ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಸಿಟಿ ಪೈಲಟ್ ಸ್ವಯಂಚಾಲಿತ ಬಸ್

Written By:

ನಗರ ಪ್ರದೇಶದ ಸಾರಿಗೆ ಸಂಚಾರದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿ ಮಾಡಿರುವ ಡೈಮ್ಲರ್, ಅತಿ ನೂತನ ಮರ್ಸಿಡಿಸ್ ಬೆಂಝ್ ಭವಿಷ್ಯದ ಸ್ವಯಂಚಾಲಿತ ಬಸ್ಸನ್ನು ಅನಾವರಣಗೊಳಿಸಿದೆ.

ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಮಕಾಲೀನ ವಿನ್ಯಾಸದಿಂದ ಕೂಡಿರುವ ಮರ್ಸಿಡಿಸ್ ಬೆಂಝ್ ಸಿಟಿ ಬಸ್, ಆರಾಮ ಹಾಗೂ ಅನುಕೂಲದೊಂದಿಗೆ ಗರಿಷ್ಠ ಭದ್ರತೆಯನ್ನು ಖಾತ್ರಿಪಡಿಸಲಿದೆ.

ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಸಿಟಿ ಪೈಲಟ್ ಸ್ವಯಂಚಾಲಿತ ಬಸ್

ಆಧುನಿಕ ವಾಹನ ಜಗತ್ತಿನಲ್ಲಿ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯ ಹೀಗೆ ಹತ್ತಾರು ತೊಂದರೆಗಳು ಕಾಣಿಸಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರಿಗೆ ದಣಿವಿಲ್ಲದೆ ಗಮ್ಯ ಸ್ಥಾನ ತಲುಪಲು ಹೆಚ್ಚು ಸುರಕ್ಷಿತ ವಾಹನಗಳ ಅಗತ್ಯವಿದೆ.

ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಸಿಟಿ ಪೈಲಟ್ ಸ್ವಯಂಚಾಲಿತ ಬಸ್

ವಾಹನ ಕ್ಷೇತ್ರದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಲೇ ಬಂದಿರುವ ಡೈಮ್ಲರ್, ನಗರ ಪ್ರದೇಶದ ತೊಂದರೆಗಳನ್ನು ಅರಿತುಕೊಂಡು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಸಿಟಿ ಬಸ್ ಪರಿಚಯಿಸುತ್ತಿದೆ.

ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಸಿಟಿ ಪೈಲಟ್ ಸ್ವಯಂಚಾಲಿತ ಬಸ್

ಸಾಂಪ್ರದಾಯಿಕ ಬಸ್ಸುಗಳನ್ನು ಹೋಲಿಸಿದಾಗ ಇದು ಹೆಚ್ಚು ನಿಖರತೆ, ಸುರಕ್ಷತೆ ಮತ್ತು ಪ್ರಯಾಣಿಕರಿಗೆ ಹೆಚ್ಚು ಆರಾಮ ಮತ್ತು ಅನುಕೂಲಕರ ಪ್ರಯಾಣವನ್ನು ನೀಡಲಿದೆ.

ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಸಿಟಿ ಪೈಲಟ್ ಸ್ವಯಂಚಾಲಿತ ಬಸ್

ಕನೆಕ್ಟಿವಿಟಿ ಪ್ಲಸ್ ಕ್ಯಾಮೆರಾ, ರಾಡಾರ್ ಸಿಸ್ಟಂಗಳನ್ನು ಒಳಗೊಂಡಿರುವ ಬೆಂಝ್ ಸಿಟಿ ಬಸ್, ಅಪಘಾತ ರಹಿತ ಚಾಲನೆಯನ್ನು ಖಾತ್ರಿಪಡಿಸಲಿದೆ. ಇದನ್ನು ಭವಿಷ್ಯದ ಸಾರಿಗೆ ಸಂಚಾರ ವಾಹಕ ಎಂದೇ ಪರಿಗಣಿಸಲಾಗಿದೆ.

ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಸಿಟಿ ಪೈಲಟ್ ಸ್ವಯಂಚಾಲಿತ ಬಸ್

ಬೆಂಝ್ ನೂತನ ತಂತ್ರಜ್ಞಾನದಿಂದ ಪ್ರಯಾಣಿಕರ ಜೊತೆಗೆ ಚಾಲಕರು ಮತ್ತು ನಿರ್ವಹಣೆ ಮಾಡುವವರಿಗೆ ಲಾಭದಾಯಕವೆನಿಸಲಿದೆ.

ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಸಿಟಿ ಪೈಲಟ್ ಸ್ವಯಂಚಾಲಿತ ಬಸ್

ಸಂಸ್ಥೆಯು ಎರಡು ವರ್ಷಗಳ ಹಿಂದೆ ಅವಿಷ್ಕರಿಸಿರುವ ಹೈವೇ ಪೈಲಟ್ ತಂತ್ರಗಾರಿಕೆಯ ನೆರವನ್ನು ಪಡೆಯಲಾಗುವುದು. ಸಿಟಿ ಬಸ್ ನಿಖರತೆಗಾಗಿ ಇದರಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ.

ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಸಿಟಿ ಪೈಲಟ್ ಸ್ವಯಂಚಾಲಿತ ಬಸ್

ಟ್ರಾಫಿಕ್ ಸಿಗ್ನಲ್ ಹಾಗೂ ರಸ್ತೆಗಳಲ್ಲಿ ಎದುರಾಗುವ ಅಡೆತಡೆಗಳನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸಲಿದೆ. ಇದಕ್ಕಾಗಿ ಜಿಪಿಎಸ್, ಕ್ಯಾಮೆರಾ ಮತ್ತು ರಾಡಾರ್ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಸಿಟಿ ಪೈಲಟ್ ಸ್ವಯಂಚಾಲಿತ ಬಸ್

ಬಸ್ ವಿನ್ಯಾಸ ಹಾಗೂ ಲೈಟಿಂಗ್ ನಲ್ಲೂ ಬೆಂಝ್ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ. ಅಲ್ಲದೆ ಅತಿ ನೂತನ ಕಾಕ್ ಪಿಟ್ ವ್ಯವಸ್ಥೆಯು ಇದರಲ್ಲಿದೆ.

ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಸಿಟಿ ಪೈಲಟ್ ಸ್ವಯಂಚಾಲಿತ ಬಸ್

ಹಾಲೆಂಡ್ ನಲ್ಲಿರುವ ಯುರೋಪ್ ನ ಅತಿ ಉದ್ದವಾದ ಬಸ್ ರಾಪಿಡ್ ಟ್ರಾನ್ಸಿಸ್ಟ್ ಮಾರ್ಗದಲ್ಲಿ 20 ಕೀ.ಮೀ.ಗಳ ದೂರ ಮರ್ಸಿಡಿಸ್ ಬೆಂಝ್ ಫ್ಯೂಚರ್ ಸಿಟಿ ಪೈಲಟ್ ಬಸ್ ಪರೀಕ್ಷಾರ್ಥ ಸಂಚಾರ ನಡೆಸಲಿದೆ.

ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಸಿಟಿ ಪೈಲಟ್ ಸ್ವಯಂಚಾಲಿತ ಬಸ್

ಆರ್ಮ್ ಸ್ಟೆರ್ ಡ್ಯಾಮ್‌ನ ಶಿಪಾಲ್ ವಿಮಾನ ನಿಲ್ದಾಣ ಮತ್ತು ಹಾರ್ಲೆಮ್ ನಗರವನ್ನು ಸಂಪರ್ಕಿಸುವ ಈ 20 ಕೀ.ಮೀ. ದೂರದ ಮಾರ್ಗವು ಹಲವಾರು ತಿರುವು, ಸುರಂಗ ಮಾರ್ಗ ಹಾಗೂ ಟ್ರಾಫಿಕ್ ಸಿಗ್ನಲ್ ಗಳಿಂದ ಕೂಡಿದ್ದು, ಬೆಂಝ್ ಸಿಟಿ ಪೈಲಟ್ ಬಸ್ಸಿಗೆ ನೈಜ ಪರೀಕ್ಷೆಯನ್ನು ಒಡ್ಡಲಿದೆ.

English summary
Mercedes Reveal The Future Of Public Transport
Story first published: Wednesday, July 20, 2016, 10:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark