ಕೆಲಸದಿಂದ ಕಿತ್ತುಹಾಕಿದ ಕಂಪನಿಯ ವಿರುದ್ಧ ಮಾಜಿ ಉದ್ಯೋಗಿ ಸೇಡು ತೀರಿಸಿಕೊಂಡಿದ್ದು ಹೀಗೆ

ಮರ್ಸಿಡಿಸ್ ಬೆಂಝ್ ಕಂಪನಿ ಹಾಗೂ ಕಂಪನಿಯ ಮಾಜಿ ಉದ್ಯೋಗಿಯ ನಡುವಿನ ಸಂಘರ್ಷದಲ್ಲಿ 50 ಹೊಸ ಐಷಾರಾಮಿ ವ್ಯಾನ್‌ಗಳು ಧ್ವಂಸಗೊಂಡಿವೆ. ಮರ್ಸಿಡಿಸ್ ಬೆಂಝ್ ಕಂಪನಿಯು ಇತ್ತೀಚಿಗಷ್ಟೇ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ತನ್ನ ಉದ್ಯೋಗಿಯೊಬ್ಬನನ್ನು ಕೆಲಸದಿಂದ ವಜಾಗೊಳಿಸಿತ್ತು.

ಕೆಲಸದಿಂದ ಕಿತ್ತುಹಾಕಿದ ಕಂಪನಿಯ ವಿರುದ್ಧ ಮಾಜಿ ಉದ್ಯೋಗಿ ಸೇಡು ತೀರಿಸಿಕೊಂಡಿದ್ದು ಹೀಗೆ

ಮರ್ಸಿಡಿಸ್ ಬೆಂಝ್ ಕಂಪನಿಯ ಸ್ಪೇನ್‌ ಉತ್ಪಾದನಾ ಘಟಕದಲ್ಲಿದ್ದ ಉದ್ಯೋಗಿಯನ್ನು ವಜಾಗೊಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಆ ಮಾಜಿ ಉದ್ಯೋಗಿ ಜೆಸಿಬಿ ಬಳಸಿ ಮರ್ಸಿಡಿಸ್ ಬೆಂಝ್ ಕಂಪನಿಗೆ ಸೇರಿದ 50ಕ್ಕೂ ಹೆಚ್ಚು ಐಷಾರಾಮಿ ವ್ಯಾನ್‌ಗಳನ್ನು ಧ್ವಂಸಗೊಳಿಸಿದ್ದಾನೆ.

ಕೆಲಸದಿಂದ ಕಿತ್ತುಹಾಕಿದ ಕಂಪನಿಯ ವಿರುದ್ಧ ಮಾಜಿ ಉದ್ಯೋಗಿ ಸೇಡು ತೀರಿಸಿಕೊಂಡಿದ್ದು ಹೀಗೆ

ಆ ವ್ಯಕ್ತಿಯನ್ನು 2020ರ ಡಿಸೆಂಬರ್ 31ರಂದು ಕೆಲಸದಿಂದ ವಜಾಗೊಳಿಸಲಾಗಿತ್ತು ಎಂದು ವರದಿಯಾಗಿದೆ. ಕಂಪನಿಯ ಐಷಾರಾಮಿ ವ್ಯಾನ್ ಗಳು ಧ್ವಂಸಗೊಂಡಿರುವ ಚಿತ್ರಗಳನ್ನು ಏರ್ ಲ್ಯಾಂಡ್ರಾ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕೆಲಸದಿಂದ ಕಿತ್ತುಹಾಕಿದ ಕಂಪನಿಯ ವಿರುದ್ಧ ಮಾಜಿ ಉದ್ಯೋಗಿ ಸೇಡು ತೀರಿಸಿಕೊಂಡಿದ್ದು ಹೀಗೆ

ಕಂಪನಿ ಹಾಗೂ ಉದ್ಯೋಗಿ ನಡುವಿನ ಸಂಘರ್ಷದ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಕಂಪನಿಯು ಆ ಉದ್ಯೋಗಿಗೆ ಹಲವು ಬಾರಿ ಎಚ್ಚರಿಕೆ ನೀಡಿತ್ತು ಎಂದು ಹೇಳಲಾಗಿದೆ.

ಕೆಲಸದಿಂದ ಕಿತ್ತುಹಾಕಿದ ಕಂಪನಿಯ ವಿರುದ್ಧ ಮಾಜಿ ಉದ್ಯೋಗಿ ಸೇಡು ತೀರಿಸಿಕೊಂಡಿದ್ದು ಹೀಗೆ

ಈಶಾನ್ಯ ಸ್ಪೇನ್‌ನಲ್ಲಿ ಕಾರ್ಯನಿರ್ವಹಿಸುವ ಈ ಘಟಕವು ಐಷಾರಾಮಿ ವ್ಯಾನ್‌ಗಳನ್ನು ಉತ್ಪಾದಿಸುತ್ತದೆ. ಇದು ಮರ್ಸಿಡಿಸ್ ಬೆಂಝ್ ಕಂಪನಿಯ ಎರಡನೇ ಅತಿದೊಡ್ಡ ಉತ್ಪಾದನಾ ಘಟಕವಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕೆಲಸದಿಂದ ಕಿತ್ತುಹಾಕಿದ ಕಂಪನಿಯ ವಿರುದ್ಧ ಮಾಜಿ ಉದ್ಯೋಗಿ ಸೇಡು ತೀರಿಸಿಕೊಂಡಿದ್ದು ಹೀಗೆ

ಈ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿರುವ ಮಾಜಿ ಉದ್ಯೋಗಿಯು ಜೆಸಿಬಿ ಬಳಸಿ ಘಟಕದಲ್ಲಿದ್ದ ಎಲ್ಲಾ ವಾಹನಗಳನ್ನು ಒಡೆದು ಹಾಕಿದ್ದಾನೆ. ಈ ವಾಹನಗಳನ್ನು ಒಡೆಯಲು ಬಳಸಲಾದ ಜೆಸಿಬಿ ವಾಹನವನ್ನು ಸಹ ಕಳುವು ಮಾಡಲಾಗಿತ್ತು ಎಂದು ಹೇಳಲಾಗಿದೆ.

ಕೆಲಸದಿಂದ ಕಿತ್ತುಹಾಕಿದ ಕಂಪನಿಯ ವಿರುದ್ಧ ಮಾಜಿ ಉದ್ಯೋಗಿ ಸೇಡು ತೀರಿಸಿಕೊಂಡಿದ್ದು ಹೀಗೆ

ಈ ಬಗ್ಗೆ ಅಲ್ಲಿನ ಸ್ಪ್ಯಾನಿಷ್ ಪತ್ರಿಕೆಯೊಂದು ವರದಿ ಮಾಡಿದೆ. ಈ ಘಟನೆ ರಾತ್ರಿ 1 ಗಂಟೆಯ ವೇಳೆಗೆ ನಡೆದಿದೆ ಎಂದು ಘಟನಾ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕೆಲಸದಿಂದ ಕಿತ್ತುಹಾಕಿದ ಕಂಪನಿಯ ವಿರುದ್ಧ ಮಾಜಿ ಉದ್ಯೋಗಿ ಸೇಡು ತೀರಿಸಿಕೊಂಡಿದ್ದು ಹೀಗೆ

ಘಟನೆ ನಡೆದಾಗ ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ಸ್ಥಳದಲ್ಲಿದ್ದರು. ಇದರಿಂದಾಗಿ ಅವರಿಗೆ ಈ ದುರ್ಘಟನೆಯನ್ನು ತಡೆಯಲು ಸಾಧ್ಯವಾಗದಿದ್ದರೂ ಗನ್‌ಪಾಯಿಂಟ್‌ನಲ್ಲಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೆಲಸದಿಂದ ಕಿತ್ತುಹಾಕಿದ ಕಂಪನಿಯ ವಿರುದ್ಧ ಮಾಜಿ ಉದ್ಯೋಗಿ ಸೇಡು ತೀರಿಸಿಕೊಂಡಿದ್ದು ಹೀಗೆ

ಈ ಘಟನೆಯಲ್ಲಿ ಧ್ವಂಸಗೊಂಡ ಎಲ್ಲಾ ವ್ಯಾನ್‌ಗಳು ಹೊಸ ಐಷಾರಾಮಿ ವಿ-ಕ್ಲಾಸ್ ವಾಹನಗಳಾಗಿವೆ. ಈ ಘಟನೆಯಿಂದಾಗಿ ಸುಮಾರು 6 ಮಿಲಿಯನ್ ಡಾಲರ್ ನಷ್ಟು ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.

Most Read Articles

Kannada
English summary
Mercedes Benz ex employee destroys 50 new vans at production unit. Read in Kannada.
Story first published: Tuesday, January 5, 2021, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X