ಡೀಲರ್‌ಗೆ ಷಾಕ್! ರೇಂಜ್ ರೋವರ್‌ನಲ್ಲಿ ಬಂದು ಬೆಂಝ್ ಖರೀದಿ... ದುಬಾರಿ ಕಾರುಗಳಲ್ಲಿ ಕುಟುಂಬಸ್ಥರ ಎಂಟ್ರಿ!

ಮೇಘಾಲಯದ ವಿಧಾನಸಭೆ ಸದಸ್ಯರಾಗಿರುವ ಎನ್ಗೈಟ್ಲಾಂಗ್ ಧಾರ್ ಅವರು ಈಶಾನ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಇತ್ತೀಚೆಗೆ ರೇಂಜ್ ರೋವರ್ ಸ್ಪೋರ್ಟ್ ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಡೀಲರ್‌ಶಿಪ್‌ಗೆ ಬಂದು ಮೇಬ್ಯಾಕ್ ಎಸ್ 680 ಐಷಾರಾಮಿ ಸೆಡಾನ್ ಕಾರನ್ನು ಡೆಲಿವರಿ ಪಡೆದ ವಿಡಿಯೋ ಈಗ ವೈರಲ್ ಆಗಿದೆ.

ಈ ವೀಡಿಯೊದಲ್ಲಿ, ಎನ್ಗೈಟ್ಲಾಂಗ್ ಧಾರ್ ಅವರು ರೇಂಜ್ ರೋವರ್ ಸ್ಪೋರ್ಟ್ ನಲ್ಲಿ ಬಂದರೆ ಅವರ ಹಿಂದೆಯೇ ಕುಟುಂಬ ಕೂಡ ಬರುತ್ತದೆ. ಎಲ್ಲರೂ ದುಬಾರಿ ಮತ್ತು ಐಷಾರಾಮಿ ಕಾರುಗಳಲ್ಲಿ ಬಂದಿಳಿಯುವುದನ್ನು ನೋಡಬಹುದು. ಅವರ ಕುಟುಂಬ ಸದಸ್ಯರು ಲ್ಯಾಂಬೊರ್ಘಿನಿ ಹುರಾಕನ್, ಬಿಎಂಡಬ್ಲ್ಯು ಝಡ್ 4 ಮತ್ತು ಟೊಯೊಟಾ ಫಾರ್ಚೂನರ್ ನಂತಹ ಕಾರುಗಳಲ್ಲಿ ಬರುತ್ತಾರೆ.

meghalaya-politician-arrives-in-range-rover-buys-maybach-s680-sedan

ಡೀಲರ್‌ಶಿಪ್‌ಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಅವರನ್ನು ಸ್ವಾಗತಿಸುತ್ತಾರೆ. ಎಲ್ಲಾ ಕಾಗದ ಪತ್ರಗಳೊಂದಿಗಿನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಎನ್ಗೈಟ್ಲಾಂಗ್ (Ngaitlang Dhar) ಅವರು ಹೊಚ್ಚ ಹೊಸ ಮರ್ಸಿಡಿಸ್ - ಮೇಬ್ಯಾಕ್ ಎಸ್ 680 ಐಷಾರಾಮಿ ಸೆಡಾನ್ ಅನ್ನು ಡೆಲಿವರಿ ಪಡೆದರು. ಇಲ್ಲಿ ಕಂಡುಬರುವ ಎಸ್ 680 ಪ್ರಸ್ತುತ ತಲೆಮಾರಿನ ಎಸ್-ಕ್ಲಾಸ್ ಅನ್ನು ಆಧರಿಸಿದೆ.

ಮರ್ಸಿಡಿಸ್ ಮೇಬ್ಯಾಕ್ ಎಸ್ 680 ವಿಶೇಷತೆಗಳು: ಮರ್ಸಿಡಿಸ್ ಮೇಬ್ಯಾಕ್‌ಗಳು ಇತ್ತೀಚೆಗೆ ಭಾರತದಲ್ಲಿ ಖರೀದಿದಾರರನ್ನು ಹೆಚ್ಚಾಗಿಸಿಕೊಂಡಿವೆ. ಅನೇಕ ಭಾರತೀಯ ಸೆಲೆಬ್ರಿಟಿಗಳು ಮತ್ತು ಶ್ರೀಮಂತ ಉದ್ಯಮಿಗಳು ಮೇಬ್ಯಾಕ್ ಎಸ್‌ಯುವಿಗಳನ್ನು ಹೊಂದಿದ್ದಾರೆ. ಹೊಸ ಮೇಬ್ಯಾಕ್ ಎಸ್ 680 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 3.43 ಕೋಟಿಗಳಾಗಿದೆ.

meghalaya-politician-arrives-in-range-rover-buys-maybach-s680-sedan

ಮರ್ಸಿಡಿಸ್ ಎಸ್ 680 ನಲ್ಲಿ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಸೀಟುಗಳು, ಹಿಂಭಾಗದ ಸೀಟ್ ಮನರಂಜನಾ ಸ್ಕ್ರೀನ್‌ಗಳು, ಎಲ್ಲಾ ಆಸನಗಳಿಗೆ ರೆಕ್ಲೈನರ್ ಫಂಕ್ಷನ್, ತಂಪು ಮತ್ತು ಬಿಸಿಯಾದ ಆಸನಗಳೊಂದಿಗೆ ಮಸಾಜ್ ಫಂಕ್ಷನ್ ಇತ್ಯಾದಿಗಳನ್ನು ಒಳಗೊಂಡಿದೆ. ಈ ಕಾರಿನ ಹೆಚ್ಚಿನ ಕಾರ್ಯಗಳನ್ನು ಹಿಂದಿನ ಸೀಟಿನಿಂದಲೂ ನಿಯಂತ್ರಿಸಬಹುದು.

ಇದರಲ್ಲಿ ಬಳಸಲಾದ ಎಂಜಿನ್‌ಗೆ 9 - ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಬೃಹತ್ ಸೆಡಾನ್ ರಿಯರ್ ವೀಲ್ ಸ್ಟೀರಿಂಗ್ ಅನ್ನು ಸಹ ಪಡೆಯುತ್ತದೆ. ಮರ್ಸಿಡಿಸ್ ಮೇಬ್ಯಾಕ್ ಎಸ್ 680 ಕಾರಿನಲ್ಲಿ 6.0 ಲೀಟರ್ ಟರ್ಬೋಚಾರ್ಜ್ಡ್ ವಿ12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 610 ಬಿಹೆಚ್‌ಪಿ ಪವರ್ ಹಾಗೂ 900 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

meghalaya-politician-arrives-in-range-rover-buys-maybach-s680-sedan

ಸಾಮಾನ್ಯ ಎಸ್ - ಕ್ಲಾಸ್‌ಗೆ ಹೋಲಿಸಿದರೆ ಇದು ಐಷಾರಾಮಿಯಾಗಿ ಬರುತ್ತದೆ. ಇದು ಸುಮಾರು 5.5 ಮೀಟರ್ ಉದ್ದದೊಂದಿಗೆ, ಮೇಬ್ಯಾಕ್ ಎಸ್ 680 ಪ್ರಸ್ತುತ ನಮ್ಮ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಅತಿ ಉದ್ದದ ಕಾರುಗಳಲ್ಲಿ ಒಂದಾಗಿದೆ. ಇದು ಮರ್ಸಿಡಿಸ್ ಬೆಂಝ್‌ನ "ಡೋರ್ ಮೆನ್" ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುತ್ತದೆ.

ಈ ನವೀನ ವೈಶಿಷ್ಟ್ಯವು, ಪ್ರಯಾಣಿಕರು ಕೇವಲ ಕೈ ಸನ್ನೆ ಮಾಡಿದ್ರೆ ಸಾಕು ಸ್ವಯಂಚಾಲಿತವಾಗಿ ಬಾಗಿಲು ಮುಚ್ಚಿಕೊಳ್ಳುತ್ತವೆ. ಇದಲ್ಲದೆ, ಹಿಂಭಾಗದ ಬಾಗಿಲುಗಳನ್ನು ನಿರ್ವಹಿಸಲು ಚಾಲಕನಿಗೆ ಮೀಸಲಾದ ಬಟನ್ ಅನ್ನು ಅಳವಡಿಸಲಾಗಿದೆ. ಒಟ್ಟಾರೆ ಈ ಮರ್ಸಿಡಿಸ್ ಎಸ್ 680 ಕಾರಿನಲ್ಲಿ ಪ್ರಯಾಣವು ಹಡಗಿನಲ್ಲಿ ಪ್ರಯಾಣಿಸುವ ಅನುಭವವನ್ನು ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 3, 2024, 12:45 [IST]
English summary
Meghalaya politician arrives in range rover buys maybach s680 sedan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+