ಪುಟ್ಟ ಎಂಜಿ ಇವಿ ಕಾರಿನ ಏಟಗೆ ಬಹುಬೇಡಿಕೆಯ ಟೊಯೊಟಾ ಇನ್ನೋವಾ ಹೈಕ್ರಾಸ್ ಜಖಂ!

ಭಾರತದ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಒಂದು ದೊಡ್ಡ ಸಾವಲು. ಸಮಯ ಇಲ್ಲದ ರೀತಿಯಲ್ಲಿ ಕೆಲವರು ದುಡುಕಿ ವೇಗವಾಗಿ ಡ್ರೈವಿಂಗ್ ಮಾಡುತ್ತಾರೆ. ಕಾರ್ ಅನ್ನು ನಿಧಾನ ಮಾಡಿದರೂ ಸಿಟ್ಟಿನಿಂದಲೇ ನಿಧಾನ ಮಾಡುತ್ತಾರೆ. ಇನ್ನು ರಸ್ತೆಗಳು ಸ್ಥಿತಿಯು ಸುಧಾರಣೆ ಕಾಣುತ್ತಿದ್ದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅಜಾಗರೂಕ ಅಥವಾ ಅತಿವೇಗದ ಚಾಲನೆಯ ಇಂತಹ ಅಪಘಾತಗಳಿಗೆ ಪ್ರಮುಖ ಕಾರಣವಾಗಿವೆ.

ಇತ್ತೀಚೆಗೆ ಎಂಜಿ ಕಾಮೆಟ್ ಇವಿ (MG Comet EV) ಮತ್ತು ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಎಂಜಿ ಕಾಮೆಟ್ ಇವಿ ಚಾಲಕ ಸರಿಯಾದ ಸಮಯಕ್ಕೆ ಬ್ರೇಕ್ ಹಾಕದೇ ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಹಿಂಭಾಗಕ್ಕೆ ಹೋಗಿ ಡಿಕ್ಕಿ ಹೊಡೆದಿದೆ. ಇದರಿಂದ ಇನೋವಾ ಹೈಕ್ರಾಸ್‌ನ ಹಿಂಭಾಗ ಜಖಂಗೊಂಡಿದೆ. ಎಂಜಿ ಕಾಮೆಟ್‌ನ ಮುಂಭಾಗದ ತುದಿಗೆ ಹೋಲಿಸಿದರೆ, ಇನ್ನೋವಾ ಹೈಕ್ರಾಸ್‌ನ ಹಿಂಭಾಗದ ತುದಿಯಲ್ಲಿ ಹಾನಿಯಾಗಿದೆ.

MG Comet EV

ಎಂಜಿ ಕಾಮೆಟ್‌ನ ಬಂಪರ್ ಸ್ವಲ್ಪ ಹಾನಿಯನ್ನು ಹೊಂದಿದ್ದು ಮತ್ತುಇನ್ನೋವಾ ಹೈಕ್ರಾಸ್‌ನ ಲೋಹದ ಬಾಡಿಗೆ ಹಾನಿಯಾಗಿದೆ. ಈ ಅಪಘಾತದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ, ಯಾವುದೇ ಗಾಯದ ಗುರುತುವಿಲ್ಲದೇ ಜನರು ಕಾರಿನಿಂದ ಹೊರಬರುವುದನ್ನು ವೀಡಿಯೊದಲ್ಲಿ ನೀವು ನೋಡಬಹುದು

ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು, ಎಂಜಿ ಕಾಮೆಟ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, EBD ಜೊತೆಗೆ ABS, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ರಿವರ್ಸ್ ಪಾರ್ಕಿಂಗ್ ಸೀಟ್‌ಗಳು, Isofix ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು TPMS ಅನ್ನು ಒಳಗೊಂಡಿದೆ. ಎಂಜಿ ಮೋಟಾರ್ ತನ್ನ ಬಹುನಿರೀಕ್ಷಿತ ಹೊಸ ಎಂಜಿ ಕಾಮೆಟ್ ಎಂಬ ಹೊಸ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಬಿರುಗಾಳಿ ಎಬ್ಬಿಸಿತು.

MG Comet EV

ಎಂಜಿ ಕಂಪನಿಯು ನಾಲ್ಕು ಸ್ಟೈಲಿಂಗ್ ಪ್ಯಾಕೇಜ್‌ಗಳನ್ನು ಎಲ್ಲಾ ರೂಪಾಂತರಗಳನ್ನು ನೀಡುತ್ತಿದೆ. ಇದು ಸೆರಿನಿಟಿ, ಬೀಚ್ ಬೇ, ಫ್ಲೆಕ್ಸ್ ಮತ್ತು ಸನ್‌ಡೌನರ್. ಖರೀದಿದಾರರು ಲೊರೆಸ್ಟಾ, ಬ್ಲಾಸಮ್, ಡೇ ಆಫ್ ಡೆಡ್, ಸ್ಪೇಸ್ ಮತ್ತು ನೈಟ್ ಕೆಫೆಯಂತಹ ಬಹು ಸ್ಟಿಕ್ಕರ್ ಶೈಲಿಗಳಿಂದ ಆಯ್ಕೆ ಮಾಡಬಹುದು. ಈ ಕಾರಿನ ಹೆಸರು ಇಂಗ್ಲೆಂಡ್-ಆಸ್ಟ್ರೇಲಿಯಾ ಮ್ಯಾಕ್‌ರಾಬರ್ಟ್‌ಸನ್ ಏರ್ ರೇಸ್‌ನಲ್ಲಿ ಭಾಗವಹಿಸಿದ 1934 ರ ಸಾಂಪ್ರದಾಯಿಕ ಬ್ರಿಟಿಷ್ ವಿಮಾನದಿಂದ ಸ್ಫೂರ್ತಿ ಪಡೆದಿದೆ.

ವುಲಿಂಗ್ ಏರ್ ಇವಿ ಮಾದರಿಯನ್ನು ಆಧರಿಸಿರುವ, ಈ ಕಾಮೆಟ್ ಎಲೆಕ್ಟ್ರಿಕ್ ಕಾರು ಪೂರ್ಣ-ಅಗಲ LED ಲೈಟ್ ಬಾರ್‌ನಂತಹ ಆಸಕ್ತಿದಾಯವಾದ ಬಾಕ್ಸ್ ವಿನ್ಯಾಸ ಭಾಷೆಯನ್ನು ಹೊಂದಿದೆ, ಜೊತೆಗೆ, ಎರಡೂ ವಿಂಗ್ ಮೀರರ್ಸ್ ಕ್ರೋಮ್ ಮತ್ತು ಪಿಯಾನೋ ಬ್ಲ್ಯಾಕ್ ಪಟ್ಟಿ ಇದೆ. ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ 17.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67-ರೇಟ್ ಮಾಡಲ್ಪಟ್ಟಿದೆ ಮತ್ತು ರೇಂಜ್ 230 ಕಿ.ಮೀ ಆಗಿದೆ.

MG Comet EV

ಈ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ದೇಶೀಯ ಖರೀದಿದಾರರಿಗೆ ಎರಡು ವಿಧದ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 172 bhp ಪವರ್ ಮತ್ತು 205 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ CVT ಗೇರ್ ಬಾಕ್ಸ್ ಅನ್ನು ಪಡೆದಿದೆ.

ಇನ್ನೊಂದು ಹೈಬ್ರಿಡ್ ಪವರ್‌ಟ್ರೇನ್ ಮಾದರಿಯು, 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ Atkinson ಸೈಕಲ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇದು, 184.8 bhp ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 21 kmpl ಮೈಲೇಜ್ ನೀಡುತ್ತದೆ. ಏಳರಿಂದ ಎಂಟು ಆಸನ ವ್ಯವಸ್ಥೆಯನ್ನು ಹೊಂದಿರುವ ಈ ಎಂಪಿವಿ, ಹೊರಭಾಗದಿಂದಲೂ ಆಕರ್ಷಕ ಲುಕ್ ಹೊಂದಿದೆ.

ಸುರಕ್ಷತೆಗಾಗಿ ಇನ್ನೋವಾ ಹೈಕ್ರಾಸ್ ಎಂಪಿವಿ, 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಗಳನ್ನು ನೀಡಿದೆ. ಈ ಕಾರಿಗೆ, ಮಾರುತಿ ಇನ್ವಿಕ್ಟೊ, ಕಿಯಾ ಕ್ಯಾರೆನ್ಸ್‌ ಪ್ರತಿಸ್ಪರ್ಧಿಯಾಗಿವೆ.

Article Published On: Monday, October 16, 2023, 18:01 [IST]
English summary
Mg comet ev crashes into toyota innova hycross mpv result details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+