ಮಂಡೇಲಾಗೆ ಉಡುಗೊರೆಯಾಗಿ ದೊರಕಿದ್ದ ಬೆಂಝ್ ಕಾರು
ಅಪ್ಪಟ ಗಾಂಧಿವಾಧಿ ದಕ್ಷಿಣ ಆಫ್ರಿಕಾದ ಹಿರಿಯ ನಾಯಕ ನೊಬೆಲ್ ಶಾಂತಿ ಪುರಸ್ಕೃತ, ಭಾರತ ರತ್ನ ಡಾ. ನೆಲ್ಸನ್ ಮಂಡೇಲಾ ತಮ್ಮ 95ನೇ ಹರೆಯದಲ್ಲಿ ಇಹಲೋಕ ತ್ಯಜಿಸಿದ್ದಾರೆ. ವರ್ಣಭೇದ ನೀತಿ ವಿರುದ್ಧ ಬಂಡಾಯವೆದ್ದು 27 ವರ್ಷ ಜೈಲುವಾಸ ಅನುಭವಿಸಿದ್ದ ಮಂಡೇಲಾ ಬ್ರಿಟಿಷರ ಸಾಮ್ರಾಜ್ಯತ್ವದಿಂದ ದಕ್ಷಿಣ ಆಫ್ರಿಕಾವನ್ನು ಮುಕ್ತಿಗೊಳಿಸಿದ್ದರು.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಭೇಟಿ ಕೊಡುತ್ತಿರಿ
ದಕ್ಷಿಣ ಆಫ್ರಿಕಾದ ರಾಷ್ಟ್ರಪಿತನೆಂಬ ಗೌರವಕ್ಕೆ ಪಾತ್ರವಾಗಿರುವ ಮಂಡೇಲಾ ಅವರು ಸಹ ವಾಹನ ಪ್ರೇಮಿಯಾಗಿದ್ದರು. ಅಷ್ಟೇ ಅಲ್ಲದೆ ಅವರ ಬಳಿ ಕೆಂಪು ವರ್ಣದ ಬೆಂಝ್ ಎಸ್ ಕ್ಲಾಸ್ ಎಸ್500 ಕಾರಿತ್ತು ಎಂಬ ವಿಚಾರ ನಿಮಗೆ ತಿಳಿದಿದೆಯೇ? ಕುತೂಹಲಕಾರಿ ಮಾಹತಿಗಾಗಿ ಸ್ಲೈಡರ್‌ನತ್ತು ಮುಂದುವರಿಯಿರಿ...

1990ನೇ ಇಸವಿಯಲ್ಲಿ ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಬೆಂಝ್ ನೌಕರರು ಈ ಮಹಾ ನಾಯಕರಿಗೆ ಉಡುಗೊರೆಯೊಂದನ್ನು ನೀಡಲು ನಿರ್ಧರಿಸಿದ್ದರು.

ಹೌದು, ದಕ್ಷಿಣ ಆಫ್ರಿಕಾ ಬೆಂಝ್ ನೌಕರರು, ಮರ್ಸಿಡಿಸ್ ಬೆಂಝ್ ಉಡುಗೊರೆಯಾಗಿ ನೀಡಿದ್ದರು. ಇದು ಬೆಂಝ್ ಎಸ್500 ಡಬ್ಲ್ಯು126 ಮಾದರಿಯಾಗಿತ್ತು.

ಕಪ್ಪು ವರ್ಣದ ನೌಕರರಿಗೂ ಮನ್ನಣೆ ನೀಡಿದ್ದ ಅಂದಿನ ಪ್ರಮುಖ ಆಟೋ ತಯಾರಕರುಗಳಲ್ಲಿ ಒಂದಾಗಿದ್ದ ಬೆಂಝ್ ತಮ್ಮ ನೌಕರರ ಬೇಡಿಕೆಗೆ ಯಾವುದೇ ವಿರೋಧ ವ್ಯಕ್ತಪಡಿಸಿದೆ ಹಸಿರು ನಿಶಾನೆ ತೋರಿಸಿತ್ತು.

ಈ ವಿಶೇಷ ಕಾರಿನ ನಿರ್ಮಾಣವನ್ನು ಕೇವಲ ನಾಲ್ಕು ದಿನಗಳೊಳಗೆ ಪೂರ್ಣಗೊಳಿಸಲಾಗಿತ್ತು. ಬಳಿಕ ಜೂನ್ 22ರಂದು ಕಂಪನಿ ನೌಕರ ಪಿಲಿಪ್ ಗ್ರೂಪ್ ಕಾರನ್ನು ಮಂಡೇಲಾ ಅವರಿಗೆ ಹಸ್ತಾಂತರಿಸಿದ್ದರು.

ದಕ್ಷಿಣ ಆಫ್ರಿಕಾದ ಜನರು ತಮ್ಮ ಪ್ರೀತಿಯ ನಾಯಕ ಮಂಡೇಲಾ ಅವರನ್ನು 'ಮಡಿಬಾ' ಎಂಬ ಅಕ್ಕರೆಯ ಹೆಸರಿನಿಂದ ಕರೆಯುತ್ತಿದ್ದರು. ಬಳಿಕ ಈ ಬೆಂಝ್ ಕಾರು 'ಮಡಿಬಾರ ಮರ್ಕ್' (ಮರ್ಸಿಡಿಸ್) ಎಂos ಪ್ರಖ್ಯಾತಿ ಪಡೆದಿತ್ತು.

ಇದರಲ್ಲಿ ಲಗತ್ತಿಸಲಾಗಿರುವ ಲೈಸನ್ಸ್ ಪ್ಲೇಟ್ ಹೆಸರು '999 ಎನ್‌ಆರ್‌ಎಂ ಜಿಪಿ'. ಪ್ರಸ್ತುತ ಕಾರನ್ನೀಗ ನೀವು ಜೋಹಾನ್ಸ್‌ಬರ್ಗ್‌ನಲ್ಲಿರುವ ವರ್ಣಭೇದ ಮ್ಯೂಸಿಯಂನಲ್ಲಿ ನೋಡಬಹುದಾಗಿದೆ.
ವೀಡಿಯೋ ವೀಕ್ಷಿಸಿ


Click it and Unblock the Notifications








