ಹಳೇ ಸ್ವಿಫ್ಟ್ ಕಾರನ್ನು ಲ್ಯಾಂಬೋರ್ಗಿನಿಯಂತೆ ಮಾಡಿಫೈಗೊಳಿಸಿ ಅಸ್ಸಾಂ ಸಿಎಂಗೆ ಗಿಫ್ಟ್ ನೀಡಿದ ಮೆಕ್ಯಾನಿಕ್

ಇಟಾಲಿಯನ್ ಸೂಪರ್‌ಕಾರ್ ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ತನ್ನ ಸರಣಿಯಲ್ಲಿ ಹಲವಾರು ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಐಷಾರಾಮಿ ಲ್ಯಾಂಬೊರ್ಗಿನಿ ಕಾರುಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಅಲ್ಲದೇ ಈ ಲ್ಯಾಂಬೊರ್ಗಿನಿ ಕಾರುಗಳಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಭಾರತದಲ್ಲಿ ಗರಿಷ್ಠ ಲ್ಯಾಂಬೋರ್ಗಿನಿ ಕಾರುಗಳು ಬೆಂಗಳೂರಲ್ಲಿ ಮಾರಾಟವಾಗುತ್ತಿದೆ.

ಅಸ್ಸಾಂ ಮೂಲದ ವ್ಯಕ್ತಿಯೊಬ್ಬರು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಮಾಡಿಫೈಗೊಳಿಸಿದ ಲಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಿಲ್ಲೆಯ ಭಂಗಾ ಬಜಾರ್ ಪ್ರದೇಶದಲ್ಲಿ ಗ್ಯಾರೇಜ್ ನಡೆಸುತ್ತಿರುವ 31 ವರ್ಷದ ನೂರುಲ್ ಹಕ್ ಅವರು ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ಕಾರಿನಂತೆ ಮಾಡಿಫೈಗೊಳಿಸಲು ನಾಲ್ಕು ತಿಂಗಳ ಕಾಲ ಅವಧಿಯನ್ನು ತೆಗೆದುಕೊಂಡಿದ್ದಾರೆ. ನೂರುಲ್ ಹಕ್ ಅವರು ಯಾವಾಗಲೂ ಲಂಬೋರ್ಗಿನಿ ಓಡಿಸಲು ಬಯಸಿದ್ದರು' ಎಂಬ ಕಾರಣಕ್ಕಾಗಿ ಈ ಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಹಳೆಯ ಮಾರುತಿ ಸುಜುಕಿ ಸ್ವಿಫ್ಟ್‌ನಿಂದ ಅಭಿವೃದ್ಧಿಪಡಿಸಿದ ಕಸ್ಟಮ್ ಮಾಡಿದ ಲ್ಯಾಂಬೊರ್ಗಿನಿ ಕಾರ್ ಲುಕ್ ಹೊಂದಿರುವ ಕಾರ್ ಅನ್ನು ಮೆಕ್ಯಾನಿಕ್ ನೂರುಲ್ ಹಕ್ ಅವರಿಂದ ಉಡುಗೊರೆಯಾಗಿ ಸ್ವೀಕರಿಸಿದ್ದಾರೆ. ಅಸ್ಸಾಂ ಸಿಎಂ ಟ್ವಿಟರ್ ನಲ್ಲಿ ಕರೀಮ್‌ಗಂಜ್‌ನ ಅನಿಪುರ್‌ನ ನವೋದ್ಯಮಿ ನೂರುಲ್ ಹಕ್ ಅವರಿಂದ ಮಾರ್ಪಡಿಸಿದ ಲಂಬೋರ್ಗಿನಿ ಲುಕ್‌ ಹೊಂದಿರುವ ಕಾರನ್ನು ಸ್ವೀಕರಿಸಲು ಸಂತೋಷವಾಗಿದೆ. ಅವರ ಎಲ್ಲಾ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಕರೀಮ್‌ಗಂಜ್‌ನ ಕಾರ್ ಮೆಕ್ಯಾನಿಕ್ ನೂರುಲ್ ಹಕ್ ಅವರು ತಮ್ಮ ಕಸ್ಟಮ್ ಮಾಡಿದ ಲ್ಯಾಂಬೊರ್ಗಿನಿ ಕಾರನ್ನು ಹಳೆಯ ಮಾರುತಿ ಸುಜುಕಿ ಸ್ವಿಫ್ಟ್‌ನಿಂದ ಅಭಿವೃದ್ಧಿಪಡಿಸಿದ್ದಾರೆ, ಇದನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಉಡುಗೊರೆಯಾಗಿ ನೀಡಲು ಡಿಸೆಂಬರ್ 2, ಶುಕ್ರವಾರ ದಂದು ಗುವಾಹಟಿಯಲ್ಲಿ ಬಂದರು. ನೂರುಲ್ ಹಕ್ ಅವರು ಹಳೆಯ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಲ್ಯಾಂಬೋರ್ಗಿನಿ ಕಾರಿನಂತೆ ಮಾಡಿಫೈಗೊಳಿಸಲು ನಾಲ್ಕು ತಿಂಗಳ ಕಾಲದ ಅವಧಿಯನ್ನು ತೆಗೆದುಕೊಂಡಿದ್ದಾರೆ.

ಸ್ವಂತ ಗ್ಯಾರೇಜ್‌ನಲ್ಲಿ ಇವರು ಹಳೆಯ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಲ್ಯಾಂಬೋರ್ಗಿನಿ ಕಾರನ್ನು ಮಾಡಿಫೈಗೊಳಿಸಲು ಸುಮಾರು ರೂ,10.20 ಲಕ್ಷ. ಖರ್ಚು ಮಾಡಿದ್ದಾರೆ. ಹಕ್ ಅವರು ಹಳೆಯ ಮಾರುತಿ ಸ್ವಿಫ್ಟ್ ಅನ್ನು ಐಷಾರಾಮಿ ಆವೃತ್ತಿಯನ್ನಾಗಿ ಮಾರ್ಪಡಿಸಿದರು ಮತ್ತು ಅದರ ಲ್ಯಾಂಬೋರ್ಗಿನಿಯನ್ನು ತಯಾರಿಸಿದರು ಮತ್ತು ಇತ್ತೀಚೆಗೆ ಶರ್ಮಾಗೆ ವಾಹನವನ್ನು ಉಡುಗೊರೆಯಾಗಿ ನೀಡಲು ಗುವಾಹಟಿ ತಲುಪಿದರು. ಅನಿಪುರದಿಂದ ಈ ಕಾರಿನಲ್ಲೇ ನೂರುಲ್ ಹಕ್ ಗುವ್ಹಾಟಿಗೆ ಆಗಮಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಆಹ್ವಾನ ನೀಡಿದ್ದಾರೆ.

ನೂರುಲ್ ಹಕ್ ಆಹ್ವಾನ ಸ್ವೀಕರಿಸಿದ ಹಿಮಂತ ಬಿಸ್ವಾ ಶರ್ಮಾ ಆಗಮಿಸಿದ್ದಾರೆ. ಕಾರು ನೋಡಿ ಅಚ್ಚರಿಪಟ್ಟು ಯುವ ಮೆಕ್ಯಾನಿಕ್ ಪ್ರತಿಭೆಯನ್ನು ಶ್ಲಾಘಿಸಿದರು. ಇನ್ನು ಕ್ಯಾಚಾರ್ ಜಿಲ್ಲೆಯ ಆಡಳಿತ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರು ಸಿಲ್ಚಾರ್‌ನಲ್ಲಿ ಹಕ್ ಅವರ ಲಂಬೋರ್ಗಿನಿಯನ್ನು ನೋಡಿದ್ದರು. ಕಳೆದ ವರ್ಷ ಕೋವಿಡ್-ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ಅನ್ನು ಲ್ಯಾಂಬೊರ್ಗಿನಿಯ ಪ್ರತಿರೂಪವಾಗಿ ಪರಿವರ್ತಿಸುವ ಆಲೋಚನೆಯು ನೂರುಲ್ ಹಕ್ ಮನಸ್ಸಿಗೆ ಬಂತು.

ನೂರುಲ್ ಹಕ್ ಅವರು ಸೆಕೆಂಡ್ ಹ್ಯಾಂಡ್ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಖರೀದಿಸಿದರು ಮತ್ತು ಅದರ ಬಾಡಿ ಫ್ರೇಮ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದರು. ವಿನ್ಯಾಸವನ್ನೂ ಪೂರ್ಣಗೊಳಿಸಿ, ವೆಲ್ಡಿಂಗ್ ಕೆಲಸ ಆರಂಭಿಸಿದ್ದಾನೆ. ಮಾರುತಿ ಕಾರಿನ ಎಂಜಿನ್, ಚಾಸಿಸ್ ಗಳನ್ನು ಬಳಸಿ ಅತ್ಯಾಕರ್ಷಕ ಕಾರನ್ನು ನಿರ್ಮಾಣ ಮಾಡಿದ್ದಾರೆ. ಸಂಪೂರ್ಣ ಕಾರನ್ನು ನರೂಲ್ ಹಕ್ ತಮ್ಮ ಗ್ರ್ಯಾರೇಜ್ ನಲ್ಲೇ ನಿರ್ಮಿಸಿದ್ದಾನೆ. ಅವರು ಯೂಟ್ಯೂಬ್ ವೀಡಿಯೊಗಳ ಸಹಾಯದಿಂದ ಲಂಬೋರ್ಗಿನಿ ವಾಹನದ ಭಾಗಗಳನ್ನು ನಿರ್ಮಿಸಲು ಪ್ರಾರಂಭಿಸಿದರು.

ಕೆಲವು ಕಚ್ಚಾ ವಸ್ತುಗಳನ್ನು ಖರೀದಿಸಿದರು. ಒಟ್ಟಾರೆಯಾಗಿ ಈ ಯೋಜನಗೆ ನೂರುಲ್ ಹಕ್ ಅವರು ರೂ.10 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದರು. ಇವರ ಹೊಸ ಮಾಡಿಫೈ ಲ್ಯಾಂಬೋರ್ಗಿನಿ ಕಾರಿನ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ನೂರುಲ್ ಹಕ್ ಅವರು ಮುಂದಿನ ಇನ್ನೊಂದು ಕಾರನ್ನು ಫೆರಾರಿಗೆ ಮಾರ್ಪಡಿಸಲು ಯೋಜಿಸುತ್ತಿದ್ದಾರೆ. ಸರ್ಕಾರ ಸಹಾಯ ನೀಡಿದರೆ ಇಂತಹ ಇನ್ನಷ್ಟು ಯೋಜನೆಗಳನ್ನು ಮಾಡುತ್ತೇನೆ ಎಂದು ಹಕ್ ಎಎನ್‌ಐಗೆ ತಿಳಿಸಿದ್ದಾರೆ.

Most Read Articles

Kannada
English summary
Mechanic gifts modified like a lamborghini car to assam cm
Story first published: Monday, December 5, 2022, 13:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X