ಲಾಕ್‌ಡೌನ್ ಎಫೆಕ್ಟ್: ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲಿವೆ ಮೇರು-ಫ್ಲಿಪ್‌ಕಾರ್ಟ್

ಭಾರತದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಮೇ 3ರವರೆಗೆ ಜಾರಿಯಲ್ಲಿದ್ದ 2ನೇ ಹಂತದ ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಈ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳಿಲ್ಲದೇ ಪರದಾಡುವಂತಾಗಿದೆ.

ಲಾಕ್‌ಡೌನ್ ಎಫೆಕ್ಟ್: ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲಿವೆ ಮೇರು-ಫ್ಲಿಪ್‌ಕಾರ್ಟ್

ಆನ್‌ಲೈನ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಂತಹ ಕಂಪನಿಗಳು ಸಹ ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ಇದನ್ನು ಪರಿಹರಿಸುವ ಸಲುವಾಗಿ ಫ್ಲಿಪ್‌ಕಾರ್ಟ್ ಕಂಪನಿಯು ಮಹಾರಾಷ್ಟ್ರ ಮೂಲದ ಮೇರು ಕ್ಯಾಬ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಲಾಕ್‌ಡೌನ್ ಎಫೆಕ್ಟ್: ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲಿವೆ ಮೇರು-ಫ್ಲಿಪ್‌ಕಾರ್ಟ್

ಮೇರು ಕ್ಯಾಬ್ಸ್ ಮಹೀಂದ್ರಾ ಅಂಡ್ ಮಹೀಂದ್ರಾ ಪ್ರೈ.ಲಿ ಬೆಂಬಲಿತ ಅಪ್ಲಿಕೇಶನ್ ಆಧಾರಿತ ಕ್ಯಾಬ್ ಕಂಪನಿಯಾಗಿದೆ. ಈ ಪಾಲುದಾರಿಕೆಯಿಂದಾಗಿ ಉತ್ಪನ್ನಗಳನ್ನು ವೇಗವಾಗಿ ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗಲಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಎಫೆಕ್ಟ್: ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲಿವೆ ಮೇರು-ಫ್ಲಿಪ್‌ಕಾರ್ಟ್

ಮೊದಲಿಗೆ ಈ ಸೇವೆಯನ್ನು ಬೆಂಗಳೂರು, ದೆಹಲಿ ಹಾಗೂ ಹೈದರಾಬಾದ್‌ ನಗರಗಳಲ್ಲಿ ನೀಡಲಾಗುವುದು. ಈ ಬಗ್ಗೆ ಮಾತನಾಡಿರುವ ಮೇರು ಮೊಬಿಲಿಟಿ ಟೆಕ್ ಲಿಮಿಟೆಡ್‌ನ ಸಿಇಒ ಹಾಗೂ ಸ್ಥಾಪಕರಾದ ನೀರಜ್ ಗುಪ್ತಾರವರು, ಮೇರು ತನ್ನ ಕ್ಯಾಬ್ ಫ್ಲಿಪ್‌ಕಾರ್ಟ್‌ ಸಹಭಾಗಿತ್ವದಲ್ಲಿ ಗ್ರಾಹಕರಿಗೆ ವೇಗವಾಗಿ, ಸುರಕ್ಷಿತವಾಗಿ ಉತ್ಪನ್ನಗಳನ್ನು ತಲುಪಿಸಲಿದೆ ಎಂದು ಹೇಳಿದರು.

ಲಾಕ್‌ಡೌನ್ ಎಫೆಕ್ಟ್: ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲಿವೆ ಮೇರು-ಫ್ಲಿಪ್‌ಕಾರ್ಟ್

ಇದರಿಂದಾಗಿ ಈ ಸಂಕಷ್ಟದ ಸಂದರ್ಭದಲ್ಲಿ ಮೇರು ಕ್ಯಾಬ್ ಚಾಲಕರು ಗಣನೀಯ ಆದಾಯವನ್ನು ಗಳಿಸಬಹುದೆಂದು ನಾವು ಭಾವಿಸುತ್ತೇವೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಮೇರು ಈ ಸೇವೆಗಳನ್ನು ನೀಡಲು ಬೇರೆ ಕಾರುಗಳನ್ನು ಉಪಯೋಗಿಸಲಿದೆ ಎಂದು ಅವರು ಹೇಳಿದರು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲಿವೆ ಮೇರು-ಫ್ಲಿಪ್‌ಕಾರ್ಟ್

ಡೆಲಿವರಿ ಕೇಂದ್ರಗಳಲ್ಲಿರುವ ಕಾರುಗಳಿಗೆ ಓಝೋನ್ ಏರ್ ಪ್ಯೂರಿಫೈಯರ್ ಅಳವಡಿಸ ಬೇಕಾಗಿದೆ. ಇದರ ಜೊತೆಗೆ ಕಾರು ಚಾಲಕರಿಗೆ ಮಾಸ್ಕ್ ಹಾಗೂ ಗ್ಲೌಸ್‌ನಂತಹ ಸುರಕ್ಷಾ ಸಾಧನಗಳನ್ನು ನೀಡಲಾಗುವುದು. ಗ್ರಾಹಕರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುವುದು.

ಲಾಕ್‌ಡೌನ್ ಎಫೆಕ್ಟ್: ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲಿವೆ ಮೇರು-ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್ ತನ್ನ ಸಿಬ್ಬಂದಿಗೆ ಉತ್ಪನ್ನಗಳನ್ನು ವೇಗವಾಗಿ ಹಾಗೂ ಸುರಕ್ಷಿತವಾಗಿ ಸಾಗಿಸುವುದು ಹೇಗೆ ಎಂಬ ಬಗ್ಗೆ ತರಬೇತಿ ನೀಡಲಿದೆ. ಈ ಬಗ್ಗೆ ಮಾತನಾಡಿರುವ ಫ್ಲಿಪ್‌ಕಾರ್ಟ್ ಗ್ರೂಪ್‌ನ ಸಿಇಒ ಕೃಷ್ಣಮೂರ್ತಿರವರು ನಮ್ಮ ಕಂಪನಿಯು ಗ್ರಾಹಕರಿಗೆ ಉತ್ಪನ್ನಗಳನ್ನು ಸುರಕ್ಷಿತವಾಗಿ ತಲುಪಿಸಲಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲಿವೆ ಮೇರು-ಫ್ಲಿಪ್‌ಕಾರ್ಟ್

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಜನತೆಯ ಜೊತೆಗಿರಲಿದ್ದೇವೆ. ಗ್ರಾಹಕರ ಹಾಗೂ ನೌಕರರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

ಲಾಕ್‌ಡೌನ್ ಎಫೆಕ್ಟ್: ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲಿವೆ ಮೇರು-ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್-ಮೇರು ಕಂಪನಿಗಳ ಈ ಸಹಭಾಗಿತ್ವವು ಕರೋನಾ ವೈರಸ್ ಹರಡುವುದನ್ನು ತಡೆಯಲು ನೆರವಾಗಲಿದೆ. ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಸುರಕ್ಷಿತವಾಗಿ ಮನೆಯಲ್ಲೇ ಇರಬೇಕೆಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸೂಚನೆ ನೀಡುತ್ತಲೇ ಇವೆ.

Most Read Articles

Kannada
English summary
Meru cabs Flipkart partnership to deliver essentials items services. Read in Kannada.
Story first published: Saturday, May 2, 2020, 11:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X