ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

Written By:

ವಿಶ್ವ ವಿಖ್ಯಾತ ಕಾರುಗಳನ್ನು ನಿರ್ಮಿಸುವುದರಲ್ಲಿ ಹೆಸರುವಾಸಿಯಾಗಿರುವ ಜರ್ಮನಿಯ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಂಸ್ಥೆಯೀಗ ವಾಹನ ಲೋಕಕ್ಕೆ ಹೊಸತೊಂದು ಕೊಡುಗೆಯನ್ನು ನೀಡಿದೆ. ಅದು ಬೇರೆಯೇನಲ್ಲ, ಅತ್ಯಾಕರ್ಷಕ 'ಏರೋ 460 ಗ್ರ್ಯಾನ್ ಟರಿಸ್ಮೊ ಎಡಿಷನ್ 1' ಬೋಟ್.

ಫ್ರಾನ್ಸ್ ನ ರಿವರಿಯಾ ನದಿಯಲ್ಲಿ ತೇಲುವ ಈ ಬೋಟ್ ಅನ್ನು ವೀಕ್ಷಿಸಿದಾಗ ಇದ್ಯಾವ ಕಾರು ನೀರಲ್ಲಿ ತೇಲಾಡುತ್ತಿದೆಯೆಂಬ ಗೊಂದಲವುಂಟಾಗಬಹುದು. ನಿಜಾಂಶವೆಂದರೆ ಬೆಂಝ್ ಐಕಾನಿಕ್ ರೇಸ್ ಕಾರುಗಳಿಂದ ಪ್ರೇರಣೆ ಪಡೆದುಕೊಂಡು ಇದರ ವಿಶಿಷ್ಟ ವಿನ್ಯಾಸವನ್ನು ರಚಿಸಲಾಗಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

'ಸಿಲ್ವರ್ ಏರೋ ಆಫ್ ದಿ ಸೀಸ್' ಎಂಬ ಅಕ್ಕರೆಯ ಹೆಸರಿನಿಂದ ಅರಿಯಲ್ಪಡುವ ಮರ್ಸಿಡಿಸ್ ಬೆಂಝ್ ವಿಹಾರ ನೌಕೆ 11 ಕೋಟಿ ರುಪಾಯಿಗಿಂತಲೂ ಹೆಚ್ಚು ದುಬಾರಿಯೆನಿಸಲಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

1930ರ ದಶಕದ ರೇಸಿಂಗ್ ಕಾರುಗಳಿಂದ ಸ್ಪೂರ್ತಿ ಪಡೆದುಕೊಂಡು 14.14 ಮೀಟರ್ ಉದ್ದದ ಈ ವಿಹಾರ ನೌಕೆಯನ್ನು ರಚಿಸಲಾಗಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

ಐಕಾನಿಕ್ ಮರ್ಸಿಡಿಸ್ ಬೆಂಝ್ ಸೆಡಾನ್ ಕಾರು ನದಿಯಲ್ಲಿ ತೇಲುವ ರೀತಿಯಲ್ಲಿ ಈ ವಿಹಾರ ನೌಕೆಯನ್ನು ನಿರ್ಮಿಸಲಾಗಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

ವಿಶೇಷವೆಂದರೆ ಕೇವಲ ಸೀಮಿತ ಸಂಖ್ಯೆಯ 10ರಷ್ಟು ಯುನಿಟ್ ಗಳಷ್ಟು ಮಾತ್ರ ನಿರ್ಮಾಣವಾಗಲಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

ಬ್ರಿಟನ್ ತಳಹದಿಯ ಬೋಟ್ ನಿರ್ಮಾಣ ಸಂಸ್ಥೆ ಸಿಲ್ವರ್ ಏರೋಸ್ ಮರೈನ್ ಜೊತೆಗಾರಿಕೆಯಲ್ಲಿ ಮರ್ಸಿಡಿಸ್ ಬೆಂಝ್ ದುಬಾರಿ ವಿಹಾರ ನೌಕೆ ನಿರ್ಮಿಸಲಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

2012ರಲ್ಲೇ ಯೋಜನೆ ಪೂರ್ಣಗೊಳಿಸುವ ಇರಾದೆಯಿತ್ತಾದರೂ ಕಾರಣಂತರಗಳಿಂದಾಗಿ ಹಿನ್ನಡೆ ಸಂಭವಿಸಿತ್ತು. ಕೊನೆಗೂ ಪ್ರತಿಷ್ಠಿತ ಬೋಟ್ ನದಿಗಿಳಿಯುವಲ್ಲಿ ಯಶಸ್ವಿಯಾಗಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

ಯಾನ್ಮಾರ್ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡುವ ಮರ್ಸಿಡಿಸ್ ಬೆಂಝ್ ದುಬಾರಿ ಬೋಟ್ 480 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯವನ್ನು ಹೊಂದಿರಲಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

ಗಂಟೆಗೆ 74 ಕೀ.ಮೀ. (40 knot) ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಮರ್ಸಿಡಿಸ್ ಬೆಂಝ್ ಏರೋ 460 ಗ್ರ್ಯಾನ್ ಟರಿಸ್ಮೊ ಎಡಿಷನ್ 1 ಬೋಟ್ ನಲ್ಲಿ 10 ಮಂದಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

ವಿಹಾರ ನೌಕೆಯೊಳಗೆ ಗರಿಷ್ಠ ಐಷಾರಾಮಿ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದೆ. ಅಲ್ಲದೆ ಸೂರ್ಯ ಬೆಳಕಿಗೆ ತಕ್ಕಂತೆ ಸ್ವಯಂಚಾಲಿತವಾಗಿ ಬಣ್ಣ ಬದಲಾಗುವ ಗಾಜುಗಳನ್ನು ಪಡೆದಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

ವೈನ್ ಸೀಸೆ ಮತ್ತು ಪ್ರೀಮಿಯಂ ಆಡಿಯೋ ವ್ಯವಸ್ಥೆಗಳನ್ನು ಇದು ಪಡೆದುಕೊಳ್ಳಲಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

ಒಟ್ಟಿನಲ್ಲಿ ಮರ್ಸಿಡಿಸ್ ಬೆಂಝ್ ಐಷಾರಾಮಿ ವಿಹಾರ ನೌಕೆಯು, ಡೈಮ್ಲರ್ ಸರ್ವವ್ಯಾಪಿ ಚಲನಶೀಲತೆ ದೂರದೃಷ್ಟಿಯ ಭಾಗದ ವಾಹಕವಾಗಿರಲಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

ಇದರಲ್ಲಿರುವ ಮೂರು ಸ್ಟಾರ್ ಸ್ಟ್ಯಾಂಡ್ ಗಳು ಆಕಾಶ, ನೆಲ ಮತ್ತು ಜಲವನ್ನು ಪ್ರತಿಬಂಬಿಸಲಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

ಇದರಲ್ಲಿರುವ ಮೂರು ಸ್ಟಾರ್ ಸ್ಟ್ಯಾಂಡ್ ಗಳು ಆಕಾಶ, ನೆಲ ಮತ್ತು ಜಲವನ್ನು ಪ್ರತಿಬಂಬಿಸಲಿದೆ.

ನೀರಲ್ಲಿ ಬೋಟ್ ಅಲ್ಲ ಕಾರು; ಇದು ಬೆಂಝ್ ಕಮಾಲ್

ವೈಶಿಷ್ಟ್ಯಗಳು

English summary
Mercedes-Benz Super Luxurious $1.7 Million Yacht Is Finally Here – In Pics
Story first published: Thursday, April 28, 2016, 18:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark