ಕಸದ ಬುಟ್ಟಿಗೆ ಸೇರಿದ ಕೋಟಿ ಬೆಲೆಬಾಳುವ ಬೆಂಝ್ ಕಾರು
ಇಲ್ಲೊಂದು ವಿಚಿತ್ರ ಘಟನೆ ವರದಿಯಾಗಿದೆ. ಹೇಳವವರು ಕೇಳುವವರು ಯಾರು ಇಲ್ಲವಾದ್ದಲ್ಲಿ ಆಗುವುದಿಷ್ಟೇ! ಕೋಟಿ ಬೆಲೆಬಾಳುವ ಮರ್ಸಿಡಿಸ್ ಬೆಂಝ್ ಕಾರೊಂದನ್ನು ಕಸದ ಬುಟ್ಟಿಗೆ ವಿಲೇವಾರಿ ಮಾಡಲಾಗಿದೆ.
ಅಮೆರಿಕದಿಂದ ಈ ಸುದ್ದಿ ವರದಿಯಾಗಿದ್ದು, ವಾಹನ ಪ್ರೇಮಿಗಳಲ್ಲಿ ಬಹಳ ಆಸಕ್ತಿಯನ್ನು ಕೆರಳಿಸಿದೆ. ಇದರ ಹಿಂದಿರುವ ವಿಷಯ ಏನೆಂಬುದು ಮಾತ್ರ ಇನ್ನು ಅಸ್ಪಷ್ಟ.

ಮೊದಲ ನೋಟದಲ್ಲಿ ಸಂಪೂರ್ಣ ಜಖಂಗೊಂಡಿರುವ ಬೆಂಝ್ ಕಾರನ್ನು ಕಸದ ಬುಟ್ಟಿಗೆ ವಿಲೇವಾರಿ ಮಾಡಲಾಗುತ್ತಿದೆ.

ಬಲ್ಲ ಮೂಲಗಳ ಪ್ರಕಾರ ಬೆಂಝ್‌ನ ಅತ್ಯಂತ ಶಕ್ತಿಶಾಲಿ ಎಸ್‌ಎಲ್‌ಎಸ್ ಎಎಂಜಿ ಕಾರು ಇದಾಗಿದೆ.

ಅಪಘಾತವೊಂದಕ್ಕೆ ಸಿಲುಕಿದ್ದ ಬೆಂಝ್ ಕಾರು ಸಂಪೂರ್ಣ ನಜ್ಜುಗುಜ್ಜುಗೊಂಡಿದೆ. ಆದರೆ ಈ ಬಗ್ಗೆಯೂ ಸ್ಪಷ್ಟನೆಗಳಿಲ್ಲ.

ಚಿತ್ರದಲ್ಲಿ ತೋರಿಸಿರುವಂತೆಯೇ ಪಿಡಬ್ಲ್ಯುಡಿ ವಿಭಾಗವು ನಜ್ಜುಗುಜ್ಜುಗೊಂಡಿರುವ ಕಾರನ್ನು ಕಸದ ಬುಟ್ಟಿಗೆ ವಿಲೇವಾರಿ ಮಾಡಲಾಗುತ್ತಿದೆ.

ಘಟನೆಯಿಂದ ತಿಳಿದು ಬರುವ ವಿಷಯವೇನೆಂದರೆ ಯಾವುದೇ ವಿಮೆ ಸೌಲಭ್ಯ ಇದಕ್ಕಿರಲಿಲ್ಲ ಅಥವಾ ವಿಮೆ ಕ್ಲೈಮ್ ಮಾಡಲು ಸಾಧ್ಯವಾಗಲಿಲ್ಲ. ಬಹುಶ: ಇದಕ್ಕಾಗಿಯೇ ಆಗಿರಬಹುದು ಕಾರು ರಿಪೇರಿ ಮಾಡುವ ಖರ್ಚಲ್ಲಿ ಹೊಸ ಕಾರನ್ನೇ ಖರೀದಿಸಿದರಾಯಿತು ಎಂದು ಮಾಲಿಕ ಯೋಚಿಸಿರಬಹುದು.

ಒಟ್ಟಿನಲ್ಲಿ ಅತ್ಯಂತ ಬೆಲೆಬಾಳುವ ಕಾರು ಮಾತ್ರ ಕಸದ ಬುಟ್ಟಿಗೆ ಸೇರಿರುವುದು ಅಭಿಮಾನಿಗಳಲ್ಲಿ ನಿರಾಸೆಗೆ ಕಾರಣವಾಗಿದೆ.


Click it and Unblock the Notifications