಿನನ್ನು ಆನ್ ಮಾಡುತ್ತಾನೆ.

6. ಎರಡು ಲಾಂಗ್, ಎರಡು ಶಾರ್ಟ್ ಹಾರನ್ :
ಈ ಹಾರನ್‌ನಿಂದ ಗಾರ್ಡ್ ರೈಲು ಇಂಜಿನನ್ನು ತನ್ನ ಅಧೀನಕ್ಕೆ ಪಡೆಯುತ್ತಾನೆ. ರೈಲು ಮೋಟಾರ್ ಮ್ಯಾನ್ ಕಂಟ್ರೋಲ್‌ನಲ್ಲಿ ಇಲ್ಲ ಎಂದು ತಿಳಿದುಕೊಳ್ಳಬೇಕು.

7. ಕಂಟಿನ್ಯೂ ಆಗಿ ಹಾರನ್ :
ರೈಲು ಕಂಟಿನ್ಯೂ ಆಗಿ ಹಾರನ್ ಮೋಳಗಿಸುತ್ತಿದ್ದರೆ ಆ ರೈಲು ಆ ಸ್ಟೇಷನ್‌ನಲ್ಲಿ ನಿಲ್ಲಲ್ಲ ಎಂದು ತಿಳಿದುಕೊಳ್ಳಬೇಕು.

8. ಎರಡು ಸಲ ನಿಲ್ಲಿಸಿ ಎರಡು ಹಾರನ್ ಮೊಳಗಿದರೆ :
ರೈಲು ರೈಲ್ವೆ ಕ್ರಾಸಿಂಗ್ ದಾಡುತ್ತಿದೆ ಎಂದು ತಿಳಿದುಕೊಳ್ಳಬೇಕು.

ಇನ್ಮೇಲೆ, ರೈಲು ಹಾರ್ನ್ ಮಾಡಿದಾಗ ಕೇವಲ ಕಿರಿ ಕಿರಿ ಅನುಭವಿಸುವುದಲ್ಲದೆ, ಎಷ್ಟು ಭಾರಿ ಹಾರ್ನ್ ಮಾಡುತ್ತಿದೆ ? ಈ ಹಾರ್ನ್ ಅರ್ಥವೇನು ? ಎಂಬುದನ್ನು ಕಂಡುಕೊಳ್ಳಿ. ಈ ವಿಚಾರ ಎಷ್ಟೋ ಜನಕ್ಕೆ ತಿಳಿದಿರುವುದಿಲ್ಲ... ಈ ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.


Click it and Unblock the Notifications








