ವಿಚಿತ್ರವಾದರೂ ಸತ್ಯ! ನೆಚ್ಚಿನ ಕಾರಿನೊಂದಿಗೆ ಸಮಾಧಿಯಾದ ರಾಜಕಾರಣಿ..

ರಾಜಕಾರಣಿಗಳು ಜನಪ್ರಿಯತೆಯ ಜೊತೆಗೆ ವಿವಾದಗಳನ್ನು ಸಹ ಹೊಂದಿರುತ್ತಾರೆ. ಇದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಪ್ರಪಂಚದ ಬಹುತೇಕ ದೇಶಗಳಲ್ಲಿಯೂ ಇದೇ ಪರಿಸ್ಥಿತಿಯಿದೆ. ಇತ್ತೀಚಿಗೆ ಮೃತಪಟ್ಟ ರಾಜಕಾರಣಿಯೊಬ್ಬರ ಅಂತ್ಯಕ್ರಿಯೆಯನ್ನು ಬಹಳ ವಿಭಿನ್ನವಾಗಿ ನಡೆಸಲಾಗಿದೆ.

ನೆಚ್ಚಿನ ಕಾರಿನೊಂದಿಗೆ ಸಮಾಧಿಯಾದ ರಾಜಕಾರಣಿ..!

ಅಂದ ಹಾಗೆ ಈ ಘಟನೆ ನಡೆದಿರುವುದು ದಕ್ಷಿಣ ಆಫ್ರಿಕಾದಲ್ಲಿ. ತ್ಸೆಕೆಡೆ ಬಫ್ಟನ್ ಪಿಟ್ಸೊ ದಕ್ಷಿಣ ಆಫ್ರಿಕಾದ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರು . ವೃದ್ಧಾಪ್ಯದಿಂದಾಗಿ ಅವರು ಇತ್ತೀಚಿಗೆ ನಿಧನರಾದರು. ಅವರ ಅಂತ್ಯಕ್ರಿಯೆಯ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ದುಬಾರಿ ಬೆಲೆಯ ಬೆಂಝ್ ಕಾರಿನೊಂದಿಗೆ ಅವರ ಮೃತ ದೇಹವನ್ನು ಸಮಾಧಿ ಮಾಡಲಾಗಿದೆ.

ನೆಚ್ಚಿನ ಕಾರಿನೊಂದಿಗೆ ಸಮಾಧಿಯಾದ ರಾಜಕಾರಣಿ..!

ತಾವು ಸಾಯುವ ಮೊದಲು ಇದು ತಮ್ಮ ಕೊನೆಯ ಆಸೆಯೆಂದು ಅವರು ತಮ್ಮ ಸಹಾಯಕರು ಹಾಗೂ ಕುಟುಂಬದವರ ಬಳಿ ತಿಳಿಸಿದ್ದರು. ಅವರ ಕೊನೆಯ ಆಸೆಯಂತೆ ಈ ತಿಂಗಳ ಆರಂಭದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಅವರ ನೆಚ್ಚಿನ ಕಾರಿನೊಂದಿಗೆ ಸಮಾಧಿ ಮಾಡಲಾಯಿತು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ನೆಚ್ಚಿನ ಕಾರಿನೊಂದಿಗೆ ಸಮಾಧಿಯಾದ ರಾಜಕಾರಣಿ..!

ತ್ಸೆಕೆಡೆ ಬಫ್ಟನ್ ಪಿಟ್ಸೊ ಕೇವಲ ರಾಜಕಾರಣಿ ಮಾತ್ರವಲ್ಲದೆ ಉದ್ಯಮಿಯೂ ಆಗಿದ್ದರು. ಈ ಕಾರಣಕ್ಕೆ ಅವರು ದುಬಾರಿ ಬೆಲೆಯ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದರು. ಆದರೆ ಮರ್ಸಿಡಿಸ್ ಬೆಂಝ್ ಇ500 ಅವರ ನೆಚ್ಚಿನ ಕಾರ್ ಆಗಿತ್ತು.

ನೆಚ್ಚಿನ ಕಾರಿನೊಂದಿಗೆ ಸಮಾಧಿಯಾದ ರಾಜಕಾರಣಿ..!

ಈ ಕಾರಣಕ್ಕೆ ಅವರ ಸಂಬಂಧಿಕರು ಅವರ ಅಂತ್ಯಕ್ರಿಯೆಯನ್ನು ಮರ್ಸಿಡಿಸ್ ಬೆಂಝ್ ಕಾರಿನೊಂದಿಗೆ ನೆರವೇರಿಸಿದ್ದಾರೆ. ದಕ್ಷಿಣ ಆಫ್ರಿಕಾ ಆರ್ಥಿಕ ಕುಸಿತವನ್ನು ಎದುರಿಸುತ್ತಿದ್ದ ಕಾರಣ ಅವರು ತಮ್ಮ ಬಳಿಯಿದ್ದ ಎಲ್ಲಾ ದುಬಾರಿ ಬೆಲೆಯ ಕಾರುಗಳನ್ನು ಮಾರಾಟ ಮಾಡಿದ್ದರು ಎಂದು ಹೇಳಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ನೆಚ್ಚಿನ ಕಾರಿನೊಂದಿಗೆ ಸಮಾಧಿಯಾದ ರಾಜಕಾರಣಿ..!

ಕೊನೆಗೆ ಅವರ ಬಳಿ ಮರ್ಸಿಡಿಸ್ ಬೆಂಜ್ ಇ -500 ಕಾರು ಮಾತ್ರ ಉಳಿದಿತ್ತು. ಈ ದುಬಾರಿ ಕಾರಿನಲ್ಲಿ ತ್ಸೆಕೆಡೆ ಬಫ್ಟನ್ ಪಿಟ್ಸೊ ಅವರ ದೇಹವನ್ನಿಟ್ಟು ಅಂತ್ಯಕ್ರಿಯೆ ನಡೆಸಲಾಯಿತು. ಸಾಮಾನ್ಯವಾಗಿ ಯಾರಾದರೂ ಗಣ್ಯ ವ್ಯಕ್ತಿಗಳು ಮೃತರಾದರೆ ಮರದ ಬಾಕ್ಸ್‌ನಲ್ಲಿಟ್ಟು ಅಂತ್ಯಕ್ರಿಯೆ ನಡೆಸಲಾಗುತ್ತದೆ.

ನೆಚ್ಚಿನ ಕಾರಿನೊಂದಿಗೆ ಸಮಾಧಿಯಾದ ರಾಜಕಾರಣಿ..!

ತ್ಸೆಕೆಡೆ ಬಫ್ಟನ್ ಪಿಟ್ಸೊ ಅವರು ಈ ಕಾರ್ ಅನ್ನು 1990ರಲ್ಲಿ ಖರೀದಿಸಿದ್ದರು. ಅದೂ ಸಹ ಸೆಕೆಂಡ್ ಹ್ಯಾಂಡ್‌ ಕಾರ್ ಆಗಿತ್ತು ಎಂಬುದು ವಿಶೇಷ. ಅಂದಿನಿಂದ ಈ ಕಾರು ಅವರ ನೆಚ್ಚಿನ ಕಾರ್ ಆಗಿತ್ತು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ನೆಚ್ಚಿನ ಕಾರಿನೊಂದಿಗೆ ಸಮಾಧಿಯಾದ ರಾಜಕಾರಣಿ..!

ಅವರು ಈ ಕಾರಿನಲ್ಲಿ ಹೆಚ್ಚು ಸಂಚರಿಸುತ್ತಿದ್ದರು. ಕರೋನಾ ವೈರಸ್‌ನಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ನೆಚ್ಚಿನ ಕಾರಿನೊಂದಿಗೆ ಸಮಾಧಿಯಾದ ರಾಜಕಾರಣಿ..!

ಈ ಕಾರಣಕ್ಕೆ ತ್ಸೆಕೆಡೆ ಬಫ್ಟನ್ ಪಿಟ್ಸೊ ಅವರ ಸಂಬಂಧಿಕರು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಐದು ವರ್ಷದ ಹಿಂದೆ ಇದೇ ರೀತಿಯ ಘಟನೆಯೊಂದು ನೈಜೀರಿಯಾದಲ್ಲಿ ನಡೆದಿತ್ತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ನೈಜೀರಿಯಾ ದೇಶದ ಉದ್ಯಮಿಯೊಬ್ಬರು ನಿಧನರಾಗಿದ್ದ ತಮ್ಮ ತಾಯಿಯ ಮೃತ ದೇಹವನ್ನು ದುಬಾರಿ ಬೆಲೆಯ ಹಮ್ಮರ್ ಎಸ್‌ಯುವಿಯೊಂದಿಗೆ ಸಮಾಧಿ ಮಾಡಿದ್ದರು.

ನೆಚ್ಚಿನ ಕಾರಿನೊಂದಿಗೆ ಸಮಾಧಿಯಾದ ರಾಜಕಾರಣಿ..!

ಮತ್ತೊಬ್ಬ ಉದ್ಯಮಿಯೊಬ್ಬರು ತಮ್ಮ ತಾಯಿಯ ಮೃತದೇಹವನ್ನು ಬಿಎಂಡಬ್ಲ್ಯು ಎಕ್ಸ್ 5 ಐಷಾರಾಮಿ ಕಾರಿನಲ್ಲಿ ಸಮಾಧಿ ಮಾಡಿದ್ದರು. ಪ್ರಪಂಚದ ಅನೇಕ ದೇಶಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ.

ಚಿತ್ರಕೃಪೆ: ಫೇಸ್‌ಬುಕ್

Article Published On: Thursday, April 16, 2020, 15:49 [IST]
English summary
Mercedes Benz E500 buried with politician. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+