ವ್ಯಾನ್ ರೂಫಲ್ಲಿ ಡ್ರೋಮ್ ವಿಮಾನ; ಇದುವೇ ಬೆಂಝ್ ಭವಿಷ್ಯತ್ತಿನ ವಾಹನ
ಆಡಂಬರ, ಆರಾಮದಾಯಕ ಕಾರುಗಳನ್ನು ನಿರ್ಮಿಸುವುದಲ್ಲಿ ಮುಂಚೂಣಿಯಲ್ಲಿರುವ ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್, ಇದೀಗ ಭವಿಷ್ಯತ್ತಿನ ವ್ಯಾನ್ ಕಾನ್ಸೆಪ್ಟ್ ನೊಂದಿಗೆ ಮುಂದೆ ಬಂದಿದೆ.
ಮರ್ಸಿಡಿಸ್ ಬೆಂಝ್ ಅತಿ ನೂತನ 'ವಿಷನ್ ವ್ಯಾನ್ ಕಾನ್ಸೆಪ್ಟ'ನ್ನು ಪ್ರದರ್ಶನಗೊಳಿಸಿದ್ದು, ಇದರ ರೂಫಲ್ಲಿ ಡ್ರೋನ್ ವಿಮಾನವನ್ನು ನಿಲುಗಡೆಗೊಳಿಸುವ ಸ್ಥಳಾವಕಾಶವನ್ನು ಕೊಟ್ಟಿರುವುದು ಹೆಚ್ಚು ಗಮನ ಸೆಳೆದಿದೆ.

ಮರ್ಸಿಡಿಸ್ ಬೆಂಝ್ ವಿಷನ್ ವ್ಯಾನ್ ಕಾನ್ಸೆಪ್ಟ್ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಡ್ರೋನ್ ವಾಹನವಾಗಿರಲಿದ್ದು, ಸಂಸ್ಥೆಯ 'ಅಡ್ವಾನ್ಸ್' (adVANce) ಯೋಜನೆಯ ಭಾಗವಾಗಿರಲಿದೆ.

ನೂತನ ಕಾನ್ಸೆಪ್ಟ್ ಮುಖಾಂತರ ತಂತ್ರಜ್ಞಾನದ ವಿಕಾಸ ಹಾಗೂ ಅವುಗಳು ಜೀವನವನ್ನು ಹೇಗೆ ಸರಳವಾಗಿಸಲಿದೆ ಎಂಬುದನ್ನು ಮರ್ಸಿಡಿಸ್ ಬೆಂಝ್ ತೋರಿಸಿಕೊಟ್ಟಿದೆ.

ಭವಿಷ್ಯದ ಬೇಡಿಕೆಗಳಿಗೆ ಅನುಸಾರವಾಗಿ ಸ್ಮಾರ್ಟ್ ಡೆಲಿವರಿ ವ್ಯವಸ್ಥೆಗಳನ್ನು ಇದು ಪಡೆಯಲಿದೆ. ಮೊಬೈಲ್ ಪಾರ್ಸೆಲ್ ಗಳನ್ನು ಲೋಡಿಂಗ್ ಮಾಡುವುದು ಬಹಳ ಸುಲಭವಾಗಿದ್ದು, ಇನ್ನು ವಿತರಣೆಗಾಗಿ ಡ್ರೋನ್ ವಿಮಾನದ ಸೇವೆಯನ್ನು ಪಡೆಯಬಹುದಾಗಿದೆ.

ವಿಷನ್ ವ್ಯಾನ್ ಕಾನ್ಸೆಪ್ಟ್ 75 ಕೆಡಬ್ಲ್ಯುಎಚ್ ಎಲೆಕ್ಟ್ರಿಕ್ ಮೋಟಾರುನಿಂದ ನಿಯಂತ್ರಿಸಲ್ಪಡುತ್ತಿದ್ದು, 80ರಿಂದ 270 ಕೀ.ಮೀ. ವ್ಯಾಪ್ತಿಯ ವರೆಗೂ ಚಲಿಸಲಿದೆ.

ತನ್ಮೂಲಕ ಮರ್ಸಿಡಿಸ್ ಬೆಂಝ್ ಮೊಬೈಲ್ ವಿತರಣೆಯನ್ನು ಹೊಸ ಹಂತಕ್ಕೆ ಕೊಂಡೊಯ್ದಿದೆ. ಇದರಲ್ಲಿರುವ ಮ್ಯಾಟರ್ ನೆಟ್ ಎಂ2 ಡೆಲಿವರಿ ಡೋನ್ ಗಳು ಒಮ್ಮೆ ಚಾರ್ಜ್ ಮಾಡಿಸಿದಲ್ಲಿ 12 ಮೈಲು ದೂರದ ವರೆಗೆ ಸಂಚರಿಸಲಿದೆ.

ಲೋಡಿಂಗ್ ಗಾಗಿ ರೋಬೋಟಿಕ್ ಶೆಲ್ಫ್ ವ್ಯವಸ್ಥೆಯನ್ನು ಆಳವಡಿಸಲಾಗಿದೆ. ಹಾಗೆಯೇ ಇಂಟೆಲಿಜೆಂಟ್ ಆಟೋಮ್ಯಾಷನ್ ತಂತ್ರಗಾರಿಕೆ ಹಾಗೂ ಎಲ್ ಇಡಿ ಹೆಡ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಲಿದೆ.


Click it and Unblock the Notifications








