ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

ಹಲವಾರು ಜನರು ವಿಮಾನಗಳಲ್ಲಿ ಪ್ರಯಾಣಿಸಿರುತ್ತಾರೆ. ಆದರೆ ಕೆಲವರಿಗೆ ಯಾವ ರೀತಿಯ ವಿಮಾನದಲ್ಲಿ ಪ್ರಯಾಣಿಸಿದೆವು ಎಂಬುದರ ಅರಿವು ಇರುವುದಿಲ್ಲ. ವಿಮಾನಗಳಲ್ಲಿ ಪ್ರಯಾಣಿಸುವವರು ವಿಮಾನಗಳ ಮೇಲೆ ಅಕ್ಷರಗಳು ಹಾಗೂ ಸಂಖ್ಯೆಗಳನ್ನು ಗಮನಿಸಬಹುದು.

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

ಹೀಗೆ ವಿಮಾನಗಳ ಮೇಲೆ ಬಳಸಲಾಗುವ ಅಕ್ಷರಗಳು ಹಾಗೂ ಸಂಖ್ಯೆಗಳ ಹಿಂದೆ ಕಠಿಣವಾದ ವ್ಯವಸ್ಥೆಯನ್ನು ಬಳಸಲಾಗಿರುತ್ತದೆ. ಪ್ರತಿ ವಿಮಾನ ತಯಾರಕ ಕಂಪನಿಗಳು ವಿಮಾನದ ಹೆಸರುಗಳಿಗಾಗಿ ಕಟ್ಟುನಿಟ್ಟಾದ ಸಂಕೇತಗಳನ್ನು ಬಳಸುತ್ತವೆ. ಈ ಲೇಖನದಲ್ಲಿ ಏರ್‌ಬಸ್ ವಿಮಾನಗಳ ಹೆಸರುಗಳ ಬಗ್ಗೆ ನೋಡೋಣ.

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

1. ಏರ್‌ಬಸ್ ಏರೋಪ್ಲೇನ್ ಹೆಸರುಗಳು

ಏರ್‌ಬಸ್ ಎ 300, ಕಂಪನಿಯು ತಯಾರಿಸಿದ ಮೊದಲ ವಿಮಾನ. ಸರಳ ನಿಯಮದ ಅನುಸಾರ ಈ ಹೆಸರನ್ನು ಇಡಲಾಗಿದೆ. ಇದರಲ್ಲಿರುವ ಎ ಅಕ್ಷರವು ಏರ್‌ಬಸ್ ಕಂಪನಿಯ ಹೆಸರನ್ನು ಸೂಚಿಸುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

300 ಎಂಬುದು ವಿಮಾನದ ಸಾಮರ್ಥ್ಯವನ್ನು ಸೂಚಿಸುತ್ತದೆ. ನಂತರ ಏರ್‌ಬಸ್ ಕಂಪನಿಯು ಈ ಆಧಾರದ ಮೇಲೆ ವಿಮಾನಗಳಿಗೆ ಹೆಸರನ್ನು ಇಡುವ ವ್ಯವಸ್ಥೆಯನ್ನು ಮುಂದುವರಿಸಲು ನಿರ್ಧರಿಸಿತು.

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

ನಂತರದ ದಿನಗಳಲ್ಲಿ 10ರ ಗುಣಾಕಾರಗಳನ್ನು ಸೇರಿಸುವ ಮೂಲಕ ವಿಮಾನಗಳಿಗೆ ಹೆಸರಿಡಲಾಯಿತು. ಏರ್‌ಬಸ್ ಕಂಪನಿಯ ವಿಮಾನಗಳಿಗೆ ಎ 310, ಎ 320, ಎ 330, ಎ 340, ಎ 350 ಹಾಗೂ ಎ 380 ನಂತಹ ಹೆಸರುಗಳನ್ನು ಇಡಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

ಕಂಪನಿಯು ಎ360 ಹಾಗೂ ಎ370 ಹೆಸರುಗಳನ್ನು ಏಕೆ ಕೈಬಿಟ್ಟಿತು ಎಂಬ ಪ್ರಶ್ನೆ ಮೂಡುವುದು ಸಹಜ. ಅತಿದೊಡ್ಡ ವಿಮಾನ ತಯಾರಿಸಿದ ಏರ್‌ಬಸ್ ಕಂಪನಿಯು ಈ ವಿಮಾನಕ್ಕೆ ಎ 350 - ಎ 380ರ ನಡುವಿನ ಸಂಖ್ಯೆಯನ್ನು ನೋಂದಾಯಿಸಲು ನಿರ್ಧರಿಸಿದ ಕಾರಣಕ್ಕೆ ಎ 380 ಹೆಸರನ್ನಿಟ್ಟಿತು.

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

ಎ 380ಗಿಂತ ಚಿಕ್ಕದಾದ ವಿಮಾನಗಳನ್ನು ತಯಾರಿಸಿದರೆ ಆ ವಿಮಾನಗಳಿಗೆ ಎ360 ಹಾಗೂ ಎ370 ಹೆಸರುಗಳನ್ನು ಇಡುವ ಉದ್ದೇಶದಿಂದ ಈ ಹೆಸರುಗಳು ಹಾಗೆಯೇಉಳಿಸಿಕೊಳ್ಳಲಾಗಿದೆ. ಇನ್ನು ಎ 318, ಎ 319 ವಿಮಾನಗಳ ಬಗ್ಗೆ ಹೇಳುವುದಾದರೆ ಎ 320 ವಿಮಾನವನ್ನು ಟ್ವೀಕ್ ಮಾಡುವ ಮೂಲಕ ಈ ವಿಮಾನಗಳನ್ನು ನಿರ್ಮಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

ನಾಲ್ಕು ಸಂಕೇತದ ಏರ್‌ಬಸ್ ವಿಮಾನಗಳನ್ನು ಸಂಪೂರ್ಣವಾಗಿ ಹೆಸರಿಸಲಾಗಿಲ್ಲ. ಏರ್‌ಬಸ್ ವಿಮಾನದ ಹೆಸರಿನ ಪೂರ್ಣ ಆವೃತ್ತಿಯು ಇನ್ನೂ 3 ಸಂಖ್ಯೆಗಳನ್ನು ಒಳಗೊಂಡಿದೆ. ಇದಕ್ಕೆ ಉದಾಹರಣೆಯೆಂದರೆ ಏರ್‌ಬಸ್ ಎ 320-231.

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

2. ಬೋಯಿಂಗ್ ವಿಮಾನದ ಹೆಸರುಗಳು

ಇನ್ನು ಮತ್ತೊಂದು ದೊಡ್ಡ ವಿಮಾನ ತಯಾರಕ ಕಂಪನಿಯಾದ ಬೋಯಿಂಗ್ ವಿಮಾನಗಳ ಹೆಸರುಗಳನ್ನು ನೋಡುವುದಾದರೆ, ಹೆಚ್ಚಿನ ಬೋಯಿಂಗ್ ವಿಮಾನಗಳಿಗೆ 7 ಎಕ್ಸ್ 7 ನಿಯಮದ ಅನ್ವಯ ಹೆಸರುಗಳನ್ನಿಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

ಇದರರ್ಥ ವಿಮಾನಗಳ ಹೆಸರುಗಳು 7 ಸಂಖ್ಯೆಯೊಂದಿಗೆ ಆರಂಭವಾಗಿ, 7 ಸಂಖ್ಯೆಯೊಂದಿಗೆ ಕೊನೆಗೊಳ್ಳುತ್ತವೆ. 7 X 7 ನಿಯಮದ ಹೆಸರಿನ ಮೊದಲ ಬೋಯಿಂಗ್ ವಿಮಾನದ ಹೆಸರು ಬೋಯಿಂಗ್ 707 ಎಂದಾಗಿತ್ತು.

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

ಆರಂಭದಲ್ಲಿ ಬೋಯಿಂಗ್ ಕೇವಲ ಮಿಲಿಟರಿ ವಿಮಾನ ತಯಾರಿಕಾ ಕಂಪನಿಯಾಗಿತ್ತು. ಎರಡನೇ ಮಹಾಯುದ್ಧದ ನಂತರ ಕಂಪನಿಯು ತನ್ನ ವ್ಯವಹಾರವನ್ನು ಕಮರ್ಷಿಯಲ್ ವಿಮಾನ ಮಾರುಕಟ್ಟೆಯತ್ತ ವಿಸ್ತರಿಸಿತು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

ವೈವಿಧ್ಯೀಕರಣ ತಂತ್ರವನ್ನು ಅನುಸರಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಕಂಪನಿಯ ಪ್ರತಿ ಉತ್ಪನ್ನವು ಅದರದೇ ಆದ ಸಂಖ್ಯೆಯನ್ನು ಪಡೆದುಕೊಂಡಿತು. 300 ಹಾಗೂ 400 ಸಂಖ್ಯೆಗಳು ವಿಮಾನವನ್ನು ಪ್ರತಿನಿಧಿಸುತ್ತವೆ.

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

ಇನ್ನು 500 ಸಂಖ್ಯೆಯನ್ನು ಟರ್ಬೈನ್ ಎಂಜಿನ್‌ಗಳಲ್ಲಿ, 600 ಸಂಖ್ಯೆಯನ್ನು ರಾಕೆಟ್‌ ಹಾಗೂ ಕ್ಷಿಪಣಿಗಳಲ್ಲಿ, 700 ಸಂಖ್ಯೆಯನ್ನು ಜೆಟ್ ಸಾರಿಗೆ ವಿಮಾನಗಳಲ್ಲಿ ಬಳಸಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

ಈ ನಿಯಮವನ್ನು ಅನುಸರಿಸಿ, ಮೊದಲ ಜೆಟ್ ಸಾರಿಗೆ ವಿಮಾನವನ್ನು ಬೋಯಿಂಗ್ 700 ಎಂದು ಕರೆಯಬೇಕಾಗಿತ್ತು. ಆದರೆ ಮಾರ್ಕೆಟಿಂಗ್ ವಿಭಾಗಕ್ಕೆ ಈ ಹೆಸರು ಆಕರ್ಷಕವಾಗಿ ಕಾಣದ ಕಾರಣಕ್ಕೆ 707 ಎಂದು ಹೆಸರಿಡಲಾಯಿತು.

ವಿಮಾನಗಳಿಗೆ ಹೆಸರಿಡಲು ಅನುಸರಿಸುವ ವಿಧಾನಗಳಿವು

707ರ ಯಶಸ್ಸಿನ ನಂತರ ಕಂಪನಿಯು ಮುಂದಿನ ವಿಮಾನಗಳಿಗೆ 727,737 ಎಂಬ ಹೆಸರುಗಳನ್ನಿಟ್ಟಿತು. ಬೋಯಿಂಗ್ ಈ ಮಾದರಿಯನ್ನು ಮುಂದುವರೆಸಿ ಕೊಂಡು ಬಂದಿದೆ. ಕಂಪನಿಯ ಇತ್ತೀಚಿನ ವಿಮಾನಕ್ಕೆ ಬೋಯಿಂಗ್ 787 ಡ್ರೀಮ್‌ಲೈನರ್ ಎಂದು ಹೆಸರಿಡಲಾಗಿದೆ.

ಚಿತ್ರಕೃಪೆ: ಬೋಯಿಂಗ್

Most Read Articles

Kannada
English summary
Method of naming aircrafts explained. Read in Kannada.
Story first published: Monday, March 29, 2021, 11:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X