Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ರಸ್ತೆ ಬದಿ ಅನಾಥವಾಗಿ ಬಿದ್ದಿದೆ ಡಿಸಿ ಡಿಸೈನ್‌ನಿಂದ ಮಾಡಿಫೈಗೊಂಡ ಐಷಾರಾಮಿ ಕಾರು
ಕಾರುಗಳ ಮೂಲ ರೂಪವನ್ನೇ ಬದಲಿಸಿ ಹೊಸ ಲುಕ್ ನೀಡುವಲ್ಲಿ ಖ್ಯಾತಿ ಪಡೆದಿರುವ ಭಾರತದ ಮಾಡಿಫೈ ಕಂಪನಿ ಡಿಸಿಯಿಂದ ಡಿಸೈನ್ ಮಾಡಲಾದ ಮರ್ಸಿಡಿಸ್ ಎಸ್ ಕ್ಲಾಸ್ ಕಾರು ದೆಹಲಿಯ ರಸ್ತೆ ಬದಿ ಪಾಳುಬಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಕಾರಿನ ಬೆಲೆಯೊಂದಿಗೆ ಮಾಡಿಫೈ ಮಾಡಲು ಸುಮಾರು 3 ಕೋಟಿ ರೂ. ವೆಚ್ಚವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡ ಮಾಡಿಫೈ ವಾಹನಗಳನ್ನು ಮತ್ತು ಚಿತ್ರನಟರ ಕಾರವಾನ್ ವಾಹನಗಳನ್ನು ನಿರ್ಮಾಣ ಮಾಡುವಲ್ಲಿ ತನ್ನದೇ ವಿಶಿಷ್ಟತೆ ಪಡೆದುಕೊಂಡಿರುವ ಡಿಸಿ ಡಿಸೈನ್ ಕಂಪನಿಯು ಕಾರು ವಿನ್ಯಾಸ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದೆ.

ಅಂತಹ ಡಿಸಿ ಡಿಸೈನ್‌ನಿಂದ ಮಾಡಿಫೈಗೊಂಡ ಮರ್ಸಿಡಿಸ್ ಎಸ್-ಕ್ಲಾಸ್ ದೆಹಲಿಯ ರಸ್ತೆಯ ಬದಿಯಲ್ಲಿ ಧೂಳು ಬಿದ್ದು ತುಕ್ಕು ಹಿಡಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈ ದೃಷ್ಯವನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇಂತಹ ಮಾದರಿಗಳನ್ನು ನಮ್ಮ ರಸ್ತೆಗಳಿಂದ ಸ್ವಚ್ಛಗೊಳಿಸಿ ಹೊಸ ಉತ್ಪನ್ನಗಳಾಗಿ ಮರುಬಳಕೆ ಮಾಡಲು ಅಗತ್ಯವಿರುವ ಸ್ಕ್ರಯಾಪಿಂಗ್ ನೀತಿಯ ಪ್ರಾಮುಖ್ಯತೆಯನ್ನು ಈ ರೀತಿಯ ಪ್ರಕರಣಗಳು ಆಗಾಗ ಸೂಚಿಸುತ್ತಲೇ ಇರುತ್ತವೆ. ಈ S-ಕ್ಲಾಸ್ 1990 ರ ದಶಕದ W126 ನ ಜನರೇಷನ್ ಮಾದರಿಯಾಗಿದೆ.
ಡಿಸಿಯಿಂದ ಈ ಮರ್ಸಿಡಿಸ್ ಯಾವ ಮಟ್ಟಿಗೆ ಮಾಡಿಫೈಗೊಂಡಿದೆ ಎಂದರೆ, ಇದು ಎಸ್-ಕ್ಲಾಸ್‌ನಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಮುಂಭಾಗವು ಇಂದಿನ ಮರ್ಸಿಡಿಸ್ ಮಾದರಿಗಳಲ್ಲಿ ಕಂಡುಬರುವ ಬೃಹತ್ ಗ್ರಿಲ್ ಅನ್ನು ಹೊಂದಿದ್ದು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಹೌಸಿಂಗ್ ಸಾಕಷ್ಟು ವಿಭಿನ್ನವಾಗಿದೆ.

ಅದರ ಜೊತೆಗೆ, ರೇಸಿಂಗ್ ಕಾರ್‌ಗಳಲ್ಲಿ ಕಂಡುಬರುವಂತೆ ಸೆಡಾನ್‌ಗೆ ವಿಶಾಲವಾದ ನೋಟವನ್ನು ನೀಡಲು ಮುಂಭಾಗದ ಬಂಪರ್ ಅನ್ನು ಸ್ಟೈಲಿಷ್ ಆಗಿ ಡಿಸೈನ್ ಮಾಡಲಾಗಿದೆ. ವೈಡ್-ಬಾಡಿ ಪರಿಕಲ್ಪನೆಯು ಸೈಡ್ ಫೆಂಡರ್‌ಗಳಲ್ಲಿಯೂ ಕಾಣಬಹುದು. ಬದಿಯಲ್ಲಿ, ಇಳಿಜಾರಿನ ರೂಫ್ ಬೂಟ್ ಅನ್ನು ಅಚ್ಚುಕಟ್ಟಾಗಿ ಛಾವಣಿಯೊಂದಿಗೆ ಸಾಕಷ್ಟು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.

ಸೈಡ್ ಫೆಂಡರ್‌ನ ಹಿಂದೆ ಸಿಲ್ವರ್ ಏರ್-ಡಕ್ಟ್ ಇದೆ. ಇದು ಕ್ರಿಯಾತ್ಮಕವಾಗಿರಬಹುದು ಅಥವಾ ಇಲ್ಲದೆಯೇ ಇರಬಹುದು. ಟೈಲ್ ವಿಭಾಗವು ಮುಂಭಾಗದಿಂದ ವಿಲಕ್ಷಣವಾದ ಥೀಮ್ ಅನ್ನು ಹೊಂದಿದೆ. ಈ ವೀಡಿಯೊ ಕ್ಲಿಪ್‌ನಲ್ಲಿ ಗೋಚರಿಸುವ ಟೈಲ್‌ಲ್ಯಾಂಪ್‌ಗಳು DC-ವಿನ್ಯಾಸಗೊಳಿಸಿದ ವಾಹನ ಎಂದು ನೋಡಿದ ತಕ್ಷಣ ಹೇಳಬಹುದು. ಅದರ ಜೊತೆಗೆ, ಬಂಪರ್‌ನ ಮಧ್ಯದಲ್ಲಿ ದೊಡ್ಡ ಸಿಲ್ವರ್ ಅಂಶವಿದೆ, ಅದು ವಿಸ್ತರಿಸಿದ ಸ್ಕಿಡ್ ಪ್ಲೇಟ್‌ನಂತೆ ಕಾಣುತ್ತದೆ.

ಇದು ಫಂಕಿ ಅಲಾಯ್ ವೀಲ್‌ಗಳನ್ನು ಹೊಂದಿದ್ದು, ವಿನ್ಯಾಸದಲ್ಲಿ ವೈಟ್-ಸಿಲ್ವರ್ ಬಣ್ಣವನ್ನು ಹೊಂದಿದೆ. ಎಸ್-ಕ್ಲಾಸ್‌ನಂತಹ ಕಾರ್ಯಕ್ಷಮತೆಯ ಐಷಾರಾಮಿ ಕಾರುಗಳಿಗೆ ಸೂಕ್ತವಾದ ಕಡಿಮೆ-ಪ್ರೊಫೈಲ್ ಟೈರ್‌ಗಳನ್ನು ನೀಡಲಾಗಿದೆ. ಇಂತಹ ಅದ್ಭುತ ಡಿಸೈನ್ ಹೊಂದಿರುವ ಕಾರನ್ನು ಇದೀಗ ರಸ್ತೆ ಬದಿಯಲ್ಲಿ ಮೂಲೆ ಗುಂಪು ಮಾಡಲಾಗಿದೆ.

ಈ ಕಾರು ಮಾತ್ರವಲ್ಲ ದೊಡ್ಡ ದೊಡ್ಡ ನಗರಗಳ ಬೀದಿಗಳಲ್ಲಿ ಅಂತಹ ನೂರಾರು ಕಾರುಗಳನ್ನು ಕೈಬಿಡಲಾಗಿದೆ. ಮಾಲೀಕರನ್ನು ಇದಕ್ಕೆ ಕಾರಣ ಕೇಳಿದರೆ ದುಬಾರಿ ದುರಸ್ತಿ ವೆಚ್ಚ ಎಂದು ಹೇಳುತ್ತಾರೆ. ಈ ಮಾರ್ಪಡಿಸಿದ ಹೆಚ್ಚಿನ ಕಾರುಗಳು ಕಸ್ಟಮೈಸ್ ಮಾಡಿದ ಘಟಕಗಳು ಮತ್ತು ಬಿಡಿಭಾಗಗಳನ್ನು ಹೊಂದಿರುವುದರಿಂದ ಕಾರು ಮಾಲೀಕರು ಹೇಳುವುದು ನಿಜವಾಗಿರಬಹುದು. ಒಮ್ಮೆ ಇವು ಹಾಳಾದರೆ ದುರಸ್ತಿ ಮಾಡಿಕೊಳ್ಳುವುದು ಅತ್ಯಂತ ದುಬಾರಿ.

ಕೆಲವು ವರ್ಷಗಳ ಹಿಂದೆ ದುರಸ್ತಿ ಮಾಡಿಸುವುದು ದುಬಾರಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಇಂತಹ ಮಾರ್ಪಾಡುಗಳು ಹಾಗೂ ರಿಪೇರಿ ಮಾಡಿಸುವುದು ಸುಲಭ. ಜನರು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಭಾಗಗಳನ್ನು ಖರೀದಿಸಿ ಮಾರುಕಟ್ಟೆಯಲ್ಲಿ ತಮ್ಮ ಕಾರುಗಳನ್ನು ಸರಿಪಡಿಸಬಹುದು.

ಜೈಲು ಸೇರಿದ್ದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ
ಮುಂಬೈನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಡಿಸಿ ಡಿಸೈನ್ ಕಂಪನಿಯ ಮೇಲೆ ವಂಚನೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಅಧ್ಯಕ್ಷ ದಿಲೀಪ್ ಚಾಬ್ರಿಯಾ ಅವರನ್ನು ಬಂಧನ ಮಾಡಲಾಗಿತ್ತು. ಡಿಸಿ ಡಿಸೈನ್ಸ್ ತಮ್ಮ ಸ್ವಂತ ಕಂಪನಿಯಿಂದ ಹೊಸ ಕಾರುಗಳನ್ನು ಸಹ ಮಾರಾಟ ಮಾಡಿದ್ದರು

ಇವರು ಒಂದೇ ಚಾರ್ಸಿ ಅಡಿಯಲ್ಲಿ ಹಲವು ಕಾರುಗಳನ್ನು ಮಾರಾಟ ಮಾಡಿದ್ದರು ಎನ್ನಲಾಗಿದೆ. ಡಿಸಿ ಡಿಸೈನ್‌ನ ಮಾಲೀಕ ದಿಲೀಪ್ ಚಾಬ್ರಿಯಾ ಮೇಲೆ ಆರೋಪದಡಿ ಐಪಿಸಿ ಸೆಕ್ಷನ್ 420, 465, 467, 468, 471, 120 (ಬಿ) ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ದುಬಾರಿ ಕಾರುಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

2013ರಲ್ಲಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡಾ ಡಿಸಿ ಡಿಸೈನ್ ಕಂಪನಿಯ ಡಿಸಿ ಅವಂತಿ ಸ್ಪೋರ್ಟ್ ಕಾರ್ ವಿತರಣೆಗೆ ಸಂಬಂಧಿದಂತೆ ಕಾರು ಕಂಪನಿಯ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದರು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಮೊದಲಿನಿಂದಲೂ ಡಿಸಿ ಕಂಪನಿ ವಿಲಕ್ಷಣ ಮಾದರಿಗಳನ್ನು ವಿನ್ಯಾಸಗೊಳಿಸುತ್ತಾ ಬಂದಿದೆ. ಇವರ ಡಿಸೈನ್ ಪಡಿಯಲು ಉದ್ಯಮಿಗಳು, ನಟರು ಹುಡಿಕೊಂಡು ಬರುತ್ತಾರೆ. ಆದರೆ ಕೆಲವರು ಮಾತ್ರ ಇಂತಹ ಡಿಸೈನ್‌ಗಳನ್ನು ಇಷ್ಟಪಟ್ಟು ಮಾಡಿಫೈ ಮಾಡಿಸಿ ಇದೀಗ ಅನಾಥವಾಗಿ ರಸ್ತೆಗೆ ಬಿಟ್ಟಿರುವುದು ವಿಪರ್ಯಾಸ.